Back
Home » Business
ಹೊಸ ಟ್ರಾಫಿಕ್ ನಿಯಮ: ದಂಡದಿಂದ ತಪ್ಪಿಸಿಕೊಳ್ಳಲು ಡಿಜಿಲಾಕರ್, ಎಂಪರಿವಾಹನ್ ಬಳಸಿ
Good Returns | 11th Sep, 2019 11:17 AM
 • ಡಿಜಿಲಾಕರ್ ಅಥವಾ ಎಂಪರಿವಾಹನ್ ಆಪ್

  ಸೆಪ್ಟೆಂಬರ್‌ 1, 2019 ರಿಂದ ಮೋಟಾರು ವಾಹನ ಕಾಯಿದೆ (ತಿದ್ದುಪಡಿ), 2019 ಜಾರಿಗೆ ಬಂದಿದ್ದು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಭಾರೀ ದಂಡ ವಿಧಿಸಲಾಗಿದ್ದು, ದೇಶಾದ್ಯಂತ ಅನೇಕ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಗೆ ಸಾವಿರಾರು ರೂ.ಗಳಷ್ಟು ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದೆ.


 • ಆಪ್ ನಲ್ಲಿ ಸಂಗ್ರಹಿಸಿಡಬೇಕು

  ವಾಹನ ಚಾಲಕರು ಡಿಜಿಟಲ್ ದಾಖಲೆಗಳನ್ನು ಸಲ್ಲಿಸಬಹುದು. ಡಿಜಿಟಲ್ ದಾಖಲೆಗಳು ಸ್ಕ್ಯಾನ್ ಮಾಡಿದ ನಕಲು ಅಥವಾ ಚಾಲನಾ ಪರವಾನಗಿ, ಆರ್ಸಿ (ನೋಂದಣಿ ಪ್ರಮಾಣಪತ್ರ) ಅಥವಾ ವಿಮೆಯ ಫೋಟೋ ಎಂದರ್ಥವಲ್ಲ. ಅವುಗಳನ್ನು ಡಿಜಿಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಿಡಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.


 • ನಿಯಮ ಉಲ್ಲಂಘನೆ ಹೊಸ ದಂಡ

  ಹೊಸ ಮೋಟಾರು ವಾಹನ ಕಾಯ್ದೆಯ ಪ್ರಕಾರ ರಸ್ತೆ ನಿಯಮ ಉಲ್ಲಂಘನೆಗಾಗಿ ದಂಡ (ಸೆಪ್ಟೆಂಬರ್ 1, 2019)
  - ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು - ರೂ. 500 ರಿಂದ ರೂ. 5,000
  - ಅರ್ಹತೆ ಇಲ್ಲದೆ ಚಾಲನೆ - ರೂ. 500 ರಿಂದ ರೂ. 10,000
  - ಅತೀ ವೇಗದ ಚಾಲನೆ - ರೂ. 400 ರಿಂದ ರೂ. 1,000 ಎಲ್‌ಎಂವಿ(ಲಘು ಮೋಟಾರು ವಾಹನಗಳು) - ಅತಿ ವೇಗದ ಚಾಲನೆ - 2,000 ರೂ (ಮಧ್ಯಮ ಪ್ರಯಾಣಿಕ ವಾಹನಗಳು)
  - ಸೀಟ್ ಬೆಲ್ಟ್ ಇಲ್ಲದೆ ಚಾಲನೆ - ರೂ. 100 ರಿಂದ ರೂ. 1,000
ಸೆಪ್ಟೆಂಬರ್ 1 ರಿಂದ ಹೊಸ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದಾಗಿನಿಂದ, ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ಸಂಬಂಧಿತ ದಾಖಲೆಗಳನ್ನು ತರಲು ಮರೆತಿದ್ದಕ್ಕಾಗಿ ವಾಹನ ಚಾಲಕರು ಭಾರಿ ದಂಡವನ್ನು ಪಾವತಿಸುತ್ತಿದ್ದಾರೆ. ನಿಮ್ಮ ಎಲ್ಲಾ ದಾಖಲೆಗಳು ಕ್ರಮಬದ್ದವಾಗಿದ್ದರೆ ಹೊಸ ಸಂಚಾರ ನಿಯಮಗಳ ಅಡಿಯಲ್ಲಿ ದಂಡದಿಂದ ಪಾರಾಗಲು ಇಲ್ಲೊಂದು ಸುಲಭ ಮಾರ್ಗವಿದೆ. ಅದೇನೆಂದರೆ ಡಿಜಿಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‌ನಲ್ಲಿ ಎಲ್ಲಾ ಪ್ರಮುಖ ದಾಖಲೆಗಳ ಇ-ಪ್ರತಿಗಳನ್ನು ಇಟ್ಟುಕೊಳ್ಳುವುದು.

ಮೋಟಾರು ವಾಹನ ಕಾಯಿದೆಯಡಿ ದಂಡದಿಂದ ತಪ್ಪಿಸಿಕೊಳ್ಳಲು, ಸಂಚಾರಿ ಪೊಲೀಸರು ಅಡ್ಡಗಟ್ಟಿದ ವೇಳೆ, ವಾಹನ ಚಾಲಕರು ತಮ್ಮ ಡಿಜಿಲಾಕರ್‌ನಲ್ಲಿರುವ ದಾಖಲೆಗಳನ್ನು ತೋರಿಸಬಹುದಾಗಿದೆ.

ನಿಮ್ಮ ಮೊಬೈಲ್ ನಲ್ಲಿ ಡಿಜಿಲಾಕರ್‌ ಅಥವಾ ಎಂಪರಿವಾಹನ್ ಆಪ್ ಸ್ಟೋರ್‌ ಮಾಡಿಕೊಂಡು ಅಗತ್ಯ ಸಂದರ್ಭ ತೋರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಹನ ಸವಾರರೇ ಎಚ್ಚರ! ಸೆ.1ರಿಂದ ಕಠಿಣ ಸಂಚಾರ ನಿಯಮ, ಇಲ್ಲಿದೆ ಪರಿಷ್ಕೃತ ದಂಡದ ಪಟ್ಟಿ..

   
 
ಹೆಲ್ತ್