Back
Home » ಬಾಲಿವುಡ್
ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪ್ರಿಯಾಂಕಾ ಚೋಪ್ರಾ: ಸೆಕ್ಷನ್ 393ರ ಅಡಿ 7 ವರ್ಷ ಶಿಕ್ಷೆ.!
Oneindia | 11th Sep, 2019 04:57 PM

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ, ನಿಕ್ ಜೋನಸ್ ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಪತಿಯ ಜೊತೆ ಹಾಯಾಗಿ ಸುತ್ತಾಡಿಕೊಂಡಿರುವ ಪ್ರಿಯಾಂಕಾ, ತರಹೆವಾರಿ ಪೋಟೋಗಳನ್ನು ಹೊಂಚಿಕೊಳ್ಳುತ್ತಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಪ್ರಿಯಾಂಕಾ ಬಗ್ಗೆ ಈಗ ಏಳು ವರ್ಷಗಳ ಜೈಲು ಶಿಕ್ಷೆಯ ವಿಚಾರ ಚರ್ಚೆಯಾಗುತ್ತಿದೆ.

ಅಂದ್ಹಾಗೆ ಏನಿದು ಅಂತೀರಾ? ಪ್ರಿಯಾಂಕ ಅಭಿನಯದ 'ಸ್ಕೈ ಈಸ್ ಪಿಂಕ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಜೊತೆಗೆ ಫರಾನ್ ಅಖ್ತಾರ್ ಹಾಗೂ ಜೈರಾ ವಾಸಿಂ ಕಾಣಿಸಿಕೊಂಡಿದ್ದಾರೆ.

ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ಟ್ರೈಲರ್ ನಲ್ಲಿ, ಅನಾರೋಗ್ಯದಿಂದ ಬಳಲುತ್ತಿರುವ ಮಗಳ ಚಿಕಿತ್ಸೆಗಾಗಿ ಸಧ್ಯದಲ್ಲೇ ನಾವು ಬ್ಯಾಂಕ್ ದರೋಡೆ ಮಾಡೋಣ ಎಂದು ಫರಾನ್ ಅಖ್ತಾರ್ ಗೆ ಹೇಳುವ ದೃಶ್ಯವಿದೆ. ಈ ಒಂದು ದೃಶ್ಯದ ಸ್ಕ್ರೀನ್ ಶಾಟ್ ವೈರಲ್ ಆಗಿದೆ.

ಇದನ್ನು ಗಮನಿಸಿದ ಮಹಾರಾಷ್ಟ್ರ ಪೊಲೀಸರು ಈ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ "ಈ ಘಟನೆ ಸಂಬಂಧ ಐಪಿಸಿ ಸೆಕ್ಷನ್ 393ರ ಅಡಿಯಲ್ಲಿ 7 ವರ್ಷ ಶಿಕ್ಷೆ ಹಾಗೂ ದಂಡವನ್ನು ಕಟ್ಟಬೇಕು" ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

ಇದನ್ನು ಗಮನಿಸಿದ ಪ್ರಿಯಾಂಕಾ ಚೋಪ್ರ "ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೇವೆ. ಹಾಗಾಗಿ ಪ್ಲಾನ್ ಬಿ ಆಕ್ಟಿವೇಟ್ ಮಾಡುತ್ತೇವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರ ಟ್ವೀಟ್ ಮತ್ತು ಪ್ರಿಯಾಂಕಾ ಚೋಪ್ರ ರಿಯಾಕ್ಷನ್ ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

   
 
ಹೆಲ್ತ್