Back
Home » Car News
ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ
DriveSpark | 11th Sep, 2019 04:16 PM
 • ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ

  2019ರ ಆಗಸ್ಟ್ ತಿಂಗಳಿಗೆ ಟೊಯೊಟಾ ಗ್ಲಾಂಝಾ 2,322 ಯುನಿಟ್‍‍ಗಳ ಮಾರಾಟವನ್ನು ದಾಖಲಿಸಿದೆ. ಹ್ಯಾಚ್‍‍ಬ್ಯಾಕ್ ಸೆಗ್‍‍ಮೆಂಟ್‍‍ನಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಕಾರಿನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಟೊಯೊಟಾ ಗ್ಲಾಂಝಾ ಮಾರಾಟದಲ್ಲಿ ಫೋಕ್ಸ್ ವ್ಯಾಗನ್ ಪೊಲೊ, ಫೋರ್ಡ್ ಫ್ರೀ ಸ್ಟೈಲ್ ಮತ್ತು ಹೋಂಡಾ ಜಾಝ್ ಅನ್ನು ಹಿಂದಿಕ್ಕಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವುದರಿಂದ ಈ ಜನಪ್ರಿಯ ಕಂಪನಿಗಳಿಗೆ ಬಿಸಿ ಮುಟ್ಟಿದೆ, ಇದರಿಂದ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ.


 • ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ

  ಫೋಕ್ಸ್ ವ್ಯಾಗನ್ ಪೊಲೊ ಕಾರು ಮಾರಾಟದಲ್ಲಿ ಶೇ. 17.17 ಕುಸಿತ ಕಂಡಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಫೋಕ್ಸ್ ವ್ಯಾಗನ್ ಕಾರು 1,573 ಯುನಿಟ್‍‍ಗಳು ಮಾರಾಟವಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 1,899 ಯುನಿಟ್‍‍ಗಳು ಮಾರಾಟವಾಗಿದೆ ಎಂದು ದಾಖಲಾಗಿದೆ. ಫೋರ್ಡ್ ಫ್ರೀ ಸ್ಟೈಲ್ ಕಾರಿನ ಮಾರಾಟ ಪಾತಳಕ್ಕೆ ಕುಸಿದಿದೆ, ಮಾರಾಟದಲ್ಲಿ ಬರೊಬ್ಬರಿ ಶೇ.74 ರಷ್ಟು ಕುಸಿತವಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 2,564 ಯುನಿಟ್‍‍ಗಳು ಮಾರಾಟವಾಗಿದ್ದವು, ಆದರೆ ಈ ವರ್ಷ ಆಗಸ್ಟ್ ನಲ್ಲಿ ಕೇವಲ 647 ಗಳು ಮಾತ್ರ ಮಾರಾಟವಾಗಿದೆ.

  ಮಾದರಿಗಳು ಆಗಸ್ಟ್ 2019
  ಆಗಸ್ಟ್ 2018
  ವ್ಯತ್ಯಾಸ(%) ಮಾರುತಿ ಸುಜುಕಿ ಬಲೆನೊ 11,067 17,713 -37.52 ಹ್ಯುಂಡೈ ಎಲೈಟ್ ಐ20 7,071 11,475 -38.38 ಟೊಯೊಟಾ ಗ್ಲಾಂಝಾ 2,322 - - ಫೋಕ್ಸ್ ವ್ಯಾಗನ್ ಪೊಲೊ 1,573 1,899 -17.17 ಫೋರ್ಡ್ ಫ್ರೀ ಸ್ಟೈಲ್ 647 2,564 -74.77 ಹೋಂಡಾ ಜಾಝ್ 558 1,119 -50.17

 • ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ

  ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಸಂಸ್ಥೆ ಹೋಂಡಾದ ಜನಪ್ರಿಯ ಜಾಝ್ ಕಾರು ಶೇ.50.13 ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಹೋಂಡಾ ಜಾಝ್ 558 ಯುನಿಟ್‍‍ಗಳು ಮಾರಾಟವಾಗಿದೆ, ಇನ್ನೂ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 1,119 ಯುನಿಟ್‍‍ಗಳು ಮಾರಾಟವಾಗಿದೆ.


 • ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ

  ಮೊದಲ ಸ್ಥಾನವನ್ನು ಮಾರುತಿ ಸುಜುಕಿ ವಶಪಡಿಸಿಕೊಂಡರೆ, ದ್ವಿತೀಯ ಸ್ಥಾನವನ್ನು ಹ್ಯುಂಡೈ ಎಲೈಟ್ ಐ20 ಅಲಂಕರಿಸಿಕೊಂಡಿದೆ. ಎಂದಿನಂತೆ ಭಾರತೀಯ ಎಲ್ಲಾ ವರ್ಗದ ಮೆಚ್ಚಿನ ಕಾರು ಬ್ರ್ಯಾಂಡ್ ಮಾರುತಿಯ ಬಾಲೆನೊ ಕಳೆದ ವರ್ಷ 11,067 ಯುನಿಟ್‍‍ಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ 7,071 ಯುನಿಟ್‍‍ಗಳು ಮಾರಾಟವಾಗಿದೆ ಎಂದು ದಾಖಲಾಗಿದೆ.


 • ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ

  ಕಳೆದ ವರ್ಷ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಬಾಲೆನೊ ಹಾಗೂ ಎಲೈಟ್ ಐ20 ಈ ಎರಡು ಬ್ರ್ಯಾಂಡ್‍‍ಗಳ ಕಾರು ಮಾರಾಟದಲ್ಲಿ ಗಮನಾರ್ಹ ಕುಸಿತ ಕಂಂಡಿದೆ. ಮಾರುತಿ ಸುಜುಕಿ ಬಾಲೆನೊ ಶೇ.37.57 ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಇನ್ನೂ ಹ್ಯುಂಡೈ ಎಲೈಟ್ ಐ20 ಶೇ.38.38 ರಷ್ಟು ಮಾರಾಟದಲ್ಲಿ ಕುಸಿತ ದಾಖಲಿಸಿದೆ.


 • ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ

  ಹೊಸ ಯೋಜನೆಯ ಭಾಗವಾಗಿ ಮಾರುತಿ ಸುಜುಕಿ ಜನಪ್ರಿಯ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್‌ನೊಂದಿಗೆ ಮರುಬಿಡುಗಡೆ ಮಾಡಿದ ಕಾರು ಟೊಯೊಟಾ ಗ್ಲಾಂಝಾ. ಈ ಕಾರು ವಿ ಮತ್ತು ಜಿ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಮಾರುತಿ ಬಲೆನೊ ಕಾರಿನಲ್ಲಿರುವ ಹೆಚ್ಚಿನ ವೈಶಿಷ್ಟೈಗಳನ್ನು ಈ ಕಾರಿನಲ್ಲಿ ಅಳವಡಿಸಿದ್ದಾರೆ.

  MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!


 • ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ

  ಟೊಯೊಟಾ ಗ್ಲಾಂಝಾ ಕಾರು ಮಾರುತಿ ಬಾಲೆನೊ ರೀತಿಯ ಸಿಂಗಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 1.2 ಲೀಟರ್ ಕೆ-ಸೀರಿಸ್ ಎಂಜಿನ್ 82ಬಿ‍ಎಚ್‍ಬಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ. ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

  MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!


 • ಮಾರಾಟದಲ್ಲಿ ಮೂರನೇ ಸ್ಥಾನಕ್ಕೇರಿದ ಗ್ಲಾಂಝಾ

  ಸುಜುಕಿ ಮತ್ತು ಟೊಯೊಟಾ ಸಹಭಾಗಿತ್ವದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಕಾರು ಟೊಯೊಟಾ ಗ್ಲಾಂಝಾ ಆಗಿದೆ. ಎರಡು ಪ್ರಮುಖ ಜಪಾನ್ ಕಂಪನಿಗಳು ಮುಂದಿನ ದಿನಗಳಲ್ಲಿ ಇವರ ಸಹಭಾಗಿತ್ವದಲ್ಲಿ ಮುಂದಿನ ದಿನಗಳಲ್ಲಿ ಇನ್ನೊಂದು ರೀಬ್ಯಾಡ್ಜ್ ಕಾರು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇವರ ಸಹಭಾಗಿತ್ವದಲ್ಲಿ ಬಿಡುಗಡೆಯಾದ ಟೊಯೊಟಾ ಗ್ಲಾಂಝಾ ಗ್ರಾಹಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿರುವುದರಿಂದ ಮುಂದೆ ಬಿಡುಗಡೆಯಾಗಲಿರುವ ಕಾರಿನ ಬಗ್ಗೆ ಹೆಚ್ಚಿನ ನೀರಿಕ್ಷೆಯನ್ನು ಮೂಡಿಸಿದೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ತನ್ನ ಹೊಸ ಮಾದರಿ ಕಾರು ಗ್ಲಾಂಝಾವನ್ನು ಈ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದರು. ಟೊಯೊಟಾ ಗ್ಲಾಂಝಾ ಮಾಸಿಕ ಮಾರಾಟದಲ್ಲಿ ಬ್ರ್ಯಾಂಡ್‍‍ಗೆ ತಕ್ಕಂತೆ ಸ್ಥಿರವಾಗಿ ಮಾರಾಟವಾಗುತ್ತಿದೆ.

   
 
ಹೆಲ್ತ್