Back
Home » ಇತ್ತೀಚಿನ
ಬೆಂಗಳೂರಿನಲ್ಲಿ ಇಂದು ಹೊಸ ಒನ್‌ಪ್ಲಸ್ 'ಎಕ್ಸ್‌ಪೀರಿಯನ್ಸ್ ಸ್ಟೋರ್' ಆರಂಭ!
Gizbot | 21st Sep, 2019 12:15 PM
 • ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್

  ಹೌದು, ಇಂದು ಸಂಜೆ ನಾಲ್ಕು ಗಂಟೆಗೆ ಕೋರಮಂಗಲದಲ್ಲಿರುವ ಫೋರಂ ಮಾಲ್‌ನಲ್ಲಿ ಹೊಸ ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್ ಮಳಿಗೆಗೆ ಒನ್‌ಪ್ಲಸ್ ಇಂಡಿಯಾದ ಜನರಲ್ ಮ್ಯಾನೇಜರ್ ವಿಕಾಸ್ ಅಗರ್ವಾಲ್ ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಜಿಎಫ್ ಮೂವಿ ಸ್ಟಾರ್ ಶ್ರೀನಿಧಿ ಶೆಟ್ಟಿ ಮತ್ತು ಸ್ಟೀಜ್ ಗುಂಪುಗಳ ಜನರಲ್ ಮ್ಯಾನೇಜರ್ ಪಲ್ಲವಿ ಜಯಪ್ರಕಾಶ್ ಅವರು ಭಾಗವಹಿಸಲಿದ್ದಾರೆ ಎಂದು ಕಂಪೆನಿ ತಿಳಿಸಿದ್ದು, ಒನ್‌ಪ್ಲಸ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದೆ.


 • ವಿಕಾಸ್ ಅಗರ್ ವಾಲ್

  ನಾವು ನಮ್ಮ ಆಫ್‌ಲೈನ್ ಕೇಂದ್ರಗಳ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತಿದ್ದೇವೆ. ಯಾಕೆಂದರೆ ಭಾರತೀಯ ಗ್ರಾಹಕರು ತಾವು ಖರೀದಿಸುವ ಮೊಬೈಲ್ ಅನ್ನು ಸ್ಪರ್ಶಿಸಿ ನಂತರ ಹೇಗಿದೆ ಎಂದು ಅನುಭವ ಪಡೆದು ನಂತರ ಖರೀದಿ ಮಾಡಲು ಹೆಚ್ಚು ಆಸಕ್ತರಾಗಿರುತ್ತಾರೆ. ಹಾಗಾಗಿ ಈ ಉದ್ದೇಶ ಹೊಂದಿದ್ದೇವೆ. ಆದರೆ, ಡಿಜಿಟಲ್ ಸೇವೆಯೂ ಕೂಡ ಮುಂದುವರಿಯಲಿದೆ ಎಂದು ಒನ್ ಪ್ಲಸ್ ಇಂಡಿಯಾದ ಜನರಲ್ ಮ್ಯಾನೇಜರ್ ಆಗಿರುವ ವಿಕಾಸ್ ಅಗರ್ ವಾಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


 • ಎಕ್ಸ್‌ಪೀರಿಯನ್ಸ್ ಸ್ಟೋರ್‌

  ಒನ್‌ಪ್ಲಸ್ ಕಂಪೆನಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾರಾಟವನ್ನು ಬಯಸುತ್ತಿದೆ. ಆಫ್‌ಲೈನ್ ಸ್ಟೋರ್ ಗಳಲ್ಲಿ ಶೇಕಡಾ 91ರಷ್ಟು ಹೆಚ್ಚಳವನ್ನು ಕಂಪೆನಿ ಗಮನಿಸಿದೆ. ಆ ನಿಟ್ಟಿನಲ್ಲಿ ಕಂಪೆನಿ ಹಲವು ಎಕ್ಸ್‌ಪೀರಿಯನ್ಸ್ ಸ್ಟೋರ್‌ಗಳನ್ನು ತೆರೆಯು ನಿರ್ಧಾರವನ್ನು ಕಂಪೆನಿ ತೆಗೆದುಕೊಂಡಿದ್ದು, ಬೆಂಗಳೂರಿನಲ್ಲಿ ಕಳೆದ ವರ್ಷವೇ ಒನ್ ಪ್ಲಸ್ ಸಂಸ್ಥೆ ಒನ್ ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ಗಳನ್ನು ತೆರೆದಿದೆ. ಸಂಸ್ಥೆಯು ಇನ್ನೂ 10 ಕೇಂದ್ರಗಳನ್ನು ಭಾರತದಲ್ಲಿ ಈ ವರ್ಷ ತೆರೆಯುವ ಉದ್ದೇಶವನ್ನು ಇಟ್ಟುಕೊಂಡಿದೆ ಎಂದು ತಿಳಿದುಬಂದಿದೆ.


 • ಜಾಗ ಕಲ್ಪಿಸಿದಂತಾಗುತ್ತದೆ.

  ಒನ್ ಪ್ಲಸ್ ಮಾರುಕಟ್ಟೆಯು ದೇಶದಲ್ಲಿ ಅಗಾಧವಾಗಿ ಬೆಳೆಯುತ್ತಿದ್ದು, ಒಟ್ಟಿನಲ್ಲಿ ಒನ್ ಪ್ಲಸ್ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ನೆಲೆಯೂರಿ ನಿಲ್ಲಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಅನ್ನುವುದು ಗ್ಯಾರೆಂಟಿ ಎನ್ನಬಹುದು. ಒನ್‌ಪ್ಲಸ್‌ ಕಂಪೆನಿಗೆ ಇದುವರೆಗೂ ದೇಶದ ಗ್ರಾಹಕರು ನೀಡಿರುವ ಬೆಂಬಲವು ಮುಂದಿನ ದಿನಗಳಲ್ಲಿ ಮುಂದುವರಿದದ್ದೇ ಆದಲ್ಲಿ, ಚೀನಾದ ಮತ್ತೊಂದು ಕಂಪೆನಿಗೆ ಭಾರತವು ಜಾಗ ಕಲ್ಪಿಸಿದಂತಾಗುತ್ತದೆ. ಈ ಮೂಲಕ ಕಂಪೆನಿಯ ಮುಂದಿನ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ಚೀನಾದ ಜನಪ್ರಿಯ ಪ್ರೀಮಿಯಂ ಮೊಬೈಲ್ ತಯಾರಿಕಾ ಕಂಪೆನಿ ಒನ್‌ಪ್ಲಸ್ ಬೆಂಗಳೂರಿನಲ್ಲಿ ಮತ್ತೊಂದು ಒನ್‌ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್ ತೆರೆಯುತ್ತಿದೆ. ಆಫ್‌ಲೈನ್ ಕೇಂದ್ರಗಳನ್ನು ಮತ್ತು ಸೇವಾಕೇಂದ್ರಗಳನ್ನು ತೆರೆಯುವ ಮುಖಾಂತರ ಗ್ರಾಹಕರ ಸೇವಾ ಲಭ್ಯತೆಯನ್ನು ಹೆಚ್ಚಿಸಿ ಕಂಪೆನಿಯ ಬಗ್ಗೆ ಅನುಭವವನ್ನು ಗ್ರಾಹಕರಿಂದ ಪಡೆಯುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಇಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಫೋರಂ ಮಾಲ್‌ನಲ್ಲಿ ಹೊಸ ಎಕ್ಸ್‌ಪೀರಿಯನ್ಸ್ ಸ್ಟೋರ್ ಉದ್ಘಾಟಿಸಲು ಮುಂದಾಗಿದೆ.

   
 
ಹೆಲ್ತ್