Back
Home » Car News
ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್
DriveSpark | 11th Sep, 2019 06:29 PM
 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಬದಲಿಗೆ ಬಾಕ್ಸಿ ರೂಪದಲ್ಲಿರುವ ಹೊಸ ತಲೆಮಾರಿನ ಎಸ್‍‍ಯುವಿಯನ್ನು ಅನಾವರಣಗೊಳಿಸಲಾಯಿತು. ಈ ಹೊಸ ಎಸ್‍‍ಯುವಿ ಲ್ಯಾಂಡ್ ರೋವರ್ ಡಿಫೆಂಡರ್ ಆಗಿದೆ. ಹೊಸ ಮಾಲಿನ್ಯ ನಿಯಮಗಳಿಗೆ ಹೊಂದುವಂತಹ ಹಾಗೂ ಹೊಸ ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಈ ಎಸ್‍‍‍ಯುವಿಯು ಎರಡನೆಯ ಮಹಾಯುದ್ಧದೊಂದಿಗೆ ಸಂಬಂಧ ಹೊಂದಿದೆ.


 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಹೊಸ ಡಿಫೆಂಡರ್ ಕಾರು ಲ್ಯಾಂಡ್ ರೋವರ್‍‍ನ ಹೊಸ ಟಿ7 ಎಕ್ಸ್ ಆರ್ಕಿಟೆಕ್ಚರ್ ಮೇಲೆ ನಿರ್ಮಾಣವಾಗಿದೆ. ಈ ಹೊಸ ಕಾರಿನಲ್ಲಿ ಅಲ್ಯುಮಿನಿಯಂ ಮೊನೊಕಾಕ್ ಚಾಸೀಸ್ ಅಳವಡಿಸಲಾಗಿದೆ. ಈ ಚಾಸೀಸ್ ಹಳೆಯ ಮಾದರಿಯ ಕಾರಿನಲ್ಲಿರುವ ಚಾಸೀಸ್‍‍ಗಿಂತ ಹೆಚ್ಚಿನ ಪ್ರಮಾಣದ ಸ್ಥಿರತೆ ಹಾಗೂ ಕಡಿಮೆ ತೂಕವನ್ನು ಹೊಂದಿದೆ.


 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍‍ಯುವಿಯನ್ನು 90 ಹಾಗೂ 110 ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡು ಮಾದರಿಗಳ ಪೈಕಿ 90 ಮಾದರಿಯು 6 ಸೀಟುಗಳನ್ನು ಹೊಂದಿದ್ದರೆ, 110 ಮಾದರಿಯು 7 ಸೀಟುಗಳನ್ನು ಹೊಂದಿದೆ.


 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಮೂರನೇ ಸಾಲಿನಲ್ಲಿರುವ ಸೀಟುಗಳನ್ನು ಮಡುಚಿದರೆ, 1,075 ಲೀಟರ್‍‍ನಷ್ಟು ಬೂಟ್ ಸ್ಪೇಸ್ ದೊರೆತರೆ, ಎರಡನೇ ಸಾಲಿನ ಸೀಟುಗಳನ್ನು ಮಡುಚುವುದರಿಂದ 2,380 ಲೀಟರ್‍‍ನಷ್ಟು ಬೂಟ್‍ ಸ್ಪೇಸ್ ಜಾಗ ಸಿಗಲಿದೆ.


 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍‍ಯುವಿ ಉತ್ತಮವಾದ ಆಫ್ ರೋಡ್ ಮಾದರಿಯಾಗಿರಲಿದೆ. ಈ ಹೊಸ ತಲೆಮಾರಿನ ಎಸ್‍‍ಯುವಿ ಹಲವಾರು ಹೊಸ ಫೀಚರ್‍‍ಗಳನ್ನು ಹೊಂದಿರಲಿದೆ. ಈ ಎಸ್‍‍ಯುವಿಯು 3,720 ಕೆ.ಜಿಯಷ್ಟು ತೂಕವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.


 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಈ ಎಸ್‍‍ಯುವಿಯ ರೂಫ್‍‍ನ ತೂಕವು 300 ಕೆ.ಜಿಯಷ್ಟಿದೆ. ಡಿಫೆಂಡರ್ 291 ಎಂಎಂನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಯಾವುದೇ ರಸ್ತೆಯನ್ನೇ ಆಗಲಿ ಸರಾಗವಾಗಿ ದಾಟುವಂತಹ ಸಾಮರ್ಥ್ಯವನ್ನು ಹೊಂದಿದೆ.

  MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್


 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಹೊಸ ಎಸ್‍‍ಯುವಿಯನ್ನು ಎರಡು ಪೆಟ್ರೋಲ್ ಹಾಗೂ ಎರಡು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಪೆಟ್ರೋಲ್ ಮಾದರಿಯು ಮೈಲ್ ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿದೆ. ಈ ಎಸ್‍‍ಯುವಿಯು ಪ್ಲಗ್ ಇನ್ ಹೈಬ್ರಿಡ್ ಮಾದರಿಯನ್ನು ಸಹ ಹೊಂದಿರಲಿದೆ. ಈ ಎಸ್‍‍ಯುವಿಯಲ್ಲಿ 8 ಸ್ಪೀಡ್‍‍ನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

  MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!


 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಆಫ್ ರೋಡ್ ಸಾಮರ್ಥ್ಯದ ಈ ಎಸ್‍‍ಯುವಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅಳವಡಿಸಲಾಗಿದೆ. ಇದರಲ್ಲಿರುವ ರೇರ್ ಲಾಕಿಂಗ್ ಡಿಫರೆನ್ಶಿಯಲ್ ಈ ಎಸ್‍‍ಯುವಿಯನ್ನು ಪೂರ್ಣ ಪ್ರಮಾಣದ ಆಫ್ ರೋಡ್ ವಾಹನವನ್ನಾಗಿಸಿದೆ. ಈ ಎಸ್‍‍ಯುವಿಯಲ್ಲಿ ಟೆರೇನ್ 2 ರೆಸ್ಪಾನ್ಸ್ ಸಿಸ್ಟಂ ಎಂಬ ಆಫ್ ರೋಡ್ ಟೆಕ್ನಾಲಜಿಯನ್ನು ಸಹ ಅಳವಡಿಸಲಾಗಿದೆ.

  MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್


 • ಅನಾವರಣಗೊಂಡ ಹೊಸ ತಲೆಮಾರಿನ ಲ್ಯಾಂಡ್ ರೋವರ್ ಡಿಫೆಂಡರ್

  ಹೊಸ ಎಸ್‍‍ಯುವಿಯನ್ನು ಸ್ಟಾಂಡರ್ಡ್, ಇ, ಎಸ್‍ಇ ಹಾಗೂ ಹೆಚ್‍ಎಸ್‍‍ಇ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಇದರ ಜೊತೆಗೆ ಎಕ್ಸ್ ಪ್ಲೋರರ್, ಅಡ್ವೆಂಚರ್, ಕಂಟ್ರಿ ಹಾಗೂ ಅರ್ಬನ್ ಪ್ಯಾಕ್ ಎಂಬ ನಾಲ್ಕು ವಿವಿಧ ಬಗೆಯ ಅಕ್ಸೆಸರಿ ಪ್ಯಾಕೇಜ್‍‍ಗಳಿರಲಿವೆ.
ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಎಸ್‍‍ಯುವಿಯೊಂದನ್ನು ಅನಾವರಣಗೊಳಿಸಲಾಯಿತು. ಈ ಎಸ್‍‍ಯುವಿ ಅತಿ ಹೆಚ್ಚು ಮಾರಾಟವಾಗುವ ಒಂದು ಮಿಲಿಯನ್ ಡಾಲರ್ ಬೆಲೆಯ ಸೂಪರ್‌ಕಾರ್ ಅಥವಾ ಮಾಸ್ ಮಾರುಕಟ್ಟೆಯ ಬೆಸ್ಟ್ ಸೆಲ್ಲರ್ ಕಾರ್ ಆಗಿರಲಿಲ್ಲ.

   
 
ಹೆಲ್ತ್