Back
Home » ಸಮ್ಮಿಲನ
ಶನಿವಾರದ ದಿನ ಭವಿಷ್ಯ (7-09-2019)
Boldsky | 7th Sep, 2019 09:57 AM
 • ಮೇಷ

  ನಿಮ್ಮ ಮೊಂಡುತನದ ವರ್ತನೆಯೇ ನಿಮಗೆ ಯಶಸ್ಸನ್ನು ತಂದುಕೊಡುವುದು. ಯಾವುದೇ ಸಂಗತಿಯ ಬಗ್ಗೆ ಮಾತನಾಡುವ ಮೊದಲು ಎರಡು ಬಾರಿ ಯೋಚಿಸಿ. ಅದರಲ್ಲೂ ಕೆಲಸದ ವಿಷಯದಲ್ಲಿ ಸ್ವಲ್ಪ ಜಾಗರೂಕತೆಯಿಂದ ಇರಬೇಕು. ನೀವು ಉತ್ತಮ ಸಾಧನೆ ಮಾಡಿ ಮುಂದೆ ಸಾಗುವುದನ್ನು ಸಹಿಸದ ಸಹೋದ್ಯೋಗಿಗಳು ನಿಮ್ಮನ್ನು ಟೀಕಿಸಬಹುದು. ಅಂತಹವರ ಮಾತಿಗೆ ಕಿವಿಕೊಡದಿರಿ. ಅವು ನಿಮ್ಮ ನೆಮ್ಮದಿ ಹಾಗೂ ಸಮಯ ಎರಡನ್ನೂ ಹಾಳುಮಾಡುತ್ತವೆ. ಹಣಕಾಸಿನ ಸಂಗತಿಗಳು ಒಂದಿಷ್ಟು ಒತ್ತಡವನ್ನು ಸೃಷ್ಟಿಸಬಹುದು. ಹಿರಿಯರ ಸಲಹೆ ಪಡೆಯುವುದು ನಿಮಗೆ ಅತ್ಯಂತ ಉಪಕಾರಿಯಾಗಿರುತ್ತದೆ. ಮಕ್ಕಳಿಗೆ ನಿಮ್ಮ ಸಂಗ ಅಗತ್ಯವಾಗಿರುವುದರಿಂದ ಅವರಿಗಾಗಿ ನಿಮ್ಮ ಸಮಯವನ್ನು ಮೀಸಲಿಡಿ. ಪ್ರೇಮಿಯ ಜೊತೆಗೆ ವಿಶೇಷ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ವಿಶೇಷ ಕಾಳಜಿ ಹಾಗೂ ವಿಶ್ವಾಸವನ್ನು ತೋರುವರು. ಎಣ್ಣೆ ಪದಾರ್ಥಗಳಿಂದ ಆದಷ್ಟು ದೂರ ಇರಿ.
  ಅದೃಷ್ಟದ ಬಣ್ಣ:ಕೆಂಪು
  ಅದೃಷ್ಟದ ಸಂಖ್ಯೆ:22
  ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 9:30ರ ವರೆಗೆ.


 • ವೃಷಭ

  ಒಳ್ಳೆಯ ಸಂಗತಿಗಳು ಹಾಗೂ ಅವಕಾಶಗಳು ಈ ದಿನ ನಿಮ್ಮ ಪಾಲಿಗೆ ಒಲಿದು ಬರುತ್ತವೆ. ಹಾಗಾಗಿ ನಿಮಗೆ ಇಂದು ಅತ್ಯಂತ ಅದೃಷ್ಟದ ದಿನ ಎನ್ನಬಹುದು. ವೈಯಕ್ತಿಕ ಜೀವನವು ಸಹ ಇಂದು ಸುಗಮವಾಗಿ ಇರುತ್ತದೆ. ಸಂಗಾತಿಯು ನಿಮ್ಮ ಕೆಲಸ ಕಾರ್ಯಗಳನ್ನು ಮೆಚ್ಚಿಕೊಳ್ಳುವರು. ನೀವು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವುದು ಹಾಗೂ ಭಾವನೆಯನ್ನು ಹಂಚಿಕೊಳ್ಳುವುದರಿಂದ ಸಂಬಂಧಗಳು ಇನ್ನಷ್ಟು ಬಲಗೊಳ್ಳುತ್ತವೆ. ನಿಮ್ಮ ಭವಿಷ್ಯದ ಬಗ್ಗೆ ಒಂದಿಷ್ಟು ಯೋಜನೆಯನ್ನು ಕೈಗೊಳ್ಳಿ. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ ಎನ್ನಬಹುದು. ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ಉಂಟಾಗುವುದು. ಕುಟುಂಬದಲ್ಲಿ ಒಂದಿಷ್ಟು ಜವಾಬ್ದಾರಿಗಳು ಹೆಚ್ಚುವುದು. ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವೆ ಒಂದಿಷ್ಟು ಸಮತೋಲನವನ್ನು ಕಾಯ್ದುಕೊಳ್ಳಬೇಕು. ವಾಹನ ಚಲಾಯಿಸುವುದು ಅಥವಾ ದೂರದ ಪ್ರಯಾಣ ಕೈಗೊಳ್ಳುವುದನ್ನು ತಪ್ಪಿಸಿ. ಒಟ್ಟಾರೆಯಾಗಿ ಇಂದು ನಿಮಗೆ ಶುಭದಿನ ಎನ್ನಬಹುದು.
  ಅದೃಷ್ಟದ ಬಣ್ಣ: ತಿಳಿ ಗುಲಾಬಿ
  ಅದೃಷ್ಟದ ಸಂಖ್ಯೆ: 37
  ಅದೃಷ್ಟದ ಸಮಯ: ಮಧ್ಯಾಹ್ನ 4:30 ರಿಂದ ರಾತ್ರಿ 11:00ರ ವರೆಗೆ.


 • ಮಿಥುನ

  ನಿಮ್ಮ ಸಮಸ್ಯೆಗಳು ಉಲ್ಭಣಗೊಳ್ಳುವುದರಿಂದ ಆರೋಗ್ಯದ ಬಗ್ಗೆ ಜಾಗರೂಕತೆಯನ್ನು ವಹಿಸಬೇಕು. ಸಾಕಷ್ಟು ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಒಂದಿಷ್ಟು ವಿಶ್ರಾಂತಿ ಪಡೆಯುವುದನ್ನು ಮರೆಯಬಾರದು. ಕುಟುಂಬದೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳಲು ಉತ್ತಮವಾದ ದಿನ. ಆರ್ಥಿಕವಾಗಿ ಒಂದಿಷ್ಟು ಲಾಭ ಹೊಂದುವುದರಿಂದ ನಿಮಗೆ ಅದೃಷ್ಟದ ದಿನ ಎನ್ನಬಹುದು. ಸಣ್ಣ ಹೂಡಿಕೆಗೆ ಮುಂದಾಗಬಹುದು. ಸಂಗಾತಿಯ ಸಣ್ಣ ಪುಟ್ಟ ತಪ್ಪುಗಳನ್ನು ಗ್ರಹಿಸುತ್ತಿರಬೇಡಿ. ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುವರು. ನಿಮ್ಮ ತಂದೆಯಿಂದ ಬಂದ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿ. ನಿಮ್ಮ ಆಪ್ತರು ಅಥವಾ ಸಂಬಂಧಿಗಳು ಕೆಲವು ಸಂಗತಿಯ ಪ್ರಯುಕ್ತ ನಿಮ್ಮೊಂದಿಗೆ ಅಸಮಧಾನ ವ್ಯಕ್ತಪಡಿಸಬಹುದು. ಸಂಘರ್ಷವನ್ನು ತಪ್ಪಿಸಲು ಪ್ರಯತ್ನಿಸಿ. ಒತ್ತಡದಿಂದ ದೂರ ಇರಲು ಯೋಗ ಹಾಗೂ ಧ್ಯಾನ ಕೈಗೊಳ್ಳುವುದು ಸೂಕ್ತ.
  ಅದೃಷ್ಟದ ಬಣ್ಣ: ಕಿತ್ತಳೆ
  ಅದೃಷ್ಟದ ಸಂಖ್ಯೆ: 14
  ಅದೃಷ್ಟದ ಸಮಯ: ಮಧ್ಯಾಹ್ನ 12:00 ರಿಂದ ರಾತ್ರ 9:00ರ ವರೆಗೆ.


 • ಕರ್ಕ

  ವಿದ್ಯಾರ್ಥಿಗಳು ತಮ್ಮ ಪ್ರಯತ್ನಕ್ಕೆ ಸೂಕ್ತ ಫಲ ಪಡೆಯಲು ಅಸಾಧ್ಯವಾಗುವುದು. ಇದು ಅವರಲ್ಲಿ ಒಂದಿಷ್ಟು ನಿರಾಸೆಯನ್ನು ಮೂಡಿಸುತ್ತದೆ. ನಿಮ್ಮನ್ನು ನೀವು ದುಃಖಕ್ಕೆ ತಳ್ಳುವ ಬದಲು ಹುರಿದುಂಬಿಸಿಕೊಳ್ಳುವ ಪ್ರಯತ್ನವನ್ನು ಮಾಡಿ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ಹೊಸ ಗುರಿ ಸಾಧನೆಯ ವಿಷಯವು ನಿಮ್ಮನ್ನು ಹೆಚ್ಚು ಕಾಡುವುದು. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಕೈಗೊಳ್ಳಬಹುದು. ತೀವ್ರವಾದ ವ್ಯವಹಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಸಮಾಜ ಸೇವೆಯಲ್ಲಿ ಇರುವವರಿಗೆ ನಿರಾಳ ಭಾವನೆ ಮೂಡುವುದು. ಕುಟುಂಬದವರೊಂದಿಗೆ ವಿಹಾರಕ್ಕೆ ಹೋದರೆ ಕುಟುಂಬದವರು ಮತ್ತು ನೀವು ಅತ್ಯಂತ ಸಂತೋಷದ ಕ್ಷಣವನ್ನು ಅನುಭವಿಸುವಿರಿ. ನಿಮ್ಮ ಪಾಲಕರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ನಿಮ್ಮ ಪ್ರೇಮಿಯೊಂದಿಗೆ ವಿಶ್ವಾಸಾರ್ಹ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವಿರಿ. ಉದ್ಯಮಿಗಳು ಸಾಮಾನ್ಯ ದಿನಚರಿಯನ್ನು ಹೊಂದಿರುತ್ತಾರೆ.
  ಅದೃಷ್ಟದ ಬಣ್ಣ: ನೇರಳೆ
  ಅದೃಷ್ಟದ ಸಂಖ್ಯೆ: 19
  ಅದೃಷ್ಟದ ಸಮಯ: ಮಧ್ಯಾಹ್ನ 12:14 ರಿಂದ ಸಂಜೆ 7:50ರ ವರೆಗೆ.


 • ಸಿಂಹ

  ನೀವು ಅನವಶ್ಯಕವಾಗಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ಭವಿಷ್ಯದಲ್ಲಿ ನೀವು ದುಃಖ ಪಡಬಹುದು. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಗಂಭೀರತೆ ಹಾಗೂ ಕೆಲಸದ ಬಗ್ಗೆ ನಿಷ್ಟೆಯನ್ನು ತೋರಬೇಕು. ಇಲ್ಲವಾದರೆ ಮೇಲಾಧಿಕಾರಿಗಳ ಅಸಮಧಾನಕ್ಕೆ ಒಳಗಾಗಬೇಕಾಗುವುದು. ಕೆಲಸವನ್ನು ಬಾಕಿ ಉಳಿಸುವ ಗೋಜಿಗೆ ಹೋಗದಿರಿ. ಗ್ರಾಹಕರೊಂದಿಗೆ ವ್ಯವಹರಿಸುವಾಗ ಒಂದಿಷ್ಟು ಕಾಳಜಿ ಹಾಗೂ ತಾಳ್ಮೆಯ ವರ್ತನೆ ತೋರುವುದು ಅಗತ್ಯ. ಇಂದು ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭ ಹಾಗೂ ಶುಭವನ್ನು ತರುವ ದಿನ. ಹಾಗಾಗಿ ಭವಿಷ್ಯದ ಯೋಜನೆಗಳಿಗೆ ಚಿಂತನೆ ನಡೆಸಬಹುದು. ಸಂಗಾತಿಯ ವರ್ತನೆಯು ಹಿತಕರವಾಗಿರುವುದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ಅನುಭವಿಸುವಿರಿ. ಸಂಜೆ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಅಲ್ಲಿ ಹೊಸ ವ್ಯಕ್ತಿಯ ಪರಿಚಯ ಆಗುವುದು. ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಉಂಟಾಗುವುದು.
  ಅದೃಷ್ಟದ ಬಣ್ಣ: ಹಳದಿ
  ಅದೃಷ್ಟದ ಸಂಖ್ಯೆ: 20
  ಅದೃಷ್ಟದ ಸಮಯ: ಸಂಜೆ 5:00 ಯಿಂದ ರಾತ್ರಿ10:00ರ ವರೆಗೆ.


 • ಕನ್ಯಾ

  ಅತಿಯಾಗಿ ಹಣ ವ್ಯಯಿಸುವುದರಿಂದ ಭವಿಷ್ಯದಲ್ಲಿ ಕಳವಳಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳ ಬಗ್ಗೆ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಹೇಳಿಕೆಗೆ ಬದ್ಧರಾಗಿರುತ್ತಾರೆ. ನಿಮ್ಮ ಅನುಭವವು ಅವರಿಗೆ ಪ್ರಯೋಜನಕಾರಿ ಆಗಿರುವುದರಿಂದ ನಿಮ್ಮ ಮಾರ್ಗದರ್ಶನ ಪಡೆಯಲು ಬಯಸುತ್ತಾರೆ. ವಿದೇಶದಲ್ಲಿ ನೆಲೆಸಲು ಬಯಸುವವರಿಗೆ ಉತ್ತಮವಾದ ಸಮಯ. ಕುಟುಂಬದ ವಿಷಯದಲ್ಲಿ ಇಂದು ಸಾಮಾನ್ಯವಾದ ದಿನ. ನಿಮ್ಮ ಸಂಗಾತಿ ಮಕ್ಕಳನ್ನು ಹಾಗೂ ಮನೆಯವರನ್ನು ಸುಂದರವಾಗಿ ನಿಭಾಯಿಸುವರು. ನೀವು ಕೆಲವು ಬದ್ಧತೆಗಳನ್ನು ಪೂರೈಸಬೇಕಾಗುವುದು. ಉದ್ಯಮಿಗಳು ಕಾರ್ಯನಿರತ ಹಾಗೂ ಲಾಭದಾಯಕ ದಿನವನ್ನಾಗಿ ಅನುಭವಿಸುವರು. ನಿಮ್ಮ ಪಾಲಕರ ಆರೋಗ್ಯದ ಬಗ್ಗೆ ಒಂದಿಷ್ಟು ಗಮನ ನೀಡುವುದು ಸೂಕ್ತ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು. ಪ್ರಯಾಣ ಮಾಡುವಾಗ ಜಾಗರೂಕತೆಯಿಂದ ಇರಬೇಕು. ದೂರದ ಪ್ರದೇಶಗಳಿಗೆ ವಾಹನ ಚಲಾಯಿಸುವುದನ್ನು ತಪ್ಪಿಸಿ.
  ಅದೃಷ್ಟದ ಬಣ್ಣ: ಬಿಳಿ
  ಅದೃಷ್ಟದ ಸಂಖ್ಯೆ: 18
  ಅದೃಷ್ಟದ ಸಮಯ: ಮುಂಜಾನೆ 7:45 ರಿಂದ ಮಧ್ಯಾಹ್ನ 12ರ ವರೆಗೆ.


 • ತುಲಾ

  ಇಂದು ನಿಮಗೆ ಕುಟುಂಬದಲ್ಲಿ ಸಾಕಷ್ಟು ಸವಾಲುಗಳು ಉದ್ಭವ ಆಗುತ್ತವೆ. ಸಣ್ಣ ವಾದಗಳು ಗಂಭೀರ ತಿರುವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಗೆ ಈ ವಿಷಯಗಳು ನೋವನ್ನು ಉಂಟುಮಾಡುತ್ತದೆ. ಇಂದು ನಿಮಗೆ ಒತ್ತಡದ ದಿನ. ಕೆಲಸದಲ್ಲಿ ಆಲಸ್ಯ ಉಂಟಾಗಬಹುದು. ಕೆಲಸವನ್ನು ಮುಂದೂಡುವುದು ಅಥವಾ ಬಾಕಿ ಉಳಿಸುವುದನ್ನು ತಪ್ಪಿಸಿ. ಆರ್ಥಿಕವಾಗಿ ಇಂದು ನಿಮಗೆ ಸಾಮಾನ್ಯವಾದ ದಿನ. ಜಂಟಿ ವ್ಯವಹಾರದಲ್ಲಿ ಇರುವವರು ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರವಾಸವನ್ನು ಕೈಗೊಳ್ಳಬಹುದು. ಸಂಜೆ ವೇಳೆ ಸಿಗುವ ಒಳ್ಳೆಯ ಸುದ್ದಿ ಕುಟುಂಬಕ್ಕೆ ಆಶ್ಚರ್ಯವನ್ನುಂಟುಮಾಡುವುದು. ಮಕ್ಕಳು ಸ್ನೇಹಿತರೊಂದಿಗೆ ಅಧಿಕ ಸಮಯವನ್ನು ಕಳೆಯುವರು. ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಗಮನವಿಡಿ.
  ಅದೃಷ್ಟದ ಬಣ್ಣ: ನೀಲಿ
  ಅದೃಷ್ಟದ ಸಂಖ್ಯೆ: 2
  ಅದೃಷ್ಟದ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 2:05ರ ವರೆಗೆ.


 • ವೃಶ್ಚಿಕ

  ಪ್ರೀತಿಯಲ್ಲಿ ಬಿದ್ದವರಿಗೆ ಇಂದು ಅದೃಷ್ಟದ ದಿನ. ಪೋಷಕರ ಬೆಂಬಲ ಸಿಗುವುದರಿಂದ ನೀವು ನಿಮ್ಮ ಸಂಬಂಧವನ್ನು ಅಧಿಕೃತಗೊಳಿಸಿಕೊಳ್ಳುತ್ತೀರಿ. ನಿಮ್ಮ ಪ್ರೀತಿಯು ನಿಮ್ಮೊಂದಿಗೆ ದೀರ್ಘ ಸಮಯಗಳ ಕಾಲ ಮುಂದುವರಿಯುವುದು. ಪೋಷಕರ ಆರೋಗ್ಯವು ಸಾಮಾನ್ಯವಾಗಿರುತ್ತದೆ. ಕಚೇರಿಯ ರಾಜಕಾರಣಗಳಿಂದ ಆದಷ್ಟು ದೂರವಿರಿ. ಕೆಲವು ವಿಷಯಗಳು ಗೊಂದಲವನ್ನು ಸೃಷ್ಟಿಸುವುದರಿಂದ ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನ ನೀಡಿ. ಈ ದಿನ ಕುಟುಂಬದವರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ನೃತ್ಯ ಮಾಡುವವರು ಅತ್ಯುತ್ತಮ ಪ್ರದರ್ಶನ ನೀಡುವರು. ಉದ್ಯಮಿಗಳು ಭಾರಿ ಲಾಭ ಗಳಿಸುವರು. ಕೆಲಸಕ್ಕೆ ಸಂಬಂಧಿಸಿದ ಪ್ರಯಾಣವು ಲಾಭವನ್ನು ತರುತ್ತದೆ.
  ಅದೃಷ್ಟದ ಬಣ್ಣ: ಕಪ್ಪು ಮಿಶ್ರಿತ ಕೆಂಪು ಬಣ್ಣ/ಮರೂನ್
  ಅದೃಷ್ಟದ ಸಂಖ್ಯೆ: 25
  ಅದೃಷ್ಟದ ಸಮಯ: ಮುಂಜಾನೆ 4:20 ರಿಂದ ಮಧ್ಯಾಹ್ನ 12:00ರ ವರೆಗೆ.


 • ಧನು

  ಹಿಂದೆ ಅವಸರದಲ್ಲಿ ತೆಗೆದುಕೊಂಡ ನಿರ್ಧಾರಗಳು ಇಂದು ನಿಮ್ಮನ್ನು ಕಾಡುತ್ತವೆ. ಕೆಲಸದ ಸ್ಥಳದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ಹಾಗೂ ನಿಮ್ಮ ಸಹೋದ್ಯೋಗಿಗಳ ಮಧ್ಯೆ ಅತಿಯಾದ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಕುಟುಂಬಕ್ಕೆ ಸಂಬಂಧಿಸಿದ ಕೆಲವು ವಿಷಯಗಳಿಗೆ ಸಂಗಾತಿಯು ಅತ್ಯುತ್ತಮ ಸಲಹೆ ಹಾಗೂ ಸಹಕಾರ ನೀಡುವರು. ಉದ್ಯಮಿಗಳು ಹೆಚ್ಚು ಪರಿಶ್ರಮ ವಹಿಸಬೇಕಾಗುವುದು. ಅದರಿಂದ ಸಕಾರಾತ್ಮಕ ಫಲಿತಾಂಶ ದೊರೆಯುವುದು. ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ಹಿರಿಯರು ಸಂತೋಷದಿಂದ ಇರುವುದರಿಂದ ಮನೆಯಲ್ಲಿಯೂ ಸಂತೋಷದ ವಾತಾವರಣ ನೆಲೆಸುವುದು. ನೀವು ಇಂದು ಕೆಲವು ದುಬಾರಿ ವಸ್ತುವನ್ನು ಖರೀದಿಸುವ ಸಾಧ್ಯತೆಗಳಿವೆ. ಈ ಹಿಂದ ಆಪ್ತರಿಂದ ಪಡೆದ ಹಣವನ್ನು ಇಂದು ಹಿಂತಿರುಗಿಸಲು ಸಾಧ್ಯವಾಗುವುದು. ಸಂಜೆಯ ವೇಳೆಗೆ ನೀವು ಪ್ರಣಯಭರಿತ ಭೋಜನವನ್ನು ಸ್ವೀಕರಿಸುವ ಸಾಧ್ಯತೆಗಳಿವೆ. ಅದು ನಿಮಗೆ ಉತ್ತಮ ವಿಶ್ರಾಂತಿಯನ್ನು ಕಲ್ಪಿಸುವುದು.
  ಅದೃಷ್ಟದ ಬಣ್ಣ: ಕಂದು
  ಅದೃಷ್ಟದ ಸಂಖ್ಯೆ: 6
  ಅದೃಷ್ಟದ ಸಮಯ: ಮಧ್ಯಾಹ್ನ 1:00 ರಿಂದ ಸಂಜೆ 5:00ರ ವರೆಗೆ.


 • ಮಕರ

  ವಿದ್ಯಾರ್ಥಿಗಳಿಗೆ ಇಂದು ಅತ್ಯುತ್ತಮವಾದ ದಿನ. ಶೈಕ್ಷಣಿಕವಾಗಿ ಸಾಧನೆಯನ್ನು ಮಾಡುವರು. ಇದರಿಂದ ಪೋಷಕರು ಹೆಚ್ಚು ಹೆಮ್ಮೆ ಪಡುವರು. ಅಧಿಕ ಕೆಲಸವು ಇಂದು ನಿಮಗೆ ಒತ್ತಡವನ್ನು ಉಂಟುಮಾಡುವುದು. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳ ವಿರುದ್ಧವೇ ಆಕ್ರಮಣಕಾರಿ ವರ್ತನೆಯನ್ನು ತೋರುವ ಸಾಧ್ಯತೆಗಳಿವೆ. ಕುಟುಂಬದ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ಸಂಬಂಧಗಳನ್ನು ಬಹಳ ಲಘುವಾಗಿ ಸ್ವೀಕರಿಸದಿರಿ. ಪ್ರೇಮಿಗಳು ಪ್ರಣಯದ ದಿನವನ್ನಾಗಿಸಿಕೊಳ್ಳುತ್ತಾರೆ. ಆರೋಗ್ಯವು ಉತ್ತಮವಾಗಿರುತ್ತದೆ. ದಿನ ಪೂರ್ತಿ ಉತ್ತಮ ಮನಃಸ್ಥಿತಿ ಹೊಂದಲು ಯೋಗ ಮತ್ತು ಧ್ಯಾನದ ಮೊರೆ ಹೋಗುವುದು ಸೂಕ್ತ.
  ಅದೃಷ್ಟದ ಬಣ್ಣ: ಹಸಿರು
  ಅದೃಷ್ಟದ ಸಂಖ್ಯೆ: 15
  ಅದೃಷ್ಟದ ಸಮಯ: ಮಧ್ಯಾಹ್ನ 12:45 ರಿಂದ ಸಂಜೆ 5:20ರ ವರೆಗೆ.


 • ಕುಂಭ

  ಅದೃಷ್ಟವು ಇಂದು ನಿಮ್ಮ ಪರವಾಗಿದೆ. ಹಾಗಾಗಿ ನೀವು ಇಂದು ಶಕ್ತಿಯುತರಾಗಿ ಮಿಂಚುವಿರಿ. ಬಾಕಿ ಉಳಿದ ಕೆಲಸವನ್ನು ಬಹಳ ಉತ್ಸಾಹದಿಂದ ಮಾಡಿ ಮುಗಿಸುವಿರಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನ ಕಂಡುಕೊಳ್ಳುವುದು ಅತ್ಯಗತ್ಯ. ನಿಮ್ಮ ಸಂಗಾತಿಯು ಕೆಲವು ವಿಷಯದಲ್ಲಿ ಮಧ್ಯ ಹಸ್ತಕ್ಷೇಪ ಮಾಡುವರು. ಅದು ನಿಮಗೆ ಇಷ್ಟವಾಗದೆ ಇರಬಹುದು. ಹೊಸ ವಿಷಯಗಳ ಬಗ್ಗೆ ಚಿಂತನೆ ಹಾಗೂ ಯೋಜನೆಯನ್ನು ಕೈಗೊಳ್ಳುವಿರಿ. ಕುಟುಂಬಕ್ಕೆ ಸಂಬಂಧಿಸಿದಂತೆ ಕೆಲವು ದೃಢ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ನೀವು ನಿಮ್ಮ ಹೆತ್ತವರ ಸಲಹೆಯನ್ನು ಪರಿಗಣಿಸುವಿರಿ. ಉದ್ಯಮಿಗಳಿಗೆ ಇಂದು ಲಾಭದ ದಿನ. ಹೂಡಿಕೆಗೆ ಇಂದು ಸೂಕ್ತವಾದ ದಿನ. ಸಂಜೆಯ ಹೊತ್ತಿಗೆ ಆರೋಗ್ಯದಲ್ಲಿ ಕೊಂಚ ತೊಂದರೆ ಉಂಟಾಗಬಹುದು.
  ಅದೃಷ್ಟದ ಬಣ್ಣ: ಸಾಸಿವೆ ಬಣ್ಣ
  ಅದೃಷ್ಟದ ಸಂಖ್ಯೆ: 42
  ಅದೃಷ್ಟದ ಸಮಯ: ಮಧ್ಯಾಹ್ನ 1:05 ರಿಂದ ಸಂಜೆ 5:00ರ ವರೆಗೆ.


 • ಮೀನ

  ಮೇಲಾಧಿಕಾರಿಗಳಿಂದ ಮನ್ನಣೆ ದೊರೆಯುವುದು. ಕೆಲಸದ ವಿಷಯದಲ್ಲಿ ಇಂದು ನಿಮಗೆ ಅದೃಷ್ಟದ ದಿನ. ಹೊಸ ಆಲೋಚನೆಯನ್ನು ಕೆಲಸದ ಕ್ಷೇತ್ರದಲ್ಲಿ ವ್ಯಕ್ತಪಡಿಸುವಿರಿ. ಅದು ನಿಮ್ಮ ಮೇಲಾಧಿಕಾರಿಗಳಿಗೆ ಸಂತೋಷವನ್ನು ಉಂಟುಮಾಡುವುದು. ಹಳೆಯ ಕೆಟ್ಟ ಅಭ್ಯಾಸದಿಂದ ದೂರವಿರಿ. ಉತ್ತಮ ಉಳಿತಾಯ ಯೋಜನೆಯನ್ನು ಕಂಡುಕೊಳ್ಳುವಿರಿ. ಹಣಕಾಸಿನ ವಿಷಯದಲ್ಲಿ ಇಂದು ಲಾಭದಾಯಕವಾದ ದಿನ. ಪರಸ್ಪರ ಒಪ್ಪಿಗೆಯೊಂದಿಗೆ ಕೆಲಸ ಮಾಡುವುದು ಕುಟುಂಬದ ದೃಷ್ಟಿಯಿಂದ ಪ್ರಯೋಜನಕಾರಿಯಾದ ದಿನ. ಒಡಹುಟ್ಟಿದವರ ಪೈಪೋಟಿಯು ಪೋಷಕರಿಗೆ ಬೇಸರವನ್ನುಂಟುಮಾಡುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯದಲ್ಲಿ ಗಮನವನ್ನು ಕೇಂದ್ರೀಕರಿಸಲು ಕಷ್ಟಪಡುವರು. ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಅದು ನಿಮ್ಮನ್ನು ಕಾರ್ಯನಿರತರನ್ನಾಗಿ ಮಾಡಿಸುತ್ತದೆ.
  ಅದೃಷ್ಟದ ಬಣ್ಣ: ತಿಳಿ ಹಳದಿ/ಕ್ರೀಮ್
  ಅದೃಷ್ಟದ ಸಂಖ್ಯೆ: 7
  ಅದೃಷ್ಟದ ಸಮಯ: ಸಂಜೆ 5:00 ರಿಂದ ರಾತ್ರಿ 9:00ರ ವರೆಗೆ.
ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

   
 
ಹೆಲ್ತ್