ಹೌದು, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ನಿರ್ದೇಶಕರಾಗಿ ಉದ್ಯೋಗ ಮಾಡುತ್ತಿರುವ ಸಂದೀಪ್ ದಹಿಯಾ ಎಂಬುವವರು ಹವಾನಿಯಂತ್ರಿತ ಹೆಲ್ಮೆಟ್ ಒಂದನ್ನು ತಯಾರಿಸಿದ್ದಾರೆ. ಬಳಕೆದಾರ ಸ್ನೇಹಿ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಬಗ್ಗೆ ಆಸಕ್ತಿ ಹೊಂದಿರುವ ಸಂದೀಪ್ ದಹಿಯಾ ಅವರ 'ಹವಾನಿಯಂತ್ರಿತ ಹೆಲ್ಮೆಟ್' ಆರ್ಟಿ ನಗರ ನಿವಾಸದ ಗ್ಯಾರೇಜ್ನಲ್ಲಿ ರೂಪುಗೊಂಡಿದೆ. ನಾಲ್ಕೂವರೆ ವರ್ಷಗಳಲ್ಲಿ ಎಂಟು ವಿಭಿನ್ನ ಮಾದರಿಗಳನ್ನು ತಯಾರಿಸಿ ಇದೀಗ ಪರಿಪೂರ್ಣ 'ಹವಾನಿಯಂತ್ರಿತ ಹೆಲ್ಮೆಟ್' ಒಂದನ್ನು ಅವರು ತಯಾರಿಸಿದ್ದಾರೆ.
ಸಂದೀಪ್ ದಹಿಯಾ ಅವರು ವಿನ್ಯಾಸಗೊಳಿಸಿರುವ ಹವಾನಿಯಂತ್ರಿತ ಹೆಲ್ಮೆಟ್ ಎರಡು ಭಾಗಗಳನ್ನು ಹೊಂದಿದೆ. ಮೊದಲ ಭಾಗವು ಅನೇಕ ಹೆಲ್ಮೆಟ್ ಒಳಗೆ ಗಾಳಿಯ ಪ್ರಸರಣಕ್ಕಾಗಿ ರಬ್ಬರ್ ಕೊಳವೆಗಳನ್ನು ಹೊಂದಿರುತ್ತದೆ. ಇದನ್ನು ನೇರವಾಗಿ ಹೆಲ್ಮೆಟ್ಗೆ ಗಾಳಿಯನ್ನು ಸರಬರಾಜು ಮಾಡುವಂತೆ ರೂಪಿಸಲಾಗಿದೆ. ಇದು ಬೆನ್ನುಹೊರೆಯಂತೆ ಇರುವ ಉಡುಗೆಯ ಘಟಕವಾಗಿದ್ದು, ಶಾಖ ವಿನಿಮಯಕಾರಕ, ನಿಯಂತ್ರಣ ಮತ್ತು ಬ್ಲೋವರ್ ಘಟಕವನ್ನು ಒಳಗೊಂಡಿದೆ. ಶಾಖ ವಿನಿಮಯಕಾರಕವು ಗಾಳಿ-ತಂಪಾಗಿಸುವಿಕೆಯನ್ನು ನೋಡಿಕೊಳ್ಳುತ್ತದೆ
ಇನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಹೆಲ್ಮೆಟ್ಗಳ ತೂಕ 800 ಗ್ರಾಂ ನಿಂದ 2 ಕೆ.ಜಿ ವರೆಗೆ ಇರುತ್ತದೆ. ಆದರೆ, ಹವಾನಿಯಂತ್ರಿತ ಹೆಲ್ಮೆಟ್ ತೂಕ 1.7 ಕೆ.ಜಿ ಗಿಂತ ಹೆಚ್ಚಿಲ್ಲ. ಈ ಹೆಲ್ಮೆಟ್ ತೊಡಬಹುದಾದ ಘಟಕಕ್ಕೆ ರಿವರ್ಸ್ ಥರ್ಮೋಗಳನ್ನು ಹೊಂದಿರುತ್ತದೆ. ರಬ್ಬರ್ ಟ್ಯೂಬ್ಗಳ ಮೂಲಕ ಇದು ತಾಪಮಾನವನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸಲು ಸಹಾಯ ಮಾಡುತ್ತದೆ. ಐಸ್ ಅಥವಾ ನೀರಿನ ಅಗತ್ಯವಿಲ್ಲದೇ ಗಾಳಿಯಲ್ಲೇ ಶಾಖವನ್ನು ನಿಯಂತ್ರಿಸಲಾಗುತ್ತದೆ. ಹೆಲ್ಮೆಟ್ಗೆ ವಿದ್ಯುತ್ ಸರಬರಾಜು ಸಹ ಬೇಕಿಲ್ಲ ಎಂದು ಸಂದೀಪ್ ದಹಿಯಾ ಅವರು ಹೇಳುತ್ತಾರೆ.
ವಿದ್ಯುತ್ ಸಹಾಯವಿಲ್ಲದೇ ಹವಾನಿಯಂತ್ರಿತ ಹೆಲ್ಮೆಟ್ ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆಗೆ ಸಂದೀಪ್ ಅವರು ಉತ್ತರಿಸಿದ್ದಾರೆ. ಹೆಲ್ಮೆಟ್ಗೆ ವಿದ್ಯುತ್ ಸರಬರಾಜು ಸಹ ಬೇಕಿಲ್ಲ ನಿಜ. ಆದರೆ, ಬೈಕು ಬ್ಯಾಟರಿಯಿಂದ ಸರಬರಾಜು ಮಾಡಲಾದ ಡಿಸಿ ಪವರ್ (12 ವೋಲ್ಟ್) ನಲ್ಲಿ ಹೆಲ್ಮೆಟ್ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ, ತಂಪಾಗಿಸುವ ಪರಿಣಾಮಕ್ಕೆ ಬೇರೆ ಯಾವುದೇ ಬಾಹ್ಯ ಶಕ್ತಿಯ ಅಗತ್ಯವಿಲ್ಲ. ಹೀಗೆಯೇ ನಾನು ಆರ್ಟಿ ನಗರದಿಂದ ಮನೆಗೆ ಹೋಗುವಾಗ ಹೆಲ್ಮೆಟ್ ಬಳಸುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.
'ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ಸಿಗ್ನಲ್ಗಳಲ್ಲಿ ಕಾಯುತ್ತಿರುವಾಗ ತಮ್ಮ ವಾಹನಗಳ ಇಂಧನ ಟ್ಯಾಂಕ್ ಮೇಲೆ ಹೆಲ್ಮೆಟ್ ಹಾಕುವ ದೃಶ್ಯಗಳು ಕಾಣಿಸುತ್ತಿದ್ದವು. ಇದು ನನ್ನನ್ನು 'ಹವಾನಿಯಂತ್ರಿತ ಹೆಲ್ಮೆಟ್' ವಿನ್ಯಾಸಗೊಳಿಸಲು ಪ್ರೇರೇಪಿಸಿತು. ನಾನೇ ಸವಾರನಾಗಿದ್ದು, ಹೆಲ್ಮೆಟ್ ಅನ್ನು ಹಾಕಿಕೊಂಡಾಗ ಗಾಳಿಯಿಲ್ಲದೇ ಉಸಿರುಗಟ್ಟಿಸುವಂತಾಗುತ್ತದೆ. ಆದರೆ, ಅದು ನಮ್ಮ ಜೀವ ಉಳಿಸುತ್ತದೆ. ಆದ್ದರಿಂದ, ನಾನು ಬಳಕೆದಾರ ಸ್ನೇಹಿ ಹೆಲ್ಮೆಟ್ ಒಂದನ್ನು ತಯಾರಿಸಲು ನಿರ್ಧರಿಸಿದೆ ಎಂದು ಸಂದೀಪ್ ದಹಿಯಾ ಅವರು ತಿಳಿಸಿದ್ದಾರೆ.
ಕಡ್ಡಾಯವಾದ ಹೆಲ್ಮೆಟ್ ನಿಯಮದಿಂದಾಗಿ ಬೈಕ್ ಸವಾರರು ಅನುಭವಿಸುವ ತಾಪತ್ರಯವನ್ನು ಯಾರಿಗೂ ಹೇಳತೀರದು. ಇನ್ನು ಕಟ್ಟಡದ ಕಾರ್ಮಿಕರು ಬಿಸಿಲಿಗೆ ಬಳಲಿ ಬೆಂಡಾಗಬಹುದು. ಆದರೆ, ಇನ್ಮುಂದೆ ಇದಕ್ಕೆ ಪರಿಹಾರವೊಂದಿದೆ. ಕಡ್ಡಾಯವಾದ ಹೆಲ್ಮೆಟ್ ನಿಯಮದಿಂದಾಗಿ ಬೈಕ್ ಸವಾರರು ಬಿಸಿಲಿನ ದಿನದಲ್ಲಿ ಉಸಿರುಗಟ್ಟಬಾರದು ಎಂದು ಬೆಂಗಳೂರು ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಓರ್ವರು ಹವಾನಿಯಂತ್ರಿತ ಹೆಲ್ಮೆಟ್ ಒಂದನ್ನು ವಿನ್ಯಾಸಗೊಳಿಸಿದ್ದಾರೆ. ಅದು ತಲೆಯನ್ನು ಯಾವಾಗಲೂ ತಂಪಾಗಿರಿಸುತ್ತದೆ.