Back
Home » ಸಿನಿ ಸಮಾಚಾರ
'ಪೈಲ್ವಾನ್' ಚಿತ್ರಕ್ಕಾಗಿ ರೀ-ಓಪನ್ ಆಗ್ತಿದೆ ಚಿತ್ರಮಂದಿರಗಳು
Oneindia | 11th Sep, 2019 04:55 PM

ಕನ್ನಡ ಸಿನಿಮಾಳಿಗೆ ಚಿತ್ರಮಂದಿರ ಸಮಸ್ಯೆ ಇದೆ ಎಂಬ ಮಾತಿದೆ. ಅದರಲ್ಲೂ ಪರಭಾಷೆ ಚಿತ್ರಗಳು ಬಂದಾಗ ಕನ್ನಡ ಚಿತ್ರಗಳನ್ನ ಚಿತ್ರಮಂದಿರದಿಂದ ಎತ್ತಂಗಡಿ ಮಾಡಿ, ಅವರಿಗೆ ಜಾಗ ಕೊಡ್ತಾರೆ ಎಂಬ ಬೇಸರವೂ ಇದೆ. ಆದರೆ ಪೈಲ್ವಾನ್ ವಿಚಾರದಲ್ಲಿ ಉಲ್ಟಾ ಆಗ್ತಿದೆ.

ಮುಚ್ಚಿರುವ ಕೆಲವು ಚಿತ್ರಮಂದಿರಗಳು ಪೈಲ್ವಾನ್ ಗಾಗಿ ರೀ-ಓಪನ್ ಆಗ್ತಿದೆ ಎಂಬ ವಿಷಯವನ್ನ ವಿತರಕ ಕಾರ್ತಿಕ್ ಗೌಡ ಹಂಚಿಕೊಂಡಿದ್ದಾರೆ. ಹೈದರಾಬಾದ್ ಕರ್ನಾಟಕ, ಕೋಲಾರ ಕರ್ನಾಟಕ ಭಾಗದಲ್ಲಿ ಕೆಲವು ಚಿತ್ರಮಂದಿರಗಳು ರೀ-ಓಪನ್ ಆಗ್ತಿದೆಯಂತೆ.

'ಗ್ರಾಮೀಣ ಭಾಗದಲ್ಲಿ 'ಸಿ' ಸೆಂಟರ್ ಥಿಯೇಟರ್ ಎಂದು ಹೇಳುವಂತಹ ಚಿತ್ರಮಂದಿರಗಳು ಹಲವು ವರ್ಷದಿಂದ ಮುಚ್ಚಿದ್ದರು. ಈಗ ಪೈಲ್ವಾನ್ ಗಾಗಿ ಮತ್ತೆ ಆರಂಭಿಸುತ್ತಿದ್ದಾರೆ' ಎಂದು ಕಾರ್ತಿಕ್ ಹೇಳಿದರು.

ಸುದೀಪ್ 'ಪೈಲ್ವಾನ್' ನೋಡಲು ಈ 6 ಕಾರಣಗಳು ಸಾಕು

''ಗಡಿಭಾಗದಲ್ಲಿ ಹೆಚ್ಚು ತೆಲುಗು ಸಿನಿಮಾಗಳನ್ನ ಪ್ರದರ್ಶಿಸುವ ಚಿತ್ರಮಂದಿರಗಳಿವೆ ಅಂತಾರೆ. ಅದೆಲ್ಲವೂ ಕನ್ನಡ ಸಿನಿಮಾನ್ನ ಪ್ರದರ್ಶಿಸುವ ಚಿತ್ರಗಳೇ. ಎಲ್ಲೋ ಒಂದೊಂದು ಬೇರೆ ಭಾಷೆ ಸಿನಿಮಾ ರಿಲೀಸ್ ಮಾಡಿರಬಹುದು ಅಷ್ಟೆ'' ಎಂದು ಕಾರ್ತಿಕ್ ಗೌಡ ತಿಳಿಸಿದ್ದಾರೆ.

ಇನ್ನು ದೇಶಾದ್ಯಂತ ಸುಮಾರು 4 ಸಾವಿರ ಸ್ಕ್ರೀನ್ ನಲ್ಲಿ ಪೈಲ್ವಾನ್ ಚಿತ್ರ ತೆರೆಕಾಣುತ್ತಿದೆ. ಹಿಂದಿಯಲ್ಲಿ ಅತಿ ಹೆಚ್ಚು ಸ್ಕ್ರೀನ್ ಸಿಕ್ಕಿದೆಯಂತೆ. ಕನ್ನಡ ಚಿತ್ರವೊಂದಕ್ಕೆ ಇಷ್ಟು ದೊಡ್ಡ ಸಂಖ್ಯೆಯ ಚಿತ್ರಮಂದಿರ ಸಿಕ್ಕಿರುವುದು ಇದೇ ಮೊದಲು ಎಂದು ಕಾರ್ತಿಕ್ ಗೌಡ ಹೇಳಿಕೊಂಡಿದ್ದಾರೆ.

   
 
ಹೆಲ್ತ್