Back
Home » ಇತ್ತೀಚಿನ
ನಿಮ್ಮ ಫೋನ್‌ ಎಷ್ಟು ಸಲ ರಿಂಗ್‌ ಆಗಬೇಕು..? ಟ್ರಾಯ್‌ನಿಂದ ಅಭಿಪ್ರಾಯ ಆಹ್ವಾನ..!
Gizbot | 18th Sep, 2019 03:00 PM
 • ಗರಿಷ್ಠ ರಿಂಗ್‌ ಕಾನ್ಫಿಗರ್‌

  ಸದ್ಯ ಫೋನ್ ರಿಂಗಿಂಗ್‌ ಆಗುವಾಗ ಗರಿಷ್ಠ ರಿಂಗ್-ಟೈಮ್‌ನ್ನು ಕಾನ್ಫಿಗರ್ ಮಾಡಲಾಗಿದೆ. ಆದರೆ, ಕರೆ ಸ್ವೀಕರಿಸಿದಿದ್ದರೆ ನೆಟ್‌ವರ್ಕ್‌ ಸಂಪರ್ಕವನ್ನು ಬಲವಂತವಾಗಿ ಕಡಿತಗೊಳಿಸುತ್ತದೆ. ವಿರಳವಾದ ರೇಡಿಯೊ ಸ್ಪೆಕ್ಟ್ರಮ್ ಸಂಪನ್ಮೂಲಗಳನ್ನು ಒಳಗೊಂಡಿರುವುದರಿಂದ ಕರೆಗಳಿಗೆ ಉತ್ತರಿಸಲು ಅನುಮತಿಸಲಾದ ಗರಿಷ್ಠ ಸಮಯವು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಟ್ರಾಯ್‌ ಸೋಮವಾರ ಬಿಡುಗಡೆ ಮಾಡಿರುವ 'ಡುರೇಷನ್ ಅಲೆರ್ಟ್‌ ಫಾರ್‌ ಕಾಲ್ಡ್‌ ಪಾರ್ಟಿ' ಎಂಬ ಸಂಶೋಧನಾ ಪ್ರಬಂಧದಲ್ಲಿ ಹೇಳಿದೆ.


 • ಸಂಪನ್ಮೂಲಗಳ ದುರ್ಬಳಕೆ

  ಹೆಚ್ಚು, ಮೊಬೈಲ್ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್‌ಗಳನ್ನು ವೈಯಕ್ತಿಕವಾಗಿ ಕೊಂಡೊಯ್ಯುವುದರಿಂದ ಒಳಬರುವ ಕರೆಗಳಿಗೆ ತ್ವರಿತ ಪ್ರತಿಕ್ರಿಯೆ ನೀಡುತ್ತಾರೆ. ಲ್ಯಾಂಡ್‌ಲೈನ್ ಉಪಕರಣವು ಬಳಕೆದಾರರಿಂದ ದೂರವಾಗಿದೆ. ದೀರ್ಘಕಾಲದವರೆಗೆ ರಿಂಗಿಂಗ್ ಅಥವಾ ಎಚ್ಚರಿಕೆ ನೀಡಿದರೂ ಕರೆಯನ್ನು ಸ್ವೀಕರಿಸಲು ಸಾಧ್ಯವಾಗದಿದ್ದಾಗ ಸಂಪನ್ಮೂಲಗಳ ದುರ್ಬಳಕೆಗೆ ಕಾರಣವಾಗುತ್ತದೆ ಎಂದು ಟ್ರಾಯ್‌ ಹೇಳಿದೆ.


 • ಏಕರೂಪತೆಗೆ ಪ್ರಯತ್ನ

  ರಿಂಗಿಂಗ್‌ ಸಮಯವನ್ನು ಕನಿಷ್ಠವಾಗಿ ಕಾನ್ಫಿಗರ್ ಮಾಡಿದರೆ ಗ್ರಾಹಕರ ಅನುಭವವನ್ನು ಹಾಳುಮಾಡಿದಂತೆ ಆಗುತ್ತದೆ. ವಿಶೇಷವಾಗಿ ಕರೆಗೆ ಉತ್ತರಿಸಲು ಸಾಮಾನ್ಯವಾಗಿ ತೆಗೆದುಕೊಳ್ಳುವ ಸಮಯಕ್ಕಿಂತ ಕಡಿಮೆ ಅವಧಿಯಿದ್ದರೆ ಗ್ರಾಹಕರಿಗೆ ಕಿರಿಕಿರಿಯಾಗುತ್ತದೆ. ಒಂದು ನಿರ್ದಿಷ್ಟ ಟೆಲಿಕಾಂ ಕಾಲ್‌ ರಿಂಗಿಂಗ್ ಅವಧಿಯನ್ನು 20 ಸೆಕೆಂಡ್‌ಗಳಿಗೆ ಇಳಿಸಿದೆ. ಇದು ಇತರ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಆಪರೇಟರ್‌ಗಳ ನೆಟ್‌ವರ್ಕ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಕಾಲ್‌ ರಿಂಗಿಂಗ್ ಸ್ಪ್ಯಾನ್‌ಗೆ ಏಕರೂಪತೆ ತರುವುದಕ್ಕೆ ಟ್ರಾಯ್‌ ಪ್ರಯತ್ನಿಸುತ್ತಿದೆ.


 • ಎಐ ಮತ್ತು ಎಂಎಲ್‌ ಅಳವಡಿಕೆಗೆ ಚಿಂತನೆ

  ಸಾಮಾನ್ಯವಾಗಿ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ರಿಂಗಿಂಗ್‌ ಸಮಯವು 30 ರಿಂದ 45 ಸೆಕೆಂಡುಗಳಷ್ಟು ಇದ್ದರೆ, ಲ್ಯಾಂಡ್‌ಲೈನ್ ಸಂಪರ್ಕಗಳಲ್ಲಿ 60 ರಿಂದ 120 ಸೆಕೆಂಡುಗಳ ನಡುವೆ ಇರುತ್ತದೆ. ಅಂತೆಯೇ, ಕಾಲ್‌ ರಿಂಗಿಂಗ್ ಸಮಯವನ್ನು ಏಕರೂಪವಾಗಿ ಕಾನ್ಫಿಗರ್ ಮಾಡಲು ಮಾರ್ಗಸೂಚಿಗಳ ಅಗತ್ಯವಿದೆಯೇ ಎಂಬ ಬಗ್ಗೆ ಪತ್ರಿಕೆಯಲ್ಲಿ ಟ್ರಾಯ್‌ ಪ್ರತಿಕ್ರಿಯೆ ಕೋರಿದೆ. ಟೆಲಿಕಾಂ ಬಳಕೆದಾರರ ಪ್ರತ್ಯೇಕ ವರ್ಗಗಳಿಗೆ ಸೂಕ್ತವಾದ ರಿಂಗಿಂಗ್ ವ್ಯಾಪ್ತಿಯನ್ನು ನಿರ್ಧರಿಸಲು ಅತ್ಯಾಧುನಿಕ ಹೊಸ ಯುಗದ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ಅನ್ನು ಅಳವಡಿಸಿಕೊಳ್ಳುವ ಯೋಚನೆಯಲ್ಲಿ ಟ್ರಾಯ್‌ ಇದೆ.


 • ವಾಣಿಜ್ಯ / ನಿಯಮಿತ ಕರೆಗಳ ವ್ಯತ್ಯಾಸ

  ಕಾಲ್‌ ರಿಂಗಿಂಗ್ ಅವಧಿಯ ಮೂಲಕ ವಾಣಿಜ್ಯ ಮತ್ತು ನಿಯಮಿತ ಕರೆಗಳ ನಡುವೆ ವ್ಯತ್ಯಾಸ ಗುರುತಿಸಲು ಕ್ರಮಗಳನ್ನು ತೆಗೆದುಕೊಂಡು ಬಳಕೆದಾರರ ಅನುಕೂಲವನ್ನು ಹೆಚ್ಚಿಸುವ ಸಲುವಾಗಿ ಟ್ರಾಯ್‌ ಅಭಿಪ್ರಾಯಗಳನ್ನು ಕೋರಿದೆ. ಟ್ರಾಯ್‌ನ ಸಂಶೋಧನಾ ಪ್ರಬಂಧಕ್ಕೆ ಪ್ರತಿಕ್ರಿಯೆ ಮತ್ತು ಮರು ಪ್ರತಿಕ್ರಿಯೆ ನೀಡಲು ಕ್ರಮವಾಗಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 7ಕ್ಕೆ ಗಡುವು ವಿಧಿಸಲಾಗಿದೆ.
ಫೋನ್‌ನಲ್ಲಿ ನಾವು ಯಾರಿಗೋ ಕರೆ ಮಾಡಿರುತ್ತೇವೆ. ಆ ಕರೆಯನ್ನು ಸ್ವೀಕರಿಸದಿದ್ದಾಗ ಅದು ಕಡಿತಗೊಳ್ಳುವ ಮುನ್ನ ಎಷ್ಟು ಸಲ ರಿಂಗಣಿಸುತ್ತೆ ಎಂದು ಗೊತ್ತಾ..? ಸದ್ಯ ಈ ವಿಷಯದ ಸುತ್ತ ಟೆಲಿಫೋನ್‌ ಲೋಕದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದಕ್ಕಾಗಿಯೇ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಫೋನ್‌ ನೆಟ್‌ವರ್ಕ್ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಇಚ್ಛಿಸುತ್ತಿದ್ದು, ಗರಿಷ್ಠ ಕರೆ ರಿಂಗಿಂಗ್‌ ಬಗ್ಗೆ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಗ್ರಾಹಕರ ಅನುಕೂಲಕ್ಕಾಗಿ ರಿಂಗಿಂಗ್ ಅವಧಿಯನ್ನು ಕಸ್ಟಮೈಸ್ ಮಾಡುವ ಆಯ್ಕೆ ನೀಡಬೇಕೇ ಅಥವಾ ರಿಂಗಿಂಗ್‌ ಅವಧಿ ಸುಧಾರಣೆಗಿರುವ ಹೊಸ ಮಾರ್ಗಗಳ ಬಗ್ಗೆ ಮಾಹಿತಿ ನೀಡುವಂತೆ ಟ್ರಾಯ್‌ ಹೇಳಿದೆ.

   
 
ಹೆಲ್ತ್