Back
Home » ಇತ್ತೀಚಿನ
ಗೂಗಲ್‌ ಪೇನಲ್ಲಿ ಇನ್ಮುಂದೆ ಕೆಲಸ ಪಡೆಯಿರಿ..! ಹೇಗೆ ಅಂತಿರಾ..?
Gizbot | 20th Sep, 2019 07:10 PM
 • 'ಸ್ಪಾಟ್‌' ಪ್ಲಾಟ್‌ಫಾರ್ಮ್‌

  ಈ 'ಸ್ಪಾಟ್‌' ಪ್ಲಾಟ್‌ಫಾರ್ಮ್‌ನಿಂದ ವ್ಯಾಪಾರಿಗಳು ಸ್ಟೋರ್‌ಗಳನ್ನು ಸೃಷ್ಟಿಸಿ ನೈಜ ಬಳಕೆದಾರರ ಜೊತೆ ಸಂಪರ್ಕ ಸಾಧಿಸುವ ಅವಕಾಶ ಇದೆ.


 • ಫಸ್ಟ್‌ ಟೈಮ್‌ ಜಾಬ್‌

  ಗೂಗಲ್‌ ಪೇನ ಜಾಬ್‌ ಸರ್ಚ್‌ ಫೀಚರ್‌ ಮೊದಲ ಬಾರಿ ಕೆಲಸ ಹುಡುಕುವವರನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ. ಮೂಲಸೌಕರ್ಯ, ರಿಟೇಲ್‌, ಫುಡ್‌ ಡೆಲಿವರಿ ಮತ್ತಿತರ ಕ್ಷೇತ್ರಗಳಲ್ಲಿರುವ ಉದ್ಯೋಗಗಳನ್ನು ಲಿಸ್ಟಿಂಗ್‌ ಮಾಡಲಿದೆ. ಈ ಮೊದಲೇ ಬಾಂಗ್ಲಾದೇಶ ಹಾಗೂ ಇಂಡೋನೇಷ್ಯಾದಲ್ಲಿ ಸ್ಥಳೀಯರಿಗೆ ಕೆಲಸ ಹುಡುಕುಲು ಸಹಾಯ ಮಾಡಲು ಪರಿಚಯಿಸಿದ ಕೊರ್ಮೋ ಅಥವಾ ಜಾಬ್ಸ್‌ ಆಪ್‌ನಿಂದ ಅಭಿವೃದ್ಧಿ ಪಡಿಸಲಾಗಿದೆ. ಈ ಆಪ್‌ನ್ನು ಗೂಗಲ್‌ ಸಹಾಯದಿಂದ ಅಭಿವೃದ್ಧಿಗೊಳಿಸಲಾಗಿತ್ತು.


 • ದೆಹಲಿಯಲ್ಲಿ ಪ್ರಾಯೋಗಿಕ ಜಾರಿ

  ಗೂಗಲ್‌ ಪೇ ಜಾಬ್‌ ಫೀಚರ್‌ನ್ನು ಪ್ರಾಯೋಗಿಕವಾಗಿ ದೆಹಲಿ - ಎನ್‌ಸಿಆರ್‌ ಪ್ರದೇಶದಲ್ಲಿ ಜಾರಿಗೆ ತರಲಾಗಿದ್ದು, ಜೊಮ್ಯಾಟೋ, ಸ್ವಿಗ್ಗಿ, ಡುಂಜೋ, 24ಸೆವೆನ್‌, ರಿತುಕುಮಾರ್‌, ಫ್ಯಾಬ್‌ಹೊಟೇಲ್ಸ್‌ ಜೊತೆ ಗೂಗಲ್‌ ಸದ್ಯ ಪಾಲುದಾರಿಕೆಯನ್ನು ಹೊಂದಿದೆ. ಜಾಬ್ಸ್‌ ಸ್ಪಾಟ್‌ ಫೀಚರ್‌ಗೆ ಗೂಗಲ್‌ ಒಟ್ಟು 25 ವಿವಿಧ ಪಾಲುದಾರರನ್ನು ಹೊಂದಿದೆ.


 • ಆಸಕ್ತಿಗನುಗುಣವಾಗಿ ಜಾಬ್‌ ಅಲರ್ಟ್‌

  ಮೊದಲು ನಿಮ್ಮ ಪ್ರೊಫೈಲ್‌ನ್ನು ಗೂಗಲ್‌ ಪಡೆಯುತ್ತದೆ. ಒಂದಿಷ್ಟು ಬೇಸಿಕ್‌ ಪ್ರಶ್ನೆಗಳಿಗೆ ಗ್ರಾಹಕರು ಉತ್ತರಿಸಬೇಕಾಗುತ್ತದೆ. ನಿಮ್ಮ ಆಸಕ್ತಿಗಳನ್ನು ಹೇಳಬೇಕಾಗುತ್ತದೆ. ಆಪ್‌ನಲ್ಲಿ ಒಟ್ಟು 12 ಆಸಕ್ತಿಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳಲ್ಲಿ ಮೂರು ಆಸಕ್ತಿಗಳನ್ನು ಗ್ರಾಹಕರು ಆಯ್ದುಕೊಳ್ಳಬೇಕಾಗುತ್ತದೆ. ಗ್ರಾಹಕರು ಆಯ್ದುಕೊಂಡ ಆಸಕ್ತಿಗಳಿಗನುಗುಣವಾಗಿ ಜಾಬ್‌ ಅಲರ್ಟ್‌ಗಳನ್ನು ನೀಡಲಾಗುತ್ತದೆ ಎಂದು ಜಾಬ್ಸ್‌ / ಕೋರ್ಮೊನ ಪ್ರೊಜೆಕ್ಟ್‌ ಲೀಡ್‌ ಬಿಕಿ ರಸೆಲ್‌ ಹೇಳಿದ್ದಾರೆ.


 • ಸ್ಥಳ

  ಉದ್ಯೋಗ ಹುಡುಕುವಾಗ ಸ್ಥಳವೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಸದ್ಯಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದ ಭಾಗದಲ್ಲಿ ಮಾತ್ರ ಈ ಸೇವೆ ಲಭ್ಯವಿದೆ. ನಿಮ್ಮ ಪ್ರದೇಶದ ಉದ್ಯೋಗಗಳನ್ನು ಮಾತ್ರ ಇಲ್ಲಿ ಲಿಸ್ಟ್‌ ಮಾಡಲಾಗುತ್ತದೆ. ಆದರೂ, ನೀವು ದೆಹಲಿಯ ಹೊರಭಾಗದವಾರಾಗಿದ್ದರೂ, ಉದ್ಯೋಗ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ದೆಹಲಿಯಲ್ಲಿನ ಉದ್ಯೋಗಗಳ ಬಗ್ಗೆ ಅಪ್‌ಡೇಟ್‌ ಪಡೆಯಬಹುದು.


 • ಸಿವಿ ಬಿಲ್ಡರ್‌

  ಜಾಬ್‌ ಸ್ಪಾಟ್‌ ಸಿವಿ ಬಿಲ್ಡರ್‌ನ್ನು ಸಹ ಹೊಂದಿದ್ದು, ಸಂಸ್ಕರಿಸಲಾದ ಲರ್ನ್‌ ಫೀಡ್‌ನ್ನು ಹೊಂದಿರಲಿದೆ. ಇಲ್ಲಿ ವೃತ್ತಿಪರವಾಗಿ ಅಭಿವೃದ್ಧಿಗೊಳಿಸಿದ ವಿಡಿಯೋಗಳು, ಕೋರ್ಸ್‌ಗಳು, ಅಸೆಸ್‌ಮೆಂಟ್‌ಗಳು, ಲೇಖನಗಳು ಮತ್ತಿತರ ಮಾಹಿತಿ ಲರ್ನ್‌ ಫೀಡ್‌ನಲ್ಲಿ ದೊರೆಯಲಿದೆ. ಇಲ್ಲಿ ಮ್ಯಾನುವಲ್‌ ಆಗಿಯೂ ಕೂಡ ನಮಗೆ ಅಗತ್ಯವಿರುವ ವಿಷಯಗಳನ್ನು ಫಿಲ್ಟರ್‌ ಮಾಡಿ ಲರ್ನ್‌ ಫೀಡ್‌ನಲ್ಲಿ ಬರುವಂತೆ ನೋಡಿಕೊಳ್ಳಬಹುದು.


 • ಸ್ಕಿಲ್‌ ಇಂಡಿಯಾ ಜೊತೆ ಸಹಭಾಗಿತ್ವ

  ಗೂಗಲ್‌ ಕಂಪನಿ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ ಜೊತೆ ಸಹಭಾಗಿತ್ವವನ್ನು ಹೊಂದಿದ್ದು, ಸ್ಕಿಲ್‌ ಇಂಡಿಯಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಗೂಗಲ್‌ ಪೇ ಆಪ್‌ನ ಜಾಬ್‌ ಸ್ಪಾಟ್‌ನಿಂದ ದೊರೆಯಲಿವೆ. ಇಷ್ಟೇ ಅಲ್ಲದೇ ಉದ್ಯೋಗ ಹುಡುಕುತ್ತಿರುವವರು ವೃತ್ತಿಪರ ಪ್ರೊಫೈಲ್‌ನ್ನು ಅಭಿವೃದ್ಧಿಗೊಳಿಸಬಹುದಾಗಿದ್ದು, ನಮ್ಮ ಸಿವಿಯನ್ನು ಯಾರು ನೋಡಬೇಕು ಮತ್ತು ಯಾರು ಕಂಪನಿಗಳೊಂದಿಗೆ ಶೇರ್‌ ಮಾಡಬಹುದು ಎಂಬುದನ್ನು ನಿಯಂತ್ರಿಸಬಹುದು.


 • ಜಾಬ್‌ ಟ್ರಾಕ್‌

  ಕೆಲಸಕ್ಕೆ ಅರ್ಜಿ ಸಲ್ಲಿಸಿದ ನಂತರ, ನಿಮ್ಮ ಅರ್ಜಿ ಎಲ್ಲಿದೆ, ಎಲ್ಲಿವರೆಗೂ ಬಂದಿದೆ ಎಂಬುದನ್ನು ಟ್ರಾಕ್‌ ಮಾಡಬಹುದು. ಗೂಗಲ್‌ ಪೇ ಕೂಡ ಸಂದೇಶದ ಮೂಲಕ ನಿಮ್ಮ ಜಾಬ್‌ ಪ್ರೊಗ್ರಸ್‌ನ್ನು ನಿಮಗೆ ತಿಳಿಸುತ್ತಿರುತ್ತಿದೆ.

  ಬಾಂಗ್ಲಾದೇಶದಲ್ಲಿ ಕೇವಲ ಒಂದು ವರ್ಷದಲ್ಲಿಯೇ 50,000 ಉದ್ಯೋಗಗಳನ್ನು ಬಳಕೆದಾರರಿಗೆ ನೀಡಿದೆ.


 • ಹೇಗೆ ಕಾರ್ಯ..?

  ಉದ್ಯೋಗ ಆಕಾಂಕ್ಷಿಗಳು ತಮ್ಮ ನಿರೀಕ್ಷೆಯ ಕೆಲಸವನ್ನು ಸರ್ಚ್‌ ಬಾರ್‌ ಅಲ್ಲಿ ನಮೂದಿಸಿಬೇಕು. ಆಗ ನಿಮ್ಮ ಬೇಡಿಕೆಗೆ ಹೊಂದಾಣಿಕೆಯಾಗುವ ಉದ್ಯೋಗ ಅವಕಾಶಗಳನ್ನು ಗೂಗಲ್‌ ಸೂಚಿಸುತ್ತದೆ. ಈ ಪ್ರಕ್ರಿಯೆಗೆ ಕೃತಕ ಬುದ್ಧಿಮತ್ತೆಯ ಸಾಫ್ಟ್ವೇರ್‌ ಅಳವಡಿಸಲಾಗಿದೆ. ಇದರೊಂದಿಗೆ ಮಾರಾಟಗಾರರಿಗೂ ಅವಕಾಶ ಕಲ್ಪಿಸಿಕೊಟ್ಟಿದ್ದು, ತಮ್ಮ ಉತ್ಪನ್ನಗಳನ್ನು ಈ ವೇದಿಕೆಯ ಮೂಲಕ ಮಾರಾಟ ಮಾಡಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.
ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಹೊಸ ಫೀಚರ್‌ ಒಂದನ್ನು ಭಾರತೀಯ ಗ್ರಾಹಕರಿಗೆ ನೀಡುತ್ತಿದೆ. ತನ್ನ ಗೂಗಲ್‌ ಪೇ ಆಪ್‌ನಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ. ಗುರುವಾರ ನಡೆದ ಗೂಗಲ್‌ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದೆ. ಅದಲ್ಲದೇ ಟೋಕನ್‌ ಆಧಾರಿತ ಕಾರ್ಡ್‌ ಮತ್ತು 'ಸ್ಪಾಟ್‌' ಎಂಬ ವೇದಿಕೆ ಕೂಡ ಗೂಗಲ್‌ ಪೇ ಆಪ್‌ನಲ್ಲಿ ಸ್ಥಾನ ಪಡೆಯಲಿವೆ.

   
 
ಹೆಲ್ತ್