Back
Home » ಇತ್ತೀಚಿನ
ಟಿಕ್‌ಟಾಕ್‌ ಆಪ್‌ನಲ್ಲಿ ಲೈವ್ ಬರುವುದು ಹೇಗೆ ಗೊತ್ತಾ?
Gizbot | 25th Aug, 2019 12:25 PM
 • ಟಿಕ್‌ಟಾಕ್ ಆಪ್‌ ಇನ್‌ಸ್ಟಾಲ್

  ಮೊದಲ ಟಿಕ್‌ಟಾಕ್‌ ಆಪ್‌ ಇನ್‌ಸ್ಟಾಲ್ ಮಾಡಿ (ನೀವಿನ್ನೂ ಟಿಕ್‌ಟಾಕ್‌ ಅಕೌಂಟ್ ಹೊಂದಿರದೇ ಇದ್ದರೇ) ಅಕೌಂಟ್‌ ಲಾಗಿನ್‌ ಮಾಡಿರಿ. ಟಿಕ್‌ಟಾಕ್‌ ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ ಮಾದರಿಯ ಓಎಸ್‌ಗಳೆರಡರಲ್ಲಿಯೂ ಲಭ್ಯವಾಗಲಿದೆ. ಇತ್ತೀಚಿನ ವರ್ಷನ್‌ ಅನ್ನು ಡೌನಲೋಡ್‌ ಮಾಡಿರಿ. ಇಲ್ಲವೇ ಇರುವ ಟಿಕ್‌ಟಾಕ್ ಆಪ್‌ ಅನ್ನು ಅಪ್‌ಡೇಟ್ ಮಾಡಿರಿ.


 • ಲೈವ್ ಅನುಕೂಲತೆ

  ಪ್ರತಿಭೆಯನ್ನು ಹೊರಹಾಕಲು ಬಳಕೆದಾರರಿಗೆ ಟಿಕ್‌ಟಾಕ್‌ ಆಪ್‌ ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದ್ದು, ಅನೇಕ ಜನರು ಈಗಾಗಲೇ ಟಿಕ್‌ಟಾಕ್‌ ಆಪ್‌ ಮೂಲಕವೇ ಫೇಮಸ್‌ ಆಗಿದ್ದಾರೆ. ಹೆಚ್ಚಿನ ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ. ಒಂದು ವಿಷಯದೊಂದಿಗೆ, ಅಥವಾ ನಿಮ್ಮಲ್ಲಿರುವ ಕಲೆಯನ್ನು ಲೈವ್‌ಗೆ ಬರುವ ಮೂಲಕ ನಿಮ್ಮ ಫಾಲೋವರ್ಸ್ ಅಲ್ಲದೇ ಇನ್ನೂ ಹೆಚ್ಚಿನ ಜನರಿಗೆ ತಲುಪಬಹುದು.


 • ಲೈವ್ ಬರಲು ಈ ಹಂತಗಳನ್ನು ಅನುಸರಿಸಿ

  * ಟಿಕ್‌ಟಾಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ
  * ಪರದೆಯ ಕೆಳಗಿನಿಂದ ಆಡ್ (+) ಬಟನ್ ಕ್ಲಿಕ್ ಮಾಡಿ.
  * ನಂತರ, ನಿಮ್ಮ ರೆಕಾರ್ಡಿಂಗ್ ಬಟನ್‌ಗೆ ಪಕ್ಕದಲ್ಲಿರುವ "ಲೈವ್" ಬಟನ್ ಕ್ಲಿಕ್ ಮಾಡಿ.
  * ಈಗ ನಿಮ್ಮ ಲೈವ್ ಸ್ಟ್ರೀಮ್‌ಗೆ ಆಕರ್ಷಕ ಶೀರ್ಷಿಕೆಯನ್ನು ಸೇರಿಸಿ
  * ಹಾಗೆಯೇ, ಡ್ಯುಯೆಟ್, ಫಾಲೋ, ಫ್ಯಾನ್, ಬಿಎಫ್, ದೇಣಿಗೆ ಇತ್ಯಾದಿ ನಿಷೇಧಿತ ಪದಗಳನ್ನು ಬಳಸಲೇಬೇಡಿ
  * ಕೊನೆಯದಾಗಿ "ಲೈವ್ ಲೈವ್" ಬಟನ್ ಟ್ಯಾಪ್ ಮಾಡಿ ಮತ್ತು ನಂತರ ನಿಮ್ಮ ಲೈವ್ ಸ್ಟ್ರೀಮಿಂಗ್ ಆರಂಭಿಸಿ.


 • ಲೈವ್‌ಗೆ ಬರುವ ಮುನ್ನ ಗಮನಿಸಬೇಕಾದ ಅಂಶಗಳ

  * ಟಿಕ್‌ಟಾಕ್‌ ಆಪ್‌ನ ಎಲ್ಲಾ ಬಳಕೆದಾರರಿಗೂ ಲೈವ್ ಬರಲು ಸಾಧ್ಯವಿಲ್ಲ.
  * ಟಿಕ್‌ಟಾಕ್‌ ಆಪ್‌ನಲ್ಲಿ 1000ಕ್ಕೂ ಅಧಿಕ ಫಾಲೋವರ್ಸ್‌ ಪಡೆದವರಿಗೆ ಮಾತ್ರ ಲೈವ್ ಬರಲು ಸಾಧ್ಯ.
  * ಲೈವ್‌ಗೆ ಬರಲು ಇತ್ತೀಚಿನ ಟಿಕ್‌ಟಾಕ್‌ ವರ್ಷನ್ ಇರಬೇಕು
  * ರೆಕಾರ್ಡಿಂಗ್ ಬಟನ್ ಪಕ್ಕದಲ್ಲಿಯೇ ಲೈವ್‌ ಬಟನ್ ಕಾಣಿಸುತ್ತದೆ.

  ಓದಿರಿ : ಕೇಬಲ್ ಮತ್ತು ಡಿ2ಎಚ್‌ ಬ್ಯುಸಿನೆಸ್‌ಗೆ ಕಂಟಕವಾದ 'ನೆಟ್‌ಫ್ಲಿಕ್ಸ್‌'!
ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್, ಸೇರಿದಂತೆ ಟಿಕ್‌ಟಾಕ್‌ ಸಹ ಈಗಂತೂ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿವೆ. ಮುಖ್ಯವಾಗಿ ಚೀನಾ ಮೂಲದ ಶಾರ್ಟ್‌ ವಿಡಿಯೊ ಮೇಕಿಂಗ್ ಆಪ್ ಟಿಕ್‌ಟಾಕ್‌ ಎಲ್ಲ ವಯೋಮಾನದವರನ್ನು ತನ್ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಹಾಗೆಯೇ ವಿಡಿಯೊಗಳನ್ನು ಮಾಡಲು ಉತ್ತೇಜನ ನೀಡುತ್ತಿದೆ. ಆದ್ರೆ ಬಹುತೇಕ ಬಳಕೆದಾರರಿಗೆ ಟಿಕ್‌ಟಾಕ್‌ನಲ್ಲಿ ಲೈವ್ ಬರುವುದು ಹೇಗೆ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ.

ಹೌದು, ಟಿಕ್‌ಟಾಕ್ ಆಪ್‌ ಕೇವಲ 15 ಸೆಕೆಂಡ್‌ಗಳ ವಿಡಿಯೊಗಳ ಮೂಲಕ ಬಳಕೆದಾರರಲ್ಲಿ ಹೊಸ ಆಸಕ್ತಿ ಮೂಡಿಸುತ್ತಿದ್ದು, ಸ್ವಂತ ವಿಡಿಯೊ ಮಾಡುವುಕ್ಕೆ ಉತ್ತೇಜನ ನೀಡುತ್ತಿದೆ. ಹೀಗೆ ಸದ್ಯ ಟೆಕ್‌ ವಲಯದಲ್ಲಿ ಮುಂಚೂಣಿಯ ಸಮಾಚಾರದಲ್ಲಿರುವ ಈ ಆಪ್‌ನಲ್ಲಿ ಲೈವ್‌ ಬರುವುದು ಹೇಗೆ ಎನ್ನುವುದು ಬಹುತೇಕ ಬಳಕೆದಾರರಿಗೆ ಗೊತ್ತಿಲ್ಲ. ಇಂದಿನ ಲೇಖನದಲ್ಲಿ ಟಿಕ್‌ಟಾಕ್‌ ಆಪ್‌ನಲ್ಲಿ ಲೈವ್‌ ಬರುವುದು ಹೇಗೆ ಎನ್ನುವ ಹಂತಗಳನ್ನು ತಿಳಿಸಲಾಗಿದೆ.

   
 
ಹೆಲ್ತ್