Back
Home » ಸುದ್ದಿ
ದುಬಾರಿ ಟ್ರಾಫಿಕ್ ದಂಡ: ಗಡ್ಕರಿ ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸ್ಕೂಟರ್ ಎಸೆಯಲು ಹೋದಾಗ..
Oneindia | 11th Sep, 2019 10:06 PM

ನವದೆಹಲಿ, ಸೆ 11: ಕೇಂದ್ರ ಸರಕಾರದ ಹೊಸ ಮೋಟರ್ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಯುವ ಕಾರ್ಯಕರ್ತರು, ಸಾರಿಗೆ ಮತ್ತು ಭೂಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮನೆಗೆ ಸ್ಕೂಟರ್ ಅನ್ನು ಎಸೆಯಲು ಹೋಗಿದ್ದರು.

ಹೊಸ ಟ್ರಾಫಿಕ್ ದಂಡ ಪದ್ದತಿಯನ್ನು ಪ್ರತಿಭಟಿಸಿ ಐವೈಸಿ (ಭಾರತೀಯ ಯುವ ಕಾಂಗ್ರೆಸ್) ಘಟಕ, ಸಚಿವರ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.

ಆ ವೇಳೆ, ಕಾರ್ಯಕರ್ತರು, ಕೇಂದ್ರ ಸರಕಾರದ ವಿರುದ್ದ ಘೋಷಣೆಯನ್ನು ಕೂಗುತ್ತಾ, ಗಡ್ಕರಿ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆದಾಗ, ಕೆಲವು ಕಾರ್ಯಕರ್ತರು, ಬ್ಯಾರಿಕೇಡ್ ಹಾರಲು ಮುಂದಾದರು.

ಆದರೆ, ಇದ್ಯಾವುದಕ್ಕೂ ಪೊಲೀಸರು ಅವಕಾಶವನ್ನು ನೀಡಲಿಲ್ಲ. ಇದರಿಂದ, ಪ್ರತಿಭಟನೆಯ ಕಾವು ಇನ್ನಷ್ಟು ಹೆಚ್ಚಾಯಿತು. ಆಗ, ಐದಾರು ಕಾರ್ಯಕರ್ತರು, ಸ್ಕೂಟರ್ ಅನ್ನು ಗಡ್ಕರಿ ನಿವಾಸಕ್ಕೆ ಎಸೆಯಲು ಹೋದಾಗ, ಅದು ಬ್ಯಾರಿಕೇಟ್ ದಾಟದೇ, ಅಲ್ಲೇ ಬಿದ್ದು ಹೋಯಿತು. ಸ್ಕೂಟರ್ ಮಾತ್ರ ಸಂಪೂರ್ಣ ಜಖಂಗೊಂಡಿತು.

ದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ

" ನೂತನ ಮೋಟಾರು ವಾಹನ ಕಾಯ್ದೆಯಡಿಯಲ್ಲಿನ ದಂಡದ ಮೊತ್ತ ಕಡ್ಡಾಯವಲ್ಲ. ಅದರ ಪ್ರಮಾಣವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ಮುಕ್ತ ಅವಕಾಶವಿದೆ" ಎನ್ನುವ ಹೇಳಿಕೆಯನ್ನು ನಿತಿನ್ ಗಡ್ಕರಿ ನೀಡಿದ್ದಾರೆ.

" ರಾಜ್ಯ ಸರ್ಕಾರಗಳು ದಂಡದ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ" ಎಂದು ಸಚಿವರು ಹೇಳಿದ್ದಾರೆ. ಕರ್ನಾಟಕದಲ್ಲಿ, ದಂಡದ ಮೊತ್ತ ಕಮ್ಮಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಾರಿಗೆ ಇಲಾಖೆಗೆ ಸೂಚಿಸಿದ್ದಾರೆ.

   
 
ಹೆಲ್ತ್