Back
Home » ಇತ್ತೀಚಿನ
ಟಾಟಾಸ್ಕೈ, ಡಿಶ್‌ಟಿವಿ ಸಂಸ್ಥೆಗಳಿಂದ ಉಚಿತ ಹೆಚ್ಚುವರಿ ಸೇವೆ!.ಇಲ್ಲಿದೆ ಮಾಹಿತಿ!
Gizbot | 18th Sep, 2019 04:03 PM
  • ಟೆಲಿವಿಷನ್

    ಹೌದು, ಟೆಲಿವಿಷನ್ ವಲಯಕ್ಕೆ ಇದೀಗ ವಿಡಿಯೊ ಸ್ಟ್ರೀಮಿಂಗ್ ಸೇವೆಯು ಪ್ರವೇಶಿಸಿದ್ದು, ಭರಪೂರ ಮನರಂಜನೆ ಆಯ್ಕೆಗಳು ದೊರೆಯುತ್ತಿವೆ. ಹಾಗಂತ ಡಿ2ಎಚ್ ಸೇವೆಯೆನು ಅವನತಿಯತ್ತ ಹೋಗಿಲ್ಲ, ಈಗಲೂ ಡಿ2ಎಚ್‌ ಕಂಪನಿಗಳ ನಡುವೆ ಪೈಪೋಟಿ ಇದೆ. ಅವುಗಳಲ್ಲಿ ಜನಪ್ರಿಯ ಟಾಟಾಸ್ಕೈ, ಡಿಶ್‌ ಟಿವಿ ಮತ್ತು ಡಿ2ಎಚ್ ಕಂಪನಿಗಳು ತಮ್ಮ ಲಾಂಗ್ ಟರ್ಮ್ ಅವಧಿಯ ರೀಚಾರ್ಜ್ ಪ್ಲ್ಯಾನ್‌ಗಳಿಗೆ 15ದಿನಗಳ ಹೆಚ್ಚುವರಿ ಸೇವೆ ಪೂರೈಸಲಿವೆ. ಹಾಗಾದರೇ ಈ ಸಂಸ್ಥೆಗಳ ದೀರ್ಘಾವಧಿಯ ಪ್ಲ್ಯಾನ್‌ಗಳು ಯಾವುವು ಮತ್ತು ಆಫರ್ ಏನು ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.


  • ಟಾಟಾಸ್ಕೈ ಕ್ಯಾಶ್‌ಬ್ಯಾಕ್‌ ಕೊಡುಗೆ

    ಡಿ2ಎಚ್ ಸೇವೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ 'ಟಾಟಾಸ್ಕೈ' ಹಲವು ಆಕರ್ಷಕ ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಗ್ರಾಹಕರು ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಸಿದರೇ ಕ್ಯಾಶ್‌ಬ್ಯಾಕ್ ರೂಪದ ಹೆಚ್ಚುವರಿ ಉಚಿತ ಸೇವೆ ಲಭ್ಯವಾಗಲಿದೆ. ಗ್ರಾಹಕರು 12 ತಿಂಗಳ ಚಂದಾದಾರಿಕೆ ಪಡೆದರೆ ಅವರಿಗೆ ಹೆಚ್ಚುವರಿಯಾಗಿ ಒಂದು ತಿಂಗಳು ಉಚಿತ ಸೇವೆ ಪೂರೈಕೆಯಾಗಲಿದೆ.


  • ಡಿ2ಎಚ್ ದೀರ್ಘಾವಧಿ ಪ್ಲ್ಯಾನ್

    ಡಿ2ಎಚ್ ಪೂರೈಕೆ ಕಂಪನಿಗಳಲ್ಲಿ 'ಡಿ2ಎಚ್' ಸಹ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಹಲವು ಸಹ ಲಾಂಗ್‌ಟರ್ಮ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಗ್ರಾಹಕರು 3 ತಿಂಗಳ ಚಂದಾದಾರಿಕೆಯನ್ನು ಪಡೆದರೆ ಹೆಚ್ಚುವರಿಯಾಗಿ 7 ದಿನಗಳ ಉಚಿತ ಸೇವೆ ಸಿಗಲಿದೆ. ಹಾಗೆಯೇ ಆರು ತಿಂಗಳ ಚಂದಾದಾರಿಕೆಯೊಂದಿಗೆ 15 ದಿನಗಳು ಉಚಿತವಾಗಿ ಲಭ್ಯ. ಹಾಗೆಯೇ 22 ತಿಂಗಳ ಚಂದಾದಾರಿಕೆಗೆ 60ದಿನಗಳು, 33 ತಿಂಗಳ ಚಂದಾದಾರಿಕೆಗೆ 90ದಿನಗಳು ಹೆಚ್ಚುವರಿಯಾಗಿ ಸಿಗಲಿದೆ.


  • ಡಿಶ್‌ಟಿವಿ ದೀರ್ಘಾವಧಿ ಪ್ಲ್ಯಾನ್

    ಜನಪ್ರಿಯ ಡಿ2ಎಚ್ ಪೂರೈಕೆದಾರರಲ್ಲಿ 'ಡಿಶ್‌ಟಿವಿ' ಕಂಪನಿಯು ಸಹ ಒಂದಾಗಿದ್ದು, ಈ ಸಂಸ್ಥೆಯು ಸಹ ದೀರ್ಘಾವಧಿಯ ಪ್ಲ್ಯಾನ್‌ಗಳಿಗೆ ಹೆಚ್ಚುವರಿ ವ್ಯಾಲಿಡಿಟಿ ನೀಡುತ್ತಿದೆ. ಡಿಶ್‌ಟಿವಿ ಗ್ರಾಹಕರು 3 ತಿಂಗಳ ಚಂದಾದಾರಿಕೆಯನ್ನು ಪಡೆದರೆ ಹೆಚ್ಚುವರಿಯಾಗಿ 7 ದಿನಗಳ ಉಚಿತ ಸೇವೆ ಸಿಗಲಿದೆ. ಆರು ತಿಂಗಳ ಚಂದಾದಾರಿಕೆಯೊಂದಿಗೆ 15 ದಿನಗಳು ಉಚಿತವಾಗಿ ದೊರೆಯಲಿದೆ. ಹಾಗೆಯೇ 11 ತಿಂಗಳ ಚಂದಾದಾರಿಕೆಗೆ 30ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಲಭ್ಯವಾಗಲಿದೆ.


  • ಆಫರ್‌ ಆಕರ್ಷಣೆ

    ಟ್ರಾಯ್ ಹೊಸ ನಿಯಮ ಜಾರಿಯಾದ ನಂತರ ದೀರ್ಘಾವಧಿಯ ಪ್ಲ್ಯಾನ್‌ಗಳು ಗಟ್ಟಿಯಾಗಿ ನಿಲ್ಲುವುದಿಲ್ಲ ಎನ್ನುವ ಮಾತುಗಳಿದ್ದವು ಆದರೆ ಡಿ2ಎಚ್‌ ಸಂಸ್ಥೆಗಳು ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ಆಫರ್ ಮಾಡುತ್ತಲೇ ಇವೆ. ಮುಖ್ಯವಾಗಿ ಈ ಡಿ2ಎಚ್ ಸಂಸ್ಥೆಗಳು ಹೆಚ್ಚುವರಿ ವ್ಯಾಲಿಡಿಟಿಯ ಆಫರ್‌ ನೀಡಿ ಗ್ರಾಹಕರನ್ನು ಉಳಿಸಿಕೊಳ್ಳುವ ಯೋಜನೆಗಳನ್ನು ಮಾಡುತ್ತಿವೆ. ಟಾಟಾಸ್ಕೈ, ಡಿಶ್‌ಟಿವಿ ಮತ್ತು ಡಿ2ಎಚ್‌ ಕಂಪನಿಗಳು ಗ್ರಾಹಕರಿಗೆ ಉಚಿತ ಹೆಚ್ಚುವರಿ ಸೇವೆ ನೀಡುವ ಘೋಷಣೆಗಳನ್ನು ಮಾಡಿವೆ.




ಸದ್ಯ ಟೆಲಿವಿಷನ್ ವೀಕ್ಷಣೆಯಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿದ್ದು, ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯ ಆಯ್ಕೆಯ ಅನುಕೂಲಗಳನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ದೇಶ್ ಬಹುತೇಕ ಎಲ್ಲ ಡಿ2ಎಚ್ ಪೂರೈಕೆದಾರರು ಸಹ ಅತ್ಯುತ್ತಮ ಸೇವೆಗಳನ್ನು, ಆಫರ್‌ಗಳನ್ನು ನೀಡುತ್ತಿವೆ. ಆ ಪೈಕಿ ಟಾಟಾಸ್ಕೈ, ಡಿಶ್‌ ಟಿವಿ ಮತ್ತು ಡಿ2ಎಚ್ ಸಂಸ್ಥೆಗಳು ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚುವರಿ ಉಚಿತ ಸೇವೆ ಘೋಷಿಸಿವೆ.

   
 
ಹೆಲ್ತ್