Back
Home » ಸಮ್ಮಿಲನ
ಶಿಕ್ಷಕರ ದಿನಾಚರಣೆ 2019 : ಶುಭಾಶಯಗಳು, ಉಲ್ಲೇಖಗಳು, ಸ್ಟೇಟಸ್ ಮತ್ತು ಸಂದೇಶಗಳು
Boldsky | 5th Sep, 2019 10:01 AM
  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಒಬ್ಬ ಶಿಕ್ಷಕನು ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಇಡೀ ಜಗತ್ತನ್ನೇ ಉತ್ತಮ ಸ್ಥಳವನ್ನಾಗಿ ಮಾರ್ಪಡಿಸಬಹುದು. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಸಾಮಾನ್ಯ ವಿದ್ಯಾರ್ಥಿಗಳು ಅಸಾಮಾನ್ಯ ಕೆಲಸಗಳನ್ನು ಮಾಡಲು ಕನಸು ಕಾಣಲು ಮೂಲ ಪ್ರೇರಣೆ ಉತ್ತಮ ಶಿಕ್ಷಕರು. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನೀವು ಯಾವಾಗಲೂ ನನ್ನ ನೆಚ್ಚಿನ ಶಿಕ್ಷಕರಾಗಿದ್ದೀರಿ. ನಿಮ್ಮ ಅಮೂಲ್ಯವಾದ ಬೋಧನೆಗಳು ನನ್ನ ಜೀವನವನ್ನು ರೂಪಿಸಿವೆ ಮತ್ತು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನನ್ನ ಇಂದಿನ ಯಶಸ್ಸಿಗೆ ಕಾರಣಕರ್ತರಾದ ಶಿಕ್ಷಕರಿಗೆ ನಾನು ಋಣಿಯಾಗಿದ್ದೇನೆ. ನಿಮ್ಮ ಹಠ, ಸಮರ್ಪಣೆ ಮತ್ತು ಭಕ್ತಿ ಇಲ್ಲದಿದ್ದರೆ, ನಾನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ನಿಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನಾನು ಶಾಲೆಯನ್ನು ತೊರೆದು ಹಲವು ವರ್ಷಗಳಾಗಿವೆ, ಆದರೆ ನಿಮ್ಮ ಬುದ್ಧಿವಂತಿಕೆಯ ಮಾತುಗಳು ಜೀವನದಲ್ಲಿ ದೊಡ್ಡ ಕೆಲಸಗಳನ್ನು ಮಾಡಲು ನನಗೆ ಸ್ಫೂರ್ತಿ ನೀಡುತ್ತಲೇ ಇವೆ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಯಾವುದು ತಪ್ಪು, ಯಾವುದು ಸರಿ ಎಂದು ಗುರುತಿಸಿ ಮಾರ್ಗದರ್ಶನ ನೀಡಿದ್ದೀರಿ. ಓದುವುದು ಮತ್ತು ಬರೆಯುವುದು ಹೇಗೆ ಎಂದು ಕಲಿಸಿಕೊಟ್ಟಿದ್ದೀರಿ. ಗಾಳಿಪಟದಂತೆ ಕನಸು ಕಾಣಲು, ಮೇಲೇರಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ, ನನ್ನ ಸ್ನೇಹಿತನಾಗಿ, ಮಾರ್ಗದರ್ಶಕರಾಗಿ ಮತ್ತು ನನ್ನ ಜೀವನಕ್ಕೆ ಬೆಳಕು ಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು ಹಾಗೂ ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಆತ್ಮೀಯ ಶಿಕ್ಷಕರೇ, ನಾನು ನಿಮ್ಮಿಂದಾಗಿ ಇಂದು ಉತ್ತಮ ವಿದ್ಯಾರ್ಥಿಯಾಗಿದ್ದೇನೆ. ನೀವು ನನಗಾಗಿ ಮಾಡಿದ ನಿಸ್ವಾರ್ಥ ಸೇವೆ, ಎಲ್ಲದಕ್ಕೂ ಧನ್ಯವಾದಗಳು. ಇಂದು ನಿಮಗೆ ತುಂಬಾ ಸಂತೋಷದ ದಿನವಾಗಿರಲಿ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನಿಮ್ಮ ಉಪನ್ಯಾಸಗಳು ಸಾಕಷ್ಟು ಜ್ಞಾನ ಮತ್ತು ಬುದ್ಧಿವಂತಿಕೆಯ ಕಣಜವಾಗಿದೆ. ನಿಮ್ಮಂತಹ ಶಿಕ್ಷಕರನ್ನು ಪಡೆದ ನಾನೇ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಪ್ರತಿಯೊಬ್ಬ ಶಿಕ್ಷಕನು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ, ಎಂದಿಗೂ ಅವರನ್ನು ಗೌರವಿಸಿ. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನಿಮ್ಮಂತಹ ಶಿಕ್ಷಕರ ಅದ್ಭುತ ಮಾರ್ಗದರ್ಶನ, ಬೋಧನೆ ಮತ್ತು ಶಿಕ್ಷಣದ ನಡುವಿನ ವ್ಯತ್ಯಾಸ ಶ್ಲಾಘನೀಯ. ನಮಗೆ ಜೀವನ ಪಾಠ ಕಲಿಸಿದ್ದಕ್ಕಾಗಿ, ಶಿಕ್ಷಣ ನೀಡಿದ್ದಕ್ಕಾಗಿ ಧನ್ಯವಾದಗಳು.
    ಶಿಕ್ಷಕರ ದಿನದ ಶುಭಾಶಯಗಳು


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನನ್ನ ನೆಚ್ಚಿನ ಶಿಕ್ಷಕರೇ, ನಿಮ್ಮ ಬುದ್ಧಿವಂತಿಕೆಯಿಂದ ನನಗೆ ಜ್ಞಾನೋದಯ ಮಾಡುವ ಮೂಲಕ ನೀವು ನನಗೆ ಸಹಾಯ ಮಾಡಿದ್ದೀರಿ. ನನ್ನನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ನಿಮ್ಮ ಕೊಡುಗೆ ಅಪಾರ. ವ್ಯಕ್ತಿಯಾಗಿ ನನ್ನನ್ನು ರೂಪಿಸಲು ಸಾಕಷ್ಟು ಸಹಾಯ ಮಾಡಿದ್ದೀರಿ. ನನ್ನ ಇಂದಿನ ಜೀವನ ನಿಮ್ಮ ಕೊಡುಗೆ ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನಲ್ಮೆಯ ಶಿಕ್ಷಕರೇ ಬಹುಶಃ ನಿಮ್ಮ ಪ್ರವಚನದಿಂದ ನಾನು ವಂಚಿತನಾಗಿದ್ದರೆ ನನ್ನ ಜಗತ್ತೇ ಕತ್ತಲೆಯಾಗುತ್ತಿತ್ತೇನೋ. ನೀವು ನನ್ನ ಮೇಲೆ ತೋರಿದ ಎಲ್ಲ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಶಿಕ್ಷಕರ ದಿನದ ಶುಭಾಶಯಗಳು.


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನನ್ನ ಪ್ರತಿಭೆ ಮತ್ತು ಆಸಕ್ತಿಗಳನ್ನು ಗುರುತಿಸಲು ಸಹಾಯ ಮಾಡಿದ, ಮಾರ್ಗದರ್ಶನ ಮತ್ತು ಬೆಂಬಲ ನೀಡಿದ, ನನ್ನ ಕೈಲಾದಷ್ಟು ಸಹಾಯ ಮಾಡಲು ನನ್ನನ್ನು ಪ್ರೇರೇಪಿಸಿದ ನಿಮ್ಮಂಥ ಶಿಕ್ಷಕನನ್ನು ಹೊಂದಲು ನಾನು ಸಾಕಷ್ಟು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಪ್ರೀತಿಯ ಶಿಕ್ಷಕರೇ, ನಮಗೆ ಶಿಕ್ಷಣ, ಜೀವನ ಮೌಲ್ಯ ಕಲಿಸಿದ್ದಕ್ಕಾಗಿ ಧನ್ಯವಾದಗಳು.


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನಿಮಗೆ ನಿಜವಾಗಿಯೂ ಹೇಗೆ ಧನ್ಯವಾದ ಹೇಳಬೇಕೆಂದು ನನಗೆ ತಿಳಿದಿಲ್ಲ. ನಿಮ್ಮ ಮಾರ್ಗದರ್ಶನದಿಂದಾಗಿ ನನ್ನ ಕನಸುಗಳನ್ನು ನನಸಾಗಿಸಲು ಸಾಧ್ಯವಾಯಿತು. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನಿಮ್ಮಂತಹ ಸಮರ್ಥ ಶಿಕ್ಷಕರಿಂದ ಕಲಿಸಲ್ಪಟ್ಟ ನಾನು ಇಂದು ಉತ್ತಮ ಪ್ರಜೆಯಾಗಿದ್ದೇನೆ. ನಾನು ನಿಜವಾಗಿಯೂ ಇಂದಿಗೂ ನಿಮ್ಮ ತರಗತಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಆತ್ಮೀಯ ಶಿಕ್ಷಕರೇ, ನಾನು ಯಾವಾಗಲೂ ಗಣಿತವನ್ನು ಸಾಕಷ್ಟು ನೀರಸ ವಿಷಯವೆಂದು ಅಂದುಕೊಂಡೆ. ಆದರೆ, ನಿಮ್ಮ ಬೋಧನಾ ವಿಧಾನವು ತುಂಬಾ ಸಂವಾದಾತ್ಮಕವಾಗಿದ್ದು, ನಾನು ಯಾವಾಗಲೂ ನಿಮ್ಮ ತರಗತಿಯನ್ನೇ ಎದುರು ನೋಡುತ್ತಿದ್ದೆ. ಅದೊಂದು ಅತ್ಯತ್ತಮ ನೆನಪು. ನಿಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಶಿಕ್ಷಕರ ಕೆಲಸ ಅಷ್ಟು ಸುಲಭವಲ್ಲ. ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತಾರೆ ಮತ್ತು ಅವರನ್ನು ಉತ್ತಮ ಪ್ರಜೆಗಳಾಗಿ ಮಾಡುತ್ತಾರೆ. ಆದರೆ ನೀವು ನಿಜವಾಗಿಯೂ ನಿಮ್ಮ ಕೆಲಸದಲ್ಲಿ ಉತ್ತಮ ಸಾಧನೆ ಮಾಡಿದ್ದೀರಿ. ನಿಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ಗುರುಗಳೇ ನೀವು ಜ್ಞಾನದ ಸಾರಾಂಶ. ನಿಮ್ಮಂತಹ ಶಿಕ್ಷಕರನ್ನು ಪಡೆಯಲು ನಾವೇ ಅದೃಷ್ಟಶಾಲಿ. ಶಿಕ್ಷಕರ ದಿನದ ಶುಭಾಶಯಗಳು!


  • ಶಿಕ್ಷಕರ ದಿನಕ್ಕೆ ಹೇಗೆಲ್ಲಾ ಶುಭಾಶಯ ಕೋರಬಹುದು

    ನಾನು ಅತ್ಯುತ್ತಮ ಕೆಲಸ ಮಾಡಲು ನಿರಂತರವಾಗಿ ನನ್ನನ್ನು ಪ್ರೇರೇಪಿಸುತ್ತಿದ್ದೀರಿ. ಗುರಿ ಸಾಧನೆಗೆ ಶ್ರಮಿಸಲು ನೀವು ಸಹಾಯ ಮಾಡುತ್ತಿದ್ದೀರಿ. ನಾನು ನಿಮ್ಮಂಥ ಒಬ್ಬ ಮಾದರಿ ವ್ಯಕ್ತಿಯಲ್ಲಿ ಮಾರ್ಗದರ್ಶನ, ಸ್ನೇಹ, ಶಿಸ್ತು ಮತ್ತು ಪ್ರೀತಿ ಎಲ್ಲವನ್ನೂ ಕಂಡುಕೊಂಡಿದ್ದೇನೆ. ನಿಮಗೆ ಶಿಕ್ಷಕರ ದಿನದ ಶುಭಾಶಯಗಳು!




"ಒಂದು ಮಗು, ಓರ್ವ ಶಿಕ್ಷಕಿ, ಒಂದು ಪೆನ್ ಮತ್ತು ಒಂದು ಪುಸ್ತಕ ಇಡೀ ವಿಶ್ವವನ್ನೇ ಬದಲಾಯಿಸಬಹುದು,'' ಎಂದು ವಿದ್ಯಾರ್ಥಿನಿಯೂ ಆದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫಜೈ ನೀಡಿರುವ ಹೇಳಿಕೆ ಶಿಕ್ಷಣಕ್ಕಿರುವ ಶಕ್ತಿ ಎಂಥದ್ದು ಎಂಬುದನ್ನು ತೋರಿಸುತ್ತದೆ.

ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬರು ಬೇಕೇ ಬೇಕು. ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಟಿ ಎಂದರೆ ಅದು ಶಿಕ್ಷಕ ಮಾತ್ರ. ನಮ್ಮ ಜ್ಞಾನದ ಹಸಿವನ್ನು ನೀಗಿಸುವ ಶಿಕ್ಷಕರ ಸೇವೆಯನ್ನು ಸ್ಮರಿಸಲೆಂದೇ ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಭಾರತದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಈ ದಿನ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಿ ಮೆಚ್ಚುಗೆ ಪಡೆಯುವ ಅವಕಾಶವಾದರೆ ಶಿಕ್ಷಕರಿಗೂ ತಾವು ವಿದ್ಯಾರ್ಥಿಗಳ ವಲಯದಲ್ಲಿ ಎಷ್ಟು ಜನಪ್ರಿಯರಾಗಿದ್ದೇವೆ ಎಂದು ಅರಿಯಲು ಸಾಧ್ಯವಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ತಮ್ಮ ನೆಚ್ಚಿನ ಶಿಕ್ಷಕರಿಗಾಗಿ ಕವನಗಳನ್ನೂ ಶುಭಸಂದೇಶಗಳನ್ನೂ ಬರೆದು ಪ್ರಕಟಿಸುವುದೂ ಇದೆ.

ನಮ್ಮ-ನಿಮ್ಮೆಲ್ಲರ ಜೀವನವನ್ನು ರೂಪಿಸಿದ, ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರ ದಿನದಂದು ಅವರಿಗೊಂದು ಚೆಂದದ ಶುಭಾಶಯ ಕೋರುವ ಮೂಲಕ ಅವರ ಮೌಲ್ಯವನ್ನು ತಿಳಿಸೋಣ.

   
 
ಹೆಲ್ತ್