Back
Home » ಬಾಲಿವುಡ್
ಕ್ಯಾನ್ಸರ್ ನಿಂದ ಗೆದ್ದು ಬರಲು ಮನೀಶಾ ಕೊಯಿರಾಲಾಗೆ ಸ್ಫೂರ್ತಿಯಾಗಿದ್ದು ಈತ
Oneindia | 6th Sep, 2019 07:14 PM

ಬಾಲಿವುಡ್ ನಟಿ ಮನೀಶಾ ಕೊಯಿರಾಲಾ ಕ್ಯಾನ್ಸರ್ ಗೆ ಸವಾಲು ಹಾಕಿ ಗೆದ್ದು ಬಂದಿದ್ದಾರೆ. ಹಿಂದಿನಂತೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಿನ ಒಂದು ಸಂದರ್ಶನದಲ್ಲಿ ತಮ್ಮ ಕ್ಯಾನ್ಸರ್ ವಿರುದ್ಧ ಹೋರಾಟದ ಸಂದರ್ಭವನ್ನು ವಿವರಿಸಿದ್ದಾರೆ.

ಈ ವೇಳೆ ಮಾತನಾಡಿರುವ ಮನೀಶಾ ಕೊಯಿರಾಲಾ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ನನ್ನ ಸ್ಫೂರ್ತಿ ಎಂದು ಹೇಳಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿದ ಯುವರಾಜ್ ನನಗೆ ಸ್ಫೂರ್ತಿಯಾದರು ಎಂದು ಮನೀಶಾ ಕೊಯಿರಾಲಾ ತಿಳಿಸಿದ್ದಾರೆ.

ಚಿತ್ರಗಳು: ಮನಿಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರು

ನಟಿ ಮನೀಶಾ ಕೊಯಿರಾಲಾ ಹಾಗೂ ಯುವರಾಜ್ ಸಿಂಗ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. 2013ರಲ್ಲಿ ಕ್ಯಾನ್ಸರ್ ಬಗ್ಗೆ ನಡೆದ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

ವರ್ಷದ ಹಿಂದೆ ಕ್ಯಾನ್ಸರ್ ಎದುರಿಸಿದ್ದ ನಟಿ ಸೋನಾಲಿ ಬೇಂದ್ರೆ ಬಗ್ಗೆಯೂ ಮನೀಶಾ ಕೊಯಿರಾಲಾ ಮೆಚ್ಚುಗೆ ಮಾತನ್ನು ಆಡಿದ್ದಾರೆ. ''ಕ್ಯಾನ್ಸರ್ ನಿಮ್ಮನ್ನು ಅಲುಗಾಡಿಸಬಹುದು. ಆದರೆ, ಅದರಿಂದ ನೀವು ಗೆಲ್ಲಬೇಕು.'' ಎಂದು ಹೇಳಿದ್ದಾರೆ.

ಕಾನ್ಸರ್ ರೋಗಿಗಳಿಗೆ ನಟಿ ಶರ್ಮಿಳಾ ಮಾಂಡ್ರೆ ಸಹಾಯ ಹಸ್ತ

''ಸ್ವರ್ಗ ಇದ್ದರೆ ಇಲ್ಲೇ ಇದೆ. ನರಕ ಇದ್ದರೂ ಇಲ್ಲಿಯೇ ಇದೆ. ನಾನು ಸಾವಿನ ಅಂಚಿನಲ್ಲಿ ಇದ್ದಾಗ ನನಗೆ ಬದುಕಿನ ಮಹತ್ವ ಹೆಚ್ಚು ತಿಳಿಯಿತು.'' ಸ್ಫೂರ್ತಿ ತುಂಬಿದ್ದಾರೆ.

ಕ್ಯಾನ್ಸರ್ ನಿಂದ ಹೊರ ಬಂದ ಮೇಲೆ ಮನೀಶಾ ಕೊಯಿರಾಲಾ 'ಡಿಯಲ್ ಮಾಯಾ', 'ಸಂಜು' ಚಿತ್ರದಲ್ಲಿ ನಟಿಸಿದ್ದರು. ಸದ್ಯ, 'ಪ್ರಸ್ತಾನಮ್' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೆಟ್ ಫ್ಲಿಕ್ಸ್ 'ಲಸ್ಟ್ ಸ್ಟೋರೀಸ್'ಯಲ್ಲಿಯೂ ಅಭಿನಯಿಸಿದ್ದರು.

   
 
ಹೆಲ್ತ್