Back
Home » ಬಾಲಿವುಡ್
ರಾನು ಮೊಂಡಲ್ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ
Oneindia | 10th Sep, 2019 06:55 PM

ರೈಲ್ವೆ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಅವರ ಹಾಡು ಹೇಳುವ ಮೂಲಕ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ರಾನು ಮೊಂಡಲ್ ಅವರು ಮೊದಲ ಹಾಡು ಬಿಡುಗಡೆಗೆ ಸಮಯ ನಿಗದಿಯಾಗಿದೆ.

ಹಿಮೇಶ್ ರೇಶ್ಮಿಯಾ ಅವರ 'ಹ್ಯಾಪಿ ಹಾರ್ಡಿ ಮತ್ತು ಹೀರ್' ಚಿತ್ರಕ್ಕಾಗಿ ರಾನು ಮೊಂಡಲ್ ತೇರಿ ಮೇರಿ ಕಹಾನಿ...ಹಾಡು ಹಾಡಿದ್ದರು. ಈ ಹಾಡಿನ ಪ್ರೋಮೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ರಾನು ಮೊಂಡಲ್ಗೆ ಮೋಸ ಆಗ್ತಿದೆ: ಆರೈಕೆ ಮಾಡಿದವರ ವಿರುದ್ಧವೇ ಆರೋಪ

ಇದೀಗ, ಈ ಹಾಡು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 11 ರಂದು ಅದ್ಧೂರಿಯಾಗಿ ಆಡಿಯೋ ಕಾಯಕ್ರಮ ಆಯೋಜನೆ ಮಾಡಿ, ಈ ಹಾಡನ್ನ ರಿಲೀಸ್ ಮಾಡಲಾಗುತ್ತಿದೆ.

ರಾನು ಮೊಂಡಲ್ಗೆ ಹಿಮೇಶ್ ಕಡೆಯಿಂದ ಮತ್ತೊಂದು ಮೆಗಾ ಆಫರ್

ನಟ, ಗಾಯಕ, ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಅವರು ರಾನು ಮೊಂಡಲ್ ಅವರ ಪ್ರತಿಭೆ ಗುರುತಿಸಿ ಹಾಡಲು ಅವಕಾಶ ಕೊಟ್ಟಿದ್ದರು. ಈ ಹಾಡಿನ ಪ್ರೋಮೋ ನೋಡಿಯೇ ಜನ ಫುಲ್ ಥ್ರಿಲ್ ಆಗಿದ್ದರು.

ಅಂದ್ಹಾಗೆ, ಹಿಮೇಶ್ ರೇಶ್ಮಿಯಾ ಅವರು ರಾನು ಮೊಂಡಲ್ ಅವರಿಂದ ಒಂದು ಹಾಡು ಮಾತ್ರವಲ್ಲ, ಒಟ್ಟು ಮೂರು ಹಾಡುಗಳನ್ನ ಹಾಡಿಸಿದ್ದಾರೆ. ಅದರಲ್ಲಿ ತೇರಿ ಮೇರಿ ಕಹಾನಿ ದೊಡ್ಡ ಸದ್ದು ಮಾಡಿತ್ತು.

   
 
ಹೆಲ್ತ್