Back
Home » ಆರೋಗ್ಯ
ಕ್ಯಾನ್ಸರ್ ನಿವಾರಕ ಚೆಂಡೂ ಹೂವಿನ ಔಷಧೀಯ ಗುಣ ತಿಳಿದರೆ ನೀವು ಅಚ್ಚರಿ ಪಡುತ್ತೀರಿ!
Boldsky | 3rd Sep, 2019 02:51 PM
 • ಚೆಂಡು ಹೂವಿನ ಬಗೆಗಳು

  ಮೆಕ್ಸಿಕನ್ ಮೂಲದ ಈ ಮೂಲಿಕೆಯನ್ನು ವೈಜ್ಞಾನಿಕವಾಗಿ ಕ್ಯಾಲೆಂಡುಲ ಎನ್ನಲಾಗುತ್ತದೆ. ಇಂಗ್ಲಿಷ್ ನಲ್ಲಿ ಮಾರಿಗೋಲ್ಡ್, ಪಾಟ್ ಮಾರಿಗೋಲ್ಡ್ ಎಂದು ಚಿರಪರಿಚಿತವಿರುವ ಚೆಂಡುಹೂವು ಹಲವು ಪ್ರಬೇಧಗಳನ್ನು ಹೊಂದಿದ್ದು, ಇದರಲ್ಲಿ ಒಂದರಿಂದ ಹಲವು ಎಳೆಯ ದಳಗಳನ್ನು ಹೊಂದಿದೆ. ಹಳದಿ, ಕೆಂಪು ಆರೆಂಜ್ ಸೇರಿದಂತೆ ವೈವಿಧ್ಯಮಯ ಬಣ್ಣಗಳಲ್ಲಿ ಈ ಹೂವುಗಳನ್ನು ಕಾಣಬಹುದಾಗಿದೆ.


 • ಚೆಂಡು ಹೂವಿನ ಉಪಯೋಗಗಳು

  ಚೆಂಡೂ ಹೂ ಗಣೇಶ ಸೇರಿದಂತೆ ಹಲವು ದೇವರಿಗೆ ಪ್ರಿಯವಾದ ಪುಷ್ಟ. ಇತರ ಹೂಗಳಿಗಿಂತ ಹೆಚ್ಚು ಆಕರ್ಷಣೆಯನ್ನು, ಗಾಢ ಬಣ್ಣವನ್ನು ಹೊಂದಿರುವ ಚೆಂಡು ಹೂ ಕಡಿಮೆ ಬೆಲೆಗೆ ಸಿಗುವ ಹೂವು ಸಹ ಹೌದು. ಈ ಹೂಗಳನ್ನು ಇಷ್ಟಕ್ಕೆ ಸೀಮಿತಗೊಳಿಸದೇ, ಎಣ್ಣೆ, ಕ್ರೀಮ್ ಗಳು, ಜೆಲ್, ಟಿಂಚರ್, ಟೀ, ಸೌಂದರ್ಯ ವೃದ್ಧಿಸುವ ಪ್ರಾಡಕ್ಟ್ ಗಳು, ಸಲಾಡ್ಸ್, ಟೂಥ್ ಪೇಸ್ಟ್, ಹಲವು ಖಾದ್ಯಗಳನ್ನು ತಯಾರಿಸಲು ಸಹ ಬಳಸುವ ಬಹುಪಕಾರಿ ಔಷಧೀಯ ಮದ್ದಾಗಿದೆ.

  ನಿಮಗೆ ನಂಬಲು ಅಚ್ಚರಿ ಎನಿಸಬಹುದು ಚೆಂಡು ಹೂವಿನ ಪ್ರಬೇಧವನ್ನು ಬರೋಬ್ಬರಿ 200 ವಿಧಧ ಶ್ಯಾಂಪು, ಸೋಪು, ಕ್ರೀಮ್ ಗಳ ತಯಾರಿಕೆಗೆ ಬಳಸುತ್ತಾರೆ ಎನ್ನಲಾಗಿದೆ. ಈ ಹೂವಿನಲ್ಲಿ ಉರಿಯೂತ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವುದರಿಂದ ಆರೋಗ್ಯ ವೃದ್ಧಿಗೂ ಈ ಹೂವು ಸಹಕಾರಿ.


 • ಚೆಂಡು ಹೂವಿನಲ್ಲಿರುವ ಪೌಷ್ಠಿಕ ಸತ್ವಗಳು

  ಸ್ಪೆಕ್ಟ್ರೋಫೊಟೋಮೆಟ್ರಿ ಮೂಲಕ ಚೆಂಡು ಹೂವಿನಿಂದ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳ ಮೌಲ್ಯಮಾಪನದ ಬಗ್ಗೆ 2012ರಲ್ಲಿ ಅಧ್ಯಯನ ನಡೆಸಲಾಗಿತ್ತು. ಅಧ್ಯಯನದ ವರದಿಯಂತೆ ಚೆಂಡು ಹೂವು ಫ್ಲೇವೊನಾಯ್ಡ್ ಮತ್ತು ಕರೋಟಿನಾಯ್ಡ್ ಎಂಬ ರೋಗ ನಿರೋಧಕಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಹೂವಿನ ದಳಗಳು ಸಾಕಷ್ಟು ರೋಗನಿರೋಧಕ ಮತ್ತು ಕ್ಯಾಲೆಂಡ್ರಿಕ್ ಮತ್ತು ಲಿನೋಲಿಸ್ ಎಂಬ ಕೊಬ್ಬಿನಾಮ್ಲಗಳ ಅಂಶಗಳನ್ನು ಹೊಂದಿದೆ. ಅಲ್ಲದೇ ಹೂವಿನ ಎಲೆಗಳು ಸಹ ಬೆಟಾ ಕರೋಟಿನ್ (ವಿಟಮಿನ್ ಎ) ಎಂಬರೋಗ ನಿರೋಧಕ ಗುಣವನ್ನು ಹೊಂದಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.

  ಚೆಂಡು ಹೂವಿನ ಆರೋಗ್ಯಕಾರಿ ಪ್ರಯೋಜನಗಳು


 • 1. ಉರಿಯೂತ ನಿವಾರಣೆ

  ಚೆಂಡು ಹೂವಿನ ದಳಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಆಂಶವನ್ನು ಹೊಂದಿದೆ. ಅದರಲ್ಲೂ ದೊಡ್ಡ ಕರುಳಿನಲ್ಲಿ ಉಂಟಾಗುವ ಉರಿಯೂತದ ಕಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಈ ಹೂವು ಹೊಂದಿದೆ.


 • 2. ಕಣ್ಣಿಗೆ ಉತ್ತಮ ಮನೆಮದ್ದು

  ಹೂವಿನಲ್ಲಿರುವ ಆಂಟಿಆಕ್ಸಿಡೆಂಟ್ ಅಂಶಗಳು ಕಣ್ಣಿನ ದೃಷ್ಟಿಯನ್ನು ಅಭಿವೃದ್ದಿಪಡಿಸುವಲ್ಲಿ ಸಹ ಸಹಕಾರಿಯಾಗಿದೆ. ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಕ್ಷೀಣತೆಯನ್ನು ತಪ್ಪಿಸುವಲ್ಲಿ ಬೆಟಾ ಕರೋಟಿನ್ ಅಂಶ ಸಹಕಾರಿಯಾಗಿದೆ.


 • 3. ಸ್ನಾಯು ಸೆಳೆತ

  ಋತುಸ್ರಾವದ ವೇಳೆ ಸ್ನಾಯುಗಳ ಸೆಳೆತವನ್ನು ತಡೆಯುವಲ್ಲಿ ಈ ಹೂವು ಪರಿಣಾಮಕಾರಿ ಹಾಗೂ ಮುಟ್ಟಿನ ದಿನ ನಿಯಮಿತವಾಗಿ ಬರುವಂತೆ ಹೂವಿನ ಔಷಧೀಯ ಗುಣಗಳು ಮಾಡುತ್ತದೆ. ಅಲ್ಲದೆ ದೇಹದ ಇತರೆ ಸೆಳೆತಗಳಿಗೂ ಇದು ಗುಣಾತ್ಮಕ ಮನೆಮದ್ದಾಗಿದೆ. ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಕ್ಷೀಣತೆಯನ್ನು ತಡೆಗಟ್ಟುವಲ್ಲಿ ಸಹ ಹೂವಿನ ಅಂಶ ಸಹಾಯ ಮಾಡುತ್ತದೆ. ಅಲ್ಲದೆ ಸ್ನಾಯುಗಳು ವಿಶ್ರಾಂತಿಗೆ ಹಾಗೂ ಉತ್ತಮ ರಕ್ತ ಸಂಚಾರಕ್ಕೂ ಸಹಕಾರಿ.


 • 4. ಬಾಯಿಯಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತದೆ

  ಚೆಂಡುಹೂವನ್ನು ಅತಿಯಾಗಿ ಟೂಥ್ ಪೇಸ್ಟ ಮತ್ತು ಮೌತ್ ವಾಶ್ ಗಳಲ್ಲಿ ಬಳಸುತ್ತಾರೆ. ಹೂವುನಲ್ಲಿರುವ ಕೀಟನಾಶಕ ಗುಣ ಬಾಯಿಯಲ್ಲಿರುವ ಹಾನಿಕಾರಕ ಕೀಟಗಳನ್ನು ಕೊಂದು, ಸ್ವಾಸ್ಥ್ಯವನ್ನು ಕಾಪಾಡುತ್ತದೆ.


 • 5. ಕ್ಯಾನ್ಸರ್

  ಇತ್ತೀಚಿನ ಅಧ್ಯಯನದ ಪ್ರಕಾರ ಚೆಂಡೂ ಹೂವು ಟ್ಯೂಮರ್ ನಿಯಂತ್ರಕ ಅಂಶಗಳನ್ನು ಹೊಂದಿದೆ ಎಂದು ಪತ್ತೆ ಮಾಡಲಾಗಿದೆ. ಚೆಂಡು ಹೂವಿನಲ್ಲಿರುವ ಸಾರಗಳು ಕ್ಯಾನ್ಸರ್ ಅನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಸಂಶೋಧನೆ ತಿಳಿಸಿದೆ. ಈ ಕುರಿತ ಅಧ್ಯಯನ ಇನ್ನೂ ಮುಂದುವರೆದಿದೆ.


 • 6. ಅಲ್ಸರ್, ಗಾಯಕ್ಕೆ ಮದ್ದು

  ಹೂವಿನ ಸಾರಗಳು ಹುಣ್ಣುಗಳು ಮತ್ತು ನಿಧಾನವಾಗಿ ಶಮನವಾಗಬಲ್ಲ ತೆರೆದ ಗಾಯಗಳನ್ನು ಶೀಘ್ರ ಗುಣಪಡಿಸುತ್ತದೆ. ಈ ಹೂವಿನಿಂದ ಪ್ರಾಣಿಗಳ ಚೇತರಿಕೆಯ ಪ್ರಮಾಣವನ್ನು ಶೇಕಡಾ 30ರಷ್ಟು ಹೆಚ್ಚಿಸಿದೆ ಎಂದು ಸಹ ಸಾಬೀತಾಗಿದೆ.

  ಆಹಾರದಲ್ಲಿ ಚೆಂಡು ಹೂವಿನ ಬಳಕೆ ಹೇಗೆ?

  * ಹೂವಿನ ಒಣ ದಳಗಳನ್ನು ಕೇಕ್ ಅಥವಾ ಸೂಪ್ ತಯಾರಿಕೆಯಲ್ಲಿ ಬಳಸಬಹುದು.

  * ಹೂವಿನದಳಗಳನ್ನು ಕತ್ತರಿಸಿ ಸಲಾಡ್ ಗಳಿಗೆ ಸಹ ಬಳಸಬಹುದು

  * ಸೂಪ್ ಅಥವಾ ಅನ್ನದ ಖಾದ್ಯಗಳಲ್ಲಿ ಫ್ಲೇವರ್ ಗಾಗಿಯೂ ಹೂವಿನ ದಳವನ್ನು ಬಳಸಬಹುದು.

  * ಟೀ ತಯಾರಿಕೆಯಲ್ಲೂ ಹೂವಿನ ಬಳಕೆ ರುಚಿ ನೀಡುತ್ತದೆ.

  * ಆಮ್ಲೆಟ್ ಮಾಡುವಾಗ ಸಹ ಹೂವಿನ ಒಣ ದಳಗಳನ್ನು ಹಾಕಬಹದು.


 • ಚೆಂಡು ಹೂವಿನ ಟೀ ರೆಸಿಪಿಗಳು

  1. ಒಣ ದಳಗಳ ಟೀ

  ಸಾಮಗ್ರಿಗಳು

  1ರಿಂದ 2 ಚಮಚ ಒಣ ದಳಗಳು ಮತ್ತು ಒಂದು ಲೋಟ ಬಿಸಿ ನೀರು

  ತಯಾರಿಸುವ ವಿಧಾನ

  ನೀರನ್ನು ಚೆನ್ನಾಗಿ ಬಿಸಿ ಮಾಡಿ ನಂತರ ಅದಕ್ಕೆ ಒಣ ದಳಗಳನ್ನು ಹಾಕಿ. ಒಣ ದಳಗಳ ಮೇಲೆ ನೀರನ್ನು ಹಾಕಿ 10 ರಿಂದ 15 ನಿಮಿಷದ ನಂತರ ಸೇವಿಸಿ.


 • 2. ತಾಜಾ ಹೂವಿನ ಟೀ

  ಸಾಮಗ್ರಿಗಳು

  4ರಿಂದ 5 ಚಮಚ ತಾಜಾ ದಳಗಳು ಮತ್ತು ಒಂದು ಲೋಟ ಬಿಸಿ ನೀರು

  ತಯಾರಿಸುವ ವಿಧಾನ

  ಬಿಸಿ ನೀರಿಗೆ ತಾಜಾ ದಳಗಳನ್ನು ಹಾಕಿ, ದಳಗಳು ಸಂಪೂರ್ಣ ಮುಳುಗಿ ನೀರು ತಣ್ಣಗಾದ ನಂತರ ಸೇವಿಸಿ.


 • 3. ಸನ್ ಟೀ

  ಸಾಮಗ್ರಿಗಳು

  4ರಿಂದ 5 ಚಮಚ ತಾಜಾ ಅಥವಾ ಒಣ ದಳಗಳು ಮತ್ತು ಎರಡು ಲೋಟ ತಂಪಾಸ ನೀರು

  ತಯಾರಿಸುವ ವಿಧಾನ

  ಪಾತ್ರೆಯಲ್ಲಿ ದಳಗಳನ್ನು ಹಾಕಿ ಅದರ ಮೇಲೆ ತಂಪಾದ ನೀರನ್ನು ಸುರಿಯಿರಿ. ನಂತರ ಪಾತ್ರೆಯನ್ನು ಮುಚ್ಚಿ ಸೂರ್ಯನ ಶಾಖ ಬೀಳುವ ಸ್ಥಳದಲ್ಲಿ 5ರಿಂದ 6ಗಂಟೆ ಇಟ್ಟು ನಂತರ ಸೇವಿಸಿ.


 • ಚೆಂಡು ಹೂವಿನ ಅಡ್ಡಪರಿಣಾಮಗಳು

  ಚೆಂಡು ಹೂವು ಮುಟ್ಟಾಗಲು ಹೆಚ್ಚು ಪರಿಣಾಮಕಾರಿ ಔಷಧೀಯ ಗಿಡಮೂಲಿಕೆಯಾಗಿದ್ದು, ಗರ್ಭಿಣಿಯರು, ಗರ್ಭಿಣಿ ಆಗಲು ಬಯಸುವವರು ಮತ್ತು ಎದೆಹಾಲು ಉಣಿಸುವವರು ಇದನ್ನು ಕಡ್ಡಾಯವಾಗಿ ಬಳಸಬಾರದು. ಸ್ನಾಯುಗಳಿಗೆ ವಿಶ್ರಾಂತಿ ನೀಡುವ ಸಾಮರ್ಥ್ಯವಿರುವ ಈ ಹೂವು ನಿದ್ರಾಜನಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹದು. ಮಧುಮೇಹ ಮತ್ತು ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುವವರು ಸಹ ಈ ಹೂವನ್ನು ಬಳಸಬಾರದು.
ಸಾಮಾನ್ಯವಾಗಿ ಹೂವುಗಳೆಂದರೆ ದೇವರಿಗೆ ಅರ್ಪಿಸಲು, ಮುಡಿಯಲು ಮತ್ತು ಶುಭ ಸಮಾರಂಭಗಳಿಗೆ ಮಾತ್ರ ಸೀಮಿತ ಎನ್ನಲಾಗುತ್ತದೆ. ಆದರೆ ಹಲವು ಹೂವುಗಳಲ್ಲಿ ಸಾಕಷ್ಟು ಔಷಧಿಯ ಗುಣಗಳು ಸಹ ಇರುತ್ತದೆ. ಅದರಲ್ಲೂ ಚೆಂಡೂ ಹೂವಿನಲ್ಲಿರುವ ಔಷಧೀಯ ಗುಣಗಳನ್ನು ನೀವು ತಿಳಿದರೆ ಅಚ್ಚರಿ ಪಡುತ್ತೀರಿ.

ಹೌದು, ಎಲ್ಲೆಂದರೆಲ್ಲಿ ಸುಲಭವಾಗಿ ಬೆಳೆಯಬಹುದಾದ ಚೆಂಡು ಹೂವು ಮಾರಕ ಕಾಯಿಲೆಗಳಾದ ಕ್ಯಾನ್ಸರ್ ಸೇರಿದಂತೆ, ಅಲ್ಸರ್, ಉರಿಯೂತ, ಮುಟ್ಟು, ಕಣ್ಣಿನ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.

   
 
ಹೆಲ್ತ್