Back
Home » ಆರೋಗ್ಯ
ಹೆಚ್ಚು ತಿನ್ನಿ ತೂಕ ಇಳಿಸಿ: ಇದು ರಿವರ್ಸ್ ಡಯಟ್ ಮಂತ್ರ
Boldsky | 9th Sep, 2019 11:20 AM
  • ರಿವರ್ಸ್ ಡಯಟ್ ಎಂದರೇನು?

    ಸಣ್ಣ ಆಗಲು ಡಯಟ್ ಮಾಡುವವರು ಕ್ಯಾಲರಿ ತುಂಬಾ ಕಡಿಮೆ ಸೇವಿಸಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ರಿವರ್ಸ್ ಡಯಟ್ ಮಾಡುವಂತಹ ಜನರು ಕೆಲವು ವಾರಗಳು ಮತ್ತು ತಿಂಗಳ ಕಾಲ ಕ್ಯಾಲರಿ ಸೇವನೆ ಹೆಚ್ಚಿಸುವರು. ಇದರಿಂದಾಗಿ ಚಯಾಪಚಯ ಕ್ರಿಯೆ ಹೆಚ್ಚಾಗುವುದು ಮತ್ತು ದಿನವಿಡಿ ಹೆಚ್ಚು ಕ್ಯಾಲರಿ ದಹಿಸಲು ದೇಹಕ್ಕೆ ನೆರವಾಗುವುದು. ಇದು ದೇಹದಾರ್ಢ್ಯ ಪಟುಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ತೂಕ ಹೆಚ್ಚಿಸದೆ ಕ್ಯಾಲರಿ ಕಡಿಮೆ ಸೇವನೆ ಮಾಡಲು ಆರಂಭಿಸಿ, ದಿನದಿಂದ ದಿನಕ್ಕೆ ಸಾಮಾನ್ಯ ಆಹಾರ ಕ್ರಮಕ್ಕೆ ಮರಳುವುದು. ಇದು ಶಕ್ತಿ ಮಟ್ಟ ಹೆಚ್ಚಿಸುವುದು, ಹಸಿವು ಕಡಿಮೆ ಮಾಡುವುದು ಮತ್ತು ತೂಕ ಇಳಿಸಲು ನೆರವಾಗುವುದು.


  • ಇದು ಹೇಗೆ ಕೆಲಸ ಮಾಡುವುದು?

    ಹೆಚ್ಚಿನ ಡಯಟ್ ನಲ್ಲಿ ಕ್ಯಾಲರಿ ಕಡಿಮೆ ಮಾಡಿ ಕ್ಯಾಲರಿ ಕೊರತೆ ಉಂಟಾಗುವಂತೆ ಮಾಡುತ್ತಾರೆ ಮತ್ತು ದೇಹವು ದಹಿಸುವ ಕ್ಯಾಲರಿಗಿಂತ ಕಡಿಮೆ ಸೇವನೆ ಮಾಡುವುದಾಗಿರುತ್ತದೆ. ಸಮಯ ಕಳೆದಂತೆ ದೇಹವು ಶಕ್ತಿಯನ್ನು ಸಂರಕ್ಷಿಸಲು ಚಯಾಪಚಯ ಕ್ರಿಯೆ ನಿಧಾನಗೊಳಿಸುವುದು. ಸಾಮಾನ್ಯ ಆಹಾರ ಕ್ರಮಕ್ಕೆ ಮರಳಲು ಬಯಸಿದರೆ ಇದು ತುಂಬಾ ಸಮಸ್ಯೆ ಉಂಟು ಮಾಡಬಹುದು. ಆದರೆ ತೂಕಸಮತೋಲನದಲ್ಲಿ ಇಡಲು ಇದು ನೆರವಾಗುವುದು.

    ಆದರೆ ನೀವು ತೂಕ ಇಳಿಸಲು ಬಯಸಿದ್ದು, ಕ್ಯಾಲರಿ ಕಡಿಮೆ ಮಾಡಲು ಬಯಸದಿದ್ದರೆ ರಿವರ್ಸ್ ಡಯಟ್ ಅತ್ಯುಪಕಾರಿ ಮಾರ್ಗ. ನೀವು ಎಲ್ಲರಂತೆ ಅಥವಾ ಹೆಚ್ಚಾಗೇ ಕ್ಯಾಲೋರಿ ಉಳ್ಳ ಆಹಾರವನ್ನು ಸೇವಿಸುವ ಮೂಲಕ ಹಾಗೂ ಅದಕ್ಕೆ ಅಗತ್ಯ ವ್ಯಾಯಾಮಗಳನ್ನು ಮಾಡುವ ಮೂಲಕ ನಿಮ್ಮ ದೇಹವನ್ನು ಫಿಟ್ ಹಾಗೂ ಸ್ವಾಸ್ಥ್ಯವಾಗಿ ಇಟ್ಟುಕೊಳ್ಳಬಹುದು. ಅಗತ್ಯ ಕ್ಯಾಲೋರಿ ದೇಹದ ಸ್ವಾಸ್ಥ್ಯಕ್ಕೆ ಸಹಕಾರಿಯಾದರೆ, ಅನಗತ್ಯ ಕ್ಯಾಲೋರಿ ಇಳಿಸುವಲ್ಲಿ ವ್ಯಾಯಾಮ ಪೂರಕವಾಗುತ್ತದೆ.


  • ರಿವರ್ಸ್ ಡಯಟ್ ಪಾಲಿಸುವುದು ಹೇಗೆ?

    ರಿವರ್ಸ್ ಡಯಟ್ ಎಂದರೆ ನೀವು ವಾರಕ್ಕೆ ಸೇವಿಸುವಂತಹ ಕ್ಯಾಲರಿಯನ್ನು ಸುಮಾರು 50-100ರಷ್ಟು ಹೆಚ್ಚಿಗೆ ಮಾಡುವುದು. ನೀವು ಈಗ ಸೇವನೆ ಮಾಡುತ್ತಿರುವ ಕ್ಯಾಲರಿಗಿಂತ ಇದು ಹೆಚ್ಚಾಗಿರುವುದು. ಇದು 4-10 ವಾರಗಳವರೆಗೆ ಅಥವಾ ನೀವು ಗುರಿ ಸಾಧಿಸುವ ತನಕ ಇರುವುದು. ಏಕೆಂದರ ಕ್ಯಾಲರಿ ಸೇವನೆಗಿಂತಲೂ ಪ್ರೋಟೀನ್ ಅಗತ್ಯತೆಯನ್ನು ದೇಹದ ತೂಕಕ್ಕೆ ಅಳತೆ ಮಾಡಲಾಗುತ್ತದೆ. ಈ ಡಯಟ್ ವೇಳೆ ಪ್ರೋಟೀನ್ ಸೇವನೆಯು ಒಂದೇ ರೀತಿಯಾಗಿ ಇರಬೇಕು. ಕ್ಯಾಲರಿ ಹೆಚ್ಚು ಸೇವನೆ ಮಾಡಿಯೂ ಸಹ ದೇಹಕ್ಕೆ ಯಾವುದೇ ವ್ಯಾಯಾಮವಿಲ್ಲದೆ ಇರುವ ಕೆಲವೊಂದು ಚಟುವಟಿಕೆಗಳಿಂದಲೂ ಕ್ಯಾಲರಿ ದಹಿಸಬಹುದು. ಇದರಲ್ಲಿ ಮುಖ್ಯವಾಗಿ ನಡೆದಾಡುವುದು, ಮಾತು ಮತ್ತು ಇತರ ದೈಹಿಕ ಚಟುವಟಿಕೆಗಳು ಸಹ ವ್ಯಾಯಾಮದಂತೆ ಕೆಲಸ ಮಾಡುತ್ತದೆ.


  • ಕ್ರೀಡಾಳುಗಳು ಹಾಗೂ ದೇಹದಾರ್ಢ್ಯ ಪಟುಗಳು ಇದನ್ನೇ ಪಾಲಿಸುವರು

    ಕ್ರೀಡಾಳುಗಳು ಹಾಗೂ ದೇಹದಾರ್ಢ್ಯ ಪಟುಗಳು ತಮ್ಮ ದೇಹವನ್ನು ಫಿಟ್ ಆಗಿಡಲು ಹಲವಾರು ರೀತಿಯ ವ್ಯಾಯಾಮ ಕ್ರಮ ಹಾಗೂ ಆಹಾರವನ್ನು ಪಾಲಿಸುವರು.ಇದರಲ್ಲಿ ರಿವರ್ಸ್ ಡಯಟ್ ಸಹ ಮುಖ್ಯವಾದದ್ದು. ಅವರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಲು ಸಾಮಾನ್ಯ ವ್ಯಕ್ತಿಗಳಿಗೆ ಸಾಧ್ಯವಾಗದು. ಅವರು ತಿನ್ನುವ ಆಹಾರದ ಎರಡು ಪಟ್ಟು ಹೆಚ್ಚು ವ್ಯಾಯಾಮ ಮಾಡುವರು, ಇವರ ಉದ್ದೇಶ ದೇಹ ಬೆಳೆಸುವುದು, ಅತಿಯಾದ ಶಕ್ತಿ ದೇಹಕ್ಕೆ ನೀಡುವುದೇ ಆಗಿರುತ್ತದೆ ಹಾಗೂ ಇದರಿಂದಾಗಿ ಅವರು ದೇಹಕ್ಕೆ ಬೊಜ್ಜು ಆವರಿಸಿಕೊಳ್ಳುವುದಿಲ್ಲ. ಆದರೆ ನಾವು ಇದೇ ನಿಯಮ ಪಾಲಿಸಿ ಅವರಿಗಿಂತ ಮಿತಿಯಾದ ಕ್ಯಾಲೋರಿ ಸೇವಿಸಿ ನಿಮಿತ ವ್ಯಾಯಾಮದ ಮೂಲಕ ದೇಹದ ಫಿಟ್ ನೆಸ್ ಕಾಪಾಡಬಹುದು.


  • ತೂಕ ಇಳಿಸಲು ಇದು ಸಹಕಾರಿಯೇ?

    ರಿವರ್ಸ್ ಡಯಟ್ ಬಗ್ಗೆ ಹೆಚ್ಚು ಅಧ್ಯಯನಗಳು ಇದುವರೆಗೆ ನಡೆದಿಲ್ಲ. ಕೆಲವೊಂದು ಸಾಕ್ಷ್ಯಗಳ ಮೂಲಕವಾಗಿ ಇದರ ಲಾಭಗಳನ್ನು ಹೇಳಲಾಗುತ್ತಿದೆ. ಕ್ಯಾಲರಿ ಸೇವನೆ ಹೆಚ್ಚು ಮಾಡುವ ಪರಿಣಾಮವಾಗಿ ಕ್ಯಾಲರಿ ದಹಿಸುವಿಕೆ ಹೆಚ್ಚಾಗುವುದು ಮತ್ತು ಹಾರ್ಮೋನ್ ಮಟ್ಟವು ಸಾಮಾನ್ಯವಾಗುವುದು. ಇದರಿಂದ ತೂಕ ಇಳಿಸಲು ಮತ್ತು ಸಮತೋಲನದಲ್ಲಿಡಲು ನೆರವಾಗುವುದು. ಯಾಕೆಂದರೆ ಕ್ಯಾಲರಿ ನಿರ್ಬಂಧದಿಂದಾಗಿ ಲೆಪ್ಟಿನ್ ಮಟ್ಟವು ಸಮತೋಲನದಲ್ಲಿ ಇರುತ್ತದೆ. ಆದರೆ ನೀವೇನಾದರೂ ಕ್ಯಾಲರಿ ಸೇವನೆ ಹೆಚ್ಚು ಮಾಡಿದರೆ ಇದರ ಪರಿಣಾಮವೂ ನಿಧಾನವಾಗಬಹುದು ಅಥವಾ ಹಿಮ್ಮುಖವಾಗಬಹುದು.


  • ರಿವರ್ಸ್ ಡಯಟ್ ನ ಇತರ ಕೆಲವು ಲಾಭಗಳು

    1. ಕೆಲವರು ರಿವರ್ಸ್ ಡಯಟ್ ಆರಂಭಿಸಲು ಕಾರಣ ದಿನವಿಡೀ ಆಹಾರ ಸೇವಿಸಬಹುದು. ಹಲವಾರು ವಾರಗಳು ಹಾಗೂ ತಿಂಗಳುಗಳ ಕಾಲ ಡಯಟ್ ನಲ್ಲಿ ಇದ್ದವರಿಗೆ ಇದು ನೆರವಾಗುವುದು. ಯಾಕೆಂದರೆ ಇದು ಆರೋಗ್ಯಕಾರಿ ಆಹಾರ ಕ್ರಮಕ್ಕೆ ಪ್ರೋತ್ಸಾಹಿಸುವುದು.

    2. ಸಾಮಾನ್ಯ ಡಯಟ್ ನಿಂದಾಗಿ ಕೆಲವರಲ್ಲಿ ಮನಸ್ಥಿತಿ ಬದಲಾವಣೆ, ಏಕಾಗ್ರತೆ ಕೊರತೆ ಮತ್ತು ಶಕ್ತಿ ಮಟ್ಟವು ಕುಂದುವ ಸಮಸ್ಯೆ ಕಾಣಿಸುವುದು. ಕ್ಯಾಲರಿ ಕಡಿಮೆ ಸೇವನೆ ಅಥವಾ ಪೋಷಕಾಂಶಗಳ ಕೊರತೆಯಿಂದಾಗಿ ಹೀಗೆ ಆಗುವುದು. ಆದರೆ ರಿವರ್ಸ್ ಡಯಟ್ ಕ್ಯಾಲರಿ ಸೇವನೆ ನಿಧಾನವಾಗಿ ಹೆಚ್ಚು ಮಾಡಲಿದೆ. ಇದರಿಂದ ನಿರ್ಬಂಧಿತ ಡಯಟ್ ನಿಂದ ಆಗಿರುವ ಸಮಸ್ಯೆ ನಿವಾರಣೆ ಮಾಡುವುದು.

    3. ಹಸಿವು ಮತ್ತು ಬಯಕೆಗೆ ಕಾರಣವಾಗುವಂತಹ ಕೆಲವೊಂದು ಹಾರ್ಮೋನ್ ಗಳ ಮೇಲೆ ಕ್ಯಾಲರಿ ನಿರ್ಬಂಧಿತ ಡಯಟ್ ನಿಂದ ಪರಿಣಾಮವಾಗುವುದು. 14 ಮಂದಿ ದೇಹದಾರ್ಢ್ಯ ಪಟುಗಳ ಮೇಲೆ ನಡೆಸಿರುವಂತಹ ಅಧ್ಯಯನದಲ್ಲಿ ಹತ್ತು ವಾರಗಳ ಕಾಲ ನಡೆಸಿದ ತೂಕ ಇಳಿಸುವ ಡಯಟ್ ವೇಳೆ ಶೇ.27.7 ಲೆಪ್ಟಿನ್ ಕಡಿಮೆ ಆಗಿದೆ ಮತ್ತು ಶೇ.26.4ರಷ್ಟು ಘ್ರೆಲಿನ್ ಹೆಚ್ಚಾಗಿದೆ ಎಂದು ಹೇಳಿದೆ. ಲೆಪ್ಟಿನ್ ಹೊಟ್ಟೆ ತುಂಬಿದಂತೆ ಮಾಡಿದರೆ, ಘ್ರೆಲಿನ್ ಹಸಿವಿನ ಭಾವನೆ ಉಂಟು ಮಾಡುವುದು. ಕ್ಯಾಲರಿ ಸೇವನೆ ನಿಧಾನವಾಗಿ ಹೆಚ್ಚಿಸಿದರೆ ಆಗ ಹಾರ್ಮೋನ್ ಮಟ್ಟವನ್ನು ಸಮತೋಲನದಲ್ಲಿ ಇಡಬಹುದು ಮತ್ತು ಹಸಿವಿನ ಮಟ್ಟ ತಗ್ಗಿಸಬಹುದು. ಆದರೆ ಯಾವುದೇ ಸಂಶೋಧನೆಗಳು ಇದನ್ನು ಸಾಬೀತು ಮಾಡಿಲ್ಲ.


  • ರಿವರ್ಸ್ ಡಯಟ್ ನ ಕೆಲವು ಕೊರತೆಗಳು

    1. ನಿಮ್ಮ ಕ್ಯಾಲರಿಯನ್ನು ಹಲವಾರು ಉಪಕರಣಗಳು ಅಂದಾಜು ಮಾಡಬಹುದು. ಆದರೆ ನಿಖರವಾಗಿ ಇದನ್ನು ಲೆಕ್ಕ ಹಾಕುವುದು ಅತೀ ಕಠಿಣವಾಗಿರುವುದು.

    ರಿವರ್ಸ್ ಡಯಟ್ ಸೂಚಿಸುವಂತೆ ಪ್ರತೀ ವಾರವು ಸುಮಾರು 50-100 ಕ್ಯಾಲರಿ ಹೆಚ್ಚು ಮಾಡುವುದು ಮತ್ತೊಂದು ಸವಾಲಿನ ಕೆಲಸವಾಗಿದೆ. ಆಹಾರದ ಪ್ರಮಾಣವನ್ನು ತಪ್ಪಾಗಿ ಅಳೆಯುವುದು ಅಥವಾ ನಿಮ್ಮ ಆಹಾರ ಕ್ರಮಕ್ಕೆ ಹೆಚ್ಚು ತಿಂಡಿ ಸೇರಿಸುವ ಕಾರಣದಿಂದಾಗಿ ರಿವರ್ಸ್ ಡಯಟ್ ವೇಳೆ ನಿಮ್ಮ ಮೂಲ ಉದ್ದೇಶಕ್ಕೆ ಧಕ್ಕೆ ಉಂಟು ಮಾಡಬಹುದು. ನೀವು ಸೇವನೆ ಮಾಡುವಂತಹ ಕ್ಯಾಲರಿ ಬಗ್ಗೆ ಪ್ರತಿನಿತ್ಯವು ತುಂಬಾ ಗಮನಹರಿಸಬೇಕಾಗುತ್ತದೆ.

    2. ರಿವರ್ಸ್ ಡಯಟ್ ನಲ್ಲಿ ಮುಖ್ಯ ಉದ್ದೇಶವೆಂದರೆ ಅಲ್ಲಿ ಕ್ಯಾಲರಿ ಸೇವನೆಯನ್ನು ಹೆಚ್ಚು ಮಾಡುವುದು ಮತ್ತು ಬೇರೆ ಯಾವುದೇ ಅಂಶಗಳಿಗೆ ಇಲ್ಲಿ ಗಮನಹರಿಸಲಾಗಿಲ್ಲ. ತೂಕ ಇಳಿಸಿಕೊಳ್ಳುವುದು ತುಂಬಾ ಕ್ಲಿಷ್ಟ ವಿಚಾರವಾಗಿದೆ. ವಿವಿಧ ರೀತಿಯ ಚಯಾಪಚಯ, ಹಸಿವು ಮತ್ತು ಬಯಕೆ ಮೇಲೆ ಕೆಲವೊಂದು ಪೋಷಕಾಂಶಗಳು ಪರಿಣಾಮ ಬೀರುವುದು. ಆದರೆ ನಿದ್ರೆ, ಒತ್ತಡ ಮತ್ತು ಹಾರ್ಮೋನ್ ಅಸಮತೋಲನವು ದೇಹದ ತೂಕದ ಮೇಲೆ ಪರಿಣಾಮ ಬೀರಬಹುದು ಮತ್ತು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.




ತೂಕ ಇಳಿಸಿಕೊಂಡು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಹಲವಾರು ರೀತಿಯ ವ್ಯಾಯಾಮ ಹಾಗೂ ಆಹಾರ ಕ್ರಮಗಳು ಇವೆ. ಇದನ್ನು ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ದೇಹದ ತೂಕ ಇಳಿಸಿ ಆರೋಗ್ಯ ಕಾಪಾಡಬಹುದು ಹಾಗೂ ದೇಹವನ್ನು ಫಿಟ್ ಆಗಿ ಇಡಬಹುದು.

ಆದರೆ ಅತಿ ಹೆಚ್ಚು ಕ್ಯಾಲೋರಿಸ್ ಆಹಾರ ಸೇವಿಸಿಯೂ ದೇಹವನ್ನು ಫಿಟ್ ಆಗಿಡುವ ರಿವರ್ಸ್ ಡಯಟ್ ಗೊತ್ತಾ?. ಇದನ್ನೇ ದೇಹದಾರ್ಢ್ಯ ಪಟುಗಳು ಹಾಗೂ ಕ್ರೀಡಾಳುಗಳು ಪಾಲಿಸಿಕೊಂಡು ಹೋಗುವುದು. ಏನಪ್ಪಾ ಈ ರಿವರ್ಸ್ ಡಯಟ್ ಎಂದು ನಿಮಗೆ ಅನಿಸಬಹುದು.

ಆದರೆ ಇದು ಆಹಾರ ಪಥ್ಯ ಮಾಡಿಕೊಂಡು ಇರುವಂಥವರು ಮತ್ತೆ ಹಿಂದಿನಂತೆ ಕ್ಯಾಲರಿ ಹೆಚ್ಚಾಗಿರುವಂತಹ ಆಹಾರ ಸೇವನೆ ಮಾಡುವುದು ಮತ್ತು ಅದನ್ನು ದಹಿಸಲು ಸಾಕಷ್ಟು ವ್ಯಾಯಾಮ ಮಾಡುವುದು. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಕೂಡ ಸಿಗುವುದು, ತೂಕವು ಇಳಿಯುವುದು ಮತ್ತು ಶಕ್ತಿಯು ಸಿಗುವುದು.

ರಿವರ್ಸ್ ಡಯಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಲೇಖನ ನಿಮಗೆ ಳಿಸಿಕೊಡಲಿದೆ.

   
 
ಹೆಲ್ತ್