Back
Home » ಇತ್ತೀಚಿನ
ಐಫೋನ್‌ 11 ಸರಣಿ ಬಿಡುಗಡೆ..! ಐಫೋನ್‌ 11ಕ್ಕೆ 18W ವೇಗದ ಚಾರ್ಜರ್ ಇಲ್ಲ..!
Gizbot | 13th Sep, 2019 07:00 AM
 • ಯುಎಸ್‌ಬಿ ಟೈಪ್‌ ಸಿ ಚಾರ್ಜರ್‌

  ಆಪಲ್‌ 11 ಪ್ರೊ ಜೋಡಿಯೊಂದಿಗೆ 18W ಚಾರ್ಜಿಂಗ್ ಅಡಾಪ್ಟ್‌ರ್‌ಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನೊಂದಿಗೆ ಬರುತ್ತದೆ, ಇದರಿಂದ ಬಳಕೆದಾರರು ಐಫೋನ್‌ನ್ನು ಇತ್ತೀಚಿನ ಮ್ಯಾಕ್‌ಬುಕ್‌‌ನೊಂದಿಗೆ ಸುಲಭವಾಗಿ ಸಂಪರ್ಕಿಸಬಹುದು. ಇನ್ನು, ಐಫೋನ್ 11 5W ಅಡಾಪ್ಟರ್‌ನೊಂದಿಗೆ ಯುಎಸ್‌ಬಿ-ಎ ಚಾರ್ಜರ್‌ ಹೊಂದಿದೆ.


 • ಅಧಿಕೃತ 18W ಫಾಸ್ಟ್ ಚಾರ್ಜರ್ ಖರೀದಿಸಬಹುದು

  ಮೊದಲೇ ಹೇಳಿದಂತೆ ಐಫೋನ್ 11 ಸಹ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ವೇಗದ ಚಾರ್ಜರ್ ಪಡೆಯಲು ಬಳಕೆದಾರರು ಇನ್ನೊಂದಿಷ್ಟು ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ.


 • ವೇಗದ ಚಾರ್ಜರ್ ನೀಡದಿರಲು ಕಾರಣ

  ಆಪಲ್ ಐಫೋನ್ 11 64,900 ರೂ. ಗೆ ಮಾರಾಟವಾಗುತ್ತಿದ್ದರೆ, ಐಫೋನ್ 11 ಪ್ರೊ ಬೆಲೆ 99,900 ರೂ. ಆಗಿದೆ. ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ವೇಗದ-ಚಾರ್ಜಿಂಗ್ ಅಡಾಪ್ಟರ್‌ನ್ನು ಸೇರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದು ಪ್ರೊ ಮಾದರಿಗಿಂತ ಸಾಧನದ ಬೆಲೆಯನ್ನು ಕಡಿಮೆ ಮಾಡಲು ಕಂಪನಿಗೆ ಸಹಾಯ ಮಾಡಿದೆ. ಎಲ್ಲಾ ಮೂರು ಮಾದರಿಗಳು ಸೆಪ್ಟೆಂಬರ್ 27 ರಿಂದ ಚಿಲ್ಲರೆ ಅಂಗಡಿಗಳು ಮತ್ತು ಇ-ಕಾಮರ್ಸ್ ಸೈಟ್‌ಗಳ ಮೂಲಕ ಮಾರುಕಟ್ಟೆ ಪ್ರವೇಶಿಸಲಿವೆ.


 • ಉತ್ತಮ ಬ್ಯಾಟರಿ

  ಹಿಂದಿನ ಆವೃತ್ತಿಯ ಐಫೋನ್‌ಗಳಿಗೆ ಹೋಲಿಸಿದರೆ ಇತ್ತೀಚಿನ ಸರಣಿಯ ಐಫೋನ್‌ಗಳು ಬ್ಯಾಟರಿ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ಆಪಲ್ ಹೇಳಿಕೊಂಡಿದೆ. ಕಂಪನಿಯು ಐಫೋನ್ ಎಕ್ಸ್‌ಆರ್‌ ಲಾಂಚಿಂಗ್‌ ಬೆಲೆಗಿಂತ ಐಫೋನ್ 11 ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದು, ಉತ್ತಮ ಸ್ಮಾರ್ಟ್‌ಫೋನ್ ಆಗಿರಲಿದೆ.
ಆಪಲ್ ತನ್ನ ಇತ್ತೀಚಿನ ಐಫೋನ್ 11 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಈ ಸರಣಿಯ ಅಪ್‌ಡೇಟ್‌ ಆಗಿ 12 ಎಂಪಿ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು 120 ಡಿಗ್ರಿ ಫೀಲ್ಡ್-ವ್ಯೂನೊಂದಿಗೆ ನೀಡಿದೆ. ಹಿಂದಿನ ಆವೃತ್ತಿಯ ಐಫೋನ್‌ಗಳಂತೆ, ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ವೈರ್‌ಲೆಸ್ ಚಾರ್ಜಿಂಗ್ ಮತ್ತು ಫಾಸ್ಟ್ ವೈರಡ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಮೊದಲ ಬಾರಿಗೆ, ಆಪಲ್ ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ನೊಂದಿಗೆ 18W ವೇಗದ ಚಾರ್ಜರ್ ಅನ್ನು ನೀಡಿದೆ.

   
 
ಹೆಲ್ತ್