Back
Home » ಇತ್ತೀಚಿನ
ವಿಶ್ವದ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಗೆ ಇದೀಗ 27,000 ರುಪಾಯಿ
Gizbot | 12th Sep, 2019 03:00 PM
 • 26.4 ಮಿಲಿಯನ್ ಯುನಿಟ್ ಮಾರಾಟ:

  ಎಲ್ಲಾ ಫೋನ್ ಗಳಲ್ಲಿ ಅತ್ಯಂತ ಹೆಚ್ಚು ಗಮನಿಸಬೇಕಾದ ಬೆಲೆಯ ಬದಲಾವಣೆ ಎಂದರೆ ಐಫೋನ್ ಎಕ್ಸ್ ಆರ್ ಫೋನಿನದ್ದು. ಐಹೆಚ್ಎಸ್ ಮಾರ್ಕೆಟ್ ನ ವರದಿಯ ಪ್ರಕಾರವೇ ಹೇಳುವುದಾದರೆ ಐಫೋನ್ ಎಕ್ಸ್ ಆರ್ ವಿಶ್ವದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಸ್ಮಾರ್ಟ್ ಫೋನ್. ಐಹೆಚ್ಎಸ್ ಮಾರ್ಕೆಟ್ ವರದಿಯ ಪ್ರಕಾರ ಆಪಲ್ ಸುಮಾರು 26.4 ಮಿಲಿಯನ್ ಐಫೋನ್ ಎಕ್ಸ್ ಆರ್ ಯುನಿಟ್ಸ್ ನ್ನು 2019ರಲ್ಲಿ ಇದುವರೆಗೆ ಮಾರಾಟ ಮಾಡಿದೆ.


 • ಬದಲಾದ ಬೆಲೆ:

  ಬದಲಾದ ಬೆಲೆಯ ನಂತರ 64ಜಿಬಿ ಮತ್ತು 128ಜಿಬಿ ಸ್ಟೋರೇಜ್ ವೇರಿಯಂಟ್ ನ ಐಫೋನ್ ಎಕ್ಸ್ ಆರ್ ಗಳು ಮೊದಲಿನ ಬೆಲೆಗಿಂತ 27,000 ರುಪಾಯಿ ಕಡಿಮೆ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಬೇಸ್ ವೇರಿಯಂಟ್ ನ ಫೋನ್ ಇದೀಗ ಅಧಿಕೃತವಾಗಿ 50,000 ಕ್ಕೂ ಕಡಿಮೆ ಬೆಲೆಯಲ್ಲಿ ಅಂದರೆ 49,990 ರುಪಾಯಿ ಬೆಲೆಗೆ ಸಿಗುತ್ತದೆ.

  ಈ ಮೊದಲು ಅಂದರೆ 2019 ರಲ್ಲಿ ಮೊದಲ ಬಾರಿಗೆ ಐಫೋನ್ ಎಕ್ಸ್ಆರ್ ಬಿಡುಗಡೆಗೊಂಡಾಗ ಬೇಸ್ ವೇರಿಯಂಟ್ ನ ಈ ಸ್ಮಾರ್ಟ್ ಫೋನ್ ಗೆ ಆಪಲ್ ವೆಬ್ ಸೈಟ್ ನಲ್ಲಿ 76,900 ರುಪಾಯಿ ನಿಗದಿಗೊಳಿಸಲಾಗಿತ್ತು. ಎರಡನೇ ಸ್ಟೋರೇಜ್ ವೇರಿಯಂಟ್ 128ಜಿಬಿ ಇದೀಗ ಬದಲಾದ ಕಡಿಮೆ ಬೆಲೆಯಲ್ಲಿ ಅಂದರೆ 54,900 ರುಪಾಯಿಗೆ ಸಿಗುತ್ತೆ. ಆದರೆ 256ಜಿಬಿ ವೇರಿಯಂಟ್ ಗೆ ಹೊಸ ಬೆಲೆಯನ್ನು ಆಪಲ್ ವೆಬ್ ಸೈಟ್ ನಲ್ಲಿ ನಮೂದಿಸಲಾಗಿಲ್ಲ.


 • ಎಪ್ರಿಲ್ ನಲ್ಲಿ ಭಾರತೀಯ ಬೆಲೆ:

  ಎಪ್ರಿಲ್ ನಲ್ಲಿ ಆಪಲ್ ಅನಧಿಕೃತವಾಗಿ ಭಾರತದಲ್ಲಿ ಐಫೋನ್ ಎಕ್ಸ್ ಆರ್ ಬೆಲೆಯನ್ನು ಕಡಿಮೆಗೊಳಿಸಲಾಗಿತ್ತು.ಆದರೆ ಇದು ಅಧಿಕೃತ ಬೆಲೆ ಇಳಿಕೆ ಆಗಿರಲಿಲ್ಲ ಆದರೆ ಆಫ್ ಲೈನ್ ರೀಟೈಲರ್ ಗಳು, ಆನ್ ಲೈನ್ ರೀಟೈಲರ್ ಗಳು ಮತ್ತು ಬ್ಯಾಂಕ್ ಆಫರ್ ಗಳು ಇತ್ಯಾದಿಗಳಿಂದಾಗಿ ಬೇಸ್ ವೇರಿಯಂಟ್ ನ ಐಫೋನ್ ಎಕ್ಸ್ ಆರ್ ನ್ನು 53,900 ರುಪಾಯಿಗೆ ಭಾರತದಲ್ಲಿ ಖರೀದಿಸುವುದಕ್ಕೆ ಸಾಧ್ಯವಾಗುತ್ತಿತ್ತು.


 • ಆನ್ ಲೈನ್ ಸ್ಟೋರ್ ನಲ್ಲಿ ಹಳೆಯ ಬೆಲೆ:

  ಆದರೆ ಇದೀಗ ಹೊಸ ಬೆಲೆಯ ಅನುಸಾರ ಐಫೋನ್ ಎಕ್ಸ್ ಆರ್ ನ ಬೆಲೆಯನ್ನು ಆನ್ ಲೈನ್ ಸ್ಟೋರ್ ಗಳಾಗಿರುವ ಫ್ಲಿಪ್ ಕಾರ್ಟ್, ಪೇಟಿಎಂ ಮಾಲ್ ಮತ್ತು ಅಮೇಜಾನ್ ಗಳು ಇದುವರೆಗೂ ಪ್ರಕಟಿಸಿಲ್ಲ. ಸದ್ಯ 64ಜಿಬಿ ವೇರಿಯಂಟ್ 59,999 ರುಪಾಯಿಗೆ, 128ಜಿಬಿ 64,999 ರುಪಾಯಿಗೆ, 256ಜಿಬಿಯನ್ನು 82,000 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ.


 • ಕೈಗೆಟುಕದ ದ್ರಾಕ್ಷಿ:

  ಅಕ್ಟೋಬರ್ 2018 ರಲ್ಲಿ ಐಫೋನ್ ಎಕ್ಸ್ಆರ್ ಭಾರತದಲ್ಲಿ ಲಭ್ಯವಾಗಲು ಪ್ರಾರಂಭವಾದಾಗ ಇದರ ಆರಂಭಿಕ ಬೆಲೆ ಅಂದರೆ 64ಜಿಬಿ ವೇರಿಯಂಟ್ ನ ಬೆಲೆಯೇ 76,900 ರುಪಾಯಿ ಆಗಿತ್ತು. ಇತರೆ ಎರಡು ವೇರಿಯಂಟ್ ಗಳು ಕ್ರಮವಾಗಿ 81,900 ಮತ್ತು 91,900 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಕೈಗೆಟುಕುವ ಬೆಲೆಯ ಐಫೋನ್ ಎಂದು ಇದನ್ನು ಕರೆಯಲಾಗುತ್ತಿದ್ದರೂ ಕೂಡ ಅನೇಕ ಭಾರತೀಯ ಖರೀದಿದಾರರಿಗೆ ಖಂಡಿತ ಇದು ಕೈಗೆಟುಕದ ದ್ರಾಕ್ಷಿಯೇ ಆಗಿದೆ!
ಸ್ಟ್ರೀವ್ ಜಾಬ್ಸ್ ಥಿಯೇಟರ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮೂರು ಹೊಸ ಐಫೋನ್ ಗಳನ್ನು ಕ್ಯೂಪರ್ಟಿನೋ ಮೂಲದ ಟೆಕ್ ಸಂಸ್ಥೆ ಆಪಲ್ ಪ್ರಕಟ ಪಡಿಸಿದೆ. ಆ ಮೂರು ಐಫೋನ್ ಗಳು- ಐಫೋನ್ 11, ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ಇವು ಮೂರು ಕೂಡ ಐಫೋನ್ ಎಕ್ಸ್ ಆರ್, ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ ನ ಯಶಸ್ಸಿನ ಸರಣಿ ಫೋನ್ ಗಳು. ಬಿಡುಗಡೆಯ ಸಂದರ್ಬದಲ್ಲಿ ಆಪಲ್ ಸಂಪ್ರದಾಯದಂತೆ ಹಳೆಯ ಮಾಡೆಲ್ ಗಳ ಬೆಲೆಯಲ್ಲಿ ಬದಲಾವಣೆ ಮಾಡುವುದು ಸಾಮಾನ್ಯ.

   
 
ಹೆಲ್ತ್