Back
Home » ಇತ್ತೀಚಿನ
2027 ಕ್ಕೆ ಭೂಮಿಗೆ ಕಾದಿದೆ ಭಯಾನಕ ಗಂಡಾಂತರ!
Gizbot | 22nd Aug, 2019 07:05 PM
 • ಮೌಂಟ್ ಎವರೆಸ್ಟ್ ಗಿಂತಲೂ ದೊಡ್ಡ:

  ನಾಸಾ ವಿಜ್ಞಾನಿಗಳು ನಡೆಸಿರುವ ಆರಂಭಿಕ ವಿಶ್ಲೇಷಣೆಯಲ್ಲಿ ಕ್ಷುದ್ರಗ್ರಹವು ಮೌಂಟ್ ಎವರೆಸ್ಟ್ ಪರ್ವತಕ್ಕಿಂತ ದೊಡ್ಡದಾಗಿದೆ ಮತ್ತು ಸದ್ಯ ಬಾಹ್ಯಾಕಾಶದಲ್ಲಿ ಘಂಟೆಗೆ 52,000 ಮೈಲುಗಳಿಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿದೆ ಎಂದು ತಿಳಿಸಿದ್ದಾರೆ.


 • ಹೆಸರು:

  ನಾಸಾದ ಕ್ಷುದ್ರಗ್ರಹ ಟ್ರ್ಯಾಕಿಂಗ್ ಘಟಕವು ಇದನ್ನು ರಾಕ್ಷಸ ಬಾಹ್ಯಾಕಾಶ ದೇಹ 4953(1990 ಎಂಯು) (rogue space body 4953 (1990 MU)) ಎಂದು ನಾಮಕರಣ ಮಾಡಿದೆ. ಇದು ಸುಮಾರು ಆರು ಮೈಲುಗಳಷ್ಟು ವ್ಯಾಸವನ್ನು ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


 • ಯಾವಾಗ ಪ್ರವೇಶ:

  ಅಂದುಕೊಂಡ ಲೆಕ್ಕಾಚಾರಗಳೆಲ್ಲವೂ ಸರಿಯಾಗಿ ನಡೆದರೆ,ಈ ದೈತ್ಯ ಬಾಹ್ಯಾಕಾಶದ ದೇಹವು ಮುಂದಿನ ಒಂದೆರಡು ವರ್ಷಗಳಲ್ಲಿ ಹಲವಾರು ಸಂದರ್ಬದಲ್ಲಿ ಭೂಮಿಯ ಹಿಂದೆ ಹಾರುತ್ತದೆ ಮತ್ತು ಜೂನ್ 6,2027 ರಂದು ಅತೀ ಹತ್ತಿರದ ಮಾರ್ಗವನ್ನು ಪ್ರವೇಶಿಸುತ್ತದೆ ಎಂದು ನಾಸಾ ತಿಳಿಸಿದೆ.


 • ಎಷ್ಟು ಹತ್ತಿರ ಬರುತ್ತದೆ?

  ಈ ದಿನದಂದು ಅತೀ ಹತ್ತಿರ ಅಂದರೆ ಸುಮಾರು ಭೂಮಿಯಿಂದ 2.9 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಈ ಕ್ಷುದ್ರಗ್ರಹ ಸಂಚರಿಸಲಿದೆ ಮತ್ತು ಈ ದೂರವು ಖಗೋಳಶಾಸ್ತ್ರದ ಅನ್ವಯ ಅತ್ಯಂತ ಚಿಕ್ಕ ದೂರವಾಗಿರುತ್ತದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ.


 • ದುಷ್ಪರಿಣಾಮ:

  ಈ ಕ್ಷುದ್ರಗ್ರಹ ದೈತ್ಯಾಕಾರವನ್ನು ಗಮನಿಸಿದರೆ ಭೂಮಿಯ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವೂ ಜಾಗತಿಕ ಮಟ್ಟದಲ್ಲಿ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.ತಜ್ಞರು ತಿಳಿಸುವ ಪ್ರಕಾರ ಬಾಹ್ಯಾಕಾಶದಲ್ಲಿರುವ ಹಲವಾರು ಅಂಶಗಳು ಈ ರಾಕ್ಷಸ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವಂತೆ ಮಾಡುವ ಸಾಧ್ಯತೆ ಇರುತ್ತದೆ.


 • ಪರಿಣಾಮ ಬೀರುವ ಅಂಶಗಳು:

  ಕ್ಷುದ್ರಗ್ರಹದ ಮೂಲ ಪಥಕ್ಕೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದೆನಿಸಿರುವುದು ಗುರುತ್ವಾಕರ್ಷಣೆಯ ಕೀಹೋಲ್.ಗುರುತ್ವಾಕರ್ಷಣೆಯ ಕೀಹೋಲ್ ಬಾಹ್ಯಾಕಾಶದಲ್ಲಿರುವ ಪ್ರಮುಖ ಪ್ರದೇಶವಾಗಿದ್ದು, ಹತ್ತಿರದ ಯಾವುದೇ ಗ್ರಹಗಳ ಗುರುತ್ವಾಕರ್ಷಣೆಯ ಪರಿಣಾಮದಿಂದಾಗಿ ರಾಕ್ಷಸ ಬಾಹ್ಯಾಕಾಶ ಕಾಯಗಳು ಇನ್ನೊಂದು ರೀತಿಯ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಕ್ಷುದ್ರಗ್ರಹ ಈ ಕೀಹೋಲ್ ಮೂಲಕ ಪ್ರಯಾಣಿಸಿದರೆ, ಭಾರೀ ವಿನಾಶಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಅಂದರೆ ಭೂಮಿಗೆ ಅಪ್ಪಳಿಸಿ ಅಪಾಯ ಉಂಟು ಮಾಡುವ ಸಾಧ್ಯತೆಯನ್ನು ಯಾವುದೇ ಕಾರಣಕ್ಕೂ ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.


 • ಭವಿಷ್ಯಕ್ಕೆ ಮಾರಕ:

  ಕೆಲವೇ ತಿಂಗಳ ಮುನ್ನ ಕಾರ್ಡಿಫ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅರ್ಥ್ ಮತ್ತು ಓಷಿಯನ್ ಸೈನ್ಸ್ ನ ಖ್ಯಾತ ವಿಜ್ಞಾನಿಯಾಗಿರುವ ಡಾಕ್ಟರ್ ಇಯಾನ್ ಮೆಕ್ಡೊನಾಲ್ಡ್, ಡೂಮ್ಸ್ ಡೇ ಕ್ಷುದ್ರಗ್ರಹದಿಂದಾಗಿ ಭೂಮಿಯು ಭವಿಷ್ಯದಲ್ಲಿ ದುರಂತವನ್ನು ಎದುರಿಸಲಿದೆ ಎಂದು ಸೂಚಿಸಿದ್ದರು. ಕ್ಷುದ್ರಗ್ರಹದ ಅಪ್ಪಳಿಸುವಿಕೆ ಕೇವಲ ಭೂತಕಾಲಕ್ಕೆ ಸೀಮಿತವಾಗಿಲ್ಲ, ಭವಿಷ್ಯಕ್ಕೂ ಅನ್ವಯಿಸುತ್ತದೆ ಎಂದು ಮೆಕ್ಡೋನಾಲ್ಡ್ ಅವರ ಅಭಿಪ್ರಾಯ.


 • ರಕ್ಷಣಾ ಆಯುಧದ ಸಂಶೋಧನೆ:

  ಬಾಹ್ಯಾಕಾಶದಲ್ಲಿನ ಈ ಬೆದರಿಕೆಯನ್ನು ಎದುರಿಸುವ ಸಲುವಾಗಿ ನಾಸಾ ಗ್ರಹಗಳ ರಕ್ಷಣಾ ಆಯುಧವನ್ನು ಅಭಿವೃದ್ಧಿ ಪಡಿಸುತ್ತಿದೆ.ಈ ಆಯುಧಗಳು ಕ್ಷುದ್ರಗ್ರಹಗಳ ಮೂಲಪಥವನ್ನು ತಳ್ಳುವ ಗುರಿಯನ್ನು ಹೊಂದಿರುತ್ತದೆ.ಆ ಮೂಲಕ ಭೂಮಿಗೆ ಅಪ್ಪಳಿಸುವ ಅಪಾಯವನ್ನು ತಪ್ಪಿಸುವ ಉದ್ದೇಶವನ್ನು ಈ ಆಯುಧಗಳಲ್ಲಿ ಅಳವಡಿಸಲಾಗುತ್ತದೆ. ದೊಡ್ಡ ಬಾಹ್ಯಾಕಾಶ ನೌಕೆ ಬಳಸಿ ಕ್ಷುದ್ರಗ್ರಹಗಳನ್ನು ಹೊಡೆಯುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಮೂಲಕ ಕ್ಷುದ್ರಗ್ರಹದ ಘರ್ಷಣೆಯ ಪಥವನ್ನು ಬದಲಾಯಿಸಿ ಭೂಮಿಯ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ನಾಸಾ ಹೊಂದಿದೆ. ನಾಸಾ ವಿಜ್ಞಾನಿಗಳಿಗೆ ಯಶಸ್ಸು ಸಿಗಲಿ. ಆ ಮೂಲಕ ಭೂಮಿಯ ರಕ್ಷಣೆ ಆಗಲಿ. ಯಾವುದೇ ಅಪಾಯ ಸಂಭವಿಸದೇ ಇರಲಿ.
ನಾಸಾ ಸಂಶೋಧನೆಗಳು ನಮ್ಮನ್ನ ಬೆರಗುಗೊಳಿಸುತ್ತೆ, ಕೆಲವು ಬೆಚ್ಚಿಬೀಳಿಸುತ್ತದೆ, ಕೆಲವು ಯೋಚನಾ ಲಹರಿಗೆ ತಳ್ಳಿ ಬಿಡುತ್ತದೆ. ಇದೀಗ ಅಂತಹದ್ದೇ ಒಂದು ಭಯಾನಕ ಅಂಶವನ್ನು ನಾಸಾ ಕಂಡುಹಿಡಿದಿದೆ. ಹೌದು ಯುನೈಟೆಡ್ ಸ್ಟೇಟ್ಸ್ ನ ಬಾಹ್ಯಾಕಾಶ ಸಂಸ್ಥೆ ಅಪಾಯಕಾರಿಯಾಗಿರುವ ಒಂದು ಕ್ಷುದ್ರಗ್ರಹವನ್ನು ಗುರುತಿಸಿದ್ದು 2027 ರ ಹೊತ್ತಿಗೆ ಭೂಮಿಯ ಮೇಲಿನ ಅರ್ಧದಷ್ಟು ಜೀವವನ್ನು ಅಳಿಸಿಹಾಕಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ತಿಳಿಸಿದೆ.

 
ಹೆಲ್ತ್