ಹೌದು, ಆಪಲ್ ಸಂಸ್ಥೆಯು ಇದೇ ಸೆಪ್ಟಂಬರ್ 10 ರಂದು ತನ್ನ ಐಫೋನ್ 11 ಸರಣಿಯನ್ನು ಲಾಂಚ್ ಮಾಡಿದ್ದು, ಈ ಸರಣಿಯಲ್ಲಿ 'ಐಫೋನ್ 11 ಪ್ರೊ ಮ್ಯಾಕ್ಸ್' ಫ್ಲ್ಯಾಗ್ಶಿಪ್ ಡಿವೈಸ್ ಆಗಿ ಗಮನ ಸೆಳೆದಿವೆ. ಈ ಫೋನು A 13 ಬಯೋನಿಕ್ ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಫೋನಿನ ಕಾರ್ಯವೈಖರಿಯ ವೇಗಕ್ಕೆ ಐಓಎಸ್ 13 ಓಎಸ್ ಬೆಂಬಲ ಪಡೆದಿದೆ. ಹಾಗಾದರೇ ಆಪಲ್ 'ಐಫೋನ್ 11 ಪ್ರೊ ಮ್ಯಾಕ್ಸ್' ಫೋನಿನ ಫೀಚರ್ಸ್ಗಳೆನು ಎಂಬುದನ್ನು ಮುಂದೆ ನೋಡಿರಿ.
ಐಫೋನ್ 11 ಪ್ರೊ ಮ್ಯಾಕ್ಸ್ ಫೋನ್ 6.5 ಇಂಚಿನ ಸೂಪರ್ ರೇಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯು OLED ಮಾದರಿಯಲ್ಲಿದ್ದು, ಡಿಸ್ಪ್ಲೇಯು 1242x2688 ಪಿಕ್ಸಲ್ ಸಾಮರ್ಥ್ಯವನ್ನು ಪಡೆದಿದೆ. ಡಿಸ್ಪ್ಲೇಯು 2,000,000:1 ರಷ್ಟು ಕಾಂಟ್ರಾಸ್ಟ್ ಅನುಪಾತವನ್ನು ಪಡೆದುಕೊಂಡಿದ್ದು, 1200 nits ಬ್ರೈಟ್ನೆಸ್ ಸಾಮರ್ಥ್ಯ ಪಡೆದಿದೆ. ಸುತ್ತಲೂ ಕರ್ವ್ ಮಾದರಿಯ ಡಿಸೈನ್ ಅನ್ನು ಒಳಗೊಂಡಿದೆ.
ಓದಿರಿ : ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ!
ಐಫೋನ್ 11 ಪ್ರೊ ಮ್ಯಾಕ್ಸ್ ಫೋನ್ ಹೊಸ A 13 ಬಯೋನಿಕ್ ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್ಗೆ ಪೂರಕವಾಗಿ ಹೊಸ iOS 13 ಬೆಂಬಲ ನೀಡಲಿದೆ. ಹಾಗೆಯೇ ಈ ಫೋನ್ನಲ್ಲಿ ವೇಗದ GPU ಸೌಲಭ್ಯವನ್ನು ನೀಡಲಾಗಿದ್ದು, 6GB RAM ಸಾಮರ್ಥ್ಯದ ಜೊತೆಗೆ 64GB ಸ್ಟೋರೆಜ್ ಆಯ್ಕೆಯನ್ನು ಒಳಗೊಂಡಿದೆ. 'ಐಫೋನ್ ಎಕ್ಸ್ಎಸ್ ಮ್ಯಾಕ್ಸ್'ಗೆ ಹೋಲಿಸಿದರೇ ಐಫೋನ್ 11 ಪ್ರೊ ಮ್ಯಾಕ್ಸ್ ಪ್ರಬಲವೆನಿಸುತ್ತದೆ.
ಐಫೋನ್ 11 ಪ್ರೊ ಮ್ಯಾಕ್ಸ್ ಫೋನ್ ಸಹ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್ಅಪ್ ಹೊಂದಿದ್ದು, ಈ ಮೂರು ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಪ್ರಾಥಮಿಕ ಕ್ಯಾಮೆರಾವು ವೈಲ್ಡ್ ಆಂಗಲ್, ಸೆಕೆಂಡರಿ ಕ್ಯಾಮೆರಾವು ಅಲ್ಟ್ರಾ ವೈಲ್ಡ್ ಆಂಗಲ್ ಮತ್ತು ತೃತೀಯ ಕ್ಯಾಮೆರಾವು ಟೆಲಿಫೋಟೊ ಲೆನ್ಸ್ ಸಾಮರ್ಥ್ಯವನ್ನು ಹೊಂದಿವೆ. ನೈಟ್ಮೋಡ್ ಮತ್ತು ಎಚ್ಆರ್ಡಿ ಸೌಲಭ್ಯಗಳನ್ನು ಒಳಗೊಂಡಿದೆ.
ಐಫೋನ್ 11 ಸರಣಿಯಲ್ಲಿಯೇ 'ಐಫೋನ್ 11 ಪ್ರೊ ಮ್ಯಾಕ್ಸ್' ಫೋನ್ ಹೈ ಎಂಡ್ ಫೋನ್ ಆಗಿದ್ದು ಬೆಲೆಯು $$1,099 ಆಗಿದೆ. ಭಾರತದಲ್ಲಿ 1,09,900ರೂ.ಗಳು. ಆಗಿದೆ. ಇದೇ ಸೆಪ್ಟಂಬರ್ 13ರಿಂದ ಪ್ರಿ ಆರ್ಡರ್ ಲಭ್ಯವಾಗಲಿದ್ದು, ಮಾರಾಟ ಇದೇ ಸೆಪ್ಟೆಂಬರ್ 20ರಿಂದ ಆರಂಭವಾಗಲಿದೆ ಎನ್ನಲಾಗಿದೆ. ಹಾಗೆಯೇ ಮಿಡ್ನೈಟ್ ಗ್ರೀನ್, ಗೋಲ್ಡ್, ಗ್ರೇ ಮತ್ತು ಸಿಲ್ವರ್, ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.
ಓದಿರಿ : 'ಐಫೋನ್ 11 ಪ್ರೊ' ಲಾಂಚ್!..ಸಂಪೂರ್ಣ ಅಪ್ಗ್ರೇಡ್ ಫೀಚರ್ಸ್!
ಆಪಲ್ ಸಂಸ್ಥೆಯ ಬಹುನಿರೀಕ್ಷಿತ ಐಫೋನ್ 11 ಸರಣಿಯು ಬಿಡುಗಡೆ ಆಗಿದ್ದು, ಈ ಸರಣಿಯಲ್ಲಿನ ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಫೀಚರ್ಸ್ ಐಫೋನ್ ಪ್ರಿಯರಲ್ಲಿ ಕುತೂಹಲ ಮೂಡಿಸಿವೆ. ಅದರಲ್ಲಿ 'ಐಫೋನ್ 11 ಪ್ರೊ ಮ್ಯಾಕ್ಸ್' ಸಂಪೂರ್ಣ ಹೈ ಎಂಡ್ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಈ ಫೋನ್ ತ್ರಿವಳಿ ಕ್ಯಾಮೆರಾ ಜೊತೆಗೆ ಅಪ್ಗ್ರೇಡ್ ಪ್ರೊಸೆಸರ್, ಕ್ಯಾಮೆರಾ ಹೊಂದಿದೆ.