Back
Home » ಇತ್ತೀಚಿನ
ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಯ್ತು 'ರಿಯಲ್‌ ಮಿ XT'!.ಬೆಲೆ 15,999ರೂ!
Gizbot | 13th Sep, 2019 03:17 PM
  • ರಿಯಲ್‌ ಮಿ

    ಹೌದು, ರಿಯಲ್‌ ಮಿ ಕಂಪನಿಯ 'ರಿಯಲ್‌ ಮಿ XT' ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಪ್ರಮುಖ ಕ್ಯಾಮೆರಾವು 64ಎಂಪಿ ಸಾಮರ್ಥ್ಯದ ಸ್ಯಾಮ್‌ಸಂಗ್‌ನ ISOCELL ಬ್ರೈಟ್‌ GW1 ಸೆನ್ಸಾರ್ ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಸಾಮರ್ಥ್ಯದಲ್ಲಿದ್ದು, ಸೋನಿಯ IMX 471 ಸೆನ್ಸಾರ್‌ ಪಡೆದುಕೊಂಡಿದೆ. ಜೊತೆಗೆ VOOC 3.0 ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವು ಇದರ ಪ್ಲಸ್‌ ಪಾಯಿಂಟ್ ಆಗಿದೆ.


  • ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್

    ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 AIE SoC ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್‌ನ ಸಪೋರ್ಟ್‌ ಸಹ ಪಡೆದಿದೆ. ಆರಂಭಿಕ ಬೆಲೆಯು 15,999ರೂ ಆಗಿದ್ದು, ಇದೇ ಸೆಪ್ಟಂಬರ್ 16ರಂದು ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭವಾಗಲಿದೆ. ಹಾಗಾದರೇ ರಿಯಲ್‌ ಮಿ XT ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.


  • ಡಿಸ್‌ಪ್ಲೇ ರಚನೆ

    ರಿಯಲ್‌ ಮಿ XT ಸ್ಮಾರ್ಟ್‌ಫೋನ್ 2340x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಡ್ಯುವ್‌ಡ್ರಾಪ್‌ ಸ್ಟೈಲ್ ನಾಚ್ ಮಾದರಿಯಲ್ಲಿದೆ. ಹಾಗೆಯೇ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಯನ್ನು ಒಳಗೊಂಡಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್‌ ಕವಚ್ ಪಡೆದಿದೆ. ಫೋನ್ ಸುತ್ತಲೂ ಕರ್ವ್ ನೀಡಲಾಗಿದೆ ಮತ್ತು ಹಿಂಬದಿ ಗ್ಲಾಸಿ ಲುಕ್‌ನ ರಚನೆ ಹೊಂದಿದೆ.


  • ಪ್ರೊಸೆಸರ್ ಸಾಮರ್ಥ್ಯ

    ರಿಯಲ್‌ ಮಿ XT ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 AIE SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಆಂಡ್ರಾಯ್ಡ್ 9 ಪೈ ಓಎಸ್‌ನ ಬೆಂಬಲ ನೀಡಲಾಗಿದೆ. ಒಟ್ಟು ಮೂರು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 4GB RAM ಮತ್ತು 64GB ಸ್ಟೋರೇಜ್, 6GB RAM ಮತ್ತು 64GB ಸ್ಟೋರೇಜ್ ಹಾಗೂ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದಲ್ಲಿವೆ.


  • ಕ್ವಾಡ್‌ ಕ್ಯಾಮೆರಾ ವಿಶೇಷ

    ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಅಲ್ಟ್ರಾ-ವೈಲ್ಡ್‌ ಸೆನ್ಸಾರ್‌ನಲ್ಲಿದ್ದು, ಮೂರನೇಯ ಮತ್ತು ನಾಲ್ಕನೇ ಕ್ಯಾಮೆರಾಗಳೆರಡು 2ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಇದ್ದು, ಸೋನಿಯ IMX 471 ಸೆನ್ಸಾರ್ ಒದಗಿಸಲಾಗಿದೆ.


  • ಬ್ಯಾಟರಿ ಮತ್ತು ಇತರೆ ಫೀಚರ್ಸ್‌

    ರಿಯಲ್‌ ಮಿ XT ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, ಜೊತೆಗೆ VOOC 3.0 ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ ColorOS 6 ಬೆಂಬಲಿತ ಆಂಡ್ರಾಯ್ಡ್ 9 ಪೈ ಓಎಸ್‌, ಡಾರ್ಕ್‌ ಮೋಡ್‌, ಯುಎಸ್‌ಬಿ ಟೈಪ್-ಸಿ ಪೋರ್ಟ್‌, ಆಕ್ಸಿಡೆಂಟಲ್ ಡ್ರಾಪ್ಸ್‌ನಿಂದ ರಕ್ಷಣೆ ಸೌಲಭ್ಯಗಳೊಂದಿಗೆ ವೈಫೈ, ಬ್ಲೂಟೂತ್, ಆಯ್ಕೆಗಳನ್ನು ಹೊಂದಿದೆ.


  • ಬೆಲೆ ಮತ್ತು ಲಭ್ಯತೆ

    ರಿಯಲ್‌ ಮಿ XT ಸ್ಮಾರ್ಟ್‌ಫೋನ್ ಇಂದು (ಸೆಪ್ಟೆಂಬರ್ 13) ಬಿಡುಗಡೆ ಆಗಿದ್ದು, ಇದೇ ಸೆಪ್ಟಂಬರ್ 16ರಂದು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೊದಲ ಸೇಲ್ ಆರಂಭಗೊಳ್ಳಲಿದೆ. 4GB RAM ಮತ್ತು 64GB ವೆರಿಯಂಟ್ ಬೆಲೆಯು 15,999ರೂ, 6GB RAM ಮತ್ತು 64GB ವೆರಿಯಂಟ್ ಬೆಲೆಯು 16,999ರೂ.ಗಳು ಮತ್ತು ಹೈ ಎಂಡ್‌ ವೇರಿಯಂಟ್ 8GB RAM ಮತ್ತು 128GB ಬೆಲೆಯು 18,999ರೂ.ಗಳಾಗಿದೆ.




'ರಿಯಲ್‌ ಮಿ' ಸಂಸ್ಥೆಯ ಬಹುನಿರೀಕ್ಷಿತ 'ರಿಯಲ್‌ ಮಿ XT' ಸ್ಮಾರ್ಟ್‌ಫೋನ್ ಇಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಬಿಡುಗಡೆಗೂ ಮೊದಲೆ ಭಾರೀ ಸದ್ದು ಮಾಡಿದ್ದ ಈ ಸ್ಮಾರ್ಟ್‌ಫೋನ್ ನಿರೀಕ್ಷೆಯಂತೆ ಬಜೆಟ್‌ ಬೆಲೆಯನ್ನು ಹೊಂದಿದ್ದು, ಜೊತೆಗೆ ಮುಖ್ಯ ರಿಯರ್ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಪಡೆದಿದೆ. ಈ ಫೋನ್ ಬೆಲೆ ಮತ್ತು ಹೈ ಎಂಡ್‌ ಫೀಚರ್ಸ್‌ಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಅಬ್ಬರಿಸುವ ಸೂಚನೆ ನೀಡಿದೆ.

   
 
ಹೆಲ್ತ್