Back
Home » ಸಿನಿ ಸಮಾಚಾರ
ಪ್ರಭಾಸ್ ಗೆ 'ಸ್ಟೈಲಿಶ್' ಎಂದು ಕರೆದ ಅಭಿನಯ ಚಕ್ರವರ್ತಿ
Oneindia | 11th Sep, 2019 07:35 PM

ಬಾಹುಬಲಿ ಸ್ಟಾರ್ ಪ್ರಭಾಸ್ ಕುರಿತು ಸುದೀಪ್ ಮಾತನಾಡಿದ್ದು ಅವರನ್ನ 'ಸ್ಟೈಲಿಶ್' ಎಂದಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. #AskPailwaan ಅಭಿಯಾನದಲ್ಲಿ ಅಭಿಮಾನಿಯೊಬ್ಬರು ಪ್ರಭಾಸ್ ಫೋಟೋ ಶೇರ್ ಮಾಡಿ ಇವರ ಬಗ್ಗೆ ಏನಾದರೂ ಹೇಳಿ ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್ ''ಸ್ಟೈಲಿಶ್'' ಎಂದು ಉತ್ತರಿಸಿದ್ದಾರೆ. ಅದೇ ರೀತಿ ತೆಲುಗಿನ ಮತ್ತೊಬ್ಬ ನಟ ಜೂನಿಯರ್ ಎನ್.ಟಿ.ಆರ್ ಅವರ ಕುರಿತು ಕೂಡ ಅಭಿಮಾನಿಯೊಬ್ಬರು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್ ''He's genuine....'' ಎಂದಿದ್ದಾರೆ.

'ನಿಮ್ಮ ಬಾಸ್ ಯಾರು' ಎಂದು ಕೇಳಿದ್ದಕ್ಕೆ ಸುದೀಪ್ ಹೇಳಿದ ಹೆಸರು ಯಾವುದು?

ಹಾಗೆ, ಪವನ್ ಕಲ್ಯಾಣ್ ಅವರಲ್ಲಿ ನಿಮಗೆ ಇಷ್ಟವಾದ ಗುಣಗಳು ಯಾವುದು ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ''ನಾನು ಅವರೊಂದಿಗೆ ಮಾತನಾಡುವ ಸಂದರ್ಭ ಬಂದಿಲ್ಲ. ಖಂಡಿತವಾಗಿಯೂ ಈ ಪ್ರಶ್ನೆಗೆ ನಾನು ಮುಂದೊಂದು ದಿನ ಉತ್ತರಿಸುತ್ತೇನೆ. ಸೆಪ್ಟೆಂಬರ್ 2 ರಂದೇ ಅವರ ಹುಟ್ಟುಹಬ್ಬ ಎಂಬುದು ನನಗೆ ನೆನಪಿದೆ'' ಎಂದು ಉತ್ತರಿಸಿದ್ದಾರೆ.

ಪ್ಯಾನ್ ಇಂಡಿಯಾ ಮಾಡೋರು ಎರಡು ವಿಷಯದಲ್ಲಿ ರೆಡಿ ಇರಬೇಕು: ಸುದೀಪ್

ಇನ್ನುಳಿದಂತೆ ಪ್ರಭಾಸ್ ಅಭಿನಯಿಸಿದ್ದ ಬಾಹುಬಲಿ ಚಿತ್ರದಲ್ಲಿ ಸುದೀಪ್ ಕೂಡ ಒಂದು ಪಾತ್ರ ಮಾಡಿದ್ದರು. ಸುದೀಪ್ ಅಭಿನಯಿಸಿದ್ದ ಮೊದಲ ತೆಲುಗು ಸಿನಿಮಾ 'ಈಗ' ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಜೂನಿಯರ್ ಎನ್.ಟಿ.ಆರ್ ಅತಿಥಿಯಾಗಿ ಆಗಮಿಸಿದ್ದರು.

ಇದೀಗ, ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಐದು ಭಾಷೆಗಳಲ್ಲಿ ಇದೇ ವಾರ ತೆರೆಕಾಣುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಪೈಲ್ವಾನ್ ತೆರೆಗೆ ಬರ್ತಿದೆ. ಹೆಬ್ಬುಲಿ ಕೃಷ್ಣ ಈ ಚಿತ್ರವನ್ನ ನಿರ್ದೇಶಿಸಿ, ನಿರ್ಮಿಸಿದ್ದಾರೆ.

   
 
ಹೆಲ್ತ್