Back
Home » ಸಮ್ಮಿಲನ
ಶುಕ್ರವಾರದ ದಿನ ಭವಿಷ್ಯ (6-09-2019)
Boldsky | 6th Sep, 2019 09:45 AM
 • ಮೇಷ

  ಕೆಲವು ತೊಂದರೆಯಿಂದಾಗಿ ನೀವು ಮಾನಸಿಕ ಒತ್ತಡ ಅನುಭವಿಸಬಹುದು. ಅದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಇರುವ ಅಸಮತೋಲನದ ಕಾರಣವಾಗಿರಬಹುದು. ನಕಾರಾತ್ಮಕ ಚಿಂತನೆಗಳ ಕಡೆಗೆ ಭಾಗುವಿರಿ. ಆದಷ್ಟು ಬೇಗ ಅಂತಹ ಅಡೆತಡೆಗಳನ್ನು ನಿವಾರಿಸಿಕೊಳ್ಳಿ. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಒಂದಿಷ್ಟು ಅಡೆತಡೆ ಅಥವಾ ಕಿರಿಕಿರಿ ಉಂಟಾಗಬಹುದು. ನಿಮ್ಮ ಹೆಸರಿನಿಂದ ಕೆಲವರು ಪ್ರಯೋಜನ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಕುಟುಂಬದ ವಿಷಯದಲ್ಲಿ ಸಮಾಧಾನಕರವಾಗಿರುತ್ತದೆ. ಬಾಕಿ ಇರುವ ಕೆಲಸವನ್ನು ಪೂರ್ತಿಗೊಳಿಸಿ. ಹಣಕಾಸಿನ ವಿಷಯದಲ್ಲಿ ಅನುಕೂಲತೆ ಇರುವುದರಿಂದ ಮಾನಸಿಕವಾಗಿ ನಿರಾಳತೆಯನ್ನು ಅನುಭವಿಸುವಿರಿ. ಪ್ರೀತಿಯ ಸುಳಿಯಲ್ಲಿ ಇರುವವರು ಪ್ರಣಯದ ಕ್ಷಣಗಳನ್ನು ಅನುಭವಿಸಬಹುದು.
  ಅದೃಷ್ಟದ ಬಣ್ಣ: ಬಿಳಿ
  ಅದೃಷ್ಟದ ಸಂಖ್ಯೆ: 19
  ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 7:55ರವರೆಗೆ.


 • ವೃಷಭ

  ನೀವು ಇಂದು ನಿಮ್ಮ ಕೆಲಸದ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಅನೇಕ ಮಂದಿ ನಿಮ್ಮನ್ನು ನೋಡಿ ಅಸೂಯೆ ಪಡಬಹುದು. ಸಂಗಾತಿಯೊಂದಿಗೆ ಕೆಲವು ಹಳೆಯ ಸಮಸ್ಯೆಗಳನ್ನು ಅನುಭವಿಸುವಿರಿ. ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಆದ್ಯತೆ ನೀಡಿ. ಆಗ ಸಂಗಾತಿಯೊಂದಿಗೆ ಸಂಬಂಧ ಬಲಗೊಳ್ಳುವುದು. ಸಂಬಂಧದಲ್ಲಿ ಇರುವವರಿಗೆ ಇಂದು ಅತ್ಯುತ್ತಮವಾದ ದಿನ. ನಿಮಗೆ ಎದುರಾಗುವ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ನಿವಾರಿಸಿಕೊಳ್ಳಬೇಕು. ಆಪ್ತರೊಂದಿಗೆ ಮನದಾಳದ ಮಾತನ್ನು ಹೇಳಿಕೊಳ್ಳುವುದರಿಂದ ಚಿಂತೆ ಕಡಿಮೆಯಾಗುವುದು. ಉದ್ಯಮಿಗಳು ಗುರಿಯ ಕಡೆಗೆ ಹೆಚ್ಚು ಗಮನ ನೀಡುವುದು ಸೂಕ್ತ. ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ. ಹಳೆಯ ಅನಾರೋಗ್ಯ ಸಮಸ್ಯೆಯಿಂದ ಎಚ್ಚೆತ್ತುಕೊಳ್ಳುವುದು ಅತ್ಯಂತ ಅಗತ್ಯವಾದ ಸಂಗತಿಯಾಗಿರುತ್ತದೆ.
  ಅದೃಷ್ಟದ ಬಣ್ಣ: ಹಸಿರು
  ಅದೃಷ್ಟದ ಸಂಖ್ಯೆ: 30
  ಅದೃಷ್ಟದ ಸಮಯ: ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 3:00ರ ವರೆಗೆ.


 • ಮಿಥುನ

  ಹೆತ್ತವರೊಂದಿಗೆ ಮಾಡುವ ಸಣ್ಣ ವಾದಗಳಿಂದ ಸಮಸ್ಯೆ ಉಲ್ಭಣವಾಗುವುದು. ಹಣಕಾಸಿನ ವಿಷಯದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುವುದು. ಅತಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಿ. ನಿಮ್ಮ ಅತಿಯಾದ ಆಲೋಚನೆಯ ಅಭ್ಯಾಸವು ಆರೋಗ್ಯದ ಕ್ಷೀಣತೆಗೆ ಕಾರಣವಾಗುತ್ತದೆ. ಅನುಪಯುಕ್ತ ವಿಷಯಗಳಿಗೆ ಸಮಯವನ್ನು ಹಾಳುಮಾಡುವ ಬದಲು ಆರೋಗ್ಯದ ಕಡೆಗೆ ಗಮನ ನೀಡಿ. ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಲು ಕಲಿಯಬೇಕು. ಇತರರ ಮೇಲೆ ಹೆಚ್ಚಿನ ಒತ್ತಡ ಹೇರಬೇಡಿ. ನಿಮ್ಮ ಕ್ರಿಯಾಶೀಲತೆಗೆ ಪ್ರಶಂಸೆ ದೊರೆಯುವುದು. ಆರೋಗ್ಯದಲ್ಲಿನ ಸುಧಾರಣೆಗಳು ಸಕಾರಾತ್ಮಕ ಸಂಕೇತವನ್ನು ನೀಡುವುದು.
  ಅದೃಷ್ಟದ ಬಣ್ಣ: ಕಂದು
  ಅದೃಷ್ಟದ ಸಂಖ್ಯೆ: 10
  ಅದೃಷ್ಟದ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12ರ ವರೆಗೆ.


 • ಕರ್ಕ

  ನಿಮ್ಮ ದೈಹಿಕ ಕಸರತ್ತುಗಳು ಇತರರಿಗೆ ಪ್ರೇರಣೆಯಾಗುವುದು. ಕೆಲಸದಲ್ಲಿ ಹಠಾತ್ ಒತ್ತಡ ಉಂಟಾಗಬಹುದು. ಕಾರ್ಪೋರೇಟ್ ವಲಯದಲ್ಲಿ ಇರುವವರು ಹೊಸ ಸಂಗತಿಗಳನ್ನು ಕಲಿತುಕೊಳ್ಳುವಿರಿ. ಸಮಾಜ ಸೇವೆಯಲ್ಲಿ ಇರುವವರಿಗೆ ಒಂದಿಷ್ಟು ಉತ್ಸಾಹ ದೊರೆಯುವುದು. ನಿಮ್ಮವರು ಕಾರ್ಯಾಚರಣೆಗೆ ಒಳಗಾಗುವ ಸಾಧ್ಯತೆಗಳಿವೆ. ಕುಟುಂಬದ ಕೆಲಸ ಹಾಗೂ ವೃತ್ತಿ ಕೆಲಸದಿಂದಾಗಿ ಸಂಜೆಯ ವೇಳೆಗೆ ಒಂದಿಷ್ಟು ಆಯಾಸವನ್ನು ಅನುಭವಿಸಬಹುದು. ಉದ್ಯಮಿಗಳು ಭಾರಿ ಲಾಭವನ್ನು ಅನುಭವಿಸುವ ಸಾಧ್ಯತೆಗಳಿವೆ. ನಿಮ್ಮ ಆಪ್ತರು ಅಥವಾ ಸಂಬಂಧಿಕರು ಸಮಸ್ಯೆಯಿಂದ ಕೂಡಿರುತ್ತಾರೆ. ಅವರಿಗೆ ನೀವು ಸಹಾಯ ಮಾಡಲು ಸಿದ್ಧರಾಗಿರಬೇಕು. ಪ್ರೀತಿ ಅಥವಾ ಸಂಬಂಧದಲ್ಲಿ ಇರುವವರಿಗೆ ಇಂದು ಕಠಿಣವಾದ ದಿನ.
  ಅದೃಷ್ಟದ ಬಣ್ಣ: ನೇರಳೆ
  ಅದೃಷ್ಟದ ಸಂಖ್ಯೆ: 38
  ಅದೃಷ್ಟದ ಸಮಯ: ಸಂಜೆ 7:00 ರಿಂದ ರಾತ್ರಿ 9:00ರ ವರೆಗೆ.


 • ಸಿಂಹ

  ಹಳೆಯ ಪೈಪೋಟಿಯ ಸಂಗತಿಯು ಇಂದು ಸಿಡಿಯುವ ಸಾಧ್ಯತೆಗಳಿವೆ. ಹಾಗಾಗಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಕೆಲಸದಲ್ಲಿ ತೋರುವ ಅಸಡ್ಡೆಯ ವರ್ತನೆಯು ನಿಮ್ಮ ಮೇಲಾಧಿಕಾರಿಗಳಿಗೆ ಬೇಸರವನ್ನು ಹುಟ್ಟಿಸಬಹುದು. ಅದು ಭವಿಷ್ಯದಲ್ಲಿ ನಿಮಗೆ ಕಷ್ಟವನ್ನು ತರುವುದು. ನಿಮ್ಮ ಸಂಗಾತಿಯೊಂದಿಗಿನ ಪರಸ್ಪರ ತಿಳುವಳಿಕೆಯು ಕುಟುಂಬದಲ್ಲಿ ಒಳ್ಳೆಯದನ್ನು ಉಂಟುಮಾಡುತ್ತದೆ. ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವರು. ನಿಮ್ಮ ಕೆಲಸಗಳಿಗೆ ಇತರರನ್ನು ಅವಲಂಬಿಸುವುದನ್ನು ತಪ್ಪಿಸಿ. ಭೂ ಸಂಬಂಧಿತ ವ್ಯವಹಾರದಲ್ಲಿ ಇರುವವರಿಗೆ ಅಧಿಕ ಲಾಭವನ್ನು ತಂದುಕೊಡುವುದು. ಉದ್ಯಮಿಗಳು ಪ್ರಯಾಣದಲ್ಲಿ ತೊಡಗಿಕೊಳ್ಳುವರು. ನಿಮ್ಮ ಕೆಲಸವನ್ನು ಮುಂದೂಡಬೇಡಿ. ಭವಿಷ್ಯದಲ್ಲಿ ಕಷ್ಟವಾಗುವುದು. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಸುಗಮವಾದ ದಿನ. ಹಾಗಾಗಿ ಸೂಕ್ತ ಹೂಡಿಕೆಗೆ ಮುಂದಾಗಬಹುದು. ಯಾವುದೇ ತಪ್ಪು ತಿಳುವಳಿಕೆಗೆ ಒಳಗಾಗದಿರಿ.
  ಅದೃಷ್ಟದ ಬಣ್ಣ: ಹಸಿರು
  ಅದೃಷ್ಟದ ಸಂಖ್ಯೆ: 12
  ಅದೃಷ್ಟದ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 7:00ರ ವರೆಗೆ.


 • ಕನ್ಯಾ

  ವಿವಾಹಿತರಿಗೆ ಇಂದು ಅದೃಷ್ಟದ ದಿನ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಸ್ಥಳೀಯ ಹಳ್ಳಿಗೆ ಭೇಟಿ ನೀಡುವುದರಿಂದ ನಿಮ್ಮ ಹಿರಿಯರರಿಗೆ ಆಶ್ಚರ್ಯ ಹಾಗೂ ಆಹ್ಲಾದವನ್ನು ತರುವುದು. ಹಣಕಾಸಿನ ವಿಷಯದಲ್ಲಿ ಉತ್ತಮ ಫಲವನ್ನು ಪಡೆದುಕೊಳ್ಳುವಿರಿ. ಹಳೆಯ ಸಾಲವನ್ನು ತೀರಿಸುವಿರಿ. ಉದ್ಯಮಿಗಳಿಗೆ ಅಧಿಕ ಲಾಭ ಉಂಟಾಗುವುದು. ಕುಟುಂಬ ವ್ಯವಹಾರದಲ್ಲಿ ಯಶಸ್ಸು ಲಭಿಸುವುದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಸಂಗೀತ ಮತ್ತು ಕಲೆಯಲ್ಲಿ ಇರುವವರು ಉತ್ತಮ ಪ್ರದರ್ಶನ ನೀಡುವರು.
  ಅದೃಷ್ಟದ ಬಣ್ಣ: ಹಳದಿ
  ಅದೃಷ್ಟದ ಸಂಖ್ಯೆ: 19
  ಅದೃಷ್ಟದ ಸಮಯ: ಬೆಳಗ್ಗೆ 5:15 ರಿಂದ ಮಧ್ಯಾಹ್ನ 1:00ರ ವರೆಗೆ.


 • ತುಲಾ

  ಈ ದಿನ ಸಕಾರಾತ್ಮಕ ಆರಂಭದಿಂದ ಪ್ರಾರಂಭವಾಗುವುದು. ನಿಕಟ ಬಂಧುಗಳಿಂದ ಕೆಲವು ಆಶ್ಚರ್ಯಗಳು ಉಂಟಾಗಬಹುದು. ಕೆಲಸದಲ್ಲಿ ಅತ್ಯಂತ ಉತ್ಸಾಹವನ್ನು ತೋರುವಿರಿ. ಉತ್ತಮ ವಿಶ್ವಾಸದಿಂದ ದಿನವನ್ನು ಕಳೆಯುವಿರಿ. ವೃತ್ತಿ ಕ್ಷೇತ್ರದಲ್ಲಿ ಇರುವ ಅನಗತ್ಯ ಅಡಚಣೆಯನ್ನು ನಿರ್ಲಕ್ಷಿಸಿ, ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿ. ಸ್ನೇಹಪರ ವರ್ತನೆಯು ವ್ಯವಹಾರದಲ್ಲಿ ಆಕರ್ಷಣೆಯನ್ನು ಪಡೆದುಕೊಳ್ಳುವುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ದೊರೆಯುವುದು. ಪೋಷಕರಿಗೆ ಹೆಮ್ಮೆಯನ್ನು ಉಂಟುಮಾಡುವುದು. ಆರ್ಥಿಕವಾಗಿ ಒಂದಿಷ್ಟು ಅನಾನುಕೂಲತೆಯನ್ನು ಎದುರಿಸಬೇಕಾಗುವುದು. ಅತಿಯಾದ ಖರ್ಚು ಮಾಡದಿರಿ. ಆರೋಗ್ಯವು ಅನುಕೂಲಕರವಾಗಿರುತ್ತದೆ.
  ಅದೃಷ್ಟದ ಬಣ್ಣ: ಕಪ್ಪು ಮಿಶ್ರಿತ ಕೆಂಪು (ಮರೂನ್)
  ಅದೃಷ್ಟದ ಸಂಖ್ಯೆ: 8
  ಅದೃಷ್ಟದ ಸಮಯ: ಬೆಳಗ್ಗೆ 4:20 ರಿಂದ ಮಧ್ಯಾಹ್ನ 12ರ ವರೆಗೆ.


 • ವೃಶ್ಚಿಕ

  ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಸಮಸ್ಯೆ ಉಂಟಾಗಬಹುದು. ನೀವು ನಿಮ್ಮ ಗುರಿ ಸಾಧನೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಆರ್ಥಿಕವಾಗಿ ಒಂದಿಷ್ಟು ಏರಿಳಿತ ಅನುಭವಿಸುವಿರಿ. ಅದಕ್ಕಾಗಿ ಸೂಕ್ತ ಯೋಜನೆ ಕೈಗೊಳ್ಳುವುದು ಮುಖ್ಯ. ಹೂಡಿಕೆಗೆ ಇದು ಸೂಕ್ತ ಸಮಯವಲ್ಲ. ಕಷ್ಟ ಅಥವಾ ನೋವುಗಳನ್ನು ಎದುರಿಸಲಾಗದೆ ಓಡಿ ಹೋಗದಿರಿ. ನಿಮ್ಮ ಸಂಗಾತಿಯಿಂದ ಅನುಕೂಲಕರ ಸ್ಥಿತಿ ಎದುರಾಗುವುದು.
  ಅದೃಷ್ಟದ ಬಣ್ಣ: ಕಡ್ಲೇ ಹಿಟ್ಟಿನ ಬಣ್ಣ
  ಅದೃಷ್ಟದ ಸಂಖ್ಯೆ : 7
  ಅದೃಷ್ಟದ ಸಮಯ: ಸಂಜೆ 6:15 ರಿಂದ 9:00ರ ವರೆಗೆ.


 • ಧನು

  ಆರ್ಥಿಕವಾಗಿ ಒಂದಿಷ್ಟು ಅನುಕೂಲತೆ ಉಂಟಾಗುವುದು. ಹೆಚ್ಚಿನ ಹೂಡಿಕೆಗೆ ನೀವು ಯೋಜನೆಯನ್ನು ಕೈಗೊಳ್ಳಬಹುದು. ಪೋಷಕರಿಂದ ಪಡೆಯುವ ಕೆಲವು ಸಲಹೆಗಳು ಪ್ರಯೋಜನಕಾರಿಯಾಗಿರುತ್ತದೆ. ಹಿರಿಯರು ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳಬಹುದು. ನವವಿವಾಹಿತರು ವಿದೇಶ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ತಮ್ಮ ಪ್ರೀತಿ ಪಾತ್ರರೊಂದಿಗೆ ಸಂಜೆಯ ಆನಂದವನ್ನು ಅನುಭವಿಸುವರು. ಭೂಮಿಗೆ ಸಂಬಂಧಿತ ಕಾನೂನು ಸಮಸ್ಯೆಗಳು ಮುಕ್ತವಾಗುವುದು. ಹೊಸ ಅವಕಾಶಗಳು ನಿಮ್ಮ ಬಾಗಿಲನ್ನು ತಟ್ಟುತ್ತದೆ. ಹಳೆಯ ಸ್ನೇಹಿತರೊಂದಿಗೆ ಮಾತನಾಡುವುದರಿಂದ ಒಂದಿಷ್ಟು ಒತ್ತಡ ಉಂಟಾಗಬಹುದು. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಸಂಗಾತಿ ಕೈಗೊಳ್ಳುವ ಬುದ್ಧಿವಂತ ನಿರ್ಧಾರಗಳು ನಿಮಗೆ ಸಂತೋಷವನ್ನು ತಂದುಕೊಡುತ್ತದೆ. ಅದಕ್ಕೆ ನೀವು ಸಂತೋಷಪಡಬೇಕು.
  ಅದೃಷ್ಟದ ಬಣ್ಣ: ಕೆಂಪು
  ಅದೃಷ್ಟದ ಸಂಖ್ಯೆ :24
  ಅದೃಷ್ಟದ ಸಮಯ: ಮಧ್ಯಾಹ್ನ 1:00 ರಿಂದ ಸಂಜೆ 5:00ರ ವರೆಗೆ.


 • ಮಕರ

  ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಿಂದ ನೀವು ಆದಷ್ಟು ಜಾಗರೂಕರಾಗಿರಬೇಕು. ಏಕೆಂದರೆ ಕೆಲವು ಸಂಗತಿಗಳು ನಿಮ್ಮ ನಿರೀಕ್ಷೆಗೂ ಮೀರಿರುತ್ತವೆ. ಆರ್ಥಿಕವಾಗಿ ಇಂದು ಸಾಮಾನ್ಯ ಫಲವನ್ನು ಅನುಭವಿಸುವಿರಿ. ನಿಮ್ಮ ಖರ್ಚು ವೆಚ್ಚಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಇಂದು ನಿಮಗೆ ಕೆಲಸದಿಂದ ಬಿಡುವು ಸಿಗದ ದಿನ. ಒಂದಿಷ್ಟು ಬಳಲಿಕೆಯ ಅನುಭವ ಉಂಟಾಗಬಹುದು. ಆದರೆ ನೀವು ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಪೂರ್ವಜರ ಆಸ್ತಿಯ ಬಗ್ಗೆ ನಡೆಸುವ ವಿವಾದವು ಪೋಷಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿಯೊಂದಿಗೆ ಒಂದಿಷ್ಟು ಹೊಂದಾಣಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಇಂದು ಬಿಡುವಿಲ್ಲದ ದಿನವಾಗುವುದು.
  ಅದೃಷ್ಟದ ಬಣ್ಣ: ಸಾಸಿವೆ ಬಣ್ಣ
  ಅದೃಷ್ಟದ ಸಂಖ್ಯೆ: 9
  ಅದೃಷ್ಟದ ಸಮಯ: ಮಧ್ಯಾಹ್ನ 2:05 ರಿಂದ ಸಂಜೆ 5:00ರವರೆಗೆ.


 • ಕುಂಭ

  ನಿಮ್ಮ ಕೆಲಸದಲ್ಲಿ ಉಂಟಾದ ತಪ್ಪಿನಿಂದ ಒಂದಿಷ್ಟು ವಿಷಯವನ್ನು ಕಲಿತುಕೊಳ್ಳುವಿರಿ. ಯಶಸ್ಸು ನಿಮ್ಮಿಂದ ದೂರವಿಲ್ಲ. ಉದ್ಯೋಗದ ಬದಲಾವಣೆ ಹಾಗೂ ಹೊಸ ಅವಕಾಶಗಳ ಬಗ್ಗೆ ನೀವು ಚಿಂತಿಸುವ ಸಾಧ್ಯತೆಗಳಿವೆ. ಕುಟುಂಬದವರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಇಂದು ನೀವು ಆದಷ್ಟು ಶಾಂತತೆ ಹಾಗೂ ತಾಳ್ಮೆಯಿಂದ ವರ್ತಿಸಬೇಕು. ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳದಿರಿ. ಅದು ನಿಮಗೆ ಲಾಭವನ್ನು ತಂದುಕೊಡುವುದು. ಅಪಘಾತ ಅಥವಾ ಸಣ್ಣ ಪುಟ್ಟ ಗಾಯಗಳು ಆಗುವ ಸಾಧ್ಯತೆಗಳಿವೆ. ಆದ್ದರಿಂದ ಆದಷ್ಟು ಜಾಗರೂಕತೆಯಿಂದ ಇರುವುದು ಒಳಿತು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಕಾಶಮಾನವಾದ ಯಶಸ್ಸನ್ನು ಪಡೆಯುವರು. ಮಕ್ಕಳೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಹಿರಿಯರು ಬಯಸುವರು. ಸುಧಾರಣೆಯ ಬಗ್ಗೆ ಚಿಂತಿಸಿ. ಒಡ ಹುಟ್ಟಿದವರೊಂದಿಗೆ ತಮಾಷೆಯ ಸಮಯವನ್ನು ಕಳೆಯುವಿರಿ. ನಿಮ್ಮ ಪ್ರೀತಿಯ ಜೊತೆ ಪ್ರಣಯದ ಸಂಜೆಯನ್ನು ಅನುಭವಿಸುವಿರಿ.
  ಅದೃಷ್ಟದ ಬಣ್ಣ: ಆಕಾಶ ನೀಲಿ
  ಅದೃಷ್ಟದ ಸಂಖ್ಯೆ: 18
  ಅದೃಷ್ಟದ ಸಮಯ: ಬೆಳಿಗ್ಗೆ 8:30 ರಿಂದ ಸಂಜೆ 4:00ರ ವರೆಗೆ.


 • ಮೀನ

  ಕೆಲಸದ ವಿಷಯದಲ್ಲಿ ಇಂದು ನೀವು ಮಿಶ್ರ ಫಲವನ್ನು ಅನುಭವಿಸುವಿರಿ. ಸಹೋದ್ಯೋಗಿಗಳು ನಿಮ್ಮ ಜ್ಞಾನವನ್ನು ಕಂಡು ಅಸೂಯೆ ಪಡಬಹುದು. ಆದ್ದರಿಂದ ನೀವು ಆದಷ್ಟು ಜಾಗರೂಕತೆಯಲ್ಲಿ ಇರಬೇಕು. ಶಾಂತ ಮತ್ತು ಸ್ಥಿರವಾದ ನಿಮ್ಮ ಸ್ವಭಾವ ನಿಮಗೆ ಅನುಕೂಲವನ್ನು ಉಂಟುಮಾಡುವುದು. ಉದ್ಯೋಗಿಗಳಿಗೆ ಉಲ್ಲಾಸದ ಸಮಯ ದೊರೆಯುವುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಅದು ನಿಮಗೆ ವಿಶ್ರಾಂತಿ ಹಾಗೂ ಶಾಂತಿಯ ಮನೋಭಾವವನ್ನು ಕಲ್ಪಿಸುವುದು. ಕೆಲಸದ ಹೊರತಾಗಿ ಉಂಟಾಗುವ ಕೆಲವು ಒತ್ತಡದಿಂದ ದೂರವಿರಿ. ಹೂಡಿಕೆಗೆ ಇಂದು ಸೂಕ್ತವಾದ ಸಮಯ. ಮಕ್ಕಳಿಗೆ ನೀವು ಬೆನ್ನೆಲುಬಾಗಿ ನಿಲ್ಲುವಿರಿ. ಹೊಟ್ಟೆ ಉಬ್ಬರ ಇರುವ ವ್ಯಕ್ತಿಗಳು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.
  ಅದೃಷ್ಟದ ಬಣ್ಣ: ನೀಲಿ
  ಅದೃಷ್ಟದ ಸಂಖ್ಯೆ: 20
  ಅದೃಷ್ಟದ ಸಮಯ: ಮುಂಜಾನೆ 7:15 ರಿಂದ ಮಧ್ಯಾಹ್ನ 2:02ರ ವರೆಗೆ.
ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ.

ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ನಾಳೆ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ.

   
 
ಹೆಲ್ತ್