Back
Home » ಸಮ್ಮಿಲನ
ಬುಧವಾರದ ದಿನ ಭವಿಷ್ಯ (11-09-2019)
Boldsky | 11th Sep, 2019 09:44 AM
 • ಮೇಷ ರಾಶಿ: 21 ಮಾರ್ಚ್-19 ಏಪ್ರಿಲ್

  ದಿನದ ಆರಂಭದಲ್ಲಿ ನೀವು ಕೆಲವು ಗೊಂದಲವನ್ನು ಎದುರಿಸಬೇಕಾಗುವುದು. ಇಂದು ನೀವು ನಿಮ್ಮ ಆರೋಗ್ಯದ ಕಡೆಗೂ ಕೊಂಚ ಗಮನ ನೀಡಬೇಕು. ಕೆಲಸದಲ್ಲಿ ಒತ್ತಡ ಇಲ್ಲದೆ ಇರುವುದರಿಂದ ನಿಮ್ಮ ಕಾರ್ಯವನ್ನು ಮುಂದೂಡದಿರಿ. ನೀವು ಕೆಲಸವನ್ನು ಕಟ್ಟುನಿಟ್ಟಾಗಿ ನಿಭಾಯಿಸುವುದನ್ನು ಕಲಿಯಬೇಕು. ಇಲ್ಲವಾದರೆ ಕಷ್ಟವನ್ನು ಎದುರಿಸಬೇಕಾಗುವುದು. ಎಣ್ಣೆ ಮತ್ತು ಮಸಾಲ ಭರಿತ ಆಹಾರವನ್ನು ಸೇವಿಸದಿರಿ. ಆದಷ್ಟು ಲಘು ಆಹಾರವನ್ನು ಸೇವಿಸಿ. ಅದು ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಡುವುದು. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕೊಂಚ ಚಿಂತೆಯನ್ನು ಮಾಡುವಿರಿ. ಕುಟುಂಬದ ಸಲುವಾಗಿ ದುಬಾರಿ ವಸ್ತುವನ್ನು ಖರೀದಿಸುವ ಸಾಧ್ಯತೆಗಳಿವೆ. ಆದರೂ ವೈಯಕ್ತಿಕ ವಿಷಯದಲ್ಲಿ ಕೆಲವು ಗಲಭೆಗಳು ನಿಮ್ಮನ್ನು ಅಲ್ಲಾಡಿಸುವ ಸಾಧ್ಯತೆಗಳಿವೆ.
  ಅದೃಷ್ಟದ ಬಣ್ಣ: ತಿಳಿ ಗುಲಾಬಿ
  ಅದೃಷ್ಟದ ಸಂಖ್ಯೆ: 34
  ಅದೃಷ್ಟದ ಸಮಯ: ಮುಂಜಾನೆ 5:25 ರಿಂದ ಮಧ್ಯಾಹ್ನ 2:15


 • ವೃಷಭ ರಾಶಿ: 20 ಏಪ್ರಿಲ್ -20 ಮೇ

  ಇಂದು ವಿದ್ಯಾರ್ಥಿಗಳಿಗೆ ಪ್ರಕಾಶಮಾನವಾದ ಮತ್ತು ಅನುಕೂಲಕರವಾದ ದಿನ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವರು. ನೀವು ಅದ್ಭುತ ಪ್ರದರ್ಶನ ನೀಡುತ್ತೀರಿ. ಉದ್ಯಮಿಗಳು ಭಾರಿ ಲಾಭವನ್ನು ಗಳಿಸುವರು. ಕುಟುಂಬದಿಂದ ಬಂದ ಆನುವಂಶಿಕ ವ್ಯವಹಾರವನ್ನು ಮುಂದುವರಿಸುವಿರಿ. ಉದ್ಯೋಗ ಬದಲಾವಣೆಯ ಬಗ್ಗೆಯೂ ಮನಸ್ಸಿನಲ್ಲಿ ಚಿಂತಿಸುವಿರಿ. ಕೆಲವು ಒಪ್ಪಂದಗಳಿಂದ ಹೊರಗೆ ಬಂದರೆ ಉತ್ತಮ ತಿರುವನ್ನು ಪಡೆದುಕೊಳ್ಳುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ಅನುಕೂಲಕರ ಪರಿಸ್ಥಿತಿಯನ್ನು ಎದುರಿಸುವಿರಿ. ಆರ್ಥಿಕ ಸಂಗತಿಗೆ ಸಂಬಂಧಿಸಿದಂತೆ ಹಿರಿಯರೊಂದಿಗೆ ಚರ್ಚಿಸಿ. ನಿಮಗೆ ಶುಭವಾಗುವುದು. ನಿಮ್ಮ ಪ್ರೇಮಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ.
  ಅದೃಷ್ಟದ ಬಣ್ಣ: ಕೆಂಪು
  ಅದೃಷ್ಟದ ಸಂಖ್ಯೆ 10
  ಅದೃಷ್ಟದ ಸಮಯ: ಮಧ್ಯಾಹ್ನ 1:55 ರಿಂದ ಸಂಜೆ 6:50ರ ವರೆಗೆ.


 • ಮಿಥುನ ರಾಶಿ: 21 ಮೇ-20 ಜೂನ್

  ಕಾನೂನಿಗೆ ಸಂಬಂಧಿಸಿದ ಹೋರಾಟಗಳಿಂದ ದೂರ ಉಳಿಯುವಿರಿ. ಇಂದು ಕೆಲವು ಸಂಗತಿಯಲ್ಲಿ ಅನುಕೂಲಕರ ಪರಿಸ್ಥಿತಿಯನ್ನು ಎದುರಿಸುವಿರಿ. ಹಣಕಾಸಿನ ಸ್ಥಿತಿಯು ಸುಧಾರಣೆಯನ್ನು ತೋರುವುದು. ಹೊಸ ವಾಹನ ಖರೀದಿಗೆ ಮುಂದಾಗಬಹುದು. ಕುಟುಂಬದಲ್ಲಿ ಏಕತೆ ಹಾಗೂ ಬಂಧವು ವಿಶೇಷವಾಗಿರುತ್ತದೆ. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಕಾಣುವುದು ಅದು ನಿಮಗೆ ಸಂತೋಷವನ್ನು ತಂದುಕೊಡುವುದು. ಒಡಹುಟ್ಟಿದವರ ಸಹಕಾರದಿಂದ ಸಂತೋಷ ದೊರೆಯುವುದು. ಕುಟುಂಬದ ವಿಷಯದಲ್ಲಿ ಏರಿಳಿತವನ್ನು ಎದುರಿಸುವಿರಿ. ಇದು ದಂಪತಿಗಳ ನಡುವೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ನವವಿವಾಹಿತ ದಂಪತಿಗಳ ನಡುವೆ ಕೆಲವು ಬದ್ಧತೆ ಹುಟ್ಟಿಕೊಳ್ಳುವುದು. ಕೆಲವು ತುರ್ತು ಕೆಲಸದಿಂದಾಗಿ ಪ್ರಯಾಣವು ರದ್ದಾಗಬಹುದು.
  ಅದೃಷ್ಟದ ಬಣ್ಣ: ಬಿಳಿ
  ಅದೃಷ್ಟದ ಸಂಖ್ಯೆ 12
  ಅದೃಷ್ಟದ ಸಮಯ: ಮುಂಜಾನೆ 8:30 ರಿಂದ ಮಧ್ಯಾಹ್ನ 12:50ರ ವರೆಗೆ.


 • ಕರ್ಕ ರಾಶಿ: 21 ಜೂನ್- 22 ಜುಲೈ

  ಹೆತ್ತವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಿರಿ. ಇದರಿಂದ ಒಂದಿಷ್ಟು ಒತ್ತಡವು ದೂರವಾಗುವುದು. ನಿಮ್ಮ ಸಮಸ್ಯೆಗಳ ನಿವಾರಣೆಗೆ ಅವರು ಸಹಾಯ ಮಾಡುವರು. ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ವೈದ್ಯರ ಭೇಟಿಯಾಗುವಿರಿ. ಕುಟುಂಬದಲ್ಲಿ ಉಂಟಾಗುವ ಕೆಲವು ವಾದಗಳು ಆತಂಕವನ್ನು ಸೃಷ್ಟಿಸುವುದು. ಒಡಹುಟ್ಟಿದವರು ನಿಮಗೆ ಕೆಲವು ನಿರಾಸೆಯನ್ನು ಹುಟ್ಟಿಸಬಹುದು. ಅದು ಎಲ್ಲರಿಗೂ ಅನಿರೀಕ್ಷಿತವಾಗಿ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಪ್ರಯತ್ನ ಪಡುವರು. ಜನರನ್ನು ನಿಮ್ಮ ಇಷ್ಟದಂತೆ ನಿರ್ನಯಿಸದಿರಿ. ಪರಿಸ್ಥಿತಿ ಹದಗೆಡಬಹುದು. ಪ್ರೇಮಿಯೊಂದಿಗೆ ಲಾಂಗ್ ಡ್ರೈವ್ ಹೋಗುವಿರಿ. ಅದರಿಂದ ಒಂದಷ್ಟು ಖುಷಿಯನ್ನು ಪಡೆದುಕೊಳ್ಳುವಿರಿ.
  ಅದೃಷ್ಟದ ಬಣ್ಣ: ಆಕಾಶ ನೀಲಿ
  ಅದೃಷ್ಟದ ಸಂಖ್ಯೆ 10
  ಅದೃಷ್ಟದ ಸಮಯ: ಬೆಳಿಗ್ಗೆ 9:00 ರಿಂದ ರಾತ್ರಿ 10:00ರ ವರೆಗೆ.


 • ಸಿಂಹ ರಾಶಿ: 23 ಜುಲೈ-22 ಆಗಸ್ಟ್

  ಇಂದು ನೀವು ಹಣಕಾಸಿನ ಸಮಸ್ಯೆಯನ್ನು ಎದುರಿಸಬಹುದು. ಹಾಗಾಗಿ ಬುದ್ಧಿವಂತಿಕೆಯಿಂದ ಹಣವನ್ನು ವ್ಯಯಿಸಿ. ಅನಗತ್ಯ ವಸ್ತುಗಳಿಗೆ ಆಕರ್ಷಿತರಾಗದಿರಿ. ಕಠಿಣ ಪರಿರ್ಶರಮವು ನಿಮಗೆ ನಿಮ್ಮ ಗುರಿಯೆಡೆಗೆ ಸಾಗಲು ಅನುವು ಮಾಡಿಕೊಡುತ್ತದೆ. ಆರೋಗ್ಯದಲ್ಲಿ ಉಂಟಾಗುವ ಸುಧಾರಣೆಯು ನಿಮ್ಮ ಗುರಿಯೆಡೆಗೆ ಸಾಗಲು ಇನ್ನಷ್ಟು ಉತ್ತೇಜನ ನೀಡುವುದು. ಸಂಗಾತಿಯೊಂದಿಗೆ ಸಾಕಷ್ಟು ವಿಷಯಗಳ ಬಗ್ಗೆ ಹಂಚಿಕೊಂಡರೆ ಅದು ನಿಮಗೆ ಅತ್ಯಂತ ಖುಷಿ ಹಾಗೂ ಸಂತೋಷವನ್ನು ತಂದುಕೊಡುವುದು. ಪೋಷಕರು ಸಹ ನಿಮ್ಮೊಂದಿಗೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸುವರು. ಹಣದ ವಿಚಾರದಲ್ಲಿ ಹೆಚ್ಚು ಜಾಗ್ರತೆಯಿಂದ ಇರಬೇಕು. ಸಾಲ ನೀಡುವುದು ಅಥವಾ ಪಡೆಯುವ ಕೆಲಸಕ್ಕೆ ಮುಂದಾಗದಿರಿ.
  ಅದೃಷ್ಟದ ಬಣ್ಣ: ಹಳದಿ
  ಅದೃಷ್ಟದ ಸಂಖ್ಯೆ 40
  ಅದೃಷ್ಟದ ಸಮಯ: ಮುಂಜಾನೆ 8:00 ರಿಂದ ಸಂಜೆ 5:00ರ ವರೆಗೆ.


 • ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್

  ನವ ವಿವಾಹಿತರು ಪ್ರೀತಿಯ ಗಾಳಿಯಲ್ಲಿ ತೇಲುವರು. ವಿವಾಹ ಆಗಲು ಬಯಸುವವರಿಗೆ ಇದು ಉತ್ತಮ ಸಮಯ. ಪೋಷಕರು ನಿಮ್ಮ ಸಂಬಂಧವನ್ನು ಒಪ್ಪಿಕೊಳ್ಳುವರು. ದಾಂಪತ್ಯದಲ್ಲಿ ಪರಸ್ಪರ ಉತ್ತಮ ಭಾವನೆ ಹಾಘೂ ಗೌರವಗಳಿರುವುದರಿಂದ ತಮ್ಮ ತಪ್ಪುಗಳನ್ನು ಸಹ ತಿದ್ದಿಕೊಳ್ಳುವರು. ನಿಮ್ಮ ಕೆಲವು ಹಣಕಾಸಿನ ಸಮಸ್ಯೆಗಳು ತೆರವುಗೊಳ್ಳುತ್ತವೆ. ಹಣಕಾಸಿನ ಬಿಕ್ಕಟ್ಟನ್ನು ಸಹ ಎದುರಿಸುವ ಸಾಧ್ಯತೆಗಳಿವೆ. ಸಮಾಜ ಸೇವೆಯ ಕೆಲಸ ನಿರ್ವಹಿಸುವವರಿಗೆ ಉತ್ತಮ ಲಾಭ ಉಂಟಾಗುವುದು. ವಿದ್ಯಾರ್ಥಿಗಳು ಉತ್ತಮ ಬೋಧನೆಯನ್ನು ಪಡೆದುಕೊಳ್ಳುವರು. ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವರು. ನಿಮ್ಮ ಪರಿಚಯಸ್ತರು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವರು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.
  ಅದೃಷ್ಟದ ಬಣ್ಣ: ನೀಲಿ
  ಅದೃಷ್ಟದ ಸಂಖ್ಯೆ 29
  ಅದೃಷ್ಟದ ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:20ರವರೆಗೆ.


 • ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್

  ಬಹಳ ಸಮಯದ ನಂತರ ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಂತೋಷದ ಕ್ಷಣವನ್ನು ಕಳೆಯುವಿರಿ. ನಿಮ್ಮಿಬ್ಬರಿಗೂ ಹೆಚ್ಚು ಸಂತೋಷವನ್ನು ತಂದುಕೊಡುವುದು. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಗೌರವ ದೊರೆಯುವುದು. ಮಕ್ಕಳು ಶಿಕ್ಷಣದ ವಿಷಯದಲ್ಲಿ ಹೆಚ್ಚು ಮಗ್ನರಾಗಿರುತ್ತಾರೆ. ನಿಮ್ಮ ಆಪ್ತರ ಸಂಬಂಧಿಕರ ಆರೋಗ್ಯದಲ್ಲಿ ಗಂಭೀರತೆ ಕಾಣಿಸಿಕೊಳ್ಳುವುದು. ಉದ್ಯಮಿಗಳು ಭಾರಿ ಲಾಭವನ್ನು ಗಳಿಸುವರು. ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಸವಾಲಿನ ಸಂಗತಿಯನ್ನು ಎದುರಿಸಬೇಕಾಗುವುದು. ಇದು ವೃತ್ತಿಪರ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ನಿಮ್ಮ ಸೃಜನ ಶೀಲ ಸ್ವಭಾವದ ಬಗ್ಗೆ ಮಾತನಾಡುವಿರಿ. ಸ್ನೇಹಿತರೊಂದಿಗೆ ನೀವು ನಿಮ್ಮ ಭಾವನೆಯನ್ನು ಹಂಚಿಕೊಳ್ಳುವುದರಿಂದ ಮಾನಸಿಕ ಒತ್ತಡವು ನಿವಾರಣೆಯಾಗುವುದು. ಮಾನಸಿಕವಾಗಿ ಹೆಚ್ಚು ನಿರಾಳತೆಯನ್ನು ಅನುಭವಿಸುವಿರಿ.
  ಅದೃಷ್ಟದ ಬಣ್ಣ: ರಕ್ತ ಕೆಂಪು
  ಅದೃಷ್ಟದ ಸಂಖ್ಯೆ: 17
  ಅದೃಷ್ಟದ ಸಮಯ: ಮಧ್ಯಾಹ್ನ 12:00 ರಿಂದ 2:30ರ ವರೆಗೆ.


 • ವೃಶ್ಚಿಕ ರಾಶಿ: 23 ಅಕ್ಟೋಬರ್ -21 ನವೆಂಬರ್

  ಇಂದು ನೀವು ನಿಮ್ಮ ಕೋಪ ಮತ್ತು ಕಿರಿಕಿರಿಯ ಸ್ವಭಾವದ ಬಗ್ಗೆ ಚಿಂತನೆನಡೆಸುವಿರಿ. ನಿಮ್ಮ ನಡವಳಿಕೆಯೇ ನಿಮಗೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟುಮಾಡುವುದು. ಇದು ನಿಮ್ಮ ಕುಟುಂಬದವರಿಗೆ ಹಾಗೂ ಆಪ್ತರಿಗೆ ಕಳವಳದ ಸಂಗತಿಯಾಗಿರುತ್ತದೆ. ವೃತ್ತಿ ಜೀವನದ ಭವಿಷ್ಯವು ಇಂದು ನಿಮಗೆ ಪ್ರಕಾಶಮಾನವಾಗಿರುತ್ತದೆ. ಕೆಲಸ ಪಡೆದುಕೊಳ್ಳುವವರಿಗೆ ಇಂದು ಅತ್ಯಂತ ಅದೃಷ್ಟದ ದಿನವಾಗುವುದು. ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುವವರು ಅತ್ಯಂತ ಅದೃಷ್ಟವನ್ನು ಅನುಭವಿಸುವರು. ಇಂದು ನಿಮಗೆ ಹೂಡಿಕೆಗೆ ಉತ್ತಮವಾದ ಸಮಯ. ಹಣಕಾಸಿಗೆ ಸಂಬಂಧಿಸಿದಂತೆ ವಿಷಯಗಳು ಸುಗಮವಾಗಿರುತ್ತವೆ. ಸುರಕ್ಷಿತವಾದ ಭವಿಷ್ಯವನ್ನು ಪಡೆದುಕೊಳ್ಳಲು ನೀವು ನಿಮ್ಮ ಆಯವ್ಯಯದ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಆಯೋಜಿಸಬೇಕು. ನಿರಂತರವಾದ ನಿಮ್ಮ ಕೆಲಸವು ಕುಟುಂಬಕ್ಕೆ ತೊಂದರೆಯನ್ನು ಉಂಟುಮಾಡುವುದು. ನೀವು ನಿಮ್ಮ ಕೆಲಸಕ್ಕೆ ನೀಡುವಷ್ಟೇ ಪ್ರಾಶಸ್ತ್ಯವನ್ನು ಕುಟುಂಬದವರಿಗೆ ಹಾಗೂ ಹಿರಿಯರಿಗೆ ನೀಡಬೇಕು.
  ಅದೃಷ್ಟದ ಬಣ್ಣ: ಕೆನ್ನೇರಳೆ
  ಅದೃಷ್ಟದ ಸಂಖ್ಯೆ: 4
  ಅದೃಷ್ಟದ ಸಮಯ: ಮುಂಜಾನೆ 10:00 ರಿಂದ ಮಧ್ಯಾಹ್ನ 12:55ರ ವರೆಗೆ.


 • ಧನು ರಾಶಿ: 22 ನವೆಂಬರ್-21 ಡಿಸೆಂಬರ್

  ವೃತ್ತಿ ಕ್ಷೇತ್ರದಲ್ಲಿ ನಿಮ್ಮ ವ್ಯಂಗ್ಯ ಮತ್ತು ಅಸಡ್ಡೆಯ ವರ್ತನೆಯಿಂದ ನೀವು ಟೀಕೆಯನ್ನು ಎದುರಿಸಬೇಕಾಗುವುದು. ನಿಗದಿ ಪಡಿಸಿದ ಕಾರ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದನ್ನು ಕಲಿಯಿರಿ. ಇಲ್ಲವಾದರೆ ವಿಷಯವನ್ನು ನಿರ್ವಹಿಸಲು ನಿಮಗೆ ಕಷ್ಟವಾಗುವುದು. ಪೋಷಕರ ಆರೋಗ್ಯದಲ್ಲಿ ಸುಧಾರಣೆ ಆಗುವುದು ನಿಮಗೆ ಉತ್ತಮ ಸ್ಥಿತಿಯನ್ನು ತಂದುಕೊಡುವುದು. ನೀವು ನಿಮ್ಮ ಸಂಗಾತಿಯೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಲು ಹಾಗೂ ವಿಷಯಗಳನ್ನು ಮಾತನಾಡಲು ಬಯಸುವಿರಿ. ಆದರೆ ನಿಮಗೆ ಸೂಕ್ತ ಸಮಯ ದೊರೆಯದು. ನಿಮ್ಮ ಒಡಹುಟ್ಟಿದವರು ನಿಮ್ಮ ಕುಟುಂಬಕ್ಕೆ ಕಾಳಜಿ ತೋರುವರು. ಉದ್ಯೋಗಿಗಳು ಸಾಧನೆ ಮಾಡಲು ಹೆಚ್ಚು ಶ್ರಮಪಡಬೇಕಾಗುವುದು. ಕುಟುಂಬದ ಜೊತೆಗೆ ಸಣ್ಣ ಪ್ರವಾಸವನ್ನು ಕೈಗೊಳ್ಳಿ. ಪ್ರೇಮಿಗಳು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಹಾಗೂ ಮನೋರಂಜನೆಯನ್ನು ಪಡೆದುಕೊಳ್ಳುವರು.
  ಅದೃಷ್ಟದ ಬಣ್ಣ: ಕ್ರೀಮ್
  ಅದೃಷ್ಟದ ಸಂಖ್ಯೆ: 6
  ಅದೃಷ್ಟದ ಸಮಯ: ಮುಂಜಾನೆ 5:50 ರಿಂದ ರಾತ್ರಿ 8:18ರ ವರೆಗೆ.


 • ಮಕರ ರಾಶಿ: 22 ಡಿಸೆಂಬರ್ ಮತ್ತು 19 ಜನವರಿ

  ಸ್ವಲ್ಪ ಸಮಯದ ವರೆಗೆ ನಿಮ್ಮನ್ನು ಕಾಡುವ ಸಮಸ್ಯೆಗಳಿಗೆ ಚಿಂತನೆ ನಡೆಸುವಿರಿ. ನಂತರ ಪರಿಹಾರವನ್ನು ಕಂಡುಕೊಳ್ಳುವಿರಿ. ನಿಮಗೆ ಕೆಲವು ಸಂಗತಿಗಳಿಗೆ ಇಂದು ಪೋಷಕರ ಸಲಹೆ ಅಗತ್ಯವಾಗಿರುತ್ತದೆ. ನೀವು ನಿಮ್ಮ ಸಂಗಾತಿಯೊಂದಿಗೆ ವಿಶೇಷ ವಿಷಯದ ಬಗ್ಗೆ ಚರ್ಚೆ ನಡೆಸುವಿರಿ. ಎಲ್ಲರನ್ನು ನೀವು ಕುರುಡಾಗಿ ನಂಬಲು ಹೋಗದಿರಿ. ಅದು ನಿಮಗೆ ನಿರಾಸೆಯನ್ನು ಮೂಡಿಸುವುದು. ಮಕ್ಕಳು ನಿಮ್ಮಲ್ಲಿ ದುಬಾರಿ ವಸ್ತುಗಳ ಬಗ್ಗೆ ಬೇಡಿಕೆಯನ್ನು ಇಡಬಹುದು. ಕಲೆ ಮತ್ತು ಸಂಸ್ಕøತಿಯ ಬಗ್ಗೆ ಹೆಚ್ಚಿನ ಸಕ್ತಿಯನ್ನು ತೋರುವರು. ಬಹಳ ಸಮಯದ ನಂತರ ಈಗ ಹಣಕಾಸಿನ ಬಿಕ್ಕಟ್ಟನ್ನು ಹೊಂದುತ್ತಿದ್ದೀರಿ. ನಿಮ್ಮ ಹಿಂದಿನ ಬಾಕಿಯನ್ನು ತೆರವುಗೊಳಿಸಲು ಸಾಧ್ಯವಾಗುತ್ತದೆ. ಹಣಕಾಸಿಗೆ ಸಂಬಂಧಿಸಿದಂತೆ ನಿಮ್ಮ ಆಪ್ತರು ಹಾಗೂ ಸ್ನೇಹಿತರು ನಿಮ್ಮಿಂದ ಹಣವನ್ನು ಎರವಲು ಪಡೆಯುವರು.
  ಅದೃಷ್ಟದ ಬಣ್ಣ: ಗಾಢ ನೀಲಿ
  ಅದೃಷ್ಟದ ಸಂಖ್ಯೆ: 10
  ಅದೃಷ್ಟದ ಸಮಯ: ಮುಂಜಾನೆ 10:00 ರಿಂದ ಮಧ್ಯಾಹ್ನ 12:00ರ ವರೆಗೆ.


 • ಕುಂಭ ರಾಶಿ: 20 ಜನವರಿ -18 ಫೆಬ್ರುವರಿ

  ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆಯನ್ನು ಪಡೆದುಕೊಳ್ಳುವಿರಿ. ನಿಮ್ಮ ಸಾಧನೆಯು ನಿಮಗೆ ಹೆಮ್ಮೆಯನ್ನು ತಂದುಕೊಡುತ್ತದೆ. ವೃತ್ತಿಪರ ಪ್ರಾವೀಣ್ಯತೆಯ ಪ್ರಶಸ್ತಿಯು ನಿಮಗೆ ಆಶ್ಚರ್ಯವನ್ನುಂಟುಮಾಡುತ್ತದೆ. ನಿಮ್ಮ ಕೆಲಸವು ನಿಮ್ಮ ಮೇಲಾಧಿಕಾರಿಗಳಿಗೆ ಅತ್ಯಂತ ಸಂತೋಷವನ್ನು ತಂದುಕೊಡುವುದು. ನಿಮ್ಮ ಕುಟುಂಬದವರು ಸಹ ನಿಮ್ಮ ಯಶಸ್ಸಿಗೆ ಸಂತೋಷವನ್ನು ವ್ಯಕ್ತಪಡಿಸುತ್ತದೆ. ಅನೇಕ ದಿನಗಳ ನಂತರ ಹಣಕಾಸಿನ ಬಿಕ್ಕಟ್ಟಿನಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಿದ್ದೀರಿ. ಉದ್ಯಮಿಗಳು ಸಹ ಅದ್ಭುತ ಲಾಭವನ್ನು ಪಡೆದುಕೊಳ್ಳುವರು. ಮಕ್ಕಳು ಸಹ ನಿರಾಳ ಭಾವನೆಯನ್ನು ಹೊಂದಿರುತ್ತಾರೆ. ನೀವು ನಿದ್ರಾ ಹೀನತೆಯಿಂದ ಬಳಲುತ್ತಿದ್ದರೆ ದಿನದ ಆರಂಭವನ್ನು ವ್ಯಾಯಾಮದಿಂದ ಪ್ರಾರಂಭಿಸಿ.
  ಅದೃಷ್ಟದ ಬಣ್ಣ: ಕಂದು
  ಅದೃಷ್ಟದ ಸಂಖ್ಯೆ: 19
  ಅದೃಷ್ಟದ ಸಮಯ: ಮಧ್ಯಾಹ್ನ 3:00 ರಿಂದ ಸಂಜೆ 9:00ರ ವರೆಗೆ.


 • ಮೀನ ರಾಶಿ: 19 ಫೆಬ್ರುವರಿ- 20 ಮಾರ್ಚ್

  ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಶುಭದಿನ. ನಿಮ್ಮ ಹಿರಿಯರಿಂದ ಪೂರ್ವಜರ ಆಸ್ತಿ ದೊರೆಯುವುದು. ನೀವು ಮಾಡಿರುವ ಹೂಡಿಕೆಯಿಂದಲೂ ಉತ್ತಮ ಲಾಭ ದೊರೆಯುವುದು. ಕಾರ್ಪೊರೇಟ್ ವಲಯದಲ್ಲಿ ಇರುವವರು ಕೆಲಸಕ್ಕಾಗಿ ಪ್ರಯಾಣವನ್ನು ಕೈಗೊಳ್ಳಬಹುದು. ವೈಯಕ್ತಿಕ ವಿಷಯದಲ್ಲೂ ಇಂದು ನಿಮಗೆ ಹೆಚ್ಚಿನ ಸಂತೋಷ ದೊರೆಯುವುದು. ಒಡಹುಟ್ಟಿದವರು ಕೆಲವು ವಿಷಯದಲ್ಲಿ ಸ್ವಾರ್ಥ ಬುದ್ಧಿಯನ್ನು ತೋರಬಹುದು. ನಿಮ್ಮ ಮಕ್ಕಳನ್ನು ನೀವು ನಿಯಂತ್ರಿಸಲು ಒಂದಿಷ್ಟು ತೊಂದರೆಯನ್ನು ಎದುರಿಸಬೇಕಾಗುವುದು. ನಿರ್ಧಾರವನ್ನು ಕೈಗೊಳ್ಳುವ ಮೊದಲು ನಿಮ್ಮ ಹಿರಿಯರ ಸಲಹೆ ಹಾಗೂ ಸಹಕಾರವನ್ನು ಪಡೆದುಕೊಳ್ಳಿ.
  ಅದೃಷ್ಟದ ಬಣ್ಣ : ಮೆರೂನ್
  ಅದೃಷ್ಟದ ಸಂಖ್ಯೆ: 26
  ಅದೃಷ್ಟದ ಸಮಯ: ಸಂಜೆ 7:00 ರಿಂದ ರಾತ್ರಿ 11:00ರ ವರೆಗೆ.
ಬುಧವಾರದ ದಿನ ಸೃಷ್ಟಿ ರಕ್ಷಕ ವಿಷ್ಣುವಿನ ದಿನ. ಮಹಾವಿಷ್ಣು ಯಾವಾಗ ಧರ್ಮ ನಾಶವಾಗುತ್ತದೆಯೋ, ಅಧರ್ಮ ಮಿತಿ ವೀರುತ್ತದೆಯೋ ಆಗ ವಿಷ್ಣು ನಾನಾ ಅವತಾರ ಎತ್ತುತ್ತಾನೆ. ಶಿಷ್ಟ ರಕ್ಷಣೆಗಾಗಿ ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮ ಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತಾನೆ. ಇದು ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀ ಕೃಷ್ಣನೇ ಹೇಳಿರುವ ಮಾತು. ಈ ಮಾತಿನಂತೆ ಶ್ರೀ ಮಹಾವಿಷ್ಣು ದುಷ್ಟ ಶಕ್ತಿಯ ನಾಶಕ್ಕಾಗಿ ಧರ್ಮರಕ್ಷಣೆಗಾಗಿ ಕಾಲಕಾಲಕ್ಕೆ ಭೂಮಿಯ ಮೇಲೆ ಹತ್ತು ಅವತಾರಗಳನ್ನು ತಳೆದಿದ್ದಾನೆ.ಇದೇ ವಿಷ್ಣುವಿನ ದಶಾವತಾರ.

ವಿಷ್ಣುವಿನ ದಶವತಾರಗಳು, ಮತ್ಸ್ಯಾವತಾರ,ಕೂರ್ಮಾವತಾರ,ವರಹಾವತಾರ, ನರಸಿಂಹವತಾರ, ಪರಶುರಾಮನವತಾರ, ರಾಮಾವತಾರ ,ಕೃಷ್ಣಾವತಾರ, ಬುದ್ದಾವತಾರ ಮತ್ತು ಕಲ್ಕಿವತಾರ. ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು,ಸಕಲ ಲೋಕಗಳ ಪಾಲಕ ಎಂದು ಭಗವದ್ಗೀತೆಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ'.ನಾರಾಯಣ ಎಂದೂ ಕರೆಯುತ್ತಾರೆ. ಧರ್ಮಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ. ಕೀರ್ತಿನಾರಾಯಣನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

   
 
ಹೆಲ್ತ್