Back
Home » ಸುದ್ದಿ
ಡೆಂಗಿ ಪರೀಕ್ಷೆ: ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ಪಡೆದರೆ ದೂರು ನೀಡಿ
Oneindia | 11th Sep, 2019 07:43 PM

ಬೆಂಗಳೂರು, ಸೆಪ್ಟೆಂಬರ್ 11: ಡೆಂಗಿ ಕಾಯಿಲೆ ಮತ್ತೆ ಆವರಿಸಿಕೊಳ್ಳುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ನಡುವೆ ಆಸ್ಪತ್ರೆಗಳೂ ಸಹ ಡೆಂಗಿ ಖಾಯಿಲೆ ಹೆಸರಲ್ಲಿ ಭಾರಿ ಹಣ ದೋಚುತ್ತಿವೆ ಎಂಬ ಆರೋಪಗಳೂ ಬರುತ್ತಿವೆ.

ಆದರೆ ಇದಕ್ಕೆ ತಡೆ ಹಾಕಲು ಆರೋಗ್ಯ ಇಲಾಖೆ ಈ ಹಿಂದೆಯೇ ಕ್ರಮ ಕೈಗೊಂಡಿದೆ. ಅದನ್ನು ಈಗ ಮತ್ತೊಮ್ಮೆ ನೆನಪಿಸಿದೆ.

ದಕ್ಷಿಣ ಕನ್ನಡದಲ್ಲಿ ಮತ್ತೆ ಡೆಂಗ್ಯೂ; ಇಬ್ಬರು ಬಲಿ

ಡೆಂಗಿ ಪರೀಕ್ಷೆಯನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಹ ಡೆಂಗಿ ಪರೀಕ್ಷೆಗೆ 250 ರೂಪಾಯಿಗಳಿಗಿಂತಲೂ ಹೆಚ್ಚಿಗೆ ಹಣ ಪಡೆಯುವಂತಿಲ್ಲ ಎಂಬ ನಿಯಮ ಮಾಡಲಾಗಿದೆ.

ಯಾವುದೇ ಆಸ್ಪತ್ರೆಗಳು ಡೆಂಗಿ ಪರೀಕ್ಷೆಗೆ 250 ರೂಪಾಯಿಗಿಂತಲೂ ಹೆಚ್ಚಿನ ಹಣವನ್ನು ರೋಗಿಯಿಂದ ಪಡೆದದ್ದೇ ಆದಲ್ಲಿ ಆರೋಗ್ಯ ಅಧಿಕಾರಿಗೆ ನೇರವಾಗಿ ದೂರು ನೀಡಿ ಹೆಚ್ಚುವರಿಯಾಗಿ ಆಸ್ಪತ್ರೆಗಳು ಪಡೆದ ಹಣವನ್ನು ವಾಪಸ್ ಪಡೆಯಬಹುದಾಗಿದೆ.

ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ ರಾಜ್ಯದಾದ್ಯಂತ ಈ ವರ್ಷದಲ್ಲಿ 10,524 ಮಂದಿಯಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಜನ ಬೆಂಗಳೂರಿನವರೇ ಆಗಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ದೂರುಗಳು ಇಲಾಖೆಗೆ ಬಂದಿವೆ.

ಡೆಂಗ್ಯೂನಿಂದ ಮೃತಪಟ್ಟ ಸುದ್ದಿ ವಾಹಿನಿ ಛಾಯಾಗ್ರಾಹನ ಕುಟುಂಬಕ್ಕೆ 5 ಲಕ್ಷ ಪರಿಹಾರ

ಡೆಂಗಿ ಕಾಯಿಲೆ ಪರೀಕ್ಷೆಗೆ ಕೆಲವು ಲ್ಯಾಬೊರೇಟರಿಗಳು 1000 ಕ್ಕೂ ಹೆಚ್ಚು ಹಣ ಪಡೆಯುತ್ತಿವೆ. ಈ ಬಗ್ಗೆ ಹಲವು ದೂರುಗಳು ಸಹ ಬಂದಿವೆ. ಹಾಗೊಂದು ವೇಳೆ ದೂರು ಬಂದಲ್ಲಿ, ಇಲಾಖೆಯು ಹೆಚ್ಚುವರಿ ಹಣವನ್ನು ದೂರುದಾರರಿಗೆ ವಾಪಸ್ ನೀಡುತ್ತದೆ. ಜೊತೆಗೆ ಲ್ಯಾಬೊರೇಟರಿ ಅಥವಾ ಆಸ್ಪತ್ರೆಗೆ ನೊಟೀಸ್ ನೀಡಿ ಶಿಸ್ತು ಕ್ರಮ ಜರುಗಿಸುತ್ತದೆ.

   
 
ಹೆಲ್ತ್