Back
Home » ಆರೋಗ್ಯ
ನಿತ್ಯ ಒಂದೇ ರೀತಿಯ ಆಹಾರ ಸೇವಿಸುವುದು ಆರೋಗ್ಯಕರವಲ್ಲ!
Boldsky | 21st Sep, 2019 12:40 PM
 • ಪೌಷ್ಠಿಕಾಂಶಗಳ ಕೊರತೆ

  ನಮ್ಮ ದೇಹ ಸರಿಯಾಗಿ ಕಾರ್ಯನಿರ್ವಹಿಸಲು ಸ್ಥೂಲ ಹಾಗೂ ಸೂಕ್ಷ್ಮ ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸುವುದು ಅತ್ಯಗತ್ಯ. ದೇಹದ ಈ ಬೇಡಿಕೆ ಪೂರ್ಣವಾಗುವುದು ವಿವಿಧ ಆಹಾರ, ಹಣ್ಣು, ತರಕಾರಿಗಳನ್ನು ತಿಂದಾಗ ಮಾತ್ರ. ಅದನ್ನು ಬಿಟ್ಟು ಒಂದೇ ವಿಧಧ ಹಣ್ಣು, ಪೋಷಕಾಂಶವುಳ್ಳ ಆಹಾರವನ್ನು ಸೇವಿಸಿದರೆ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ. ನಿಮ್ಮ ಆಹಾರದ ಪಥ್ಯದಲ್ಲಿ ಸಾಕಷ್ಟು ಹಣ್ಣು, ತರಕಾರಿ, ಮೊಳಕೆ ಕಾಳುಗಳು ಕಡ್ಡಾಯವಾಗಿ ಇರಲಿ.


 • ಕರುಳಿನ ಆರೋಗ್ಯಕ್ಕೆ ಹಾನಿಕರ

  ನೀವು ವೈವಿಧ್ಯಮಯ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟಿರೀಯಾಗಳ ವೃದ್ಧಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಕಾರಣವಾಗುತ್ತದೆ, ಅಲ್ಲದೆ ಜೀರ್ಣಕ್ರಿಯೆಗೂ ಸಹಕಾರಿ. ಒಂದೇ ಆಹಾರ ಪದ್ಧತಿ ಮೇಲಿನ ಕ್ರಿಯೆಗಳಿಗೆ ಅಡಚಣೆ ಉಂಟುಮಾಡುತ್ತದೆ. ಆದ್ದರಿಂದ ಕರುಳಿನ ಆರೋಗ್ಯಕ್ಕಾಗಿ ಅಗತ್ಯ ಪ್ರಮಾಣದ ಹಣ್ಣು, ತರಕಾರಿ ಮತ್ತು ಮೊಳಕೆ ಆಹಾರಗಳನ್ನು ಸೇವಿಸಿ.


 • ತೂಕ ಇಳಿಕೆಯನ್ನು ನಿಧಾನಗೊಳಿಸುತ್ತದೆ

  ತೂಕ ಕಡಿಮೆ ಮಾಡಬೇಕು ಎಂದು ನಿತ್ಯ ಒಂದೇ ವಿಧಧ ಆಹಾರ ಸೇವಿಸುವುದು ಒಳ್ಳೆಯದಲ್ಲ. ಬದಲಾಗಿ ಇಂತಹ ವೈವಿಧ್ಯವಿಲ್ಲದ ಆಹಾರ ಕ್ರಮದಿಂದ ತೂಕ ಇಳಿಕೆ ನಿಧಾನವಾಗುತ್ತದೆ. ಅಧ್ಯಯನದ ಪ್ರಕಾರ ನಿತ್ಯ ಏಕತಾನತೆಯ ಆಹಾರ ಸೇವಿಸಿದವರಿಗಿಂತ, ವಿವಿಧ ಹಣ್ಣು-ತರಕಾರಿಗಳನ್ನು ಸೇವಿಸಿದವರು ಶೀಘ್ರವಾಗಿ ತೂಕದಲ್ಲಿ ಇಳಿಕೆ ಕಂಡಿದ್ದಾರೆ.


 • ಕೆಲವು ಪೌಷ್ಟಿಕಾಂಶಗಳು ಅತಿಯಾಗಲೂಬಹುದು

  ಏರಿಳಿತವಿಲ್ಲದ ಆಹಾರ ಸೇವಿಸುವುದರಿಂದ ಕೆಲವು ಪೌಷ್ಟಿಕಾಂಶಗಳು ದೇಹಕ್ಕೆ ಅತಿಯಾಗಬಹುದು, ಇದು ನಿಮ್ಮ ದೇಹವನ್ನು ಅಪಾಯದಂಚಿಗೆ ತಳ್ಳುತ್ತದೆ. ಉದಾಹರಣೆಗೆ ಅತಿಯಾದ ಅರಿಶಿನ ಯಕೃತ್ ನ ಸಮರ್ಥ ಕಾರ್ಯನಿರ್ವಹಣೆಗೆ ಅಡಚಣೆ ಉಂಟುಮಾಡುತ್ತದೆ. ಹೀಗೆ ಹಲವು ಆಹಾರ ದೇಹಕ್ಕೆ ಒಳ್ಳೆಯದೇ ಆದರೂ ಅತಿಯಾದರೆ ವಿಷವಾಗಲೂಬಹುದು.


 • ತಿನ್ನುವ ಕಾಯಿಲೆ ಕಾಡಬಹುದು

  ಒಂದೇ ಆಹಾರವನ್ನು ನಿತ್ಯ ಸೇವಿಸುವುದರಿಂದ ತಿನ್ನುವುದರಲ್ಲಿ ಆಯ್ಕೆ ಮಾಡುವ ಆಭ್ಯಾಸಕ್ಕೆ ನೀವು ಒಳಗಾಗಬಹುದು ಅಥವಾ ಕೆಲವು ಆಹಾರದಿಂದ ದೂರವಿರಲು ಯತ್ನಿಸುತ್ತೀರಿ. ಕೆಲವು ಆಹಾರವನ್ನು ಅದರ ಬಣ್ಣದಿಂದ, ಅದರ ವಿನ್ಯಾಸದಿಂದ ಅಥವಾ ವಾಸನೆಯಿಂದ ನಿರಾಕರಿಸುತ್ತೀರಿ. ಇದು ನಿಮ್ಮಲ್ಲಿ ಪೌಷ್ಟಿಕಾಂಶದ ಕೊರತೆ ಹಾಗೂ ಅನಾರೋಗ್ಯಕರ ತೂಕ ಇಳಿಕೆಗೆ ಸಹ ಕಾರಣವಾಗಬಹುದು.


 • ಆಹಾರದಲ್ಲಿ ನಿರುತ್ಸಾಹ

  ಯಾವುದೇ ವಿಷಯದಲ್ಲಿ ಏಕತಾನತೆ ಬೇಸರ ಎನಿಸುತ್ತದೆ, ಬಾಯಿಯ ರುಚಿ ಕೇಳಬೇಕೆ. ನಾಲಿಗೆಗೆ ನಿತ್ಯ ಒಂದೇ ರೀತಿಯ ರುಚಿಯನ್ನು ನೀಡಿದರೆ ಬೇಸರವೆನಿಸುತ್ತದೆ. ವಿವಿಧ ರುಚಿಯನ್ನು ನಾಲಿಗೆ ಸವಿಯಬೇಕು. ಇಲ್ಲವಾದಲ್ಲಿ ದೇಹದ ಆರೋಗ್ಯದ ಜತೆಗೆ ಬಾಯಿಯ ಆರೋಗ್ಯವೂ ಹಾಳಗಬಹುದು, ಆಹಾರದಲ್ಲಿ ನಿರುತ್ಸಾಹ ಮೂಡಬಹುದು ಅಥವಾ ಒಂದೇ ತೆರನಾದ ಆಹಾರ ಸೇವಿಸಿ ನಿಮ್ಮ ನಾಲಿಗೆ ಬೇರೆ ರುಚಿಯನ್ನು ಆಸ್ವಾದಿಸಲು ನಿರಾಕರಿಸಲೂಬಹುದು.
ನಿಮ್ಮ ನಿತ್ಯ ಊಟದ ಅಭ್ಯಾಸ ಒಂದೇ ಆಹಾರ ಸೇವನೆಯನ್ನು ಅನುಸರಿಸುತ್ತಿದ್ದೀರಾ?, ನೀವು ಮೊಟ್ಟೆ-ಬ್ರೆಡ್, ಅವಲಕ್ಕಿ, ಇಡ್ಲಿ, ಬಾಳೆಹಣ್ಣು ಅಥವಾ ಇನ್ಯಾವುದೇ ರೀತಿಯ ಒಂದೇ ಆಹಾರವನ್ನು ಪ್ರತಿ ನಿತ್ಯ ಸೇವಿಸುತ್ತಿದ್ದೀರಾ?. ಹಾಗಿದ್ದರೆ ಕೂಡಲೇ ನೀವು ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳುವುದು ಅವಶ್ಯ.

ಅತಿಯಾದರೆ ಅಮೃತವೂ ವಿಷವಾದಿತೂ. ಇದು ಎಲ್ಲಾ ಕಾಲಕ್ಕೂ, ಎಲ್ಲಾ ವಿಷಯಕ್ಕೂ ಅನ್ವಯಿಸು ಮಾತು. ಕೆಲವು ಆಹಾರ ಅತಿಯಾದ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ ಹಾಗೆಂದ ಮಾತ್ರಕ್ಕೆ ನಿತ್ಯ ಅದನ್ನೇ ಸೇವಿಸುವುದು ಉತ್ತಮ ಅಭ್ಯಾಸವಲ್ಲ. ಸರಳವಾದ ಆಹಾರಕ್ರಮವನ್ನು ಅನುಸರಿಸುವುದರಿಂದ ಬೊಜ್ಜು ಕರಗಿಸಬಹುದು, ದೇಹದ ಸ್ವಾಸ್ಥ್ಯ ಕಾಪಾಡಬಹುದು ಎಂಬುದು ತಪ್ಪಾದ ಅಭಿಪ್ರಾಯ. ಅಥವಾ ಈ ಹಣ್ಣು, ತರಕಾರಿ ತಿನ್ನಲು ಇಷ್ಟವಿಲ್ಲ ಎಂಬ ಕಾರಣಗಳಿಂದಾಗಿ ಕೆಲವಷ್ಟೇ ಆಹಾರಗಳಿಗೆ ನೀವು ಸೀಮಿತರಾದರೆ ನಿಮ್ಮ ದೇಹ ಸಹಿಸುವುದಿಲ್ಲ ಎಚ್ಚರ.

ನಮ್ಮ ದೇಹಕ್ಕೆ ಎಲ್ಲಾ ರೀತಿಯ ಆಹಾರದ ಅಗತ್ಯವಿದೆ, ಕೊಬ್ಬಿನಂಶವೂ ಬೇಕು, ಪೌಷ್ಟಿಕಾಂಶವೂ ಬೇಕು. ಏಳು ಬಣ್ಣಗಳ ಹಣ್ಣು, ತರಕಾರಿ, ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸುವುದು ಉತ್ತಮ ಆಹಾರ ಕ್ರಮ.

ಪ್ರತಿನಿತ್ಯ ಏಕೆ ಒಂದೇ ರೀತಿಯ ಆಹಾರವನ್ನು ಸೇವಿಸಬಾರದು ಇಲ್ಲಿದೆ ಕಾರಣಗಳು:

   
 
ಹೆಲ್ತ್