Back
Home » ಸಮ್ಮಿಲನ
ಮಂಗಳವಾರದ ದಿನ ಭವಿಷ್ಯ (10-09-2019)
Boldsky | 10th Sep, 2019 09:39 AM
 • ಮೇಷ

  ನಿಮ್ಮ ಸಣ್ಣ ಸ್ವಭಾವದ ನಡವಳಿಕೆ ಮತ್ತು ಇತರರ ನಿಂದನೆಯಿಂದಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಹಾಗೂ ವರ್ತನೆಯನ್ನು ಸೂಕ್ತ ರೀತಿಯಲ್ಲಿ ಇರುವಂತೆ ಕಾಳಜಿ ವಹಿಸಿ. ಕೆಲಸದ ವಿಷಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಕುಟುಂಬದ ಸದಸ್ಯರು ನಿಮ್ಮ ನಕಾರಾತ್ಮಕ ಮನೋಭಾವವನ್ನು ಸ್ವೀಕರಿಸುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಕೆಲವು ಕಠಿಣ ಸ್ಥಿತಿಯನ್ನು ಎದುರಿಸಬೇಕಾಗುವುದು. ಕಾರ್ಪೋರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೆಲಸಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಗುವುದು. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅತ್ಯಗತ್ಯ. ಅತಿಯಾಗಿ ಖರ್ಚುಮಾಡುವ ಸ್ವಭಾವದಿಂದ ತೊಂದರೆ ಎದುರಾಗಬಹುದು. ನಿದ್ರಾಹೀನತೆಯಿಂದ ಬಳಲುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
  ಅದೃಷ್ಟದ ಬಣ್ಣ: ಹಳದಿ
  ಅದೃಷ್ಟದ ಸಂಖ್ಯೆ: 24
  ಅದೃಷ್ಟದ ಸಮಯ: ಮಧ್ಯಾಹ್ನ 3:00 ರಿಂದ ಸಂಜೆ 7:15ರ ವರೆಗೆ.


 • ವೃಷಭ

  ಮುಂಜಾನೆ ನಿಮಗೆ ಒಳ್ಳೆಯ ಸುದ್ದಿ ದೊರೆಯುವುದು. ಕುಟುಂಬದಲ್ಲಿ ಸಾಕಷ್ಟು ಅನುಕೂಲಕರ ಸ್ಥಿತಿಯನ್ನು ಅನುಭವಿಸುವಿರಿ. ಅದರಿಂದ ನೀವು ಮಾನಸಿಕವಾಗಿ ಉತ್ತಮ ಶಕ್ತಿಯನ್ನು ಪಡೆದುಕೊಳ್ಳುವಿರಿ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಅನುಭವಿಸುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಆಪ್ತರಿಗೆ ಅಥವಾ ಸಂಬಂಧಿಕರಿಗೆ ಹಣಕಾಸಿನ ಸಹಾಯ ಮಾಡುವ ಸಾಧ್ಯತೆಗಳಿವೆ. ಹೆತ್ತವರ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಕುಟುಂಬದವರನ್ನು ಹಾಗೂ ನೀವು ಮಾನಸಿಕ ಸಂತೋಷವನ್ನು ಪಡೆದುಕೊಳ್ಳಲು ಸಣ್ಣ ಪ್ರವಾಸವನ್ನು ಕೈಗೊಳ್ಳಿ. ನಿಮ್ಮ ಆರೋಗ್ಯವು ಪರಿಪೂರ್ಣವಾಗಿರುತ್ತದೆ. ಯೋಗ ಮಾಡುವುದರ ಮೂಲಕ ದಿನದ ಆರಂಭ ಮಾಡಿ. ಅದು ನಿಮಗೆ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ನೀಡುವುದು.
  ಅದೃಷ್ಟದ ಬಣ್ಣ: ತಿಳಿ ಹಸಿರು
  ಅದೃಷ್ಟದ ಸಂಖ್ಯೆ: 6
  ಅದೃಷ್ಟದ ಸಮಯ: 5:30 ರಿಂದ ಸಂಜೆ 9:00ರ ವರೆಗೆ.


 • ಮಿಥುನ

  ನಿಮ್ಮ ಮನಸ್ಸು ತೊಳಲಾಟವನ್ನು ಅನುಭವಿಸುವುದರಿಂದ ದಿನದ ಆರಂಭವು ನಿಧಾನಗತಿಯಲ್ಲಿ ಸಾಗುವುದು. ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ದಿನಗಳ ನಂತರ ಈಗ ಪರಿಹಾರವನ್ನು ಪಡೆದುಕೊಳ್ಳುವಿರಿ. ಒಂದು ಪ್ರಮುಕ ಕಾರ್ಯಕ್ರಮವನ್ನು ಕೈಗೊಳ್ಳಲು ಪೋಷಕರು ಸಲಹೆ ನೀಡುವರು. ಕಾನೂನು ಶುಲ್ಕದ ಸಮಸ್ಯೆಯನ್ನು ಅನುಸರಿಸುತ್ತಿರುವವರು ಅಂತಿಮವಾಗಿ ಮುಕ್ತರಾಗುವರು. ಆರೋಗ್ಯವು ಸಮಾಧಾನಕರವಾಗಿರುತ್ತದೆ. ಆರೋಗ್ಯದ ವೃದ್ಧಿಗೆ ದಿನಚರಿಯ ಸುಧಾರಣೆಯನ್ನು ಮಾಡಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ನೀವು ನಿಮ್ಮ ವರ್ತನೆ ಹಾಗೂ ಸನ್ನಿವೇಶವನ್ನು ನಿಭಾಯಿಸಬೇಕು. ಸಂಬಂಧದಲ್ಲಿ ಇರುವವರು ಹಿಂದೆ ಮಾಡಿದ ತಪ್ಪಗಳನ್ನು ಪುನಃ ಮಾಡದಂತೆ ನೋಡಿಕೊಳ್ಳಿ. ಸಂಜೆ ಹೊತ್ತಿಗೆ ಆಯಾಸಕ್ಕೆ ಒಳಗಾಗಬಹುದು.
  ಅದೃಷ್ಟದ ಬಣ್ಣ: ನೇರಳೆ
  ಅದೃಷ್ಟದ ಸಂಖ್ಯೆ: 8
  ಅದೃಷ್ಟದ ಸಮಯು: ಮುಂಜಾನೆ 8:30 ರಿಂದ ಮುಂಜಾನೆ 10:00ರ ವರೆಗೆ.


 • ಕರ್ಕ

  ಇಂದು ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ದಿನ. ಶೈಕ್ಷಣಿಕ ವಿಷಯದಲ್ಲಿ ಫಲಿತಾಂಶವು ನಿಮ್ಮನ್ನು ಪ್ರಕಾಶಮಾನವಾಗಿ ಇರಿಸುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳು ಇವೆ. ಮಕ್ಕಳು ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುವರು. ಕುಟುಂಬದಲ್ಲಿ ಸಂಗಾತಿಯು ಅಂತ್ಯವಿಲ್ಲದ ಬೆಂಬಲ ನೀಡುವುದರಿಂದ ಎಲ್ಲಾ ವಿಷಯಗಳು ಅನುಕೂಲಕರವಾಗಿರುತ್ತವೆ. ಕೆಲಸದ ಕ್ಷೇತ್ರದಲ್ಲಿ ನೀವು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಜಾಣರೆನಿಸಿಕೊಳ್ಳುವಿರಿ. ಅದು ಇತರರಲ್ಲಿ ಅಸೂಯೆಯನ್ನು ಹುಟ್ಟಿಸಬಹುದು. ವೈಯಕ್ತಿಕ ಹಾಗೂ ವೃತ್ತಿ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಕಲಿಯಬೇಕು. ಒಡಹುಟ್ಟಿದವರ ನಡುವೆ ಸಂಬಂಧವು ಸುಧಾರಿಸುವುದು. ಇದರಿಂದ ಪೋಷಕರು ನೆಮ್ಮದಿಯನ್ನು ಅನುಭವಿಸುವರು.
  ಅದೃಷ್ಟದ ಬಣ್ಣ: ಗಾಢ ನೀಲಿ
  ಅದೃಷ್ಟದ ಸಂಖ್ಯೆ: 37
  ಅದೃಷ್ಟದ ಸಮಯು: ಸಂಜೆ 7:00 ರಿಂದ ರಾತ್ರಿ 10:30ರ ವರೆಗೆ.


 • ಸಿಂಹ

  ಕೆಲಸದಲ್ಲಿ ಹೊಸ ಚಿಂತನೆಗಳು ನಿಮಗೆ ಸಹಾಯ ಮಾಡುವುದು. ಅದು ನಿಮ್ಮನ್ನು ಸಕ್ರಿಯ ಮತ್ತು ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಕೆಲಸದಲ್ಲಿ ಯಾವುದೇ ಸವಾಲುಗಳು ಎದುರಾದರೂ ಅದನ್ನು ಎದುರಿಸಲು ಸಿದ್ಧರಾಗಿರಬೇಕು. ಹಿಂದೆ ಮಾಡಿದ ಹೂಡಿಕೆಯು ಇಂದು ನಿಮಗೆ ಉತ್ತಮ ಲಾಭವನ್ನು ತಂದುಕೊಡುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮಾತನಾಡುವಾಗ ಸಾಕಷ್ಟು ಎಚ್ಚರಿಕೆಯಿಂದ ಮಾತನಾಡಬೇಕು. ಮಾತನಾಡುವ ಮೊದಲು ಎರಡು ಬಾರಿ ಚಿಂತಿಸುವುದು ಸೂಕ್ತ. ಸಂಘರ್ಷ ಹಾಗೂ ವಾದಗಳಿಂದ ದೂರ ಇರಲು ಬಯಸಿದರೆ ಮೇಲಾಧಿÜಕಾರಿಗಳಿಂದ ಆದಷ್ಟು ದೂರವಿರಿ. ಸಂಗಾತಿಯನ್ನು ಖುಷಿಯಲ್ಲಿ ಇಡಲು ಪ್ರಯತ್ನಿಸುವಿರಿ. ಸಂಬಂಧದಲ್ಲಿ ಇರುವವರಿಗೆ ಉತ್ತಮವದ ದಿನ. ಆರೋಗ್ಯವಾಗಿರಲು ಹೆಚ್ಚು ನೀರು ಕುಡಿಯಬೇಕು.
  ಅದೃಷ್ಟ ಬಣ್ಣ: ಕಿತ್ತಳೆ
  ಅದೃಷ್ಟದ ಸಂಖ್ಯೆ : 14
  ಅದೃಷ್ಟದ ಸಮಯ: ಮಧ್ಯಾಹ್ನ 1:00 ರಿಂದ ಸಂಜೆ 4:30ರ ವರೆಗೆ.


 • ಕನ್ಯಾ

  ನಿಮ್ಮ ಸಂಬಂಧಗಳಲ್ಲಿ ಕೆಲವು ಅನುಮಾನಗಳು ಹುಟ್ಟಿಕೊಳ್ಳುವುದು. ಅದು ನಿಮ್ಮ ಸಂಬಂಧದಲ್ಲಿ ತೊಡಕನ್ನು ಉಂಟುಮಾಡುವುದು. ನೀವು ನಿಮ್ಮ ಸ್ವಾಭಿಮಾನವನ್ನು ಕಾಯ್ದುಕೊಳ್ಳಬೇಕು. ಸಂಗಾತಿಗಳು ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ಸಂಬಂಧವು ಬಲಪಡುತ್ತವೆ. ನಿಮ್ಮ ಕುಟುಂಬದವರೊಂದಿಗೆ ಸಣ್ಣ ಪ್ರವಾಸವನ್ನು ಕೈಗೊಳ್ಳುವುದರಿಂದ ಸಂತೋಷ ದೊರೆಯುವುದು. ದೈವಿಕ ಭಾವನೆಗಳಿಗೆ ಹೆಚ್ಚು ಆದ್ಯತೆ ನೀಡುವುದರ ಮೂಲಕ ಅನೇಕ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಒಡಹುಟ್ಟಿದವರ ನಡುವೆ ಇರುವ ವೈಮನಸ್ಸು ದೂರವಾಗುವುದು. ಸಂಗಾತಿಯು ದುಬಾರಿ ವಸ್ತುವಿನ ಬೇಡಿಕೆಯನ್ನು ನಿಮ್ಮ ಮುಂದೆ ಇಡಬಹುದು. ನಿಮ್ಮ ಉದಾರ ಗುಣದಿಂದ ಒಂದಿಷ್ಟು ಪ್ರಯೋಜನವನ್ನು ಪಡೆದುಕೊಳ್ಳುವರು.
  ಅದೃಷ್ಟ ಬಣ್ಣ: ಕೇಸರಿ
  ಅದೃಷ್ಟದ ಸಂಖ್ಯೆ : 2
  ಅದೃಷ್ಟದ ಸಮಯ: ಮುಂಜಾನೆ 5:00 ರಿಂದ ಮಧ್ಯಾಹ್ನ 1:55ರ ವರೆಗೆ.


 • ತುಲಾ

  ಕುಟುಂಬದಲ್ಲಿ ಕೆಲವು ಅಸ್ಥಿರತೆಯು ನಿಮ್ಮನ್ನು ಕಾಡುತ್ತದೆ. ಇದರಿಂದ ನಿಮಗೆ ಆತಂಕ ಉಂಟಾಗುವುದು. ಸಂಗಾತಿಯು ನಿಮ್ಮ ಬೆಂಬಲಕ್ಕೆ ಇರುವುದರಿಂದ ಸಮಸ್ಯೆಗಳನ್ನು ಎದುರಿಸಲು ನಿಮಗೆ ಸುಲಭವಾಗುವುದು. ಹಣಕಾಸಿನ ವಿಷಯದಲ್ಲಿ ನೀವು ಕಠಿಣ ಸಮಯವನ್ನು ಎದುರಿಸಬೇಕಾಗುವುದು. ಹಾಗಾಗಿ ನಿಮ್ಮ ಖರ್ಚುಗಳನ್ನು ಸಹ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಸುತ್ತಲಿನ ಜನರಿಂದ ಆದಷ್ಟು ಜಾಗರೂಕತೆಯಿಂದ ಇರಬೇಕು. ಕೆಲವು ವಿಷಯಗಳು ನಿಮಗೆ ಸವಾಲಾಗುತ್ತದೆ. ಅದನ್ನು ಎದುರಿಸಲು ನೀವು ಸಿದ್ಧರಾಗಿರಬೇಕು. ಪ್ರವಾಸಕ್ಕೆ ಹೋಗಲು ಮಕ್ಕಳು ಒತ್ತಾಯಿಸುವರು. ಆರೋಗ್ಯದಲ್ಲಿ ಸುಧಾರಣೆಯು ನಿಮಗೆ ನಿರಾಳತೆಯನ್ನು ತಂದುಕೊಡುವುದು. ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡರೆ ನೀವು ವ್ಯಕ್ತಿಯನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಬಹುದು.
  ಅದೃಷ್ಟದ ಬಣ್ಣ: ಗುಲಾಬಿ
  ಅದೃಷ್ಟದ ಸಂಖ್ಯೆ: 17
  ಅದೃಷ್ಟದ ಸಮಯ: ಮಧ್ಯಾಹ್ನ 12:30 ರಿಂದ ರಾತ್ರಿ 3:55ರ ವರೆಗೆ.


 • ವೃಶ್ಚಿಕ

  ಉದ್ಯಮಿಗಳಿಗೆ ಇಂದು ಉತ್ತಮವಾದ ದಿನ. ಇಂದು ನೀವು ದೊಡ್ಡ ಲಾಭವನ್ನು ಗಳಿಸುವ ಸಾಧ್ಯತೆಗಳಿವೆ. ನೀವು ನಿಮ್ಮ ಅಮೂಲ್ಯ ಸಮಯಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಿರಿ. ಹಣಕಾಸಿನ ವಿಷಯದಲ್ಲಿ ಪರಿಸ್ಥಿತಿಯು ಸುಧಾರಣೆಯಾಗುತ್ತದೆ. ಸಾಲಗಳಿಂದ ನೀವು ಮುಕ್ತರಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಭವಿಷ್ಯದ ಯೋಜನೆ ಹಾಗೂ ವಿಷಯಗಳನ್ನು ಚರ್ಚಿಸುವುದು ಸೂಕ್ತ. ಹೊಸ ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ನೀವು ನಿಮ್ಮ ಪೋಷಕರ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕಾಗುವುದು. ಅಪ್ತರೊಂದಿಗೆ ಉತ್ತಮ ಸಮಯ ಕಳೆಯುವುದರಿಂದ ಆನಂದ ದೊರೆಯುವುದು. ಕೆಲಸದ ವಿಷಯದಲ್ಲಿ ಇಂದು ಸಾಮಾನ್ಯವಾದ ದಿನವಾಗಿರುತ್ತದೆ. ಸಂಬಂಧಕ್ಕೂ ಹೆಚ್ಚಿನ ಸಮಯ ಹಾಗೂ ಆದ್ಯತೆಯನ್ನು ನೀಡುವುದು ಸೂಕ್ತ.
  ಅದೃಷ್ಟದ ಬಣ್ಣ: ನೀಲಿ
  ಅದೃಷ್ಟದ ಸಂಖ್ಯೆ: 5
  ಅದೃಷ್ಟದ ಸಮಯ: ಮಧ್ಯಾಹ್ನ 1:40 ರಿಂದ ಮಧ್ಯಾಹ್ನ 5:00ರ ವರೆಗೆ.


 • ಧನು

  ಈ ದಿನವು ನಿಮಗೆ ಪ್ರತಿಕೂಲವಾದ ಸಮಯವನ್ನು ಸೂಚಿಸುತ್ತದೆ. ಹಾಗಾಗಿ ದೂರದ ಪ್ರಯಾಣವನ್ನು ಕೈಗೊಳ್ಳದಿರಿ. ಹಣಕಾಸಿನ ವಿಷಯದಲ್ಲಿ ಕೆಲವು ಸಂಗತಿಗಳನ್ನು ನಿರ್ವಹಿಸಲು ಕಷ್ಟವಾಗುವುದು. ನೀವು ಅನಿಶ್ಚಿತತೆಯನ್ನು ನಿರ್ವಹಿಸುವುದು. ಅನುಭವಿ ವ್ಯಕ್ತಿಗಳಿಂದ ಸಲಹೆಯನ್ನು ಪಡೆಯಿರಿ. ಅದು ನಿಮಗೆ ಭವಿಷ್ಯದ ಯೋಜನೆ ಕೈಗೊಳ್ಳಲು ಅನುಕೂಲವಾಗುವುದು. ವೈಯಕ್ತಿಕ ವಿಷಯವು ನಿಮ್ಮ ವೃತ್ತಿಪರ ಜೀವನವನ್ನು ಹಾಳುಮಾಡಲು ಬಿಡದಿರಿ. ಸಂಧಿವಾತದಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು. ನೀವು ನಿಮ್ಮ ಗುರಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿ. ಭೂಮಿ ಅಥವಾ ರಿಯಲ್ ಎಸ್ಟೇಟ್ ಉದ್ಯೋಗದಲ್ಲಿ ಇರುವವರಿಗೆ ಹೆಚ್ಚಿನ ಲಾಭ ದೊರೆಯುವುದು. ಅಗತ್ಯ ಇರುವವರಿಗೆ ಅನ್ನದಾನ ಮಾಡಿ. ಆರೋಗ್ಯದ ದೃಷ್ಟಿಯಿಂದ ವಿಷಯಗಳು ಸಾಮಾನ್ಯವಾಗಿ ಇರುತ್ತವೆ.
  ಅದೃಷ್ಟದ ಬಣ್ಣ: ಕೆಂಪು
  ಅದೃಷ್ಟದ ಸಂಖ್ಯೆ: 12
  ಅದೃಷ್ಟದ ಸಮಯ: ಮುಂಜಾನೆ 6:30 ರಿಂದ ಮುಂಜಾನೆ 9:00ರ ವರೆಗೆ.


 • ಮಕರ

  ನೀವು ನಿಮ್ಮ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಚಿಂತನೆ ನಡೆಸದೆ ಇದ್ದರೆ ಅದು ನಿಮ್ಮ ವೈಫಲ್ಯಕ್ಕೆ ಕಾರಣವಾಗುವುದು. ಬುದ್ಧಿವಂತಿಕೆಯಿಂದ ಮತ್ತು ತಾಳ್ಮೆಯಿಂದ ವರ್ತಿಸಬೇಕು. ನಿಮ್ಮ ಸಂಗಾತಿಯೊಂದಿಗೆ ವಿಷಯವನ್ನು ಚರ್ಚಿಸಲು ಸಾಕಷ್ಟು ಆರಾಮದಾಯಕ ಪರಿಸ್ಥಿತಿಯನ್ನು ಪಡೆದುಕೊಳ್ಳುವರು. ಕುಟುಂಬದ ವಿಷಯದಲ್ಲಿ ದಿನವು ಸುಗಮವಾಗಿ ಹೋಗುವುದು. ಉದ್ಯಮಿಗಳು ಭಾರಿ ಲಾಭವನ್ನು ಪಡೆದುಕೊಳ್ಳುವರು. ಒಡಹುಟ್ಟಿದವರ ವರ್ತನೆ ಹಾಗೂ ಮನೋಭಾವಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ. ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸನ್ನಿವೇಶಗಳು ಸುತ್ತುವರಿದಿರುತ್ತದೆ. ಹಿಂದೆ ಪಡೆದ ಸಲಹೆಯು ಇಂದು ನಿಮಗೆ ಉಪಯೋಗಕ್ಕೆ ಬರುವುದು. ಪೋಷಕರ ನಿರೀಕ್ಷೆಯಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವರು.
  ಅದೃಷ್ಟದ ಬಣ್ಣ: ಸಾಸಿವೆ ಬಣ್ಣ
  ಅದೃಷ್ಟದ ಸಂಖ್ಯೆ: 22
  ಅದೃಷ್ಟದ ಸಮಯ: ಮಧ್ಯಾಹ್ನ 5:00 ರಿಂದ ರಾತ್ರಿ 9:00ರ ವರೆಗೆ.


 • ಕುಂಭ

  ಕೆಲಸದಲ್ಲಿ ಪ್ರಮುಖ ಕಾರ್ಯವನ್ನು ಸಾಧಿಸುವಿರಿ. ಇದರಿಂದ ಸಾಕಷ್ಟು ಪ್ರಶಂಸೆ ದೊರೆಯುವುದು. ನಿಮ್ಮ ಸಕಾರಾತ್ಮಕ ಮನೋಭಾವವು ಅದ್ಭುತವನ್ನು ಸೃಷ್ಟಿಸುತ್ತದೆ. ನಿಮಗೆ ಸಂಪೂರ್ಣ ಭಾವನೆ ಬೆಳೆಯುವಂತೆ ಮಾಡುವುದು. ನಿರ್ಗತಿಕರಿಗೆ ಸಹಾಯ ಮಾಡುವಿರಿ. ನಿಮ್ಮ ಮೇಲಾಧಿಕಾರಿಗಳಿಂದ ಅಭಿನಂದನೆ ದೊರೆಯುವುದು. ನಿಮ್ಮ ಬಗ್ಗೆ ಇತರರಲ್ಲಿ ಪ್ರಶಂಸಿಸಲು ಯೋಚಿಸುವರು. ವಿದ್ಯಾರ್ಥಿಗಳು ಪ್ರವಾಸವನ್ನು ಕೈಗೊಳ್ಳುವರು. ಆರೋಗ್ಯಕ್ಕೆ ಕುಂದನ್ನು ತರುವ ಕೆಲಸ ಹಾಗೂ ಆಹಾರದಿಂದ ದೂರ ಉಳಿಯುವುದು ಸೂಕ್ತ. ಅಧಿಕ ರಕ್ತದೊತ್ತಡ ಇರುವವರು ಒತ್ತಡದ ಸಂಗತಿ ಹಗೂ ಸಂಘರ್ಷದ ವಿಷಯದಿಂದ ದೂರ ಉಳಿಯಿರಿ. ಸಂಗಾತಿಯಲ್ಲಿರುವ ಬೆಂಬಲ ಹಾಗೂ ತಿಳುವಳಿಕೆಯ ಮನೋಭಾವವು ನಿಮಗೆ ವಿಶೇಷ ಎನಿಸುತ್ತದೆ.
  ಅದೃಷ್ಟದ ಬಣ್ಣ: ಮರೂನ್
  ಅದೃಷ್ಟದ ಸಂಖ್ಯೆ: 7
  ಅದೃಷ್ಟದ ಸಮಯ: ಮಧ್ಯಾಹ್ನ 3:00 ರಿಂದ ಸಂಜೆ 6:00ರ ವರೆಗೆ.


 • ಮೀನ

  ಕುಟುಂಬದ ವಿಷಯದಲ್ಲಿ ಇಂದು ನಿಮಗೆ ಸಂತೋಷ ಹಾಗೂ ಸಮತೋಲಿತವಾದ ದಿನ. ಈ ದಿನವು ನಿಮಗೆ ವಿಶೇಷ ಭಾವನೆಯನ್ನು ನೀಡುವುದು. ನೀವು ಬಯಸುತ್ತಿದ್ದ ವ್ಯಕ್ತಿಯೊಡನೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ನಿಮ್ಮ ಒಡಹುಟ್ಟಿದವರೊಂದಿಗೆ ನೀವು ಹಳೆಯ ತಪ್ಪು ಗ್ರಹಿಕೆಯನ್ನು ಪರಿಹರಿಸಿಕೊಳ್ಳುವಿರಿ. ಹಳೆಯ ಸಾಲದಿಂದ ಮುಕ್ತರಾಗುವಿರಿ. ಇದರಿಂದ ನೀವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಿಕೊಳ್ಳುವಿರಿ. ಪೋಷಕರ ಆರೋಗ್ಯದಲ್ಲೂ ಚೇತರಿಕೆ ಉಂಟಾಗುವುದು. ಒಳ್ಳೆಯ ಸಂಗತಿಯು ನಿಮ್ಮ ಹಾದಿಗೆ ಬರುವುದು. ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯುವುದು. ಈ ದಿನ ಅದೃಷ್ಟವು ನಿಮಗೆ ಹೆಚ್ಚಿನ ಅನುಕೂಲವನ್ನು ತಂದುಕೊಡುವುದು. ಓದುವ ಕಲೆಯು ಅಭಿವೃದ್ಧಿಯನ್ನು ತಂದುಕೊಡುವುದು. ಈಜುವುದು ಅಥವಾ ವ್ಯಾಯಾಮ ಮಾಡುವುದರಿಂದ ದಿನದ ಆರಂಭ ಮಾಡಿ.
  ಅದೃಷ್ಟದ ಬಣ್ಣ: ಬೂದು
  ಅದೃಷ್ಟದ ಸಂಖ್ಯೆ: 26
  ಅದೃಷ್ಟದ ಸಮಯ: ಮುಂಜಾನೆ 7:00 ರಿಂದ ಮುಂಜಾನೆ 10:50ರ ವರೆಗೆ.
ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ.

ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

   
 
ಹೆಲ್ತ್