Back
Home » ಆರೋಗ್ಯ
ಕೆಲವೇ ದಿನಗಳಲ್ಲಿ ತೂಕ ಇಳಿಸಬಲ್ಲ ಸಿಹಿಗೆಣಸು!
Boldsky | 23rd Sep, 2019 04:11 PM
 • ಅತಿ ಹೆಚ್ಚು ನಾರಿನಾಂಶ ಹೊಂದಿರುವ ತರಕಾರಿ

  ಸಿಹಿಗೆಣಸಿನಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಬಲೆಯ ರೂಪದಲ್ಲಿ ಜೆಲ್ ಉತ್ಪತಿಯಾಗುತ್ತದೆ. ಇದು ಬೇಗ ಹೊಟ್ಟೆ ತುಂಬಿದಂತೆ ಅನಿಸುತ್ತದೆ, ಬಹುಕಾಲ ಹಸಿವೆಯನ್ನು ತಡೆಯುತ್ತದೆ ಹಾಗೂ ಹೆಚ್ಚು ತಿನ್ನುವ ಅಭ್ಯಾಸವೂ ಕಡಿಮೆಯಾಗುತ್ತದೆ. ಮಲಬದ್ಧತೆಯನ್ನು ಶಮನ ಮಾಡುವ ಸಿಹಿಗೆಣಸು, ಒಳ್ಳೆಯ ಬ್ಯಾಕ್ಟಿರಿಯಾಗಳನ್ನು ಉತ್ಪತಿ ಮಾಡುತ್ತದೆ ಮತ್ತು ಅಸ್ಥಮಾ ಸಮಸ್ಯೆ ನಿವಾರಣೆಯಾಗುತ್ತದೆ.` ಸಿಹಿಗೆಣಸಿನಲ್ಲಿರುವ ಫೈಬರ್ ಅಂಶ ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ, ಜೀರ್ಣಕ್ರಿಯೆ ಹಾಗೂ ತೂಕ ಇಳಿಕೆಯಲ್ಲೂ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತದೆ.


 • ಶಕ್ತಿಯ ಮೂಲ ಕಾರ್ಬೊಹೈಡ್ರೇಟ್ಸ್

  ಸಾಮಾನ್ಯವಾಗಿ ತೂಕ ಕಡಿಮೆ ಮಾಡಲು ಇಚ್ಚಿಸುವವರು ಕಾರ್ಬೊಹೈಡ್ರೇಟ್ಸ್ ಅಂಶವುಳ್ಳ ಆಹಾರಗಳ ಸೇವನೆಯನ್ನು ಕಡಿಮೆ ಮಾಡುತ್ತಾರೆ ಅಥವಾ ಸೇವಿಸುವುದೇ ಇಲ್ಲ. ಆದರೆ ನಿಮಗೆ ಗೊತ್ತೆ ಕಾರ್ಬೊಹೈಡ್ರೇಟ್ಸ್ ಅಂಶವನ್ನು ಹೊಂದಿರುವ ಸಿಹಿ ಗೆಣಸು ಸಹ ತೂಕ ಇಳಿಕೆಗೆ ಸಹಕಾರಿ. ಸಿಹಿಗೆಣಸಿನಲ್ಲಿರುವ ಕಾರ್ಬೊಹೈಡ್ರೇಟ್ಸ್ ನೀವು ನಡೆದಾಡಲು, ಮೆಟ್ಟಿಲು ಹತ್ತಲು, ಶ್ರಮದಾಯಕ ಕೆಲಸಗಳನ್ನು ಮಾಡಲು ಶಕ್ತಿ ನೀಡುತ್ತದೆ. ನಿಮ್ಮ ದೇಹದಲ್ಲಿ ಅಗತ್ಯ ಪ್ರಮಾಣದ ಕಾರ್ಬೊಹೈಡ್ರೇಟ್ಸ್ ಇಲ್ಲವಾದಲ್ಲಿ ನೀವು ನಿರುತ್ಸಾಹಿಗಳಾಗಬಹುದು ಅಥವಾ ಅನಾರೋಗ್ಯದ ಸಮಸ್ಯೆ ಸಹ ಕಾಡಬಹುದು. 300 ಗ್ರಾಂ ಸಿಹಿಗೆಣಸಿನಲ್ಲಿ 58ಗ್ರಾಂ ಕಾರ್ಬೊಹೈಡ್ರೇಟ್ಸ್ ಅಂಶ ಇರುತ್ತದೆ. ಇದರಲ್ಲಿ 8.25 ಗ್ರಾಂ ಕಾಂಪ್ಲೆಕ್ಸ್ ಕಾರ್ಬ್ಸ (ಡಯಟ್ ಫೈಬರ್) ಆಗಿದೆ.


 • ಗ್ಲೈಸೆಮಿಕ್ ಸೂಚ್ಯಂಕ (ಜಿಐ)

  ನಾವು ಆಹಾರ ಸೇವಿಸಿದ ನಂತರ ನಮ್ಮ ದೇಹದಲ್ಲಿನ ಉತ್ಪತಿಯಾಗುವ ಗ್ಲುಕೋಸ್ ಆಧಾರದ ಮೇಲೆ ನಮ್ಮ ದೇಹದಲ್ಲಿರುವ ಕಾರ್ಬೊಹೈಡ್ರೇಟ್ಸ್ ಅನ್ನು ಅಳೆಯುವುದು ಗ್ಲೂಸೆಮಿಕ್ ಸೂಚ್ಯಂಕ (ಜಿಐ). ಅತಿ ಹೆಚ್ಚು ಜಿಐ ಇರುವ ಆಹಾರ ಸೇವನೆಯಿಂದ ಬ್ಲಡ್ ಶುಗರ್ ಹೆಚ್ಚಾಗುತ್ತದೆ. ಈ ಅಂಶವುಳ್ಳ ಆಹಾರವನ್ನು ಅತಿ ಹೆಚ್ಚು ಸೇವಿಸುವುದರಿಂದ ಇನ್ಸುಲಿನ್ ಅಂಶವನ್ನು ಕಡಿಮೆ ಮಾಡುತ್ತದೆ, ಅಲ್ಲದೇ ಟೈಪ್ 2 ಮಧುಮೇಹಕ್ಕೂ ಕಾರಣವಾಗಬಹುದು. ಆದರೆ ಸಿಹಿ ಗೆಣಸಿನಲ್ಲಿ ಸಿಹಿ ಅಂಶ ಇದ್ದರೂ ಅದರ ಜಿಐ ಮಾತ್ರ ಕಡಿಮೆ ಇರುತ್ತದೆ. ಆದ್ದರಿಂದ ಮಧುಮೇಹದ ಯಾವುದೇ ಭಯವಿಲ್ಲದೆ ನೀವು ಹೆಚ್ಚಾಗಿ ಸಿಹಿಗೆಣಸನ್ನು ಸೇವಿಸಬಹುದು.


 • ಹೆಚ್ಚು ನೀರಿನಂಶ ಉತ್ಪತಿ

  ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತಿದ್ದಂತೆ ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ದೇಹದ ನಿರ್ಜಲೀಕರಣಕ್ಕೆ ಸಿಹಿಗೆಣಸು ಎಷ್ಟು ಪರಿಣಾಮಕಾರಿ ಅಸ್ತ್ರವೆಂದರೆ, ಇದರೆ ಸೇವನೆಯ ಕೆಲವೇ ನಿಮಿಷಗಳಲ್ಲಿ ಜೀವಕೋಶಗಳಿಗೆ ನೀರಿನಾಂಶವನ್ನು ಪೂರೈಕೆ ಮಾಡುತ್ತದೆ ಹಾಗೂ ಚಯಾಪಚಯ ಕ್ರಿಯೆಯನ್ನು ತಕ್ಷಣವೇ ಆರಂಭಿಸುತ್ತದೆ. ದೇಹದಲ್ಲಿ ಅಗತ್ಯ ಪ್ರಮಾಣದ ನೀರಿನಂಶವನ್ನು ಪೂರೈಸುವ ಮೂಲಕ ಕೊಬ್ಬು, ಪಿಹೆಚ್ ಅನ್ನು ಸಮತೋಲನಗೊಳಿಸುತ್ತದೆ ಅಲ್ಲದೇ, ವಿಷಕಾರಿ ಅಂಶವನ್ನು ದೇಹದಿಂದ ಹೊರಹಾಕುತ್ತದೆ.


 • ಸಿಹಿಗೆಣಸಿನ ಇನ್ನಷ್ಟು ಆರೋಗ್ಯಕಾರಿ ಗುಣಗಳು

  * ಸಿಹಿ ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ಕಾಪಾಡುತ್ತವೆ.

  * ಇದರಲ್ಲಿರುವ ವಿಟಮಿನ್ ಸಿ ಜೀವಸತ್ವವು ಮೂಳೆ, ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

  * ಇದರಲ್ಲಿ ಫೊಲಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿರುವುದರಿಂದ ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.

  * ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್‌ ಉನ್ನತ ಮಟ್ಟದಲ್ಲಿರುತ್ತದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ದೇಹದ ಸ್ನಾಯುಗಳು ಮತ್ತು ನರ ಕಾರ್ಯಗಳನ್ನು ಸುಲಭಗೊಳಿಸುತ್ತದೆ.

  * ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.

  * ಇದರಲ್ಲಿ ಅಧಿಕ ವಿಟಮಿನ್ ಎ, ಲೈಕೊಪೆನ್ ಇದ್ದು ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.
ಹೇರಳವಾದ ವಿಟಮಿನ್, ಪೌಷ್ಟಿಕಾಂಶಗಳನ್ನು ಹೊಂದಿರುವ ಸಿಹಿಗೆಣಸು ಬಹುತೇಕರ ನೆಚ್ಚಿನ ತಿಂಡಿ. ಸಿಹಿ ಗೆಣಸನ್ನು ಉಪ್ಪು ಹಾಕಿ ಬೇಯಿಸಿ ಹಾಗೇ ತಿನ್ನಬಹುದು, ಇಲ್ಲವೇ ಕೆಂಡದ ಮೇಲೆ ಇಟ್ಟು ತಿಂದರೂ ಬಲು ರುಚಿಕರ. ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಸಿಹಿಗೆಣಸು ಹೆಚ್ಚಿನ ಪ್ರಮಾಣದಲ್ಲಿ ಶರ್ಕರಪಿಷ್ಠವನ್ನು ಹೊಂದಿದೆ.

ರುಚಿಯ ಜತೆಗೆ ವಿಟಮಿನ್ ಎ, ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ , ಮಿನರಲ್ಸ್ ಮತ್ತು ಸಸ್ಯ ಸಂಯುಕ್ತ ಫೈಟೋನ್ಯೂಟ್ರಿಯೆಂಟ್ಸ್ ಗಳನ್ನು ಹೊಂದಿರುವ ಸಿಹಿಗೆಣಸು ಆರೋಗ್ಯಕ್ಕೆ ಅತ್ಯುಪಕಾರಿ. ಅದರಲ್ಲೂ ಜಿಮ್ ಕಸರತ್ತು ಮಾಡುವವರು ಹಾಗೂ ಕ್ರೀಡಾಪಟುಗಳ ನೆಚ್ಚಿನ ಆಹಾರವೂ ಹೌದು.

ಆದರೆ ಹಲವು ಪೌಷ್ಠಿಕಾಂಶಗಳ ಜತೆಗೆ ಅತಿದ ಕ್ಯಾಲೋರಿಯನ್ನು ಸಿಹಿಗೆಣಸು ಹೊಂದಿದೆ ಎನ್ನಲಾಗುತ್ತದೆ ಆದರೂ ಇದು ಸತ್ಯವಲ್ಲ. ನಿಜಹೇಳಬೇಕೆಂದರೆ ಸಿಹಿಗೆಣಸು ಅಲೂಗಡ್ಡೆಯ ಬದಲಾಗಿ ಬಳಸಬಹುದಾದ ಆರೋಗ್ಯಕಾರಿ ಹಾಗೂ ಕಡಿಮೆ ಅವಧಿಯಲ್ಲೆ ತೂಕ ಇಳಿಸಬಲ್ಲ ಅತ್ಯುತ್ತಮ ತರಕಾರಿ ಎಂದು ಸಂಶೋಧನೆಗಳು ಸಾಬೀತು ಮಾಡಿದೆ.

ಸಿಹಿಗೆಣಸು ತೂಕ ಇಳಿಸುವಲ್ಲಿ ಹೇಗೆ ಸಹಕಾರಿ, ಇದರಲ್ಲಿನ ಯಾವ ಅಂಶಗಳು ದೇಹಕ್ಕೆ ಆರೋಗ್ಯಕರ ಮುಂದೆ ತಿಳಿಯೋಣ.

 
ಹೆಲ್ತ್