Back
Home » ಬಾಲಿವುಡ್
11 ವರ್ಷದ ನಂತರ ಹುಟ್ಟುಹಬ್ಬ ಆಚರಿಸಿಕೊಂಡ ಆಶಾ ಭೋಂಸ್ಲೆ
Oneindia | 10th Sep, 2019 10:02 AM

ಹುಟ್ಟುಹಬ್ಬ ಆಚರಣೆ ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರು ಅದರಿಂದ ದೂರವಿರುತ್ತಾರೆ. ಗಾಯಕಿ ಆಶಾ ಭೋಂಸ್ಲೆ ಕೂಡ ಬರ್ತ್ ಡೇ ಆಚರಣೆಗಳನ್ನು ಮಾಡಿಕೊಳ್ಳುತ್ತಿರಲಿಲ್ಲ.

ಭಾರತದ ಖ್ಯಾತ ಗಾಯಕಿ ಆಶಾ ಭೋಂಸ್ಲೆ 11 ವರ್ಷದ ನಂತರ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ದುಬೈನಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಕನ್ನಡ ಹಾಡಿಗೆ ಮತ್ತೆ ಧ್ವನಿಯಾದ ಆಶಾ ಭೋಂಸ್ಲೆ

75 ನೇ ವರ್ಷದ ಹುಟ್ಟುಹಬ್ಬ ಮಾಡಿಕೊಂಡಿದ್ದ ಆಶಾ ಭೋಂಸ್ಲೆ ಆ ನಂತರ ಅದರಿಂದ ದೂರವಿದ್ದರು. ಆದರೆ, ಇದೀಗ ಅಭಿಮಾನಿಗಳ ಪ್ರೀತಿಗೆ ಮಣಿದು 11 ವರ್ಷದ ನಂತರ ಮತ್ತೆ ಕೇಕ್ ಕಟ್ ಮಾಡಿದ್ದಾರೆ.

ಮುಂಬೈ ಬಿಟ್ಟು ದುಬೈನಲ್ಲಿ ಹುಟ್ಟುಹಬ್ಬ ಮಾಡಿಕೊಂಡಿದ್ದಕ್ಕೂ ಒಂದು ಕಾರಣ ಇದೆ. ಪ್ರತಿ ವರ್ಷ ಬರ್ತ್ ಡೇ ಬಂದಾಗಲು ದುಬೈನ ಅಭಿಮಾನಿಗಳು ಶುಭಾಶಯ ಕೋರುವುದು, ವಿಡಿಯೋಗಳನ್ನು ಕಳಿಸುವುದು ಮಾಡುತ್ತಿದ್ದರಂತೆ. ಯಾವಾಗ ದುಬೈಗೆ ಹೋದರು ಪ್ರೀತಿ ತೋರುತ್ತಿದ್ದರಂತೆ. ಹೀಗಾಗಿ ಅವರ ಜೊತೆಗೆ ಈ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.

ದೊಡ್ಡ ಪಾರ್ಟಿಯಲ್ಲಿ, ಸಾಕಷ್ಟು ಅಭಿಮಾನಿಗಳ ನಡುವೆ, ದೊಡ್ಡ ಕೇಕ್ ಕಟ್ ಮಾಡಿದ್ದಾರೆ. ತಮ್ಮ ಜೊತೆಗೆ ಆಶಾ ಭೋಂಸ್ಲೆ ಬರ್ತ್ ಡೆ ಆಚರಣೆ ಮಾಡಿದ್ದು, ಅಭಿಮಾನಿಗಳಿಗೂ ಖುಷಿ ನೀಡಿದೆ.

ಸಾವಿರಾರು ಬಾಲಿವುಡ್ ಸಿನಿಮಾಗೆ ಹಾಡಿರುವ ಆಶಾ ಭೋಂಸ್ಲೆ ಭಾರತ ಕಂಡ ಶ್ರೇಷ್ಟ ಗಾಯಕಿಯರಲ್ಲಿ ಒಬ್ಬರು. ಸಪ್ಟೆಂಬರ್ 8, 1933 ಅವರ ಜನ್ಮ ದಿನ.

   
 
ಹೆಲ್ತ್