Back
Home » ಇತ್ತೀಚಿನ
ಭಾರತೀಯರ ಭಾಷೆಗಳು ಅಲೆಕ್ಸಾಗೆ ಸವಾಲು!
Gizbot | 12th Sep, 2019 09:00 AM
 • ಭಾರತದಲ್ಲಿ ವಿಶಿಷ್ಟವಾದ ವರ್ತನೆ.

  ಭಾರತವು ಭಾಷೆಗಳು, ಶಬ್ದಕೋಶ, ಉಪಭಾಷೆಗಳು ಮತ್ತು ಉಚ್ಚಾರಣೆಗಳ ನಂಬಲಾಗದ ವೈವಿಧ್ಯತೆಯನ್ನು ಹೊಂದಿದೆ. ಭಾರತದಲ್ಲಿ ಲಭ್ಯವಾಗಿರುವ ಭಾಷಾ ವೈವಿಧ್ಯತೆ, ಪದ ಭಂಡಾರ, ಆಡುನುಡಿಗಳು ಮತ್ತು ಉಚ್ಚಾರಣೆಗಳಿವೆ. ಅದರ ಜತೆಗೆ, ಭಾರತೀಯರು ವಿಶಿಷ್ಟವಾಗಿ ಹಲವು ಭಾಷೆಗಳನ್ನು ಸೇರಿಸಿಕೊಂಡು ಮಾತನಾಡುತ್ತಾರೆ. ಭಾರತೀಯರು ಅಲೆಕ್ಸಾಕ್ಕೆ ಮಿಶ್ರ ಭಾಷೆಯ ಪ್ರಶ್ನೆಗಳನ್ನು ಹಾಕುತ್ತಾ ಉತ್ತರ ಪಡೆಯಲು ಬಯಸುತ್ತಿದ್ದಾರೆ. ಇದು ಭಾರತದಲ್ಲಿ ವಿಶಿಷ್ಟವಾದ ವರ್ತನೆ. ಇದು ಅತ್ಯಂತ ಲಾಭದಾಯಕ ಅನುಭವವಾಗಿದೆ ಎಂದು ಅವರು ತಿಳಿಸಿದ್ದಾರೆ.


 • ದೊಡ್ಡ ಪದಕೋಶ

  ಅಲೆಕ್ಸಾಗೆ ಭಾರತದಲ್ಲಿ ಎದುರಾಗಿರುವ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ, ಪ್ರಾದೇಶಿಕ ಭಾಷೆಗಳಲ್ಲಿನ ಪದಗಳಿಗಾಗಿ ನಿರ್ದಿಷ್ಟವಾದ ಮತ್ತು ಮಾದರಿಯಾದ ಸ್ಪೆಲ್ಲಿಂಗ್ ಇಲ್ಲದಿರುವುದು, ಇಲ್ಲಿ ವಿಭಿನ್ನ ಕಾಗುಣಿತ ಮತ್ತು ಉಚ್ಚಾರಣೆಗಳಿರುತ್ತವೆ. ಈ ಸವಾಲು ಪರಿಹಾರಕ್ಕಾಗಿ ಅಲೆಕ್ಸಾ ಭಾರತದಲ್ಲಿ ಧ್ವನ್ಯಾತ್ಮಕ ಹುಡುಕಾಟಕ್ಕಾಗಿ ದೊಡ್ಡ ಪದಕೋಶವನ್ನೇ ತನ್ನ ಒಡಲಲ್ಲಿರಿಸಿಕೊಂಡಿದೆ. ಇದರಿಂದ ಭಾಷಾ ಸಂಸ್ಕರಣೆ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಭಾರತೀಯರಿಗಾಗಿ ಅಲೆಕ್ಸಾ ಅಭಿವೃದ್ಧಿಪಡಿಸುವುದು ಅತಿದೊಡ್ಡ ಸವಾಲಿನ ಕಾರ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.


 • ಭಾಷಾ ತಿಳುವಳಿಕೆ

  ಪ್ರಪಂಚದ ಇತರ ಭಾಗಗಳಲ್ಲಿ, ಅಲೆಕ್ಸಾ ನೈಸರ್ಗಿಕ ಭಾಷಾ ತಿಳುವಳಿಕೆಯನ್ನು ಏಕ ಭಾಷಾ ಮಾಡೆಲಿಂಗ್ ಅಥವಾ ಸಂಸ್ಕರಣೆಯಂತೆ ನೋಡುತ್ತದೆ. ಆದರೆ ಭಾರತದಲ್ಲಿ ಇದು ವ್ಯವಸ್ಥೆಯ ಪ್ರತಿಯೊಂದು ಘಟಕಕ್ಕೂ ಬಹುಭಾಷಾ ಮಾಡೆಲಿಂಗ್ ಅಥವಾ ಸಂಸ್ಕರಣೆ ಎಂದು ಭಾವಿಸುತ್ತದೆ.ಭಾರತದಂತಹಾ ದೇಶದ ವಿವಿಧತೆಯ ನಾಡಿನಲ್ಲಿ ಸವಾಲಿನ ಸಮಸ್ಯೆಗಳು ಬಂದಾಗಲೆಲ್ಲಾ, ಜಗತ್ತಿನಾದ್ಯಂತ ಇರುವ ಇತರರಿಗೂ ಇರಬಹುದಾದ ಸಮಸ್ಯೆಗಳನ್ನು ಪರಿಹರಿಸಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಅದು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.


 • ಕೃತಕ ಬುದ್ಧಿಮತ್ತೆ

  2017ರ ಅಕ್ಟೋಬರ್‌ನಲ್ಲಿ ಯುಎಸ್, ಯುಕೆ ಮತ್ತು ಜರ್ಮನಿಗಳಲ್ಲಿ ಧ್ವನಿ ಸಹಾಯಕವನ್ನು ಪ್ರಾರಂಭಿಸಿದ ನಂತರ ಭಾರತವು ನಾಲ್ಕನೇ ದೇಶವಾಗಿ ಅಲೆಕ್ಸಾ ಸೇವೆಯನ್ನು ಪಡೆಯಿತು. ಅಮೆಜಾನ್ ಕೃತಕ ಬುದ್ಧಿಮತ್ತೆ ಆಧಾರಿತ (ಎಐ) ಅಲೆಕ್ಸಾ ತಂತ್ರಾಂಶವನ್ನು ತನ್ನ ಇಕಾಮರ್ಸ್, ಕ್ಲೌಡ್, ಮ್ಯೂಸಿಕ್ ಮತ್ತು ಮನರಂಜನಾ ಸೇವೆಗಳಿಗೆ ಸಂಪೂರ್ಣವಾಗಿ ವಿಸ್ತರಿಸಲು ಕೆಲಸ ಮಾಡುತ್ತಿದೆ. ಈ ಅಲೆಕ್ಸಾ ಸೇವೆಯನ್ನು ಭವಿಷ್ಯದಲ್ಲಿ ಎಲ್ಲಾ ಸಹಾಯಕ ಕಾರ್ಯಗಳಿಗೂ ಉಪಯೋಗವಾಗುವಂತೆ ಮಾಡುವುದು ಅಮೆಜಾನ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
"ಭಾರತಕ್ಕಾಗಿ ಅಲೆಕ್ಸಾವನ್ನು ಅಭಿವೃದ್ಧಿಪಡಿಸುವುದು ಭಾಷಾ ಸಂಸ್ಕರಣೆಗೆ ಅತ್ಯಂತ ಸವಾಲಿನ ಅನುಭವ, ಆದರೆ ಅತ್ಯಂತ ಲಾಭದಾಯಕ ಅನುಭವವಾಗಿದೆ" ಎಂದು ಅಲೆಕ್ಸಾ ಎಐ ಮತ್ತು ನ್ಯಾಚುರಲ್ ಅಂಡ್ ರ್ಸ್ಟ್ಯಾಂಡಿಂಗ್ ಮುಖ್ಯಸ್ಥ ಉಪಾಧ್ಯಕ್ಷ ಪ್ರೇಮ್ ನಟರಾಜನ್ ಅವರು ಹೇಳಿದ್ದಾರೆ. ಜಗತ್ತಿನ ಇತರ ಭಾಷೆಗಳಲ್ಲಿ ಸಹಜ ಭಾಷಾ ಅರಿವಿನ ಪ್ರಕ್ರಿಯೆಯನ್ನು ಅಲೆಕ್ಸಾ ಒಂದೇ ಭಾಷೆಯಾಗಿ ಪರಿಗಣಿಸುತ್ತಿದ್ದರೆ, ಭಾರತದಲ್ಲಿ ಹಾಗಲ್ಲ. ಸಿಸ್ಟಂನ ಪ್ರತಿಯೊಂದು ವಾಕ್ಯಕ್ಕೂ ಹಲವು ಭಾಷೆಗಳ ಪದ ಭಂಡಾರವನ್ನು ಸಂಸ್ಕರಿಸುವ ಅನಿವಾರ್ಯತೆ ಅದಕ್ಕಿದೆ ಎಂದಿದ್ದಾರೆ.

   
 
ಹೆಲ್ತ್