Back
Home » ಬಾಲಿವುಡ್
'ಕಾರ್ಗಿಲ್ ಹುಡುಗಿ' ಪಾತ್ರದಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ನಟನೆ
Oneindia | 29th Aug, 2019 05:40 PM

ದಢಕ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಬಂದಿದ್ದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಮಹಿಳೆ ಗುಂಜಾನ್ ಸಕ್ಸೇನಾ ಅವರ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ.

'ಗುಂಜಾನ್ ಸಕ್ಸೇನಾ' ಹೆಸರಿನಲ್ಲಿ ಈ ಸಿನಿಮಾ ಶುರುವಾಗಿದ್ದು, ಈಗ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಭಾರತದ ಮೊದಲ ವಾಯುಪಡೆಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿರುವ ಗುಂಜಾನ್ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದರು.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ವಾಯಪಡೆಯನ್ನ ಮುನ್ನಡೆಸಿದ ಮಹಿಳಾ ಅಧಿಕಾರಿ ಗುಂಜಾನ್ ಸಕ್ಸೇನಾ. ಕಾರ್ಗಿಲ್ ಹುಡುಗಿ ಎಂದೇ ಈಕೆಯನ್ನ ಗುರುತಿಸಲಾಗುತ್ತೆ.

ಅಮ್ಮನಿಗೆ ಹುಟ್ಟುಹಬ್ಬದ ಶುಭಕೋರಿ ಭಾವುಕರಾದ ಜಾಹ್ನವಿ ಕಪೂರ್

ಧರ್ಮ ಪ್ರಡೋಕ್ಷನ್ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ಶರಣ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಗುರುವಾರವಾಷ್ಟೇ ಈ ಚಿತ್ರವನ್ನ ಘೋಷಿಸಿದ್ದು, ಮುಂದಿನ ವರ್ಷ ಮಾರ್ಚ್ 13 ರಂದು ತೆರೆಗೆ ತರಲಿದ್ದಾರಂತೆ.

ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಹೀರೋಯಿನ್ ಅವರೇನಾ?

ದಢಕ್ ಸಿನಿಮಾದ ಬಳಿಕ 'ತಖ್ತ್' ಎಂಬ ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಿರುವ ಜಾಹ್ನವಿ ಕಪೂರ್, ಇಷ್ಟ ಕಡಿಮೆ ಅವಧಿಯಲ್ಲಿ ಇಂತಹದೊಂದು ಪಾತ್ರ ಕೈಗೆತ್ತಿಕೊಂಡಿರುವುದು ನಿಜಕ್ಕೂ ಸವಾಲಾಗಿದೆ.

ತೆಲುಗಿನಲ್ಲಿ ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಚಿತ್ರದಲ್ಲಿ ಜಾಹ್ನವಿ ಕಪೂರ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

   
 
ಹೆಲ್ತ್