Back
Home » Car News
ವಾಹನ ಮಾಲೀಕರೇ ನಿಮ್ಮ ಬಳಿ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!
DriveSpark | 11th Sep, 2019 06:29 PM
 • ವಾಹನ ಮಾಲೀಕರೇ ನಿಮ್ಮ ಬಳಿ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಹೌದು, ಈ ಹಿಂದೆ ಇದ್ದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತವು ರೂ. 100 ರಿಂದ ಇದೀಗ ಸಾವಿರಕ್ಕೆ ಏರಿಕೆಯಾಗಿದ್ದು, ಕೆಲವು ವಾಹನ ಮಾಲೀಕರಿಗೆ ವಾಹನದ ಬೆಲೆಗಿಂತ ದಂಡದ ಮೊತ್ತವೇ ಹೊರೆಯಾಗಿದೆ. ಆದ್ರೆ ನೀವು ಹೊಸ ಸಂಚಾರಿ ನಿಯಮ ಉಲ್ಲಂಘನೆಯ ಹೊರತಾಗಿಯೂ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ಒಂದು ಅವಕಾಶವಿದೆ. ಹಾಗಂತ ಇದು ಎಲ್ಲಾ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೂ ಅನ್ವಯವಾಗುವುದಿಲ್ಲ.


 • ವಾಹನ ಮಾಲೀಕರೇ ನಿಮ್ಮ ಬಳಿ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಕೆಲವೊಮ್ಮೆ ವಾಹನ ಮಾಲೀಕರು ಪ್ರಯಾಣದ ವೇಳೆ ವಾಹನಗಳ ಮೂಲ ದಾಖಲೆಗಳನ್ನು ಕೊಂಡೊಯ್ಯುವುದನ್ನ ಮರೆತುಬಿಡಬಹುದು. ಈ ವೇಳೆ ಒಂದು ಸಣ್ಣ ತಪ್ಪಿನಿಂದಾಗಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದು ಸಾವಿರಾರು ದಂಡ ಪಾವತಿಸುವ ಪರಿಸ್ಥಿತಿ ಎದುರಾಗಬಹುದು.


 • ವಾಹನ ಮಾಲೀಕರೇ ನಿಮ್ಮ ಬಳಿ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಆದ್ರೆ ನೀವು ವಾಹನ ಚಾಲನೆ ವೇಳೆ ಮೂಲ ಪ್ರತಿ ತಂದಿಲ್ಲ ಎಂಬ ಕಾರಣಕ್ಕೆ ಹೆದರಬೇಕಿಲ್ಲ. ಹೌದು, ಒಂದು ವೇಳೆ ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಹೊಂದಿದ್ದು, ಅವುಗಳನ್ನು ಪ್ರಯಾಣದ ವೇಳೆ ತೆಗೆದುಕೊಂಡ ಬಂದಿಲ್ಲ ಎಂಬ ಕಾರಣಕ್ಕೆ ಸಾವಿರಾರು ರೂಪಾಯಿ ದಂಡಕಟ್ಟಬೇಕಿಲ್ಲ.


 • ವಾಹನ ಮಾಲೀಕರೇ ನಿಮ್ಮ ಬಳಿ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲವಾದಲ್ಲಿ ಸಾವಿರಾರು ರೂಪಾಯಿ ದಂಡದ ಬದಲಾಗಿ ರೂ.100 ಚಲನ್ ಪಡೆದುಕೊಂಡು 15 ದಿನದೊಳಗಾಗಿ ಕೋರ್ಟ್‌ಗೆ ಮೂಲಪ್ರತಿಗಳನ್ನು ಸಲ್ಲಿಸುವ ಅವಕಾಶವಿದ್ದು, ಯಾವುದೇ ಕಾರಣಕ್ಕೂ ಭಯಕ್ಕೆ ಬಿದ್ದು ದಂಡ ಪಾವತಿ ಮಾಡುವುದಾಗಲಿ ಅಥವಾ ಲಂಚ ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ.


 • ವಾಹನ ಮಾಲೀಕರೇ ನಿಮ್ಮ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸರಿಯಾಗಿದ್ದು, ಒಂದು ವೇಳೆ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಮರೆತುಬಿಟ್ಟುಬಂದಾಗ ಮಾತ್ರವೇ ಈ ಅವಕಾಶವು ನಿಮ್ಮ ಸಹಾಯಕ್ಕೆ ಬರಲಿದೆ. ಕೇವಲ ರೂ.100 ದಂಡದೊಂದಿಗೆ ಕೋರ್ಟ್‌ಗೆ ಮೂಲಪ್ರತಿಗಳನ್ನು ಸಲ್ಲಿಕೆ ಮಾಡಿದಾಗ ಮಾತ್ರವೇ ಭಾರೀ ದಂಡದಿಂದ ಪಾರಾಗಬಹುದು.


 • ವಾಹನ ಮಾಲೀಕರೇ ನಿಮ್ಮ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಕೆಲವೊಮ್ಮೆ ಅವಸರದಲ್ಲಿ ಡ್ರೈವಿಂಗ್ ಲೆಸೆನ್ಸ್, ವಾಹನದ ಆರ್‌ಸಿ, ಮಾಲಿನ್ಯ ತಪಸಣಾ ಪತ್ರ ಅಥವಾ ವಿಮಾ ದಾಖಲೆಗಳನ್ನು ಮರೆತುಬಿಟ್ಟು ಪ್ರಯಾಣ ಮಾಡುವ ಸಂದರ್ಭದಲ್ಲಿ ಇದು ಸಹಾಯಕ್ಕೆ ಬರಲಿದ್ದು, ಇನ್ನುಳಿದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಇದು ಯಾವುದೇ ಕಾರಣಕ್ಕೂ ಅನ್ವಯವಾಗುದಿಲ್ಲ.

  MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?


 • ವಾಹನ ಮಾಲೀಕರೇ ನಿಮ್ಮ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಹೆಲ್ಮೆಟ್ ರಹಿತ ಪ್ರಯಾಣ, ಸೀಟ್ ಬೆಲ್ಟ್ ಇಲ್ಲದೇ ಕಾರು ಚಾಲನೆ, ತ್ರಿಬಲ್ ರೈಡಿಂಗ್, ರಾಂಗ್ ಸೈಡ್ ಪಾರ್ಕಿಂಗ್, ಡ್ರಂಕ್ ಅಂಡ್ ಡ್ರೈವ್, ಸಿಗ್ನಲ್ ಜಂಪ್, ಓವರ್ ಲೋಡ್ ಕ್ಯಾರಿ ಪ್ರಕರಣಗಳಿಗೆ ಸ್ಥಳದಲ್ಲೇ ದಂಡವಸೂಲಿ ಮಾಡಲಿದ್ದು, ವಾಹನ ದಾಖಲೆಗಳನ್ನು ಮರೆತುಬರುವ ಮಾಲೀಕರಿಗೆ ಮಾತ್ರ ದಂಡದಿಂದ ಬಚಾವ್ ಆಗುವ ಒಂದು ಅವಕಾಶ ನೀಡಲಾಗಿದೆ.

  MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!


 • ವಾಹನ ಮಾಲೀಕರೇ ನಿಮ್ಮ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಹಾಗಂತ ಪೊಲೀಸ್ ತಪಾಸಣೆ ವೇಳೆ ಎಲ್ಲಾ ದಾಖಲೆಗಳು ಇವೆ ಎಂದು ತಾತ್ಕಲಿಕವಾಗಿ ಚಲನ್ ಪಡೆದು ತಪ್ಪಿಸಿಕೊಂಡರು ಸಹ ಕೊನೆ ಗಳಿಗೆಯಲ್ಲಿ ದಾಖಲೆಗಳನ್ನು ಸಲ್ಲಿಸಲು ವಿಫಲವಾದಲ್ಲಿ ಕೋರ್ಟ್ ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಡುವುದಿಲ್ಲ.

  MOST READ:ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ್ದು ಇದೇ ಟ್ರಕ್ ಚಾಲಕ


 • ವಾಹನ ಮಾಲೀಕರೇ ನಿಮ್ಮ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಹೀಗಾಗಿ ಯಾವ ವಾಹನ ಮಾಲೀಕರು ಸರಿಯಾದ ದಾಖಲೆಗಳನ್ನು ಹೊಂದಿರುತ್ತಾನೋ ಅಂತವರಿಗೆ ಮಾತ್ರವೇ ಈ ಅವಕಾಶ ನೆರವಿಗೆ ಬರಲಿದ್ದು, ಅಪಘಾತಕ್ಕೆ ಕಾರಣವಾಗಬಲ್ಲ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಯಾವುದೇ ಕಾರಣಕ್ಕೂ ಇಂತಹ ಅವಕಾಶ ನೀಡುವುದಿಲ್ಲ ಎಂಬುವುದು ನೆನಪಿರಲಿ.


 • ವಾಹನ ಮಾಲೀಕರೇ ನಿಮ್ಮ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಇನ್ನು ಹೊಸ ಮೋಟಾರ್ ಕಾಯ್ದೆ ಜಾರಿ ನಂತರ ವಾಹನ ಸವಾರರು ಮೈ ಎಲ್ಲಾ ಕಣ್ಣು ಎನ್ನುವ ರೀತಿಯಲ್ಲಿ ಓಡಾಡುವಂತಾಗಿದ್ದು, ಯಾವ ತಪ್ಪು ಮಾಡಿದ್ರೆ ಎಷ್ಟು ದಂಡ ಜಡಿಯಬಹುದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹೀಗಿರುವಾಗ ದಂಡ ಮೊತ್ತದಲ್ಲಿ ತುಸು ಬದಲಾವಣೆ ತರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.


 • ವಾಹನ ಮಾಲೀಕರೇ ನಿಮ್ಮ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಹೊಸ ಮೋಟಾರ್ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದಿದ್ದರೂ ಸಹ ಕೆಲವು ರಾಜ್ಯಗಳು ಹೊಸ ಮೋಟಾರ್ ಕಾಯ್ದೆ ಜಾರಿಗೊಳಿಸಲು ಹಿಂದೇಟು ಹಾಕುತ್ತಿದ್ದರೆ ಇನ್ನು ಕೆಲವು ರಾಜ್ಯ ಸರ್ಕಾರಗಳು ದಂಡದ ಮೊತ್ತದಲ್ಲಿ ತುಸು ವಿನಾಯ್ತಿ ನೀಡುವ ಸುಳಿವು ನೀಡಿವೆ.


 • ವಾಹನ ಮಾಲೀಕರೇ ನಿಮ್ಮ ದಾಖಲೆಗಳು ಇಲ್ಲದಿದ್ದರೂ ರೂ.100 ದಂಡ ಪಾವತಿಸಿ ಸಾಕು..!

  ಸಂಚಾರಿ ನಿಯಮ ಉಲ್ಲಂಘನೆಗಳಿಗೆ ವಿಧಿಸಲಾಗುತ್ತಿರುವ ಭಾರೀ ದಂಡದಲ್ಲಿ ಅರ್ಧದಷ್ಟು ಮೊತ್ತವನ್ನು ಕಡಿತಗೊಳಿಸುತ್ತಿರುವ ಗುಜರಾತ್ ಸರ್ಕಾರವು, ಅಲ್ಲಿನ ಜನತೆಗೆ ತುಸು ನಿರಾಳತೆ ನೀಡಿದೆ. ಹೆಲ್ಮೆಟ್ ಧರಿಸದೇ ಇದ್ದರೆ ರೂ. 1 ಸಾವಿರ ಬದಲಾಗಿ ರೂ. 500, ಸೀಟ್ ಬೆಲ್ಟ್‌ ಧರಿಸಿದೇ ಇದ್ದರೆ ರೂ. 1 ಸಾವಿರ ಬದಲಾಗಿ ರೂ. 500, ಲೈಸೆನ್ಸ್ ಇಲ್ಲದ ಬೈಕ್ ಸವಾರಿಗೆ ರೂ.5 ಸಾವಿರ ಬದಲಾಗಿ ರೂ.2 ಸಾವಿರ ಮತ್ತು ಕಾರು ಚಾಲಕರಿಗೆ ರೂ.3 ಸಾವಿರ ದಂಡ ವಿಧಿಸಲಾಗುತ್ತಿದ್ದು, ಒಂದೇ ಬಾರಿಗೆ ಭಾರೀ ದಂಡ ವಿಧಿಸುವುದರಿಂದ ವಾಹನ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ದೇಶಾದ್ಯಂತ ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಅನುಷ್ಠಾನದ ನಂತರ ಎಲ್ಲ ಕಡೆಗೂ ಭಾರೀ ಪ್ರಮಾಣದ ದಂಡ ವಸೂಲಿಯದ್ದೆ ಸುದ್ದಿ. ಹೀಗಿರುವಾಗ ಸಾವಿರಾರು ರೂಪಾಯಿ ದಂಡದಿಂದ ಪಾರಾಗಲು ಯಾವೆಲ್ಲಾ ಮಾರ್ಗಗಳಿವೆ ಎನ್ನುವುದೇ ಸದ್ಯದ ಟ್ರೆಂಡ್.

   
 
ಹೆಲ್ತ್