Back
Home » ಆರೋಗ್ಯ
ಕಾಫಿ ಡಯಟ್ ನಿಜಕ್ಕೂ ತೂಕ ಇಳಿಸಬಲ್ಲುದೆ? ಇದು ಸುರಕ್ಷಿತವೇ?
Boldsky | 31st Aug, 2019 11:20 AM
 • ಕಾಫಿ ಡಯಟ್/ಕಾಫಿ ಉಪವಾಸ

  ದಿನದಲ್ಲಿ ಹಲವು ಬಾರಿ ಕಾಫಿ ಕುಡಿಯುವುದರಿಂದ ನಮ್ಮ ಜೀರ್ಣ ಕ್ರಿಯೆಯು ಅತ್ಯುತ್ತಮವಾಗುತ್ತದೆ. ದೇಹದಲ್ಲಿ ಇರುವ ಅಧಿಕ ಕೊಬ್ಬುಗಳನ್ನು ಕರಗಿಸುತ್ತದೆ. ಕ್ಯಾಲೋರಿ ಹೀರಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಜೊತೆಗೆ ಹಸಿವನ್ನು ಕಡಿಮೆ ಮಾಡುವುದರಿಂದ ಪದೇ ಪದೇ ಆಹಾರ ಸೇವಿಸಬೇಕು ಎನ್ನುವ ಭಾವನೆಯನ್ನು ಕಡಿಮೆ ಮಾಡುವುದು. ಕಾಫಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿರುವುದರಿಂದ ನೀವು ನಿತ್ಯ 3 ಕಪ್ ಕಾಫಿಯವರೆಗೆ ಕುಡಿಯಬಹುದು. ಅದರ ಮಿತಿ ಮೀರಬಾರದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.


 • ಕಾಫಿ ಕುಡಿಯುವುದರಿಂದ ದೇಹದ ತೂಕ ಇಳಿಯುವುದೇ?

  ಕಾಫಿಯನ್ನು ದಿನಕ್ಕೆ ಮೂರು ಕಪ್ (720 ಮಿ.ಲಿ.) ಸೇವಿಸಬಹುದು. ಮೂರು ಕಪ್ ಕಾಫಿಯಿಂದ ಆರೋಗ್ಯಕರ ಫಾಲಿಫಿನಾಲ್ ಆಂಟಿಆಕ್ಸಿಡೆಂಟ್ ಗಳನ್ನು ಪಡೆಯಬಹುದು. ಅದು ದೇಹದ ತೂಕ ಕರಗಿಸಲು ಸಹಾಯ ಮಾಡುವುದು. ಕಾಫಿಯ ಜೊತೆ ಅಧಿಕ ನೀರು ಅಥವಾ ಇನ್ಯಾವುದಾದರೂ ಆರೋಗ್ಯಕರ ವಿಧಾನ ಅನುಸರಿಸಿ ಕುಡಿಯಬಹುದು. ಆದರೆ ಕಾಫಿಯ ಪ್ರಮಾಣ 720 ಮಿ.ಲಿ. ಮೀರಬಾರದು. ಪ್ರತಿ ಬಾರಿ ಕಾಫಿ ಕುಡಿಯುವಾಗ ಸಕ್ಕರೆ, ಕೆನೆ ಹಾಲು ಬಳಸುವುದನ್ನು ತಪ್ಪಿಸಬೇಕು.


 • ಕಾಫಿಯ ಪ್ರಯೋಜನಗಳು

  ಕಾಫಿಯಲ್ಲಿ ಕೆಫೀನ್ ಮತ್ತು ಪಾಲಿಫಿನಾಲ್ಸ್ ಎಂಬ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ದೇಹಕ್ಕೆ ಅಗತ್ಯವಾದ ಅನೇಕ ಆರೋಗ್ಯಕರ ಪರಿಣಾಮ ಹಾಗೂ ಪ್ರಯೋಜನಗಳನ್ನು ನೀಡುತ್ತವೆ. ಇದು ಉರಿಯೂತ ಕಡಿಮೆ ಮಾಡುವುದು, ತೂಕ ನಷ್ಟ, ಹಸಿವೆಯನ್ನು ಕಡಿಮೆ ಮಾಡುವುದು ಹಾಗೂ ಚಯಾಪಚಯ ಕ್ರಿಯೆಯನ್ನು ಉತ್ತಮವಾಗಿ ಇರಿಸುವುದು.


 • ಅತಿಯಾದ ಕೆಫಿನ್

  ಹೆಚ್ಚಿನ ಜನರು ಕೆಫಿನ್ ಕಾಫಿಯನ್ನು ಕುಡಿಯಲು ಬಯಸುತ್ತಾರೆ. ಕಾಫಿಯಿಂದ ಉಂಟಾಗುವ ಅನುಚಿತ ಸಮಸ್ಯೆಗಳು ಕೆಫಿನ್ ಇಂದಲೇ ಉಂಟಾಗುತ್ತದೆ. ಕಾಫಿ ಕುಡಿಯುವುದು ಚಟದ ರೀತಿಗೆ ತಿರುಗಿದರೆ ಕಷ್ಟವಾಗುವುದು. ಆಗ ಅಧಿಕ ರಕ್ತದೊತ್ತಡ, ದೇಹದಲ್ಲಿ ಅನುಚಿತ ಹಸಿವು ಕ್ರಿಯೆ, ಅತಿಯಾದ ಮೂತ್ರ ವಿಸರ್ಜನೆಗೆ ಪ್ರಚೋದನೆ, ದೇಹದಿಂದ ಅಧಿಕ ನೀರಿನಂಶವನ್ನು ಹೊರಹಾಕುವುದು. ಜೊತೆಗೆ ಚರ್ಮದಲ್ಲಿ ಶುಷ್ಕತೆ ಉಂಟಾಗುವ ಸಾಧ್ಯತೆಗಳು ಹೆಚ್ಚು.


 • ಕಡಿಮೆ ಅವಧಿಯಲ್ಲಿ ಅಧಿಕ ತೂಕ ಇಳಿಕೆ

  ದಿನಕ್ಕೆ 720 ಮಿ.ಲಿ. ಅಷ್ಟು ಕಾಫಿಯನ್ನು ಕುಡಿಯಬಹುದು. ಇದರಿಂದ ತೀವ್ರವಾದ ತೂಕ ಇಳಿಕೆಯನ್ನು ಸಹ ನೀವು ಕೈಗೊಳ್ಳಬಹುದು. ತೂಕ ಇಳಿಸುವ ಯೋಜನೆಯನ್ನು ನೀವು ಕೈ ಬಿಟ್ಟರೆ ಪುನಃ ದೇಹದ ತೂಕವನ್ನು ಆರೋಗ್ಯಕರ ರೀತಿಯಲ್ಲಿಯೇ ಪಡೆಯಬಹುದು. ನಿಮ್ಮ ಆಹಾರ ಹವ್ಯಾಸ ಹಾಗೂ ವ್ಯಾಯಾಮದ ಹವ್ಯಾಸ ಹೇಗಿದೆ? ಎನ್ನುವುದರ ಆಧಾರದ ಮೇಲೆ ತೂಕ ಇಳಿಕೆ ಹಾಗೂ ಏರಿಕೆ ನಿಂತಿರುತ್ತದೆ. ಕಾಫಿ ಕುಡಿದು ದೇಹದ ಕ್ಯಾಲೋರಿಯನ್ನು ಕಡಿಮೆ ಮಾಡಬಹುದು. ಅದಕ್ಕೆ ಅನುಗುಣವಾಗಿ ಚಯಾಪಚಯ ಕ್ರಿಯೆಗೆ ಸಹಕರಿಸುವುದು. ಕಡಿಮೆ ಅವಧಿಯಲ್ಲಿ ಅಧಿಕ ತೂಕ ಇಳಿಸಲು ಇದೂ ಒಂದು ಉತ್ತಮ ವಿಧಾನ ಆಗಬಹುದು.


 • ಖಾಲಿ ಹೊಟ್ಟೆಯಲ್ಲಿ ಕಾಫಿ

  ಖಾಲಿ ಹೊಟ್ಟೆಯಲ್ಲಿ ಕಾಫಿ ಹೀರಿದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳಾಗಬಹುದು. ಕೆಫೀನ್ ಅಂಶವುಳ್ಳ ಇದನ್ನು ಕುಡಿದರೆ ಹೊಟ್ಟೆಯಲ್ಲಿ ಆಸಿಡ್ (ಆಮ್ಲ) ಉತ್ಪಾದನೆಯಾಗಬಹುದು. ಇದು ನಿಮ್ಮ ಹೊಟ್ಟೆಯ ಒಳಪದರವನ್ನು ಹಾನಿ ಮಾಡಬಹುದು. ಅಲ್ಲದೆ, ಇದರಿಂದ ಅಜೀರ್ಣ ಮತ್ತು ಎದೆಯುರಿಯಂತಹ ಸಮಸ್ಯೆಗಳು ಆರಂಭವಾಗಬಹುದು. ಬೆಳಗ್ಗೆ ಕಾಫಿ ಕುಡಿಯುವುದರಿಂದ ಕಾರ್ಟಿಸಲ್ ಉತ್ಪಾದನೆ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ನಿಮಗೆ ಹೆಚ್ಚು ನಿದ್ದೆ ಬರುತ್ತದೆ ಎಂದು ಅಧ್ಯಯನ ತಿಳಿಸುತ್ತದೆ. ಬೆಳಗ್ಗೆ ಕಾರ್ಟಿಸಲ್ ಉತ್ಪಾದನೆ ಹೆಚ್ಚಾಗಿ ಆಗುವುದರಿಂದ ಮನುಷ್ಯನನ್ನು ಎಚ್ಚರದಿಂದ ಹಾಗೂ ಎನರ್ಜಿಟಿಕ್ ಆಗಿ ಇರುತ್ತದೆ. ಹೀಗಾಗಿ, ಬೆಳಗ್ಗೆ ಕಾಫಿ ಕುಡಿದರೆ ಸಿರ್ಕಾಡಿಯನ್ ರಿದಮ್ ಅನ್ನು ಹಾಳು ಮಾಡಬಹುದು, ಇದರಿಂದ ನಿಮಗೆ ನಿದ್ದೆ ಬಂದಂತಾಗುತ್ತದೆ.


 • ದೀರ್ಘಕಾಲಕ್ಕೆ ಸುರಕ್ಷಿತವಲ್ಲ

  ಕಾಫಿ ಕುಡಿದು ದೇಹ ತೂಕ ಇಳಿಸುವವರು ಸಾಮಾನ್ಯವಾಗಿ ಎರಡರಿಂದ ಏಳು ವಾರಗಳ ಕಾಲ ಮುಂದುವರಿಸುತ್ತಾರೆ. ವಾಸ್ತವವಾಗಿ ಇದು ಆರೋಗ್ಯಕರವಾದ ರೀತಿಯಲ್ಲ. ದೀರ್ಘ ಸಮಯಗಳ ಕಾಲ ಕೇವಲ ಕೆಫಿನ್ ನಿಮ್ಮ ದೇಹಕ್ಕೆ ಹೋಗುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಸುಲಭವಾಗಿ ಬರುತ್ತವೆ. ಖೀನ್ನತೆ, ನಿದ್ರಾ ಹೀನತೆ, ಹಿಮೋಗ್ಲೋಬಿನ್ ಪ್ರಮಾಣ ಇಳಿಕೆಯಾಗುವುದು, ಮಲಬದ್ಧತೆ, ದೇಹ ಒಣಗುವುದು, ನೀರಿನಂಶ ಕಳೆದುಕೊಂಡು ಅನೇಕ ಸಮಸ್ಯೆಗಳು ತಲೆದೂರುತ್ತವೆ. ಹಾಗಾಗಿ ಯಾವುದೇ ವಿಧಾನವೂ ನಿರಂತರವಾಗಿ ಮುಂದುವರಿಯುತ್ತಲೇ ಸಾಗಬಾರದು. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವಂತೆ, ಕಾಫಿಯಿಂದ ಉತ್ತಮ ಗುಣಗಳಿದ್ದರೂ, ಅದನ್ನು ಮಿತಿಮೀರಿ ಬಳಸಿದರೆ ತೊಂದರೆ ಉಂಟಾಗುವುದು.
ಮುಂಜಾನೆ ಕಾಫಿ ಕುಡಿದರೆ ಮಾತ್ರ ದಿನದ ಆರಂಭ ಸುಗಮವಾಗಿ ಸಾಗುವುದು. ಮಾನಸಿಕವಾಗಿಯೂ ಸಾಕಷ್ಟು ನಿರಾಳತೆ ದೊರೆಯುವುದು. ಕಾಫಿ ಕುಡಿಯುವುದರಿಂದ ಸಿಗುವ ಸಮಾಧಾನ ಇನ್ಯಾವುದೇ ಪೇಯದಲ್ಲಿ ಇಲ್ಲ ಎನ್ನುವ ಭಾವನೆ ಬಹುತೇಕ ಮಂದಿಗೆ ಇರುತ್ತದೆ. ಕಾಫಿ ಕುಡಿದು ಕೊಂಡೇ ದಿನ ಪೂರ್ತಿ ಇರುವ ಜನರು ಸಹ ನಮ್ಮ ಮಧ್ಯೆ ಇದ್ದಾರೆ. ಒಂದು ಹೊತ್ತಿನ ಕಾಫಿ ಇಲ್ಲ ಎಂದರೆ ತಲೆ ನೋವು ಅನುಭವಿಸುವುದು ಮತ್ತು ಯಾವುದೇ ಕೆಲಸದಲ್ಲೂ ಉತ್ಸಾಹ ಇಲ್ಲದಂತೆ ಮಂಕಾಗುವ ಜನರು ಸಹ ಇದ್ದಾರೆ.

ದೇಹದ ತೂಕ ಮಿತಿಮೀರಿದ್ದರೆ, ಅಂತಹವರು ಕೇವಲ ಕಾಫಿ ಕುಡಿದುಕೊಂಡು ಉಪವಾಸವನ್ನು ಅನುಸರಿಸುತ್ತಾರೆ. ಅದು ಹಸಿವನ್ನು ತಡೆಯುವ ಗುಣ ಹೊಂದಿರುವುದರಿಂದ ಸಾಕಷ್ಟು ಸಮಯಗಳ ಕಾಲ ಯಾವುದೇ ತಿಂಡಿ ಹಾಗೂ ಊಟ ಇಲ್ಲದೆ ಕಳೆಯಬಹುದು. ಹೀಗೆ ನಮ್ಮ ಅಗತ್ಯಕ್ಕೆ ಬೇಕಂತೆ ಕುಡಿಯಬಹುದಾದ ಕಾಫಿ ನಮ್ಮ ದೇಹದ ತೂಕವನ್ನು ಸಹ ಕಡಿಮೆ ಬಲ್ಲದು. ಅಂತೆಯೇ ಕಾಫಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?, ಎಷ್ಟು ಕೆಟ್ಟದ್ದು?, ನಿಜವಾಗಿಯೂ ಕಾಫಿ ಸೇವೆನೆಯಿಂದ ತೂಕ ಇಳಿಸಲು ಸಾಧ್ಯವೇ? ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಕಾಫಿಯ ಸೇವನೆಯ ಮೂಲಕ ಉಪವಾಸ ಕೈಗೊಂಡರೆ ನಮ್ಮ ದೇಹ ತೂಕ, ಆರೋಗ್ಯದಲ್ಲಿ ಯಾವೆಲ್ಲಾ ಪ್ರಭಾವ ಬೀರುವುದು ಎನ್ನುವುದನ್ನು ಲೇಖನದ ಮುಂದಿನ ಭಾಗ ತಿಳಿಸುತ್ತದೆ.

   
 
ಹೆಲ್ತ್