Back
Home » ಇತ್ತೀಚಿನ
ಫೋನಿನಲ್ಲಿ 'ಗೂಗಲ್‌ ಸರ್ಚ್' ಬಳಸಲು ಇಂಟರ್ನೆಟ್‌ ಬೇಕಾಗಿಯೇ ಇಲ್ಲ!
Gizbot | 19th Sep, 2019 05:13 PM
 • ಟೋಲ್‌ ಫ್ರೀ ನಂಬರ್‌

  ಹೌದು, ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ ನಿಮಗೆ ಬೇಕಾದ ಮಾಹಿತಿಯನ್ನು ಗೂಗಲ್‌ನಿಂದ ತಿಳಿಯಬಹುದಾದ ಸೇವೆಯನ್ನು ಭಾರತದಲ್ಲಿ 'ವೊಡಾಫೋನ್' ಮತ್ತು 'ಐಡಿಯಾ' ಟೆಲಿಕಾಂ ಸಂಸ್ಥೆಗಳು ಜಂಟಿಯಾಗಿ ಆರಂಭಿಸಿವೆ. ವೊಡಾಫೋನ್ ಮತ್ತು ಐಡಿಯಾ ಬಳಕೆದಾರರು ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಡಿವೈಸ್ ಅಥವಾ ಫೀಚರ್ ಫೋನ್ ಮೂಲಕವು (000 800 9191 000) ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ ಮಾಹಿತಿ ಹೇಳಬಹುದಾಗಿದೆ.


 • ವೊಡಾಫೋನ್' ಮತ್ತು ಐಡಿಯಾ

  ವೊಡಾಫೋನ್' ಮತ್ತು ಐಡಿಯಾ ಜಂಟಿಯಾಗಿ ಆರಂಭಿಸಿರುವ ಈ ಟೋಲ್‌ ಫ್ರೀ ನಂಬರ್‌ನಲ್ಲಿ ಬಳಕೆದಾರರ ಎಲ್ಲ ಪ್ರಶ್ನೆಗಳಿಗೆ ಗೂಗಲ್ ಅಸಿಸ್ಟಂಟ್ ಮಾಹಿತಿ ನೀಡಲಿದೆ. ಬಳಕೆದಾರರು ಯಾವುದೇ ಸಮಯದಲ್ಲಿ ಬೇಕಾದರೂ ಈ ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಬಹುದಾಗಿದೆ. ಆದರೆ ಬಳಕೆದಾರರು ಕರೆ ಮಾಡಿದಾಗ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿಯೇ ಮಾತನಾಡಬೇಕು. ಹಾಗಾದರೇ ವೊಡಾಫೋನ್ ಮತ್ತು ಐಡಿಯಾ ಶುರುಮಾಡಿರುವ ಟೋಲ್‌ ಫ್ರೀ ಸರ್ಚ್‌ನ ಸೌಲಭ್ಯದ ಇತರೆ ಮಾಹಿತಿಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.


 • ಉಚಿತ ಸೇವೆ

  ವೊಡಾಫೋನ್' ಮತ್ತು ಐಡಿಯಾ ಜಂಟಿಯಾಗಿ ಆರಂಭಿಸಿರುವ ಈ ಸೇವೆಯು ಸಂಪೂರ್ಣ ಉಚಿತವಾಗಿದ್ದು, ವೊಡಾಫೋನ್' ಮತ್ತು ಐಡಿಯಾ ಟೆಲಿಕಾಂ ಬಳಕೆದಾರರಿಗೆ ಮಾತ್ರ ಈ ಸೇವೆ ದೊರೆಯಲಿದೆ. ಬಳಕೆದಾರರು ಯಾವುದೇ ಸಮಯದಲ್ಲಿ ಬೇಕಾದರೂ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.


 • ಇಂಟರ್ನೆಟ್‌ ಅಗತ್ಯವಿಲ್ಲ

  000 800 9191 000 ಟೋಲ್‌ ಫ್ರೀ ನಂಬರ್ ಆಗಿದ್ದು, ಗೂಗಲ್ ಅಸಿಸ್ಟಂಟ್‌ನಿಂದ ಮಾಹಿತಿ ಪಡೆಯಲು ಯಾವುದೇ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಬಳಕೆದಾರರು ಸ್ಮಾರ್ಟ್‌ಫೋನ್, ಸ್ಮಾರ್ಟ್‌ ಡಿವೈಸ್‌ ಅಥವಾ ಬೇಸಿಕ್, ಫೀಚರ್ ಫೋನಿದ್ದರೂ ಸಹ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.


 • ಯಾವ ಮಾಹಿತಿ ಕೇಳಬಹುದು

  ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ ಗ್ರಾಹಕರು ಲೈವ್ ಮ್ಯಾಚ್‌ಗಳ ಸ್ಕೋರ್‌, ಹವಾಮಾನ ವರದಿ, ಟ್ರಾಫಿಕ್ ಕುರಿತಾಗಿ ಮಾಹಿತಿ, ಪ್ರಸ್ತುತ ದಿನಚರಿಗಳ ಮಾಹಿತಿ, ಆರೋಗ್ಯದ ಕುರಿತಾಗಿ ಮಾಹಿತಿ ಸೇರಿದಂತೆ ಅಗತ್ಯವಾಗಿರುವ ಯಾವುದೇ ಮಾಹಿತಿಯನ್ನಾದರೂ ಕೇಳಿ ಬಹುದಾಗಿದೆ.


 • ಯಾವ ಭಾಷೆ ಮಾತಾಡಬೇಕು

  ಬಳಕೆದಾರರು ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿದಾಗ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಗೂಗಲ್ ಅಸಿಸ್ಟಂಟ್‌ಗೆ ಕೇಳಬಹುದಾಗಿದೆ. ಇತ್ತೀಚಿಗೆ ಗೂಗಲ್‌ ಸಂಸ್ಥೆಯು ಗೂಗಲ್ ಅಸಿಸ್ಟಂಟ್‌ನಲ್ಲಿ ಹಿಂದಿ ಭಾಷೆಯ ಬೆಂಬಲ ನೀಡಿದೆ. ಹಾಗೆಯೇ ಗುಜರಾತಿ, ಕನ್ನಡ, ಉರ್ದು, ಬೆಂಗಾಲಿ, ಮರಾಠಿ, ತೆಲಗು ಮತ್ತು ತಮಿಳ ಭಾಷೆಗಳಿಗೂ ಅಸಿಸ್ಟಂಟ್ ಬೆಂಬಲ ಸಿಗಲಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್ ಸರ್ಚ್ ಸಹಾಯದಿಂದ ಅತೀ ಸಲಿಸಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಆದರೆ ಗೂಗಲ್‌ ಸರ್ಚ್ ಮಾಡಲು ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಯೂಲರ್‌ ಇಂಟರ್ನೆಟ್‌ ಅಥವಾ ವೈಫೈ ಬೇಕೆ ಬೇಕು ಅಂತಿರಾ. ನೀವೆನಾದರೂ ಹಾಗೆಂದುಕೊಂಡಿದ್ದರೇ ಈಗ ನಿಮ್ಮ ಅನಿಸಿಕೆ ತಪ್ಪಾಗುತ್ತದೆ. ಏಕೆಂದರೇ ಯಾವುದೇ ಇಂಟರ್ನೆಟ್‌ ಸಂಪರ್ಕವಿಲ್ಲದೇ ಫೋನ್‌ಗಳಲ್ಲಿ ಗೂಗಲ್‌'ನಿಂದ ಮಾಹಿತಿ ಪಡೆಯಬಹುದಾಗಿದೆ.

   
 
ಹೆಲ್ತ್