Back
Home » ಆರೋಗ್ಯ
ಬ್ರಾಂಕೈಟಿಸ್ (ಶ್ವಾಸನಾಳದ ಒಳಪೊರೆಯ ಉರಿಯೂತ): ರೋಗ ಲಕ್ಷಣ, ಕಾರಣ, ಚಿಕಿತ್ಸೆ, ತಡೆಗಟ್ಟುವ ವಿಧಾನ
Boldsky | 12th Sep, 2019 01:42 PM
  • ಶ್ವಾಸನಾಳದ ಒಳಪೊರೆಯ ಉರಿಯೂತ ಎಂದರೇನು?

    ಶ್ವಾಸನಾಳದ ಒಳಪೊರೆಯ ಉರಿಯೂತ ಎನ್ನುವುದು ಒಂದು ಸೋಂಕಿನ ಕಾಯಿಲೆಯಾಗಿದೆ, ಇದು ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಶ್ವಾಸನಾಳದ ಕೊಳವೆಗಳಲ್ಲಿ ಉರಿಯೂತ ಅಥವಾ ಊತ ಉಂಟಾಗಿ ಇದರಿಂದ ಉಸಿರಾಟ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮೂಗು ಮತ್ತು ಶ್ವಾಸಕೋಶದ ನಡುವಿನ ಗಾಳಿಯ ಹಾದಿಯ ನಡುವೆ ಕಂಡುಬರುವ ಈ ಸಮಸ್ಯೆಯನ್ನು ಸಾಮಾನ್ಯವಾಗಿ ಎದೆಯಶೀತ ಎಂದು ಸಹ ಕರೆಯಲಾಗುತ್ತದೆ.


  • ಶ್ವಾಸನಾಳದ ಒಳಪೊರೆ ಉರಿಯೂತದ ಲಕ್ಷಣಗಳು?

    ಸಾಮಾನ್ಯ ರೋಗ ಲಕ್ಷಣಗಳು ನೆಗಡಿಯ ನಂತರ ಬರಬಹುದು, ಇಲ್ಲವಾದಲ್ಲಿ ಇಡೀ ವರ್ಷದಲ್ಲಿ ಆಗಾಗ್ಗೆ ಸಹ ಬರಬಹುದು. ದೀರ್ಘಕಾಲದವರೆಗೆ ತೊಂದರೆಯಾದರೆ ಶ್ವಾಸನಾಳಗಳು, ಶ್ವಾಸಕೋಶಗಳು ಭಾದಿಸಲ್ಪಡುತ್ತವೆ. ಈ ಶ್ವಾಸನಾಳದ ಒಳಪೊರೆಯ ಉರಿಯೂತ ಕೆಲವರಿಗೆ ಅನಾಯಾಸವಾಗಿ ಸೋಂಕಿದರೆ, ಮತ್ತೆ ಕೆಲವರಿಗೆ ಕಾಡುವುದೇ ಇಲ್ಲ. ಇದಕ್ಕೆ ಇನ್ನೂ ಕಾರಣ ತಿಳಿಯದು.
    * ಕೆಮ್ಮು
    * ಕಫ ಉತ್ಪತಿಯಾಗುತ್ತದೆ. ಇದು ಹಳದಿ, ಬಿಳಿ, ಹಸಿರು ಕೆಲವು ಬಾರಿ ಕೆಂಪು ಬಣ್ಣದಲ್ಲಿ ಸಹ ಬರಬಹುದು.
    * ಆಯಾಸ
    * ಉಸಿರಾಟದ ತೊಂದರೆ
    * ಸ್ವಲ್ಪ ಜ್ವರ ಮತ್ತು ಶೀತ
    * ಎದೆಯ ಅಸ್ವಸ್ಥತೆ
    * ತಲೆನೋವು ಅಥವಾ ದೇಹದ ನೋವುಗಳು ಬ್ರಾಂಕೈಟಿಸ್ ನ ಆರಂಭಿಕ ಲಕ್ಷಣಗಳಾಗಿದೆ.
    ಇದರಲ್ಲಿ ಎರಡು ವಿಧಗಳಿವೆ
    ತೀವ್ರ ಶ್ವಾಸನಾಳದ ಒಳಪೊರೆ ಉರಿಯೂತ: ಜ್ವರ ಮತ್ತು ಸೋಂಕಿನ ಶೀತದಿಂದ ಬಳಲುತ್ತಿವ ವೇಳೆ ಈ ಸಮಸ್ಯೆ ಆರಂಭವಾಗುತ್ತದೆ. ಮೂಗಿನಿಂದ ಆರಂಭವಾಗುವ ಈ ಕಾಯಿಲೆ, ಗಂಟಲಿನ ಮೂಲಕ ಶ್ವಾಸಕೋಶ ತಲುಪಿ ಅಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಹಲವರಿಗೆ ಆಗಾಗ್ಗೆ ಶ್ವಾಸನಾಳದ ಸಮಸ್ಯೆ ಬಾಧಿಸುತ್ತದೆ, ಆದರೆ ಅದು ಗಂಭೀರ ಸಮಸ್ಯೆ ಆಗಿಲ್ಲವೆಂದಾದರೆ ಯಾವುದೇ ಅನಾರೋಗ್ಯ ಉಂಟಾಗದು.

    ದೀರ್ಘ ಕಾಲದ ಶ್ವಾಸನಾಳದ ಒಳಪೊರೆ ಉರಿಯೂತ: ಇದು ದೀರ್ಘಕಾಲದ ಸಮಸ್ಯೆಯಾಗಿದೆ. ಮೂರು ತಿಂಗಳಿಗೂ ಅಧಿಕ ಸಮಯದವರೆಗೆ ಕೆಮ್ಮು ನಿಮ್ಮನ್ನು ಬಾಧಿಸುತ್ತಿದ್ದರೆ ಇದನ್ನು ದೀರ್ಘ ಕಾಲದ ಶ್ವಾಸನಾಳದ ಒಳಪೊರೆಯ ಲಕ್ಷಣವಾಗಿದೆ. ನಿರಂತರ ಧೂಮಪಾನ ಮಾಡುವವರು ಹಾಗೂ ದೀರ್ಘಕಾಲದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದು ಬಹಳ ಗಂಭೀರ ಸ್ಥಿತಿಯಾಗಿದೆ.


  • ಶ್ವಾಸನಾಳದ ಒಳಪೊರೆಯ ಉರಿಯೂತಕ್ಕೆ ಕಾರಣಗಳು

    ಬ್ಯಾಕ್ಟೀರಿಯಾ, ವೈರಸ್ ಅಥವಾ ಉರಿಯೂತದ ನಂತರ ಶ್ವಾಸನಾಳಕ್ಕೆ ಸಮಸ್ಯೆ ಉಂಟಾಗುವ ಯಾವುದೇ ರಾಸಾಯನಿಕಕ್ಕೆ ನಿಮ್ಮನ್ನು ಒಡ್ಡಿದಾಗ ಶ್ವಾಸನಾಳದ ಒಳಪೊರೆಯ ಉರಿಯೂತ ಬರುವ ಸಾಧ್ಯತೆಗಳಿರುತ್ತದೆ. ನಿಕೋಟಿನ್ ಗೆ ದೇಹ ಎಷ್ಟು ಹೆಚ್ಚು ವ್ಯಸನಿ ಯಾಗಿರುತ್ತದೆಯೋ, ಈ ರೋಗದಿಂದ ನರಳುವ ಸಾಧ್ಯತೆಯೂ ಹೆಚ್ಚುತ್ತದೆ. ತೀವ್ರವಾದ ಶ್ವಾಸನಾಳದ ಒಳಪೊರೆಯ ಉರಿಯೂತ ಸಾಮಾನ್ಯವಾಗಿ ಶೀತ ಮತ್ತು ಜ್ವರಕ್ಕೆ ಕಾರಣವಾಗುವ ವೈರಸ್‌ಗಳಿಂದ ಉಂಟಾಗುತ್ತದೆ. ಈ ವೈರಸ್ ಗಳನ್ನು ಆಂಟಿಬಯಾಟಿಕ್ (ರೋಗನಿರೋಧಕ ಶಕ್ತಿ) ಸಹ ಕೊಲ್ಲುವುದಿಲ್ಲ.

    ದೀರ್ಘಕಾಲದ ಶ್ವಾಸನಾಳದ ಒಳಪೊರೆಯ ಉರಿಯೂತಕ್ಕೆ ಸಾಮಾನ್ಯ ಕಾರಣವೆಂದರೆ ಧೂಮಪಾನ ಮತ್ತು ಅತಿಯಾದ ಮದ್ಯಪಾನ. ನಮ್ಮ ಸುತ್ತಮುತ್ತಲಿನ ವಾಯುಮಾಲಿನ್ಯ, ಪರಿಸರ ಅಥವಾ ಕೆಲಸದ ಸ್ಥಳದಲ್ಲಿ ಧೂಳು ಅಥವಾ ವಿಷಕಾರಿ ಅನಿಲಗಳು ಸಹ ಈ ಸ್ಥಿತಿಗೆ ಕಾರಣವಾಗಬಹುದು. ಶ್ವಾಸಕೋಶದ ರೋಗ 'ಬ್ರಾಂಕೈಟಿಸ್' ಸಮಸ್ಯೆಗೆ ಸರಳ ಮನೆಮದ್ದುಗಳು


  • ಶ್ವಾಸನಾಳದ ಒಳಪೊರೆಯ ಉರಿಯೂತದಿಂದಾಗುವ ಸಮಸ್ಯೆಗಳು

    ಶ್ವಾಸನಾಳದ ಒಳಪೊರೆಯ ಉರಿಯೂತಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಅಲ್ಲದೇ,

    * ಅಲರ್ಜಿಗಳು

    * ಅಸ್ತಮಾ
    * ದೀರ್ಘಕಾಲದ ಸೈನಸ್
    * ಪೆರ್ಟುಸಿಸ್ ರೋಗನಿರೋಧಕ ಕೊರತೆ
    * ಅಪೌಷ್ಟಿಕತೆ (ವಿಶೇಷವಾಗಿ ಮಕ್ಕಳಲ್ಲಿ)ಯ ಸಮಸ್ಯೆಗಳು ಉಂಟಾಗಬಹುದು.


  • ಶ್ವಾಸನಾಳದ ಒಳಪೊರೆಯ ಉರಿಯೂತಕ್ಕೆ ಚಿಕಿತ್ಸೆ

    ಬಹುತೇಕ ಸಂದರ್ಭಗಳಲ್ಲಿ ಬ್ರಾಂಕೈಟಿಸ್ ಸಮಸ್ಯೆಯು ಯಾವುದೇ ಚಿಕಿತ್ಸೆ ಇಲ್ಲದೆ ಅಥವಾ ಮನೆಮದ್ದಿಗೆ ಗುಣಮುಖವಾಗುತ್ತದೆ. ಆದರೆ ಬಹಳ ತಿಂಗಳಿನಷ್ಟು ಸಮಸ್ಯೆ ಕಾಡಿದರೆ ಮಾತ್ರ ಚಿಕಿತ್ಸೆ ಲಭ್ಯವಿರುತ್ತದೆ. ಕಾಯಿಲೆ ನಿಮ್ಮ ದೇಹವನ್ನು ಯಾವ ಪರಿಣಾಮದಲ್ಲಿ ಆವರಿಸಿದೆ ಎಂದು ತಿಳಿಯಲು ವೈದ್ಯರು ಈ ಚಿಕಿತ್ಸೆ ಮಾಡುತ್ತಾರೆ.
    ಎದೆಯ ಎಕ್ಸ್ ರೇ: ಎದೆಯ ಎಕ್ಸರೆ ನಿಮಗೆ ನ್ಯುಮೋನಿಯಾ ಅಥವಾ ನಿಮ್ಮ ಕೆಮ್ಮಿನ ಗಂಭೀರತೆಯನ್ನು ವಿವರಿಸಲು ಸಹಾಯ ಮಾಡುತ್ತದೆ. ನೀವು ಹಿಂದೆ ಅಥವಾ ಪ್ರಸ್ತುತವಾಗಿ ಧೂಮಪಾನಿಗಳಾಗಿದ್ದರೆ ಈ ಚಿಕಿತ್ಸೆ ಮುಖ್ಯವಾಗುತ್ತದೆ.
    ಕಫ ಪರೀಕ್ಷೆ: ನಿಮ್ಮ ಶ್ವಾಸಕೋಶದಿಂದ ನೀವು ಕೆಮ್ಮುವ ಕಫ ರೋಗನಿರೋಧಕಗಳಿಗೆ ಸಹಾಯ ಮಾಡಬಹುದಾದ ಕಾಯಿಲೆಗಳನ್ನು ಹೊಂದಿದೆಯೇ ಎಂದು ಕಫ ಪರೀಕ್ಷೆ ಮಾಡಲಾಗುತ್ತದೆ. ಅಲರ್ಜಿಯ ಲಕ್ಷಣಗಳನ್ನು ಹೊಂದಿದೆಯೇ ಎಂದು ತಿಳಿಯಲು ಸಹ ಕಫ ಪರೀಕ್ಷಿಸಬಹುದು.
    ಶ್ವಾಸಕೋಶದ ಕಾರ್ಯಕ್ಷಮತೆ ಪರೀಕ್ಷೆ: ಶ್ವಾಸಕೋಶದ ಕಾರ್ಯಕ್ಷಮತೆ ಪರೀಕ್ಷೆಯ ಸಮಯದಲ್ಲಿ ನೀವು ಸ್ಪಿರೋಮೀಟರ್ ಎಂಬ ಸಾಧನಕ್ಕೆ ಸ್ಫೋಟಿಸುತ್ತೀರಿ, ಇದು ನಿಮ್ಮ ಶ್ವಾಸಕೋಶವು ಎಷ್ಟು ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ನಿಮ್ಮ ಶ್ವಾಸಕೋಶದಿಂದ ಎಷ್ಟು ಬೇಗನೆ ಗಾಳಿಯನ್ನು ಪಡೆಯಬಹುದು ಎಂಬುದನ್ನು ಅಳೆಯುತ್ತದೆ. ಈ ಪರೀಕ್ಷೆಯು ಆಸ್ತಮಾ ಅಥವಾ ಎಂಫಿಸೆಮಾದ ಸಂಕೇತಗಳನ್ನು ಪರಿಶೀಲಿಸುತ್ತದೆ.

    ಕೆಮ್ಮಿನಿಂದ ನಿದ್ರೆಗೆ ನಿರಂತರವಾಗಿ ಭಂಗವಾಗುತ್ತಿದ್ದರೆ, ಮಲಗುವ ಸಮಯದಲ್ಲಿ ಕೆಮ್ಮು ನಿವಾರಕಗಳನ್ನು ವೈದ್ಯರು ಸೂಚಿಸುತ್ತಾರೆ. ಅಥವಾ ಅಲರ್ಜಿ, ಅಸ್ತಮಾ ಅಥವಾ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ)ಯಿಂದ ಬಳಲುತ್ತಿದ್ದರೆ ಉರಿಯೂತ ಕಡಿಮೆ ಮಾಡಲು ಶ್ವಾಸಕೋಶದಲ್ಲಿ ಕಿರಿದಾದ ಹಾದಿಗಳನ್ನು ತೆರೆಯಲು ವೈದ್ಯರು ಇನ್ಹೇಲರ್ ಮತ್ತು ಇತರ ಔಷಧಿಗಳನ್ನು ಶಿಫಾರಸು ಮಾಡಬಹುದು.


  • ಶ್ವಾಸನಾಳದ ಒಳಪೊರೆಯ ಉರಿಯೂತ ತಡೆಗಟ್ಟುವ ವಿಧಾನ

    * ಧೂಮಪಾನದ ಹೊಗೆಯನ್ನು ತಪ್ಪಿಸಿ: ಸಿಗರೇಟ್ ಹೊಗೆ ದೀರ್ಘಕಾಲದ ಶ್ವಾಸನಾಳದ ಒಳಪೊರೆಯ ಉರಿಯೂತದ ಅಪಾಯವನ್ನು ಹೆಚ್ಚಿಸುತ್ತದೆ.
    * ಲಸಿಕೆ ಪಡೆಯಿರಿ: ತೀವ್ರವಾದ ಶ್ವಾಸನಾಳದ ಒಳಪೊರೆಯ ಉರಿಯೂತ ಅನೇಕ ಪ್ರಕರಣಗಳು ಇನ್ಫ್ಲುಯೆನ್ಸ ಎಂಬ ವೈರಸ್ನಿಂದ ಉಂಟಾಗುತ್ತವೆ. ವಾರ್ಷಿಕವಾಗಿ ಜ್ವರದ ಲಸಿಕೆ ಪಡೆಯುವುದರಿಂದ ಜ್ವರ ಬರದಂತೆ ನಿಮ್ಮನ್ನು ರಕ್ಷಿಸಬಹುದು. ಕೆಲವು ರೀತಿಯ ನ್ಯುಮೋನಿಯಾದಿಂದ ರಕ್ಷಿಸುವ ವ್ಯಾಕ್ಸಿನೇಷನ್ ಅನ್ನು ಸಹ ನೀವು ಪಡೆಯಬಹುದು.
    * ಕೈಗಳನ್ನು ಸ್ವಚ್ಚಗೊಳಿಸಿ: ಸೋಂಕು ನಿಮ್ಮ ದೇಹವನ್ನು ತಲುಪುವ ಅಪಾಯವನ್ನು ಕಡಿಮೆ ಮಾಡಲು, ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ ಮತ್ತು ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಗಳನ್ನು ಬಳಸುವ ಅಭ್ಯಾಸ ಮಾಡಿರಿ.
    * ಧೂಳು-ಹೊಗೆಯಿಂದ ದೂರವಿರಿ: ಸಾಧ್ಯವಾದಷ್ಟು ಧೂಳು-ಹೊಗೆಯಿಂದ ದೂರವಿರಿ. ಹೊರಗೆ ಪ್ರಯಾಣಿಸುವಾಗ ಅಥವಾ ನೀವು ಧೂಳು ಅಥವಾ ಹೊಗೆಯನ್ನು ಒಡ್ಡಿಕೊಂಡರೆ ಜನಸಮೂಹದ ನಡುವೆ ಇರುವಾಗ ತಪ್ಪದೆ ಫೇಸ್ ಮಾಸ್ಕ್ ಧರಿಸಿ.




ಶೀತ, ಮೂಗು ಕಟ್ಟುವುದು ಹಾಗೂ ಕೆಮ್ಮು ಎಡೆಬಿಡದೆ ನಿಮ್ಮನ್ನು ಕಾಡುತ್ತಿದೆಯೇ?, ನೀವು ಧೂಮಪಾನಿಗಳಾಗಿದ್ದು ಅತಿಯಾದ ಕೆಮ್ಮಿನಿಂದ ಕಂಗೆಟ್ಟಿದ್ದೀರಾ?, ಕೆಮ್ಮಿನಿಂದಾಗಿ ಉಸಿರಾಟದ ಸಮಸ್ಯೆ ಸಹ ಆಗುತ್ತಿದೆಯೇ?, ಹಾಗಿದ್ದರೆ ನಿಮ್ಮಲ್ಲಿ ಬ್ರಾಂಕೈಟಿಸ್ ರೋಗ ಲಕ್ಷಣ ಇರಬಹುದು.

ಮೇಲಿನ ಎಲ್ಲಾ ಲಕ್ಷಣಗಳು ಶ್ವಾಸನಾಳದ ಒಳಪೊರೆಯ ಉರಿಯೂತದ (ಬ್ರಾಂಕೈಟಿಸ್) ಆರಂಭಿಕ ಸೂಚನೆಯಾಗಿದೆ. ಈ ಶ್ವಾಸನಾಳದ ಒಳಪೊರೆಯ ಉರಿಯೂತ ಸಾಮಾನ್ಯ ಶೀತ, ಕೆಮ್ಮಿನಿಂದ ಆರಂಭವಾಗಿ ನಾವು ನಿರ್ಲಕ್ಷ್ಯ ವಹಿಸಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

   
 
ಹೆಲ್ತ್