Back
Home » ಬಾಲಿವುಡ್
'ಚಂದ್ರಯಾನ 2' : ಇಸ್ರೋ ಶ್ರಮಕ್ಕೆ ಹ್ಯಾಟ್ಸ್ ಆಫ್ ಹೇಳಿದ ಬಾಲಿವುಡ್ ನಟರು
Oneindia | 7th Sep, 2019 10:03 AM

ತಾಂತ್ರಿಕ ತೊಂದರೆಯಿಂದ ಭಾರತದ 'ಚಂದ್ರಯಾನ 2' ಮಿಷನ್ ಯಶಸ್ವಿ ಆಗಲಿಲ್ಲ. ಅಂತಿಮ ಘಟ್ಟದಲ್ಲಿ, ಇನ್ನೆನೂ 2.1 ಕಿಲೋ ಮೀಟರ್ ಇರುವಾಗ ಸಂಪರ್ಕ ಕಡಿತವಾಗಿ, ಇಡೀ ಭಾರತೀಯರಲ್ಲಿ ನಿರಾಸೆ ಮೂಡುವಂತೆ ಮಾಡಿದೆ.

Live Updates: ಇಸ್ರೋದಲ್ಲಿ ಪ್ರಧಾನಿ ಮೋದಿ ಭಾಷಣ

'ಚಂದ್ರಯಾನ 2' ಸಕ್ಸಸ್ ಆಗದೆ ಇದ್ದರೂ, ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಸ್ರೋ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ. ಬಾಲಿವುಡ್ ನ ಅನೇಕ ಸ್ಟಾರ್ ಗಳು ಸಹ 'ಚಂದ್ರಯಾನ 2' ಹಿಂದೆ ಇರುವ ವಿಜ್ಞಾನಿಗಳ ಶ್ರಮಕ್ಕೆ ಹ್ಯಾಟ್ಸ್ ಆಫ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ರಿತೇಶ್ ದೇಶ್ ಮುಖ್ ''ಇಸ್ರೋ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ. ಇಂದು ಇಸ್ರೋ ಮಾಡಿರುವ ಸಾಧನೆ ಕಡಿಮೆ ಏನು ಅಲ್ಲ'' ಎಂದಿದ್ದಾರೆ.

''ಭಾರತ ಹಾಗೂ ಇಡೀ ವಿಶ್ವವೇ ನಿಮ್ಮ ಜೊತೆಗೆ ಇದೆ'' ಎಂದು ನಟ ಅನುಪಮ್ ಖೇರ್ ಟ್ವೀಟ್ ಮಾಡಿ ಇಸ್ರೋ ಶ್ರಮವನ್ನು ಮೆಚ್ಚಿದ್ದಾರೆ.

ನಿನ್ನೆ ರಾತ್ರಿ 'ಚಂದ್ರಯಾನ 2' ಬಗ್ಗೆ ನಟ ಅಕ್ಷಯ್ ಕುಮಾರ್, ನಿರ್ದೇಶಕ ಮಧುರ್ ಬಂಡಾರ್ಕರ್, ಗಾಯಕ ಅರ್ಮನ್ ಮಲ್ಲಿಕ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದು, ಅದ್ಭುತ ಕ್ಷಣವನ್ನು ಕಣ್ಣು ತುಂಬಿಕೊಳ್ಳಿ ಎಂದಿದ್ದರು.

ಕೊನೆಯ ಕ್ಷಣದಲ್ಲಿ ಎದುರಾದ ನಿರಾಶೆ: ಸಂವಹನ ಕಳೆದುಕೊಂಡ ಚಂದ್ರಯಾನ 2 ನೌಕೆ

'ಚಂದ್ರಯಾನ 2' ಮಿಷನ್‌:

ನಿನ್ನೆ (ಸಪ್ಟೆಂಬರ್ 6) ಚಂದ್ರಯಾನ 2 ಮಿಷನ್‌ನ ಅಂತಿಮ ಘಟ್ಟವಾಗಿತ್ತು. ವಿಕ್ರಂ ಲ್ಯಾಂಡರ್ ಅನ್ನು ಹೊತ್ತ ಆರ್ಬಿಟರ್ ಚಂದ್ರನ ಸುತ್ತ ಪರಿಭ್ರಮಿಸುತ್ತಾ ತನ್ನಿಂದ ಚಂದ್ರನ ಕೆಲವು ಕಿ.ಮೀ ಸಮೀಪದ ಅಂತರದಲ್ಲಿ ವಿಕ್ರಂ ಲ್ಯಾಂಡರ್‌ ಅನ್ನು ಬೇರ್ಪಡಿಸಿಕೊಂಡಿತು. ಇನ್ನೇನು ಚಂದ್ರನ ಮೇಲ್ಮೈ 2.1 ಕಿ.ಮೀ ದೂರದಲ್ಲಿರುವ ಸಮಯದಲ್ಲಿ ವಿಕ್ರಂ ಲ್ಯಾಂಡರ್ ನೊಂದಿಗೆ ಇಸ್ರೋ ಸಂಪರ್ಕ ಕಳೆದುಕೊಂಡಿತು. ವಿಕ್ರಂ ಲ್ಯಾಂಡರ್‌ ಮಾಹಿತಿಯನ್ನು ಆರ್ಬಿಟರ್‌ಗೆ, ಆರ್ಬಿಟರ್ ಇಸ್ರೋಕ್ಕೆ ಕಳಿಸುವಂತೆ ವಿನ್ಯಾಸ ಮಾಡಲಾಗಿತ್ತು. ಆದರೆ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡ ಕಾರಣ 'ಚಂದ್ರಯಾನ 2' ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ.

   
 
ಹೆಲ್ತ್