Back
Home » ಆರೋಗ್ಯ
ರಾಷ್ಟ್ರೀಯ ಪಾಕ್ಷಿಕ ನೇತ್ರ ದಾನ 2019: ಭಾರತದಲ್ಲಿ ನೇತ್ರದಾನ ಸ್ಥಿತಿಗತಿ
Boldsky | 28th Aug, 2019 01:02 PM
 • ಅಂಧರ ಪ್ರಮಾಣ ಭಾರತದಲ್ಲೇ ಹೆಚ್ಚು

  ಭಾರತದಂಥ ಅಭಿವೃಧ್ಧಿ ಹೊಂದುತ್ತಿರುವ ದೇಶದಲ್ಲಿ ಅಂಧರ ಪ್ರಮಾಣ ಹೆಚ್ಚಾಗುತ್ತಿದ್ದು, ದೇಶದ ಜ್ವಲಂತ ಸಮಸ್ಯೆಗಳಲ್ಲಿ ಅಂಧತೆ ಸಹ ಒಂದಾಗಿದೆ ಎಂದು ವರದಿ ತಿಳಿಸುತ್ತದೆ. ಅಂದಾಜಿನ ಪ್ರಕಾರ ದೇಶದಲ್ಲಿ 6.8 ಮಿಲಿಯನ್ ಜನರು ಅಂಧರಾಗಿದ್ದು, ಇದರಲ್ಲಿ 60ರಲ್ಲಿ 6 ಮಂದಿ ಕಣ್ಣಿನ ಕಾರ್ನಿಯಾ ಸಮಸ್ಯೆಯಿಂದಲೇ ಅಂಧತೆಯನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ವಿಶ್ವದ 37 ಮಿಲಿಯನ್ ಅಂಧರಲ್ಲಿ ಬರೋಬ್ಬರಿ 15 ಮಿಲಿಯನ್ ಅಂಧರು ಭಾರತದವರು ಎನ್ನುವುದು ವಿಷಾದನೀಯ. ಆದರೆ ಇದರಲ್ಲಿ ಶೇಕಡಾ 75 ರಷ್ಟು ಅಧಂತೆಯನ್ನು ತಪ್ಪಿಸಬಹುದಾಗಿತ್ತು ಎನ್ನಲಾಗಿದೆ. ಇದರ ಮಹತ್ವ ತಿಳಿಸಲೆಂದೇ ರಾಷ್ಟ್ರೀಯ ನೇತ್ರ ದಾನ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ.


 • ಅಂಗಾಂಗ ದಾನದ ಮಹತ್ವ

  ನಿಮ್ಮ ಸಾವು ವ್ಯರ್ಥವಾಗಬಾರದು, ಮತ್ತೊಬ್ಬರ ಹುಟ್ಟಿಗೆ ನಿಮ್ಮ ಸಾವು ಕಾರಣವಾದರೆ ನಿಮ್ಮ ಬದುಕು ಸಾರ್ಥಕವಾಗುತ್ತದೆ. ಇದಕ್ಕೆ ಪ್ರತಿಯೊಬ್ಬರು ಮಾಡಬೇಕಿರುವುದಿಷ್ಟೇ ನಿಮ್ಮ ಸಾವಿನ ನಂತರ ನಿಮ್ಮ ಅಂಗಾಂಗಗಳು ಮತ್ತೊಬ್ಬರಿಗೆ ಉಪಯೋಗವಾಗಲು ಆಸ್ಪತ್ರೆ ಅಥವಾ ಎನ್ ಜಿ ಒ ಗಳಲ್ಲಿ ನೋಂದಾಯಿಸಿ. ನಿಮ್ಮ ದೇಹದ ಸ್ವಸ್ಥ ಅಂಗಾಂಗಗಳು ಮತ್ತೊಬ್ಬರ ಜೀವಕ್ಕೆ ಸಂಜೀವಿನಿಯಾಗಲಿದೆ. ಮರಣದ ನಂತರ ನಿಮ್ಮ ಕಣ್ಣಿನ ಕಾರ್ನಿಯಾ ಮತ್ತೊಬ್ಬ ಅಂಧನ ಜೀವನಕ್ಕೆ ಬೆಳಕಾಗಲಿದೆ.

  ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳು ಈ ನಿಟ್ಟಿನಲ್ಲಿ ಮಹತ್ವದ ಪ್ರಯತ್ನಗಳನ್ನು ಮುನ್ನಡೆಸಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ತಾನ ಸಹ ಇದೆ ಗುರಿಯತ್ತ ತನ್ನ ಪ್ರಯತ್ನ ಮುಂದುವರೆಸಿದೆ.


 • ಶೇಕಡಾ 50ರಷ್ಟು ದಾನ ವ್ಯರ್ಥವಾಗುತ್ತಿದೆ

  ನೇತ್ರದಾನದ ಮಹತ್ವದ ಬಗ್ಗೆ ಸರ್ಕಾರ, ಸಂಘ-ಸಂಸ್ಥೆಗಳು ಸಾಕಷ್ಟು ಪ್ರಚಾರ ನಡೆಸಿದ ಹೆಚ್ಚಿನ ನೇತ್ರ ದಾನವಾಗಿದೆ, ಆಗಿದೆ ಅದರ ಬಳಕೆ ಮಾತ್ರ ಕ್ಷೀಣಿಸಿದೆ ಎನ್ನಲಾಗಿದೆ. ಏಪ್ರಿಲ್ 2018ರಿಂದ ಮಾರ್ಚ್ 2019ರ ಅಂಕಿಅಂಶದ ಪ್ರಕಾರ 52 ಸಾವಿರ ನೇತ್ರದಾನವಾಗಿದೆ, ಆದರೆ ಕೇವಲ 28 ಸಾವಿರ ಕಾರ್ನಿಯಾ ಜೋಡಣೆ ಮಾತ್ರ ಆಗಿದೆ ಎನ್ನಲಾಗಿದೆ.

  ದಾನವಾಗಿ ಪಡೆದ ನೇತ್ರವನ್ನು ಕೇವಲ 6ರಿಂದ 14ದಿನಗಳು ಮಾತ್ರ ಬಳಕೆಗೆ ಯೋಗ್ಯ ಎನ್ನಲಾಗಿದೆ. ಇದು ಕೇವಲ ಒಂದು ರಾಜ್ಯಕ್ಕಷ್ಟೇ ಸೀಮಿತಾವಗಿಲ್ಲ, ದೇಶದೆಲ್ಲೆಡೆ ಇದೇ ಸಮಸ್ಯೆ ಇದೆ ಎನ್ನಲಾಗಿದೆ. ಇದಕ್ಕೆ ಕಾರಣ ದೇಶದಲ್ಲಿರುವ ಅಗತ್ಯ, ಸುಧಾರಿತ ಉಪಕರಣಗಳ ಕೊರತೆ, ಅಲ್ಲದೇ ನೇತ್ರ ತಜ್ಞರ ಕೊರತೆಯೂ ಹೌದು ಎನ್ನಲಾಗಿದೆ.


 • ನೇತ್ರದಾನಕ್ಕೆ ಜನತೆ ಹಿಂಜರಿಯಲು ಕಾರಣ

  ನಾವಿಂದುನ 21ನೇ ಶತಮಾನಕ್ಕೆ ಕಾಲಿಟ್ಟಿದ್ದೇವೆ, ಆರೋಗ್ಯಬ ಸೇರಿಂದತೆ ಹಲವು ಕ್ಷೇತ್ರದಲ್ಲಿ ದೇಶ ಅಭಿವೃದ್ಧಿ ಹೊಂದಿದೆ, ಹೊಂದುತ್ತಿದೆ, ಆದರೂ ಇನ್ನೂ ಜನತೆ ಮಾತ್ರ ಇನ್ನೂ ಜಾಗೃತಿ ಹೊಂದಿಲ್ಲ. ಇನ್ನೂ ಮೌಢ್ಯತೆ, ಸಾಂಸ್ಕೃತಿಕತೆ, ಪ್ರೇರಣೆಯ ಕೊರತೆ, ಸಂಪ್ರದಾಯಗಳ ಅಡೆತಡೆಗಳನ್ನು ದಾಟಿ ಬರುವುದರಲ್ಲೇ ಹಿಂಜರಿದಿದ್ದಾರೆ.

  ಇತ್ತೀಚಿನ ಸಮೀಕ್ಷೆಯ ಪ್ರಕಾರ, ಅಂದಾಜು 28ರಷ್ಟು ನಗರದ ಜನತೆ ತಪ್ಪಾದ ಅಭಿಪ್ರಾಯವನ್ನು ಹೊಂದಿದ್ದಾರೆ. ಅಂಗಾಂಗ ಅಥವಾ ನೇತ್ರದಾನ ಮಾಡಿರುವವರಿಗೆ ಜೀವರಕ್ಷಿಸುವ ಯಾವುದೇ ಚಿಕಿತ್ಸೆ ನೀಡುವುದಿಲ್ಲ, ಅಲ್ಲದೇ ಅಂದಾಜು 18ರಷ್ಟು ಮಂದಿ ಮರಣದ ನಂತರ ತಮ್ಮ ದೇಹವನ್ನು ತುಂಡು ತುಂಡು ಮಾಡುತ್ತಾರೆ ಎಂಬ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

  ಇಂತಹ ತಪ್ಪು ಅಭಿಪ್ರಾಯಗಳನ್ನು ಬಿಟ್ಟು ದೇಶದ ಜನತೆ ಅಂಗಾಂಗ ದಾನಕ್ಕೆ ಮೊದಲಿಗರಾಗಬೇಕಿದೆ. ಕೆಲವು ನಿಗದಿತ ಕಾಯಿಲೆ ಉಳ್ಳವಳು ಹೊರತಾಗಿ, ಯಾವುದೇ ವಯಸ್ಸಿನ, ಲಿಂಗ, ಜಾತಿ ಬೇಧವಿಲ್ಲದೆ ದಾನವನ್ನು ಮಾಡಬಹುದು. ನಮ್ಮ ಮರಣದ ನಂತರವೂ ಕಣ್ಣುಗಳಿಲ್ಲದ ಇಬ್ಬರು ಅಂಧರ ಬದುಕು ಬೆಳಕಾಗಬಹುದು. ದೇಹ ದಾನ, ಅಂಗಾಂಗ ದಾನ, ನೇತ್ರದಾನದ ಮೂಲಕ ನಿಮ್ಮ ಬದುಕಿನ ಸಾರ್ಥಕತೆಯನ್ನು ಪಡೆಯಿರಿ.
ಕಣ್ಣು ಮನುಷ್ಯದ ದೇಹದ ಅತ್ಯಮೂಲ್ಯ ಪ್ರಜ್ಞೇಂದ್ರಿಯ. ನಮ್ಮ ದೇಹದ ಬಹಳ ಸೂಕ್ಷ್ಮವಾದ ಹಾಗೂ ಅಮೂಲ್ಯವಾದ ಅಂಗವೂ ಹೌದು. ಕಣ್ಣು ಮನುಷ್ಯನಿಗೆ ಎಷ್ಟು ಮುಖ್ಯವೆಂದರೆ ಕಣ್ಣುಗಳನ್ನು ನಮಗೆ ಹೆಚ್ಚು ಪ್ರಿಯಾವಾದ, ಹತ್ತಿರವಾದ ವಸ್ತುಗಳಿಗೆ ಹೋಲಿಸುತ್ತೇವೆ. ಇಂಥ ಅತ್ಯಮೂಲ್ಯವಾದ ಕಣ್ಣಿನ ದಾನದ ಜಾಗೃತಿಯನ್ನು ಭಾರತದಲ್ಲಿ ವಿಶಿಷ್ಟವಾಗಿ ಒಂದು ವಾರ ಆಚರಿಸಲಾಗುತ್ತದೆ.

ರಾಷ್ಟ್ರೀಯ ಪಾಕ್ಷಿಕ ನೇತ್ರ ದಾನ ಆಚರಣೆಯನ್ನು ಪ್ರತಿ ವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ನೇತ್ರ ದಾನ ಕುರಿತ ಜಾಗೃತಿ ಮೂಡಿಸುವುದು ಹಾಗೂ ಜನರು ತಮ್ಮ ನೇತ್ರ ಸೇರಿದಂತೆ ಅಂಗಾಂಗವನ್ನು ದಾನ ಮಾಡಲು ಪ್ರೇರಣೆ ನೀಡುವುದು ಈ ಆಚರಣೆಯ ಉದ್ದೇಶವಾಗಿದೆ.

   
 
ಹೆಲ್ತ್