Back
Home » Business
ಎಸ್ಬಿಐ ಗ್ರಾಹಕರಿಗೆ ಸಿಹಿಸುದ್ದಿ! ಸೇವಾ ಶುಲ್ಕ, ದಂಡ ನಿಯಮಗಳಲ್ಲಿ ಬದಲಾವಣೆ
Good Returns | 11th Sep, 2019 01:50 PM

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಹಿಸುದ್ದಿ ನೀಡಿದ್ದು, ಹಲವಾರು ಸೇವಾ ನಿಯಮಗಳಲ್ಲಿ ಬದಲಾವಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದೆ.

ಕನಿಷ್ಟ ಬಾಕಿ ಮೊತ್ತ ಮಿನಿಮಮ್ ಬ್ಯಾಲೆನ್ಸ್ ನಿಂದ ಗ್ರಾಹಕರನ್ನು ಮುಕ್ತಗೊಳಿಸಲು ಬ್ಯಾಂಕ್ ನಿರ್ಧರಿಸಿದ್ದು, ಬ್ಯಾಂಕ್ ಖಾತೆಯಲ್ಲಿ ಮಾಸಿಕ ಸರಾಸರಿ ಬಾಕಿ (ಎಂಎಬಿ) ನಿರ್ವಹಿಸದಿದ್ದರೆ ವಿಧಿಸಲಾಗುವ ಶುಲ್ಕ ಶೇ. 80 ರಷ್ಟು ಕಡಿಮೆಗೊಳಿಸುವ ಸಾಧ್ಯತೆ ಇದೆ. ಜೊತೆಗೆ ನೆಫ್ಟ್ ಮತ್ತು ಆರ್‌ಟಿಜಿಎಸ್ ಫಂಡ್ ವರ್ಗಾವಣೆ ವಿಧಾನವನ್ನು ಅಗ್ಗಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದ್ದು, ಎಸ್ಬಿಐ ಹೊಸ ಸೇವಾ ಶುಲ್ಕಗಳು ಅಕ್ಟೋಬರ್ 1, 2019 ರಿಂದ ಜುಲೈ ಒಂದರಿಂದ ಜಾರಿಗೆ ಬಂದಿರುವಂತೆ ಎಸ್ಬಿಐ ನೆಫ್ಟ್ ಮತ್ತು ಆರ್‌ಟಿಜಿಎಸ್ ಹಣ ವರ್ಗಾವಣೆಯನ್ನು ಉಚಿತಗೊಳಿಸಿದೆ. ಮತ್ತೆ ಅಕ್ಟೋಬರ್ ಒಂದರಿಂದ ನೆಫ್ಟ್ ಮತ್ತು ಆರ್‌ಟಿಜಿಎಸ್‌ ಶುಲ್ಕದಲ್ಲಿ ಬದಲಾವಣೆಯಾಗಲಿದೆ.

ಅಕ್ಟೋಬರ್ ಒಂದರಿಂದ ಎಸ್ಬಿಐ ಎಟಿಎಂ ಶುಲ್ಕದಲ್ಲೂ ಬದಲಾವಣೆಯಾಗಲಿದ್ದು, ಮೆಟ್ರೋ ನಗರದ ಗ್ರಾಹಕರು ಗರಿಷ್ಠ 10 ಬಾರಿ ಉಚಿತ ಎಟಿಎಂ ವಹಿವಾಟು ಮತ್ತು ಉಳಿದ ಪ್ರದೇಶಗಳಲ್ಲಿ 12 ವಹಿವಾಟುಗಳನ್ನು ನಡೆಸಬಹುದು.

   
 
ಹೆಲ್ತ್