ಹೌದು, ಆಪಲ್ ಕಂಪನಿಯ ಐಫೋನ್ 11 ಸರಣಿ ಲಾಂಚ್ ಬೆನ್ನೇಲ್ಲೆ ತನ್ನ ಐಫೋನ್ಗಳ ಬೆಲೆಯಲ್ಲಿ ಕಡಿತ ಮಾಡಿದೆ. ಕಂಪನಿಯ ಹಲವು ಐಫೋನ್ಗಳು ಮಾರುಕಟ್ಟೆಯಲ್ಲಿ ಈಗಲೂ ಎವರ್ಗ್ರೀನ್ ಸ್ಥಾನ ಪಡೆದುಕೊಂಡಿದೆ. ಅವುಗಳ ಬೆಲೆ ಇಳಿಕೆ ಸುದ್ದಿ ಗ್ರಾಹಕರಿಗೆ ದೊಡ್ಡ ಖುಷಿ ಎನಿಸಿರುವುದಂತು ಸುಳ್ಳಲ್ಲ. ಹಾಗಾದರೇ ಆಪಲ್ ಸಂಸ್ಥೆಯ ಯಾವೆಲ್ಲಾ ಐಫೋನ್ ಮಾದರಿಗಳು ಬೆಲೆ ಇಳಿಕೆ ಕಂಡಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಕಳೆದ ವರ್ಷ ಬಿಡುಗಡೆ ಆಗಿರುವ ಐಫೋನ್ xs ಸರಣಿ ಫೋನ್ ಬೆಲೆಯಲ್ಲಿ ಇಳಿಕೆ ಆಗಿದೆ. 64GB ಸ್ಟೋರೇಜ್ ವೇರಿಯಂಟ್ ಐಫೋನ್ XS ಬೆಲೆಯು 99,900ರೂ.ಗಳಾಗಿದ್ದು, ಬೆಲೆ ಇಳಿಕೆಯಿಂದ 89,900ರೂ.ಗಳಿಗೆ ದೊರೆಯಲಿದೆ. ಹಾಗೆಯೇ ಐಫೋನ್ XS 256GB ಸ್ಟೋರೇಜ್ ವೇರಿಯಂಟ್ 1,03,900ರೂ.ಗಳಿಗೆ ಸಿಗಲಿದ್ದು, ಇದರ ಬೆಲೆಯು 1,14,900ರೂ.ಗಳು ಆಗಿತ್ತು.
ಆಪಲ್ ಸಂಸ್ಥೆಯು ಐಫೋನ್ ಎಕ್ಸ್ಆರ್ ಸರಣಿಯ ಐಫೋನ್ಗಳ ಬೆಲೆಯಲ್ಲಿ ಕಡಿತ ಮಾಡಿದೆ. ಈ ಸರಣಿಯ ಐಫೋನ್ XR 64GB ವೇರಿಯಂಟ್ ಬೆಲೆಯು 59,900ರೂ.ಗಳಾಗಿದ್ದು, ಆದ್ರೆ ಈಗ 49,900ರೂ.ಗಳಿಗೆ ಸಿಗಲಿದೆ. ಹಾಗೆಯೇ 128GB ಸ್ಟೋರೇಜ್ನ ಐಫೋನ್ ಎಕ್ಸ್ಆರ್ ಫೋನ್ 54,900ರೂ.ಗಳಿಗೆ ಖರೀದಿಸಬಹುದಾಗಿದ್ದು, ಇದರ ಬೆಲೆಯು 64,900ರೂ.ಗಳಾಗಿತ್ತು.
ಕಂಪನಿಯ ಜನಪ್ರಿಯ ಐಫೋನ್ 8 ಸರಣಿಯ ಫೋನ್ಗಳು ಸಹ ದರ ಇಳಿಕೆ ಕಂಡಿವೆ. ಐಫೋನ್ 8 ಪ್ಲಸ್ 64GB ಸ್ಟೋರೇಜ್ ವೇರಿಯಂಟ್ 69,900ರೂ.ಗಳಾಗಿದ್ದು, ಆದ್ರೆ ಇದೀಗ 49,900ರೂ.ಗಳಿಗೆ ದೊರೆಯಲಿದೆ. ಹಾಗೆಯೇ 64GB ಸ್ಟೋರೇಜ್ನ ಐಫೋನ್ 8 ಸದ್ಯ 39,900ರೂ.ಗಳಿಗೆ ಸಿಗಲಿದ್ದು, ಈ ಮೊದಲು 59,900ರೂ.ಗಳಿಗೆ ಲಭ್ಯವಿತ್ತು.
ಆಪಲ್ ಸಂಸ್ಥೆಯು ಐಫೋನ್ 7 ಸರಣಿ ಐಫೋನ್ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಈ ಸರಣಿಯ ಐಫೋನ್ 7 ಪ್ಲಸ್ 32GB ವೇರಿಯಂಟ್ ಬೆಲೆಯು 49,900ರೂ.ಗಳಾಗಿದ್ದು, ಆದ್ರೆ ಈಗ 37,900ರೂ.ಗಳಿಗೆ ಸಿಗಲಿದೆ. ಹಾಗೆಯೇ 128GB ಸ್ಟೋರೇಜ್ನ ಐಫೋನ್ 7 ಪ್ಲಸ್ ವೇರಿಯಂಟ್ ಫೋನ್ 42,900ರೂ.ಗಳಿಗೆ ಖರೀದಿಸಬಹುದಾಗಿದ್ದು, ಇದರ ಬೆಲೆಯು 59,900ರೂ.ಗಳಾಗಿತ್ತು.
ಆಪಲ್ ಸಂಸ್ಥೆಯು ಐಫೋನ್ 7 ಸರಣಿ ಐಫೋನ್ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಈ ಸರಣಿಯ ಐಫೋನ್ 7, 32GB ವೇರಿಯಂಟ್ ಬೆಲೆಯು 39,900ರೂ.ಗಳಾಗಿದ್ದು, ಆದ್ರೆ ಈಗ 29,900ರೂ.ಗಳಿಗೆ ಸಿಗಲಿದೆ. ಹಾಗೆಯೇ 128GB ಸ್ಟೋರೇಜ್ನ ಐಫೋನ್ 7 ವೇರಿಯಂಟ್ ಫೋನ್ 34,900ರೂ.ಗಳಿಗೆ ಖರೀದಿಸಬಹುದಾಗಿದ್ದು, ಇದರ ಬೆಲೆಯು 49,900ರೂ.ಗಳಾಗಿತ್ತು.
ಆಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 11 ಸರಣಿ ಬಿಡುಗಡೆ ಆಗಿದ್ದು, ಗ್ರಾಹಕರ ಚಿತ್ತವಿಗ ಸಂಪೂರ್ಣ ಹೊಸ ಸರಣಿಯತ್ತ ವಾಲಿದೆ. ಐಫೋನ್ 11 ಸರಣಿಯ ಲಾಂಚ್ ಆಗಿರುವ ಖುಷಿಯಲ್ಲಿರುವ ಗ್ರಾಹಕರಿಗೆ ಕಂಪನಿಯು ಮತ್ತೊಂದು ಭರ್ಜರಿ ಸುದ್ದಿಯನ್ನು ನೀಡಿದೆ. ಅದೆನೆಂದರೇ ಕಂಪನಿಯ ಇದೀಗ ತನ್ನ ಜನಪ್ರಿಯ ಐಫೋನ್ಗಳ ಬೆಲೆಯಲ್ಲಿ ಇಳಿಕೆ ಮಾಡಿದೆ.