Back
Home » ಇತ್ತೀಚಿನ
ನೀವು ಗೂಗಲ್ ಪೇ ಅಥವ ಫೋನ್ ಪೇ ಬಳಸುತ್ತಿದ್ದರೆ ತಪ್ಪದೇ ಒಮ್ಮೆ ಓದಿ!
Gizbot | 23rd Aug, 2019 03:07 PM
 • ಹಣ ವರ್ಗಾವಣೆಯಾಗದಿದ್ದರೆ ಕಾಯಿರಿ!

  ಫೋನ್ ಪೇ ಅಥವ ಗೂಗಲ್ ಪೇ ಸರ್ವರ್ ಬ್ಯುಸಿ ಆಗೋಗಿ ನಿಮ್ಮ ಖಾತೆಯಿಂದ ಹಣ ಕಟ್ ಆದರು ಸಹ ಸ್ನೇಹಿತರಿಗೆ ಹೋಗಿರೋದಿಲ್ಲ ಅಂತ ಸಮಯದಲ್ಲಿ ಕೆಲವು ಜನರು ಕಾದು ನೋಡೋಣ ಎನ್ನುತ್ತಾರೆ. ಮತ್ತಷ್ಟು ಜನ ಒಂದೆರಡು ತಾಸು ನೋಡಿ ಗೂಗಲ್ ನಿಂದ ಫೋನ್ ಪೇ ಅಥವ ಗೂಗಲ್ ಪೇ ಕಸ್ಟಮರ್ ಕೇರ್ ಗೆ ಕಾಲ್ ಮಾಡೋಣ ಅಂತ ನಂಬರ್ ಹುಡುಕಿ ಕಾಲ್ ಕಾಡ್ತಾರೆ. ಇಂತಹ ಸಮಯದಲ್ಲಿ ವಂಚಕರು ನಕಲಿ ವೆಬ್‌ಸೈಟ್ ಸೃಷ್ಟಿಸಿ ಅವರ ನಂಬರ್ ನೀಡುತ್ತಾರೆ. ನಂತರ ನಿಮ್ಮ ಖಾತೆಯಲ್ಲಿನ ಹಣ ಖಾಲಿಯಾಗುತ್ತದೆ.


 • ವಾಯ್ಸ್ ಕಸ್ಟಮರ್ ಕೇರ್ ಇಲ್ಲವೇ ಇಲ್ಲ

  ಗೂಗಲ್ ಪೇ ಮತ್ತು ಫೋನ್ ಪೇಗೆ ಯಾವುದೇ ರೀತಿಯ ವಾಯ್ಸ್ ಕಸ್ಟಮರ್ ಕೇರ್ ಇಲ್ಲವೇ ಇಲ್ಲ ಎಂಬುದನ್ನು ತಿಳಿಯಿರಿ. ಗೂಗಲ್ ನಲ್ಲಿ ನಕಲಿ ಫೋನ್ ಕಸ್ಟಮರ್ ಕೇರ್ ನಂಬರ್ ಹಾಕಿದ್ದಾರೆ. ಇತ್ತೇಚೆಗೆ ನಮ್ಮ ಸ್ನೇಹಿತರು ಒಬ್ಬರು ಗೂಗಲ್ ಪೇ ನಿಂದ 300 ರೂಪಾಯಿ ಕಟ್ ಆಗಿದೆ ಅಂತ ಗೂಗಲ್ ನಲ್ಲಿ ಹುಡುಕಿ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ ಹೀಗೆ ಆಗಿರುವ ಎರಡೇ ನಿಮಿಸದಲ್ಲಿ ಅಕೌಂಟ್ ನಲ್ಲಿ ಇರುವ ಒಂದೂವರೆ ಲಕ್ಷ ಹಣ ಕಟ್ ಆಗೋಗಿದೆ. ಗೂಗಲ್ ಪೇ ಮತ್ತು ಫೋನ್ ಪೇ ಗೆ ಯಾವುದೇ ರೀತಿಯ ಕಸ್ಟಮರ್ ಸೇವೆ ಇಲ್ಲವೇ ಇಲ್ಲ.


 • ಯುಪಿಐ ನಂಬರ್ ಶೇರ್ ಮಾಡಬೇಡಿ.

  ನೀವು ಬಳಸುತ್ತಿರುವ ಬಹುತೇಕ ಮೊಬೈಲ್ ವಾಲೆಟ್ ಆಪ್‌ಗಳೆಲ್ಲವೂ ಯುಪಿಐ ಆಧಾರದಲ್ಲಿ ಕೆಲ ಮಾಡುತ್ತವೆ. ಈ ಆಪ್‌ಗಳ ಜೀವಾಳವೇ ಯುಪಿಐ ನಂಬರ್ ಎಂದು ಹೇಳಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಯುಪಿಐ ನಂಬರ್ ಅನ್ನು ಮತ್ತೊಬ್ಬರಿಗೆ ಶೇರ್ ಮಾಡಬೇಡಿ. ಯುಪಿಐ ನಂಬರ್ ಎಷ್ಟು ಸೇಫ್ ಆಗಿ ಇರಬೇಕೆಂದರೆ, ನಿಮ್ಮ ಸಂಗಾತಿಗೂ ಅದು ತಿಳಿಯಬಾರದು.! ಇದು ನಿಮಗೆ ತಮಾಷೆಯಂತೆ ಕಂಡರೂ ನಿಜ. ಏಕೆಂದರೆ, ಅವರು ಕೂಡ ನಿಮ್ಮ ಹಣವನ್ನು ನಿಮಗೆ ತಿಳಿಯದಂತೆ ತೆಗೆದುಕೊಳ್ಳಬಹುದಾದ ಸಾಧ್ಯತೆ ಇದೆ.


 • 'ರಿಕ್ಷೆಸ್ಟ್ ಮನಿ' ಆಯ್ಕೆ ಬಗ್ಗೆ ಎಚ್ಚರವಿರಲಿ

  ವಾಲೆಟ್ ಆಪ್‌ಗಳಲ್ಲಿ 'ರಿಕ್ಷೆಸ್ಟ್ ಮನಿ' ಎಂಬ ಆಯ್ಕೆ ಇರುತ್ತದೆ. ಈ 'ರಿಕ್ಷೆಸ್ಟ್ ಮನಿ' ಆಯ್ಕೆಯಲ್ಲಿ ಆಪ್ ಮೂಲಕ ಇತರರಿಗೆ ಹಣಕ್ಕಾಗಿಉ ವಿನಂತಿ ಕಳುಹಿಸಬಹುದು. ಅನಾಮಿಕರು ಕರೆ ಮಾಡಿ, ನಿಮಗೆ ಬಹುಮಾನ ಬಂದಿದೆ. ರಿಕ್ವೆಸ್ಟ್ ಬಂದ ತಕ್ಷಣ ಅಕ್ಸೆಪ್ಟ್ ಅಂತ ಕೊಟ್ಟುಬಿಡಿ ಎಂದು ಹೇಳುತ್ತಾರೆ. ಹಾಗೇ ಒಪ್ಪಿಗೆ ನೀಡಬೇಡಿ. ವಾಸ್ತವವಾಗಿ ನಾವು ಅಕ್ಸೆಪ್ಟ್ ಮಾಡುವುದು ತನ್ನ ಖಾತೆಯಿಂದ ಆ ಅನಾಮಿಕನ ಖಾತೆಗೆ ಹಣ ವರ್ಗಾವಣೆಯನ್ನು ಕೇಳಿರುತ್ತದೆ.! ನಂತರ ಪಿನ್ ನಮೂದಿಸಿದರೆ ಖಾತೆಯಲ್ಲಿನ ಹಣ ಕೂಡ ಖಾಲಿಯಾಗುತ್ತದೆ.


 • ಸಂದೇಹವಿದ್ದರೆ ಬ್ಯಾಂಕಿಗೆ ಹೋಗಿ

  ಬ್ಯಾಂಕ್‌ ಆಪ್‌ ಮೊದಲ ಬಾರಿ ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ಸಂದೇಹವಿದ್ದರೆ ಬ್ಯಾಂಕಿಗೆ ಹೋಗಿ, ಅಲ್ಲಿನ ಸಿಬ್ಬಂದಿಯ ಸಲಹೆ ಪಡೆದ ಬಳಿಕವೇ ಇನ್‌ಸ್ಟಾಲ್ ಮಾಡಿಕೊಳ್ಳುವುದು ಸೂಕ್ತ. ಯಾರೊಂದಿಗೆ ಕೂಡ ಬ್ಯಾಂಕ್‌ ಖಾತೆ ಸಂಖ್ಯೆ, ಪಿನ್‌ ನಂಬರ್‌, ಪಾಸ್‌ವರ್ಡ್‌ ಅಥವಾ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಹಂಚಿಕೊಳ್ಳಲು ಹೋಗಬೇಡಿ. ನಿಮ್ಮ ಖಾತೆಯನ್ನು ಆಗಾಗ್ಗೆ ಪರಿಶೀಲಿಸುತ್ತಿರಿ ಮತ್ತು ಪಾಸ್‌ವರ್ಡ್‌ ಕೂಡ ಪದೇ ಪದೇ ಬದಲಾಯಿಸುವುದು ಸುರಕ್ಷತೆಯ ದೃಷ್ಟಿಯಿಂದ ಸೂಕ್ತ.


 • ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ!

  ಬ್ಯಾಂಕಿನ ಲಿಂಕ್‌ ಹೆಸರಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಗೋಜಿಗೆ ಹೋಗಬೇಡಿ. ನೀವಾಗಿಯೇ ಬ್ಯಾಂಕ್‌ ಯುಆರ್‌ಎಲ್‌ ಟೈಪ್‌ ಮಾಡಿ ಮುಂದುವರಿಸಿ. ಸಾರ್ವಜನಿಕ ಕಂಪ್ಯೂಟರುಗಳಲ್ಲಿ (ಉದಾ. ಸೈಬರ್‌ ಕೆಫೆಗಳಲ್ಲಿ) ಆನ್‌ಲೈನ್‌ ಬ್ಯಾಂಕಿಂಗ್‌ ವಹಿವಾಟು ನಡೆಸಬೇಡಿ. ವಂಚಕರು ತಕ್ಷ ಣಕ್ಕೆ ಸಿಕ್ಕಿ ಬೀಳುವುದರಿಂದ ತಪ್ಪಿಸಲು, ಬ್ಯಾಂಕ್‌ ರಜಾದಿನಗಳಲ್ಲೋ ಅಥವಾ ಬ್ಯಾಂಕ್‌ ತೆರೆಯುವ ಮುನ್ನವೋ ಚಾಕಚಕ್ಯತೆ ಮೆರೆಯುತ್ತಾರೆಂಬುದು ನೆನಪಿರಲಿ. ಈ ಕುರಿತು ನಿಮಗೆ ಸಾಕಷ್ಟು ಎಚ್ಚರವಿರಿ.


 • ಪಿಎಫ್‌ ವಿತ್‌ಡ್ರಾನಲ್ಲಿ ಭಾರೀ ಬದಲಾವಣೆ..! ಇನ್ಮುಂದೆ ಆಫ್‌ಲೈನ್‌ನಲ್ಲಿ ಭವಿಷ್ಯ ನಿಧಿ ಕ್ಲೈಮ್‌ ಆಗಲ್ಲ..!

  ಪ್ರಾವಿಡೆಂಟ್‌ ಫಂಡ್‌ಗೆ ಸಂಬಂಧಪಟ್ಟಂತೆ ಅನೇಕ ಹೊಸ ಬೆಳವಣಿಗೆಗಳು ಆಗಿವೆ. ಹೆಚ್ಚಿನ ಉದ್ಯೋಗಿಗಳಿಗೆ ಭವಿಷ್ಯ ನಿಧಿಯಲ್ಲಾಗಿರುವ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲ. ಕೇವಲ ತಮ್ಮ ಸಂಬಳದಿಂದ ಕಡಿತಗೊಳ್ಳುವ ಪಿಎಫ್‌ ಬಗ್ಗೆ ಮಾತ್ರ ಉದ್ಯೋಗಿಗಳು ಕಾಳಜಿವಹಿಸುತ್ತಾರೆ. ಅವರಲ್ಲಿ ಬಹುಪಾಲು ಜನ ಪಿಎಫ್‌ಗೆ ಸಂಬಂಧಿಸಿದ ನಿಯಮಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಪಿಎಫ್‌ ಮೊತ್ತವನ್ನು ಹಿಂತೆಗೆದುಕೊಳ್ಳುವಾಗ ಅಥವಾ ವರ್ಗಾಯಿಸುವಾಗ ಮಾತ್ರ ಪಿಎಫ್‌ ಕಡೆ ಮುಖ ಮಾಡ್ತಾರೆ.

  ಇಂತಹ ಪರಿಸ್ಥಿತಿಯಲ್ಲಿ ಪಿಎಫ್‌ಗೆ ಸಂಬಂಧಿಸಿದ ನಿಯಮಗಳನ್ನು ಉದ್ಯೋಗಿಗಳು ಎಚ್ಚರಿಕೆಯಿಂದ ಗಮನಿಸಬೇಕು. ಇತ್ತೀಚಿಗೆ ಇಪಿಎಫ್‌ಒ ತನ್ನ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿದ್ದು, ಹೊಸ ನಿಬಂಧನೆಯ ನಂತರ ಆಫ್‌ಲೈನ್‌ನಲ್ಲಿ ಪಿಎಫ್‌ ಹಿಂಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಈ ನಿಯಮದಲ್ಲೂ ಒಂದು ಷರತ್ತನ್ನು ಇಪಿಎಫ್‌ಒ ಅಳವಡಿಸಿದೆ. ಏನೇಳುತ್ತೆ ನಿಯಮ..? ಷರತ್ತು ಏನು..? ಮುಂದೆ ನೋಡಿ..


 • ಏನು ಬದಲಾವಣೆ..?

  ನಿಮ್ಮ ಆಧಾರ್ ಸಂಖ್ಯೆಯನ್ನು ಇಪಿಎಫ್‌ಒನ ಯುನಿವರ್ಸಲ್ ಅಕೌಂಟ್ ಸಂಖ್ಯೆ(UAN)ಗೆ ಲಿಂಕ್ ಮಾಡಿದ್ದರೆ, ನೀವು ಆಫ್‌ಲೈನ್‌ನಲ್ಲಿ ಪಿಎಫ್ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಆಫ್‌ಲೈನ್‌ ಅರ್ಜಿ ಸ್ವೀಕರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರಾಕರಿಸಿದೆ. ಹೀಗಾಗಿ, ನಿಮ್ಮ ಆಧಾರ್ ಯುಎಎನ್‌ಗೆ ಸಂಪರ್ಕ ಹೊಂದಿದ್ದರೆ, ನೀವು ಆನ್‌ಲೈನ್‌ನಲ್ಲಿಯೇ ಪಿಎಫ್‌ ಕ್ಲೈಮ್‌ ಮಾಡಬೇಕು. ಕ್ಷೇತ್ರ ಕಚೇರಿಯಲ್ಲಿ ಆಫ್‌ಲೈನ್‌ ಅರ್ಜಿಗಳು ಹೆಚ್ಚುತ್ತಿರುವ ಹಿನ್ನೆಲೆ ಇಪಿಎಫ್‌ಒ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಾದೇಶಿಕ ಆಯುಕ್ತ ಎನ್‌.ಕೆ.ಸಿಂಗ್‌ ಹೇಳುತ್ತಾರೆ.


 • ಏಕೆ ಈ ನಿರ್ಧಾರ..?

  ಎನ್‌.ಕೆ.ಸಿಂಗ್ ಹೇಳುವಂತೆ, ಈ ವಿಷಯದಲ್ಲಿ ಇಪಿಎಫ್‌ಒ ಸುತ್ತೋಲೆ ಹೊರಡಿಸಿದೆ. ಅನೇಕ ಸಂಸ್ಥೆಗಳು ತಮ್ಮ ಸದಸ್ಯರ ಬಲ್ಕ್‌ ಕ್ಲೈಮ್‌ ಮಾಡುತ್ತಿವೆ. ಆ ಸದಸ್ಯರು ಆಧಾರ್‌ನಿಂದ ಯುಎಎನ್‌ಗೆ ಸಂಪರ್ಕ ಹೊಂದಿದ್ದರು ಸಹ ಆಫ್‌ಲೈನ್‌ ಕ್ಲೈಮ್‌ ಮಾಡಲಾಗುತ್ತಿದೆ. ಇಂತಹ ಪ್ರಕರಣಗಳು ಕ್ಲೈಮ್ ಇತ್ಯರ್ಥದಲ್ಲಿ ವಿಳಂಬ ಧೋರಣೆ ಜತೆಗೆ ಕ್ಷೇತ್ರ ಕಚೇರಿಗೆ ಹೊರೆಯಾಗುತ್ತಿರುವುದರಿಂದ ಆಫ್‌ಲೈನ್ ಕ್ಲೈಮ್‌ ಅರ್ಜಿಯನ್ನು ಸ್ವೀಕರಿಸದಂತೆ ಸುತ್ತೋಲೆ ನಿರ್ದೇಶಿಸಿದೆ. ಆನ್‌ಲೈನ್ ಕ್ಲೈಮ್ ಸೇವಾ ವೇದಿಕೆಯನ್ನು ಬಳಸಲು ಕಂಪನಿಗಳಿಗೆ ಸೂಚಿಸಲಾಗಿದೆ.


 • ಆನ್‌ಲೈನ್ ಅರ್ಜಿ ಮಾತ್ರ ಇತ್ಯರ್ಥ

  ಇಪಿಎಫ್‌ಒ ಸುತ್ತೋಲೆ ಪ್ರಕಾರ, ಒಬ್ಬ ಸದಸ್ಯ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಿಎಫ್‌ ಕ್ಲೈಮ್‌ಗೆ ಅರ್ಜಿ ಸಲ್ಲಿಸಿದರೆ, ಕೇವಲ ಆನ್‌ಲೈನ್‌ ಕ್ಲೈಮ್‌ನ್ನು ಮಾತ್ರ ಸಂಸ್ಥೆ ಇತ್ಯರ್ಥಪಡಿಸುತ್ತದೆ.


 • ಆನ್‌ಲೈನ್‌ನಲ್ಲಿ ಕ್ಲೈಮ್‌ ಹೇಗೆ..?

  ಆನ್‌ಲೈನ್‌ನಲ್ಲಿ ಪಿಎಫ್ ಮೊತ್ತ ಹಿಂಪಡೆಯುವುದು ಹೇಗೆ ಅಂತಿರಾ..? ಭವಿಷ್ಯ ನಿಧಿ ಇತ್ಯರ್ಥಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

  1. ಆನ್‌ಲೈನ್‌ನಲ್ಲಿ ಪಿಎಫ್ ಮೊತ್ತ ಹಿಂಪಡೆಯಲು ನೀವು ಇಪಿಎಫ್‌ಒ ವೆಬ್‌ಸೈಟ್ www.epfindia.com/site_en/ ಗೆ ಭೇಟಿ ನೀಡಿ.

  2. ಹೋಮ್‌ಪೇಜ್‌ನಲ್ಲಿ ಆನ್‌ಲೈನ್ ಕ್ಲೈಮ್‌ ಆಯ್ಕೆಯನ್ನು ನೀವು ಕಾಣಬಹುದು.

  3. ಆನ್‌ಲೈನ್ ಕ್ಲೈಮ್ ಆಯ್ಕೆಯನ್ನು ಕ್ಲಿಕ್ ಮಾಡಿ https: //unifiedportal-mem.epfindia.gov.in/memberinterface/ ಈ ಲಿಂಕ್‌ ತೆರೆದುಕೊಳ್ಳುತ್ತದೆ.

  4. ಯುಎಎನ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ ನಮೂದಿಸಬೇಕು.

  5. ನಂತರ, ಕ್ಲೈಮ್ ಸೆಟಲ್ಮೆಂಟ್ ಆಯ್ಕೆಯನ್ನು ನೀವು ಕಾಣಬಹುದು

  6. ನೀವು ಪಿಎಫ್‌ ಹಿಂಪಡೆಯುವ ಅರ್ಜಿಯನ್ನು ಕಂಪನಿಗೆ ಸಲ್ಲಿಸುವ ಅಗತ್ಯವಿಲ್ಲ.

  7. ಕ್ಷೇತ್ರ ಅಧಿಕಾರಿ ನಿಮ್ಮ ಆನ್‌ಲೈನ್ ಕ್ಲೈಮ್‌ನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತಾರೆ. ಇದಕ್ಕೆ ಏಕೀಕೃತ ಪೋರ್ಟಾಲ್‌ನಲ್ಲಿ ನಿಮ್ಮ ಕೆವೈಸಿ ಅಪ್‌ಡೇಟ್‌ ಆಗಿರಬೇಕು.
ನೀವು ಗೂಗಲ್ ಪೇ ಅಥವ ಫೋನ್ ಪೇಯಂತಹ ಮೊಬೈಲ್ ವಾಲೆಟ್ ಆಪ್‌ಗಳನ್ನು ಉಪಯೋಗ ಮಾಡುತ್ತಿದ್ದರೆ ಐದು ನಿಮಿಷ ಬಿಡುವು ಮಾಡಿಕೊಂಡು ಇದನ್ನ ಓದಿ. ಏಕೆಂದರೆ, ಈಗ ಕಾಲ ಬದಲಾದ ಹಾಗೇ ಇಡೀ ಜಗತ್ತೇ ಒಂದು ಸಣ್ಣ ಮೊಬೈಲ್ ಸೇರಿದೆ. ಗೂಗಲ್ ಪೇ ಮತ್ತು ಫೋನ್ ಪೇ ಹೀಗೆ ಅನೇಕ ರೀತಿಯ ಆಪ್‌ಗಳು ಬ್ಯಾಂಕಿಂಗ್ ವ್ಯವಹಾರಕ್ಕೆ ಸಹಾಯವಾಗುತ್ತಿವೆ. ಇವುಗಳ ಬಗ್ಗೆ ನಾವು ಸ್ವಲ್ಪ ಯಾಮಾರಿದರೂ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣ ಮಾತ್ರದಲ್ಲಿ ಖಾಲಿಯಾಗುತ್ತದೆ.

ಇತ್ತೀಚಿನ ನಡೆದ ಆಂತಕಕಾರಿ ಘಟನೆಯೊಂದು ಈ ಬಗ್ಗೆ ನಮ್ಮನ್ನು ಎಚ್ಚರಿಸಿದೆ. ಗೂಗಲ್ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ ಘಟನೆ ಇತ್ತೀಚಿಗೆ ನಡೆದಿದೆ. ಗೂಗಲ್ ಪೇ ಬಳಕೆದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಗೂಗಲ್‌ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಹೇಳಿ, ಆಪ್‌ನ ಲಿಂಕ್‌ ಮುಖಾಂತರ ಅವರಿಗೆ ಕ್ಷಣ ಮಾತ್ರದಲ್ಲಿ ವಂಚಿಸಿದ್ದಾನೆ.

ನಂಬಿದರೆ ನಂಬಿ,ನೀವೇನಾದ್ರು ಗೂಗಲ್ ಪೇ ಅಥವಾ ಫೋನ್ ಪೇ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ನಿಮ್ಮ ಖಾತೆಯಲ್ಲಿ ಇರೋ ಬರೋ ಎಲ್ಲ ಹಣ ಒಂದೇ ನಿಮಿಷದಲ್ಲಿ ಖಾಲಿ ಆಗುತ್ತದೆ. ಏಕೆಂದರೆ, ಗೂಗಲ್ ಪೇ ಅಥವಾ ಫೋನ್ ಪೇ ಸಂಸ್ಥೆಗಳು ಸಹಾಯವಾಣಿ ಕೇಂದ್ರಗಳನ್ನೇ ಹೊಂದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ನೀವು ಗೂಗಲ್ ಪೇ ಅಥವ ಫೋನ್ ಪೇಯಂತಹ ಮೊಬೈಲ್ ವಾಲೆಟ್ ಆಪ್‌ಗಳನ್ನು ಉಪಯೋಗ ಮಾಡುತ್ತಿದ್ದರೆ ಹೇಗೆ ಎಚ್ಚರಿಕೆ ಹೊಂದಿರಬೇಕು ಎಂದು ನಾನು ತಿಳಿಸಿಕೊಡುತ್ತಿದ್ದೇನೆ.

   
 
ಹೆಲ್ತ್