Back
Home » ಸಿನಿ ಸಮಾಚಾರ
ಸುದೀಪ್ 'ಪೈಲ್ವಾನ್' ನೋಡಲು ಈ 6 ಕಾರಣಗಳು ಸಾಕು
Oneindia | 11th Sep, 2019 04:08 PM
 • ಪೈಲ್ವಾನ್, ಬಾಕ್ಸರ್ ಆದ ಸುದೀಪ್

  ಪೊಲೀಸ್, ರೌಡಿ, ರಾಜಕಾರಣಿ, ಉದ್ಯಮಿ, ಡಾಕ್ಟರ್ ಗೆಟಪ್ ಹೀಗೆ ಬಹುತೇಕ ಎಲ್ಲ ತರಹ ಪಾತ್ರಗಳಲ್ಲೂ ಸುದೀಪ್ ಅವರನ್ನ ನೋಡಿದ್ದೀವಿ. ಇದೇ ಮೊದಲ ಬಾರಿಗೆ ಸುದೀಪ್ ಕುಸ್ತಿಪಟು ಮತ್ತು ಬಾಕ್ಸರ್ ಗೆಟಪ್ ನಲ್ಲಿ ಬರ್ತಿದ್ದಾರೆ. ಇದೊಂದು ಕಾರಣ ಸಾಕು, ಪೈಲ್ವಾನ್ ಸಿನಿಮಾ ನೋಡಲು.


 • ಸುದೀಪ್ ಸಿಕ್ಸ ಪ್ಯಾಕ್ ಬಾಡಿ

  ಪ್ರತಿಯೊಂದು ಚಿತ್ರದಲ್ಲೂ ಸುದೀಪ್ ಅವರ ಡೆಡಿಕೇಶನ್ ನೋಡಬಹುದು. ಆದರೆ, ಕುಸ್ತಿಪಟು ಮತ್ತು ಬಾಕ್ಸರ್ ಪಾತ್ರಕ್ಕಾಗಿ ಕಿಚ್ಚ ಮಾಡಿಕೊಂಡು ತಯಾರಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಅದರಲ್ಲೂ ಜಿಮ್ ಗೆ ಹೋಗಿ ಸಿಕ್ಸ್ ಪ್ಯಾಕ್ ಮಾಡಿದ್ದು ನಿಜಕ್ಕೂ ಥ್ರಿಲ್ ಹೆಚ್ಚಿಸಿದೆ. ವರ್ಕೌಟ್ ಅಂದ್ರೆ ದೂರ ಇರುತ್ತಿದ್ದ ಸುದೀಪ್ ಪೈಲ್ವಾನ್ ಗಾಗಿ ವರ್ಕೌಟ್ ಮಾಡಲು ಮನಸ್ಸು ಮಾಡಿದರು ಅಂದ್ರೆ ಈ ಚಿತ್ರದಲ್ಲಿ ಏನೋ ವಿಶೇಷತೆ ಇದೆ ಎಂಬ ನಿರೀಕ್ಷೆಯಿಂದ ಚಿತ್ರಮಂದಿರಕ್ಕೆ ಬರಬೇಕಾಗಿದೆ.

  ಸುದೀಪ್ 'ಪೈಲ್ವಾನ್'ಗೆ ಎದುರಾಳಿಯಾಗಿ ನಿಂತ 'ಗ್ಯಾಂಗ್ ಲೀಡರ್'


 • ಸುನೀಲ್ ಶೆಟ್ಟಿ-ಸುದೀಪ್ ಕಾಂಬಿನೇಷನ್

  ಕರ್ನಾಟಕ ಮೂಲದವರಾಗಿದ್ದರೂ ಇದುವರೆಗೂ ಕನ್ನಡದಲ್ಲಿ ಒಂದೇ ಒಂದು ಚಿತ್ರ ಮಾಡಿರಲಿಲ್ಲ. ಇದೀಗ, ಪೈಲ್ವಾನ್ ಮೂಲಕ ಸ್ಯಾಂಡಲ್ ವುಡ್ ಗೆ ಸುನೀಲ್ ಶೆಟ್ಟಿ ಎಂಟ್ರಿಯಾಗಿದೆ. ಬಾಲಿವುಡ್ ನಟ ಮೊದಲ ಕನ್ನಡ ಸಿನಿಮಾ ಎಂಬುದರ ಜೊತೆಗೆ ಸುದೀಪ್ ಜೊತೆ ಇನ್ನೊಬ್ಬ ಸೂಪರ್ ಸ್ಟಾರ್ ನೋಡಬಹುದು ಎಂಬ ವಿಶೇಷತೆ ಇದೆ.


 • ಪ್ಯಾನ್ ಇಂಡಿಯಾ ಆಗಿರುವುದು ನಿರೀಕ್ಷೆ ಹೆಚ್ಚಿಸಿದೆ

  ಕೆಜಿಎಫ್, ಕುರುಕ್ಷೇತ್ರ ಬಳಿಕ ಬರುತ್ತಿರುವ ಇನ್ನೊಂದು ಪ್ಯಾನ್ ಇಂಡಿಯಾ ಕನ್ನಡ ಸಿನಿಮಾ. ಐದು ಭಾಷೆಯಲ್ಲಿ ಸಿನಿಮಾ ತೋರಿಸಬಹುದು ಎಂದು ಚಿತ್ರತಂಡ ನಿರ್ಧರಿಸಿದೆ ಅಂದ್ರೆ ಈ ಚಿತ್ರದಲ್ಲಿ ಅಂತಹ ಕಥೆ ಇದೆ ಎಂದು ನಂಬಬಹುದು. ಹಾಗಾಗಿ, ಸಿನಿಮಾ ಚೆನ್ನಾಗಿರಬಹುದು ಎಂಬ ನಂಬಿಕೆ ಹೆಚ್ಚಿದೆ.

  'ನಿಮ್ಮ ಬಾಸ್ ಯಾರು' ಎಂದು ಕೇಳಿದ್ದಕ್ಕೆ ಸುದೀಪ್ ಹೇಳಿದ ಹೆಸರು ಯಾವುದು?


 • ಹೆಬ್ಬುಲಿ ಜೋಡಿ ಮೇಲೆ ಭರವಸೆ

  ಹೆಬ್ಬುಲಿ ಅಂತಹ ಸಿನಿಮಾ ನೀಡಿದ್ದ ನಿರ್ದೇಶಕ ಕೃಷ್ಣ ಈಗ ಪೈಲ್ವಾನ್ ಹೊತ್ತು ತಂದಿದ್ದಾರೆ. ಸುದೀಪ್ ಜೊತೆ ಎರಡನೇ ಚಿತ್ರ ಇದಾಗಿದ್ದು, ಹೆಬ್ಬುಲಿಯಂತೆ ಘರ್ಜಿಸಲಿದೆ ಎಂಬ ನಂಬಿಕೆ ಅಭಿಮಾನಿಗಳದ್ದು. ಅಭಿಮಾನಿಗಳ ನಿರೀಕ್ಷೆತೆ ತಕ್ಕ ಸಿನಿಮಾ ಮಾಡುವ ಕಲೆ ಹೊಂದಿರುವ ಕೃಷ್ಣ ಅವರು ನಿರಾಸೆ ಮಾಡಲ್ಲ ಎಂಬ ಭರವಸೆಯಿಂದ ಸಿನಿಮಾ ನೋಡಬೇಕಿದೆ.


 • ಕನ್ನಡದಲ್ಲೊಂದು 'ಸುಲ್ತಾನ್'

  ಇದನ್ನೆಲ್ಲಾ ಮೀರಿ ಕನ್ನಡದಲ್ಲೊಂದು ದಂಗಲ್ ಅಥವಾ ಸುಲ್ತಾನ್ ಅಂತಹ ಸಿನಿಮಾ ಇದಾಗಬಹುದು ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿದೆ. ಬಾಲಿವುಡ್ ನಲ್ಲಿ ಮಾತ್ರ ಅಂತಹ ಚಿತ್ರಗಳು ಬರುತ್ತೆ ಎಂಬ ಸಂಪ್ರದಾಯವನ್ನ ಪೈಲ್ವಾನ್ ಮುರಿಯಲಿದೆ ಎಂಬ ಕಾರಣದಿಂದ ಸಿನಿಮಾ ನೋಡಬೇಕಾಗಿದೆ.
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಈ ಗುರುವಾರ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ. ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿ ಕುತೂಹಲ ಹೆಚ್ಚಿಸಿದೆ. ಕೆಜಿಎಫ್ ಮತ್ತು ಕುರುಕ್ಷೇತ್ರ ಸಿನಿಮಾಗಳು ಪ್ಯಾನ್ ಇಂಡಿಯಾ ತೆರೆಕಂಡು ಯಶಸ್ಸು ಕಂಡಿದೆ. ಹಾಗಾಗಿ, ಪೈಲ್ವಾನ್ ಚಿತ್ರದ ಮೇಲೂ ಭಾರಿ ನಿರೀಕ್ಷೆ ಇದೆ.

ಅಂದಹಾಗೆ, ಸುದೀಪ್ ಅಭಿನಯದ ಸಿನಿಮಾ ಪೈಲ್ವಾನ್ ಎಂಬ ಒಂದು ಕಾರಣ ಬಿಟ್ಟು ಬೇರೆ ಕಾರಣಕ್ಕಾಗಿ ನೋಡಬೇಕು ಎಂದು ಕೆಲವರು ಕೇಳಬಹುದು. ಇದು ಸುದೀಪ್ ಅವರ ರೆಗ್ಯುಲರ್ ಚಿತ್ರ, ಇದರಲ್ಲಿ ಏನಿದೆ ಅಂತಹ ವಿಶೇಷ, ಇದಕ್ಕೆ ಯಾಕೆ ಇಷ್ಟೊಂದು ಮಹತ್ವ ಕೊಡಬೇಕು ಎಂದು ನೋಡುವುದಾರೆ ಕೆಲವು ವಿಶೇಷತೆಗಳನ್ನ ಕಾಣಬಹುದು.

ಟ್ರೇಲರ್ ನೋಡಿಯೇ 'ಪೈಲ್ವಾನ್' ಚಿತ್ರದ ಭವಿಷ್ಯ ಹೇಳಿದ ರವಿಚಂದ್ರನ್

ಬರಿ ವಿಶೇಷತೆಗಳನ್ನ ಎನ್ನುವುದಕ್ಕಿಂತ ಒಂದಲ್ಲ, ಎರಡಲ್ಲ ಪ್ರಮುಖವಾಗಿ ಪೈಲ್ವಾನ್ ಸಿನಿಮಾ ನೋಡಲು ಆರು ಕಾರಣಗಳನ್ನ ಪಟ್ಟಿ ಮಾಡಲಾಗಿದೆ. ಯಾವುದು? ಮುಂದೆ ಓದಿ.....

   
 
ಹೆಲ್ತ್