Back
Home » ಬಾಲಿವುಡ್
ಹಠ-ಪರಿಶ್ರಮ-ಪ್ರತಿಭೆ: ಗಲ್ಲಿಯಿಂದ ಹಾಲಿವುಡ್‌ಗೆ ಹಾರಿದ ನವಾಜುದ್ದೀನ್ ಸಿದ್ದಿಕಿ
Oneindia | 28th Aug, 2019 03:58 PM
 • ಸಿ ಗ್ರೇಡ್ ಸಿನಿಮಾಗಳನ್ನು ನೋಡಿ ಬೆಳೆದ ಸಿದ್ದಿಕಿ

  ನವಾಜುದ್ದೀನ್ ಸಿದ್ದಿಕಿ ಹುಟ್ಟಿದ್ದು ಉತ್ತರ ಪ್ರದೇಶದ ಸಣ್ಣ ಹಳ್ಳಿಯಲ್ಲಿ. ರೈತ ಹಾಗೂ ಕೃಷಿ ಕಾರ್ಮಿಕರೇ ಹೆಚ್ಚಾಗಿದ್ದ ಈ ಜಾಗದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿರಲಿಲ್ಲ. ಹೀಗಾಗಿ, ಬಿ ಗ್ರೇಡ್ ಅಲ್ಲ.. ಸಿ ಗ್ರೇಡ್ ಸಿನಿಮಾಗಳನ್ನು ನೋಡುತ್ತ ಸಿದ್ದಿಕಿ ಬೆಳೆದರು. ತಮ್ಮ ತಂದೆ ತಾಯಿಯ ಎಂಟು ಜನ ಮಕ್ಕಳಲ್ಲಿ ಇವರೇ ದೊಡ್ಡವರಾಗಿದ್ದರು. ಹೇಗೋ ಓದಿ ಬ್ಯಾಚುಲರ್ ಆಫ್ ಸೈನ್ಸ್ ಮುಗಿಸಿದರು.

  ರೈಲ್ವೆ ನಿಲ್ದಾಣದಿಂದ ಬಾಲಿವುಡ್ ಪ್ರವೇಶ ಮಾಡಿದ ಬಡ ಗಾಯಕಿ


 • ನವಾಜುದ್ದೀನ್ ಸಿದ್ದಿಕಿ ನೋಡಿ ಆಯ್ಕೆ ಮಾಡುತ್ತಿರಲಿಲ್ಲ

  ನಟನೆ ಎಂಬ ವಿಷಯವನ್ನು ನವಾಜುದ್ದೀನ್ ಸಿದ್ದಿಕಿ ನೋಡಿ ಕಲಿಯಬೇಕು. ಆದರೆ, ಈ ನಟ ಕೂಡ ಆಡಿಷನ್ ಗಳಲ್ಲಿ ಪದೇ ಪದೇ ಫೇಲ್ ಆಗಿದ್ದರು. ಅವರ ಫೋಟೋ ಆಯ್ಕೆ ಆಗುತ್ತಲೇ ಇರಲಿಲ್ಲ. ಆಗ ನ್ಯಾಷಿನಲ್ ಸ್ಕೂಲ್ ಆಫ್ ಡ್ರಾಮಾ (ಎನ್ ಎಸ್ ಡಿ) ಸೇರಿದ ಸಿದ್ದಿಕಿ ರಂಗಭೂಮಿ ಮೂಲಕ ನಟನೆಯನ್ನು ಕರಗತ ಮಾಡಿಕೊಂಡರು. ನಟನೆ ಕಲಿತರು ನೋವು ಮಾತ್ರ ಮಾಯವಾಗಲಿಲ್ಲ.


 • ಕೇವಲ 40 ಸೆಕೆಂಡ್ ಪಾತ್ರದ ಮೂಲಕ ಗುರುತಿಸಿಕೊಂಡ ನಟ

  ಎನ್ ಎಸ್ ಡಿ ಮುಗಿಸಿ ಬಂದ ನವಾಜುದ್ದೀನ್ ಸಿದ್ದಿಕಿ ದೊಡ್ಡ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ, ಅವರ ಹಣೆಬರಹ ಏನು ಇದ್ದಕ್ಕಿದ್ದ ಹಾಗೆ ಬದಲಾಗಲಿಲ್ಲ. ಕಷ್ಟದ ದಿನಗಳ, ನೋವುಗಳ ನಂತರ ಅಮಿರ್ ಖಾನ್ ನಟನೆಯ 'ಸರ್ಫರೋಷ್' (1999) ನಲ್ಲಿ ಸಣ್ಣದೊಂದು ಪಾತ್ರ ಸಿಕ್ಕಿತ್ತು. ಆ ಪಾತ್ರ ಕೇವಲ 40 ಸೆಕೆಂಡ್ ಇತ್ತು. ಬೇರೆ ಕಲಾವಿದ ಆ ದಿನ ಬಾರದೆ ಇದ್ದ ಕಾರಣ, ಆ ಪಾತ್ರ ಸಿದ್ದಿಕಿ ಪಾಲಾಯ್ತು.

  ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಜಾಕಿಚಾನ್ ಹಿಂದಿಕ್ಕಿದ ಅಕ್ಷಯ್ ಕುಮಾರ್


 • ಸಿದ್ದಿಕಿ ಬದುಕಿಗೆ ಗುಡ್ ಫ್ರೈಡೇ ಆದ 'ಬ್ಲಾಕ್ ಫ್ರೈಡೇ'

  'ಸರ್ಫರೋಷ್' ಚಿತ್ರದ ಸಮಯದಲ್ಲಿ ನವಾಜುದ್ದೀನ್ ಸಿದ್ದಿಕಿ ನಟನೆಯಯನ್ನು ನೋಡಿದ್ದ ಅನುರಾಗ್ ಕಶ್ಯಪ್ ತಮ್ಮ ಮುಂದಿನ ಸಿನಿಮಾದಲ್ಲಿ ಒಂದು ಪಾತ್ರ ಕೊಡುವ ಭರವಸೆ ನೀಡಿದ್ದರು. ಅದೇ ರೀತಿ ತಮ್ಮ ಎರಡನೇ ಚಿತ್ರದ 'ಬ್ಲಾಕ್ ಫ್ರೈಡೇ' ಆ ಚಿತ್ರದ ನವಾಜುದ್ದೀನ್ ಸಿದ್ದಿಕಿ ಒಳ್ಳೆಯ ಬ್ರೇಕ್ ನೀಡಿತ್ತು. ಚಿತ್ರದ ಮೂರು ಸೀನ್ ಗಳಲ್ಲಿ ಸಿದ್ದಿಕಿ ಕಾಣಿಸಿಕೊಂಡಿದ್ದರು.


 • ರಾಷ್ಟ್ರ ಪ್ರಶಸ್ತಿ ಸಿಕ್ಕ ಕ್ಷಣ

  2011 ನಂತರ ನವಾಜುದ್ದೀನ್ ಸಿದ್ದಿಕಿ ಸಾಮರ್ಥ್ಯಕ್ಕೆ ತಕ್ಕ ಸಿನಿಮಾಗಳು, ಪಾತ್ರಗಳು ಸಿಗುತ್ತಾ ಹೋಯ್ತು. 'ದೇಖ್ ಇಂಡಿಯಾನ್ ಸರ್ಕಸ್' ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. 'ಮಿಸ್ ಲವ್ಲಿ', 'ಪತಂಗ್', 'ಗ್ಯಾಂಗ್ಸ್ ಆಫ್ ವಾಸೇಪುರ್ ಪಾರ್ಟ್ 2' ಸಿನಿಮಾಗಳಲ್ಲಿ ಸೋಲೋ ಹೀರೋ ಆಗಿ ನಟಿಸಿ ಗೆದ್ದರು. ಕ'ಹಾನಿ' ಚಿತ್ರದ ಪಾತ್ರ ಕೂಡ ಪವರ್ ಫುಲ್ ಆಗಿತ್ತು.

  ವಿದ್ಯಾ ಬಾಲನ್ ಬಳಿ 'ರೂಂಮಿಗೆ ಬಾ' ಎಂದಿದ್ದರಂತೆ ತಮಿಳು ನಿರ್ದೇಶಕ


 • ಸಾಮರ್ಥ್ಯಕ್ಕೆ ತಕ್ಕ ಸಿನಿಮಾಗಳು ಬರುತ್ತಿವೆ

  ಆ ಬಳಿಕ ಇಡೀ ಬಾಲಿವುಡ್ ಗೆ ನವಾಜುದ್ದೀನ್ ಸಿದ್ದಿಕಿ ನಟನಾ ಸಾಮರ್ಥ್ಯದ ಪರಿಚಯ ಆಯ್ತು. ಅಲ್ಲಿಂದ 'ಬಾಂಬೆ ಟಾಕೀಸ್', 'ಬದ್ಲಾಪುರ್', 'ತ್ರೀ', 'ಫ್ರೀಕಿ ಅಲಿ', 'ಮಾಮ್', 'ರೈಸ್' ಹೀಗೆ ಸಾಲು ಸಾಲು ಅಧ್ಬುತ ಅವಕಾಶಗಳು ಬಂದವು. 'ಮಾಂಜಿ ದಿ ಮೌಂಟೇನ್ ಮ್ಯಾನ್' ಚಿತ್ರ ನವಾಜುದ್ದೀನ್ ಸಿದ್ದಿಕಿ ಕೆರಿಯರ್ ನ ಬೆಸ್ಟ್ ಸಿನಿಮಾಗಳಲ್ಲಿ ಒಂದಾಯಿತು. ಹೀಗೆ ಮುಂದುವರೆಯುತ್ತಿರುವ ಸಿದ್ದಿಕಿ ಖಾತೆಯಲ್ಲಿ ಈ ವರ್ಷವೂ ಒಳ್ಳೆ ಒಳ್ಳೆಯ ಸಿನಿಮಾಗಳಿವೆ.
''ಸೋಲೆ ಗೆಲುವಿನ ಮೆಟ್ಟಿಲು'' ಎನ್ನುವುದು ಎಷ್ಟು ಹಳೆ ಮಾತಾಗಿದ್ದರೂ, ಅದು ಇಂದಿಗೂ..ಎಂದಿಗೂ ಸತ್ಯ. ಈ ಮಾತು ನಟ ನವಾಜುದ್ದೀನ್ ಸಿದ್ದಿಕಿ ವಿಷಯದಲ್ಲಿಯೂ ನಿಜವಾಗಿದೆ.

ಆಕ್ಟಿಂಗ್ ಅಂದ್ರೆ ನವಾಜುದ್ದೀನ್ ಸಿದ್ದಿಕಿ ಎಂದು ಉದಾಹರಣೆ ನೀಡುವ ಮಟ್ಟಿಗೆ ಇಂದು ಅವರು ಬೆಳೆದಿದ್ದಾರೆ. ತಮ್ಮ ನೈಜ ನಟನೆಯ ಮೂಲಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಆದ್ರೆ, ಇಂತಹ ಒರಿಜಿನಲ್ ಟ್ಯಾಲೆಂಟೆಡ್ ನಟ ಕೂಡ ಆಡಿಷನ್ ಗಳಲ್ಲಿ ಫೇಲ್ ಆಗಿದ್ದರು ಅಂದ್ರೆ ನಂಬಲು ಸಾಧ್ಯವೆ.

ಹೌದು, ನವಾಜುದ್ದೀನ್ ಸಿದ್ದಿಕಿ ಪ್ರಾರಂಭದಲ್ಲಿ ಎಲ್ಲ ಆಡಿಷನ್ ಗಳಲ್ಲಿ ಫೇಲ್ ಆಗುತ್ತಿದ್ದರು. ಪದೇ ಪದೇ ಸೋಲು, ಕಷ್ಟದ ದಿನಗಳನ್ನು ತಳ್ಳಿದ ನಂತರ ಚಿಕ್ಕ ಪುಟ್ಟ ಅವಕಾಶಗಳು ಬರಲು ಶುರುವಾಯ್ತು. ಸಣ್ಣ ಮೆಟ್ಟಿಲುಗಳನ್ನು ಹತ್ತುತ್ತಾ ಸಿದ್ದಿಕಿ ನಿಧಾನವಾಗಿ ಸಕ್ಸಸ್ ಶಿಕರ ಏರಿದರು.

ನವಾಜುದ್ದೀನ್ ಸಿದ್ದಿಕಿ ತಮ್ಮ ಸಿನಿ ಹಾದಿ, ಅದರ ಏಳು ಬೀಳುಗಳ ಬಗ್ಗೆ ಅಪರೂಪದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ಸಂದರ್ಶನದ ಕುತೂಹಲಕಾರಿ ವಿಷಯಗಳು ಇಲ್ಲಿವೆ.

   
 
ಹೆಲ್ತ್