Back
Home » Bike News
ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!
DriveSpark | 11th Sep, 2019 01:07 PM
 • ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!

  ನಿಯಮಗಳನ್ನು ಉಲ್ಲಂಘಿಸುತ್ತಿರುವ ಜನ ಸಾಮಾನ್ಯರ ಜೊತೆಗೆ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಧಿಕಾರಿಗಳಿಗೂ ಸಹ ದಂಡವನ್ನು ವಿಧಿಸಲಾಗುತ್ತಿದೆ. ಆದರೆ ಇದೆಲ್ಲಕ್ಕಿಂತ ವಿಭಿನ್ನವಾದ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಬಿಹಾರದ ಕತಿಯಾರ್‍‍ನ ಹೆಚ್ಚುವರಿ ಜಿಲ್ಲಾಧಿಕಾರಿ (ಎ‍‍ಡಿ‍ಎಂ) ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದನ್ನು ಗಮನಿಸಿರುವ ಸಂಚಾರಿ ಪೊಲೀಸರು ಬೈಕ್ ಅನ್ನು ನಿಲ್ಲಿಸುವಂತೆ ಸೂಚಿಸಿದ್ದರೂ ಬೈಕ್ ಅನ್ನು ನಿಲ್ಲಿಸದೇ ಮುಂದೆ ಹೋಗಿದ್ದಾರೆ.


 • ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!

  ಈ ಬೈಕ್ ಅನ್ನು ಎ‍‍ಡಿ‍ಎಂರವರ ಬಾಡಿಗಾರ್ಡ್ ಆದ ಪೊಲೀಸ್ ಸಿಬ್ಬಂದಿಯೇ ಚಲಾಯಿಸುತ್ತಿದ್ದಾರೆ. ಬೈಕ್ ಚಲಾಯಿಸುತ್ತಿರುವ ಬಾಡಿಗಾರ್ಡ್ ಆಗಲಿ ಅಥವಾ ಎ‍‍ಡಿ‍ಎಂ ಆಗಲಿ, ಹೆಲ್ಮೆಟ್ ಧರಿಸಿಲ್ಲ. ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು, ಬೈಕ್ ಅನ್ನು ಪಕ್ಕಕ್ಕೇ ಹಾಕುವಂತೆ ಹೇಳಿದಾಗ, ಎ‍‍ಡಿ‍ಎಂ ಪೊಲೀಸರನ್ನೆ ದೂರ ಹೋಗು ಎನ್ನುತ್ತಿದ್ದಾರೆ.


 • ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!

  ಬೈಕ್ ಸವಾರನು ಹಿಂದೆ ಇರುವವರು ಎ‍‍ಡಿ‍ಎಂ ಎಂದು ಹೇಳುತ್ತಿದ್ದಾರೆ. ಆದರೂ ಸಹ ಪೊಲೀಸರು ಬೈಕ್ ಅನ್ನು ನಿಲ್ಲುಸುವಂತೆ ಹೇಳಿದ್ದಾರೆ. ಜಿಲ್ಲಾಧಿಕಾರಿ ತನ್ನ ಬಾಡಿಗಾರ್ಡ್‍‍ಗೆ ಬೈಕ್ ಅನ್ನು ನಿಲ್ಲಿಸದೇ ಮುಂದೆ ಹೋಗುವಂತೆ ಹೇಳುತ್ತಿದ್ದಾರೆ.


 • ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!

  ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಈ ಘಟನೆಯನ್ನು ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎ‍‍ಡಿ‍ಎಂ ತಮ್ಮ ಕಚೇರಿಯನ್ನು ತಲುಪಿದ ನಂತರ ಪತ್ರಕರ್ತರು ಈ ಬಗ್ಗೆ ಅವರನ್ನು ಪ್ರಶ್ನಿಸಿದ್ದಾರೆ.


 • ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!

  ಮೊದಲಿಗೆ ತಾವು ಈ ರೀತಿಯಲ್ಲಿ ನಡೆದುಕೊಂಡಿಲ್ಲವೆಂದು ತಿಳಿಸಿದ, ಎ‍‍‍ಡಿ‍ಎಂ ನಂತರ ಪತ್ರಕರ್ತರು ಈ ಬಗ್ಗೆ ವೀಡಿಯೋ ಇರುವುದಾಗಿ ತಿಳಿಸಿದಾಗ, ಏನಾಯಿತು ಎಂದು ಸರಿಯಾಗಿ ತಿಳಿದಿಲ್ಲ. ತಮ್ಮಿಂದ ತಪ್ಪಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಈ ನಿಯಮಗಳ ಉಲ್ಲಂಘನೆಗಾಗಿ ಪೊಲೀಸರು ತಮಗೆ ಚಲನ್ ನೀಡಿದರೆ, ದಂಡ ಪಾವತಿಸುವುದಾಗಿ ತಿಳಿಸಿದ್ದಾರೆ.

  MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!


 • ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!

  ಹೊಸ ಕಾಯ್ದೆಯನ್ವಯ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನವನ್ನು ಚಲಾಯಿಸಿದರೆ, ರೂ.1,000 ದಂಡ ವಿಧಿಸಲಾಗುವುದು. ಆದರೆ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಈ ನಿಯಮಗಳನ್ನು ಉಲ್ಲಂಘಿಸಿದರೆ, ನಿಗದಿಪಡಿಸಿರುವ ಮೊತ್ತಕ್ಕಿಂತ ಎರಡರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಅಂದರೆ ಈ ಪ್ರಕರಣದಲ್ಲಿ ಎ‍‍ಡಿ‍ಎಂರವರು ರೂ.2,000 ದಂಡ ಪಾವತಿಸಬೇಕಾಗುತ್ತದೆ.

  MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್


 • ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!

  ಈ ನಿಯಮವನ್ನು ಸರ್ಕಾರಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಲಿ ಎಂಬ ಕಾರಣಕ್ಕಾಗಿ ಜಾರಿಗೆ ತರಲಾಗಿದೆ. ಹೆಲ್ಮೆಟ್ ಧರಿಸದೇ ಹಾಗೂ ಸೀಟ್ ಬೆಲ್ಟ್ ಧರಿಸದೇ ನಿಯಮಗಳನ್ನು ಉಲ್ಲಂಘಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ವೀಡಿಯೋ ಹಾಗೂ ಫೋಟೊಗಳನ್ನು ಸಾರ್ವಜನಿಕರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍‍ಲೋಡ್ ಮಾಡುತ್ತಿದ್ದಾರೆ.

  MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್


 • ಹೊಸ ಟ್ರಾಫಿಕ್ ನಿಯಮಕ್ಕೆ ಕ್ಯಾರೇ ಎನ್ನದ ಜಿಲ್ಲಾಧಿಕಾರಿ..!

  ಹೊಸ ಮೋಟಾರ್ ವಾಹನ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗಿದೆ. ಆದರೆ ಗುಜರಾತ್, ಪಂಜಾಬ್, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಹಾಗೂ ರಾಜಸ್ತಾನದಂತಹ ಕೆಲವು ರಾಜ್ಯಗಳಲ್ಲಿ ಈ ಹೊಸ ಕಾಯ್ದೆಯನ್ನು ಇನ್ನೂ ಜಾರಿಗೊಳಿಸಲಾಗಿಲ್ಲ. ಗುಜರಾತ್ ರಾಜ್ಯ ಸರ್ಕಾರವು ಸಾರ್ವಜನಿಕರ ಪ್ರತಿಭಟನೆಗೆ ಮಣಿದು ದಂಡದ ಮೊತ್ತವನ್ನು 90%ವರೆಗೂ ಕಡಿಮೆಗೊಳಿಸಿದೆ.
ಹೊಸ ಮೋಟಾರು ವಾಹನ ಕಾಯ್ದೆಯು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಾಗಿನಿಂದ ಜನರು ಭಾರೀ ಪ್ರಮಾಣದ ದಂಡಕ್ಕೆ ಹೆದರಿ ಕಂಗಲಾಗಿದ್ದಾರೆ. ಸಂಚಾರಿ ಪೊಲೀಸರು ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸುತ್ತಿರುವ ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

   
 
ಹೆಲ್ತ್