Back
Home » ಆರೋಗ್ಯ
ಅಧ್ಯಯನದ ಪ್ರಕಾರ ಭಾರತದಲ್ಲಿ ಶೇ. 63% ಉದ್ಯೋಗಿಗಳು ಅಧಿಕ ತೂಕ ಹೊಂದಿದವರು!
Boldsky | 25th Sep, 2019 06:09 PM
 • ಹೆಚ್ಚಿನ ಭಾರತೀಯ ಉದ್ಯೋಗಿಗಳು ಅಧಿಕ ತೂಕ ಹೊಂದಿರುವರು

  ಕೇಂದ್ರ ಸರ್ಕಾರವು ಆರೋಗ್ಯಕಾರಿ ಜೀವನಶೈಲಿ ನಡೆಸಲು ಕೆಲವೊಂದು ಅಭಿಯಾನಗಳನ್ನು ಆರಂಭಿಸಿದೆ. ಇದರಲ್ಲಿ ಮುಖ್ಯವಾಗಿ ಫಿಟ್ ಇಂಡಿಯಾದಂತಹ ಅಭಿಯಾನವು ಆರೋಗ್ಯಕಾರಿ ಜೀವನ ನಡೆಸಲು ತುಂಬಾ ಪರಿಣಾಮಕಾರಿ. ಇಂತಹ ಸಂದರ್ಭದಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಕಂಪೆನಿಗಳಲ್ಲಿ ಕೆಲಸ ಮಾಡುವಂತಹ ಶೇ.63ರಷ್ಟು ಉದ್ಯೋಗಿಗಳು ಅನಾರೋಗ್ಯಕಾರಿ ತೂಕ ಹೊಂದಿದ್ದಾರೆ ಎಂದು ಅಧ್ಯಯನಗಳು ಹೇಳಿವೆ.


 • ಅಧ್ಯಯನದ ಪ್ರಕಾರ…

  ಅಧ್ಯಯನಕ್ಕಾಗಿ ಐಟಿ, ಬ್ಯಾಂಕಿಂಗ್, ಮಾರ್ಕೆಟಿಂಗ್ ಇತ್ಯಾದಿ ಕ್ಷೇತ್ರಗಳ ಸುಮಾರು 60 ಸಾವಿರ ಮಂದಿ ಉದ್ಯೋಗಿಗಳನ್ನು ಇಲ್ಲಿ ಸಮೀಕ್ಷೆಗೆ ಒಳಪಡಿಸಲಾಯಿತು. ಈ ಅಧ್ಯಯನವನ್ನು ಹೆಲ್ತಿಫೈಮೆ ಎಂಬ ಪ್ರಮುಖ ಆಪ್ ಕಂಪೆನಿಯೊಂದು ನಡೆಸಿದ್ದು, ಸುಮಾರು 12 ತಿಂಗಳುಗಳ ಕಾಲ ಈ ಅಧ್ಯಯನ ನಡೆಸಿದೆ ಮತ್ತು ದೇಶದ ಪ್ರಮುಖ ನಗರಗಳಾಗಿರುವಂತಹ ಚೆನ್ನೈ, ಬೆಂಗಳೂರು, ಕೊಲ್ಕತ್ತಾ, ದೆಹಲಿ, ಹೈದರಾಬಾದ್ ಮತ್ತು ಕೊಲ್ಕತ್ತಾದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಗುಜರಾತ್ ನ ವಾಪಿ, ಜಗಡಿಯಾ, ಮಹಾರಾಷ್ಟ್ರದ ಖಂಡಲಾದಿಂದಲೂ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.


 • ಅಧ್ಯಯನ ವರದಿ

  ಅಧ್ಯಯನ ವರದಿಯಿಂದ ತಿಳಿದುಬಂದಿರುವ ಅಂಶವೆಂದರೆ ಕಚೇರಿಯಲ್ಲಿ ಕೆಲಸ ಮಾಡುವ ಶೇ.63ರಷ್ಟು ಮಂದಿ ಅಧಿಕ ತೂಕ ಹೊಂದಿದ್ದಾರೆ ಮತ್ತು ಅವರು ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) 23ಕ್ಕಿಂತ ಹೆಚ್ಚಿದೆ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯಕಾರಿ ವ್ಯಕ್ತಿಯೊಬ್ಬನ ಬಿಎಂಐಯು 18.5ರಿಂದ 24.9 ಮಧ್ಯೆ ಇರಬೇಕು. 25ಕ್ಕಿಂತ ಹೆಚ್ಚು ಬಿಎಂಐ ಹೊಂದಿರುವ ವ್ಯಕ್ತಿಯು ಖಂಡಿತವಾಗಿಯೂ ಅಧಿಕ ತೂಕ ಹೊಂದಿರುವನು ಮತ್ತು 30ಕ್ಕಿಂತ ಹೆಚ್ಚಿನ ಬಿಎಂಐಯನ್ನು ಬೊಜ್ಜು ಎಂದು ಪರಿಗಣಿಸಲಾಗುವುದು ಎಂದು ಅಧ್ಯಯನವು ತಿಳಿಸಿದೆ.


 • ತುಂಬಾ ಚಟುವಟಿಕೆ ಮತ್ತು ಚಟುವಟಿಕೆ ಇಲ್ಲದಿರುವ ಉದ್ಯೋಗಿಗಳು

  ಗ್ರಾಹಕ ವಸ್ತುಗಳ ಕಂಪೆನಿಗಳಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳು ತುಂಬಾ ಚಟುವಟಿಕೆಯಿಂದ ಇರುವರು ಮತ್ತು ಆರ್ಥಿಕ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಯನಿರ್ವಾಹಕರು ತುಂಬಾ ಕಡಿಮೆ ಚಟುವಟಿಕೆ ಹೊಂದಿರುವರು. ದಿನದಲ್ಲಿ ಸರಾಸರಿಯಾಗಿ ಎಷ್ಟು ಹೆಜ್ಜೆ ನಡೆದಿದ್ದಾರೆ ಎನ್ನುವುದರ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ. ಇದರ ಫಲಿತಾಂಶದ ಪ್ರಕಾರ ಗ್ರಾಹಕ ವಸ್ತು ಕಂಪೆನಿಗಳಲ್ಲಿನ ಕಾರ್ಯನಿರ್ವಾಹಕರು ದಿನಕ್ಕೆ ಸುಮಾರು 5988 ಹೆಜ್ಜೆ ಮತ್ತು ಆರ್ಥಿಕ ವಲಯದಲ್ಲಿನ ಕಾರ್ಯನಿರ್ವಾಹಕರು ದಿನಕ್ಕೆ ಸರಾಸರಿಯಾಗಿ ಸುಮಾರು 4969 ಹೆಜ್ಜೆಯನ್ನಿಡುತ್ತಾರೆ ಎಂದು ಹೇಳಿದೆ.


 • ಉದ್ಯೋಗಿಗಳು ವಾರಾಂತ್ಯದಲ್ಲಿ ತುಂಬಾ ಕಡಿಮೆ ಚಟುವಟಿಕೆ ಹೊಂದಿರುವರು

  ವಾರಾಂತ್ಯವೆಂದರೆ ಆಗ ಖಂಡಿತವಾಗಿಯೂ ತಿಂದುಡು ಮಲಗುವುದು ಎನ್ನುವ ವಿಚಾರವು ಇಂದಿನ ಪ್ರತಿಯೊಬ್ಬ ಉದ್ಯೋಗಿಯಲ್ಲೂ ಇದೆ. ಯಾಕೆಂದರೆ ವಾರ ಪೂರ್ತಿಯ ದಣಿವನ್ನು ನಿವಾರಣೆ ಮಾಡುವುದು ಇದರ ಉದ್ದೇಶವಾಗಿದೆ. ವಾರಾಂತ್ಯದಲ್ಲಿ ಕಚೇರಿಯಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳು ಕಡಿಮೆ ಚಟುವಟಿಕೆಯಿಂದ ಇರುವರು. ಇವರು ಜಿಮ್ ಗೆ ಕೂಡ ಹೋಗುವುದಿಲ್ಲ. ಈ ಉದ್ಯೋಗಿಗಳು ವಾರದ ದಿನಗಳಲ್ಲಿ ಸುಮಾರು 300 ಕ್ಯಾಲರಿ ದಹಿಸಿದರೆ, ವಾರಾಂತ್ಯದಲ್ಲಿ ಸುಮಾರು 250 ಕ್ಯಾಲರಿ ಮಾತ್ರ ದಹಿಸುವರು ಎಂದು ಅಧ್ಯಯನ ಕಂಡುಕೊಂಡಿದೆ.


 • ಇದು ಗಂಭೀರ ಚಿಂತೆಯ ವಿಚಾರ

  ಉದ್ಯೋಗಿಯ ಉತ್ಪಾದಕತೆಯು ಹೆಚ್ಚು ಮಾಡಲು ವ್ಯಕ್ತಿಯೊಬ್ಬ ಆರೋಗ್ಯವಾಗಿರಬೇಕು ಮತ್ತು ಆತ ಸಂತೋಷದಿಂದ ಜೀವನ ಸಾಗಿಸುತ್ತಿರಬೇಕು. ಹೆಚ್ಚಿನ ಕಾರ್ಯನಿರ್ವಾಹಕರು ಚಟುವಟಿಕೆ ಇಲ್ಲದೆ ಇರುವರು ಮತ್ತು ಅಧಿಕ ತೂಕ ಹೊಂದಿರುವರು. ಅರ್ಧ ಜೀವನವನ್ನು ತಮ್ಮ ಕಚೇರಿಯಲ್ಲೇ ಕಳೆಯುವಂತಹ ಉದ್ಯೋಗಿಗಳಿಗಾಗಿ ಕಂಪೆನಿಗಳು ಫಿಟ್ನೆಸ್ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಇದು ಉದ್ಯೋಗಿಗಳನ್ನು ಫಿಟ್ ಆಗಿ ಇಡುವುದು ಮಾತ್ರವಲ್ಲದೆ, ಅವರು ಸಂತೋಷವಾಗಿಯೂ ಇರುವರು ಮತ್ತು ಅವರ ಉತ್ಪಾದಕತೆ ಹೆಚ್ಚಾಗುವುದು.


 • ಕಚೇರಿಯಲ್ಲಿ ಹೆಚ್ಚು ಚಟುವಟಿಕೆಯಿಂದ ಇರುವುದು ಹೇಗೆ?

  ನಡೆಯುವುದು ಮತ್ತು ಓಡುವುದನ್ನು ಪ್ರತಿಯೊಬ್ಬರು ದಿನಿನಿತ್ಯವೂ ಮಾಡಬಹುದು. ಆದರೆ ಆರೋಗ್ಯಕಾರಿ ಜೀವನ ನೀಡುವ ಈ ಸರಳ ವ್ಯಾಯಾಮಗಳನ್ನು ಜನರು ಮಾಡುವುದಿಲ್ಲ. ಕೆಲವು ಜನರು ತಮ್ಮ ವ್ಯಸ್ತ ವೇಳಾಪಟ್ಟಿ ಬಗ್ಗೆ ದೂರಿದರೆ, ಇನ್ನು ಕೆಲವರು ಉದಾಸೀನ ಮನೋಭಾವ ಹೊಂದಿರುವರು. ಆದರೆ ಜೀವನದ ಯಾವುದಾದರೂ ಹಂತದಲ್ಲಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗಿ ಬರಬಹುದು. ಕಚೇರಿಯಲ್ಲಿ ಯೋಗ ಅಥವಾ ಏರೋಬಿಕ್ಸ್ ನಂತಹ ವ್ಯಾಯಾಮಗಳಿದ್ದರೆ ಆಗ ಖಂಡಿತವಾಗಿಯೂ ಇದರ ಲಾಭ ಪಡೆದುಕೊಳ್ಳಬೇಕು. ನೀವು ಕಚೇರಿಗೆ ತೆರಳುವ ವೇಳೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೂ ಒಳ್ಳೆಯದು. ಮುಖ್ಯವಾಗಿ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು. ಮನೆಯಲ್ಲೇ ತಯಾರಿಸಿದ ಅಡುಗೆಯನ್ನು ಕಚೇರಿಗೆ ಕೊಂಡೊಯ್ಯುವುದು ಇತ್ಯಾದಿ. ಯಾಕೆಂದರೆ ಆರೋಗ್ಯವೇ ಭಾಗ್ಯ, ಅದನ್ನು ಕಡೆಗಣಿಸಿದರೆ ಖಂಡಿತವಾಗಿಯೂ ತಕ್ಕ ಬೆಲೆ ತೆರಬೇಕಾಗಿ ಬರಬಹುದು.
ಕಂಪ್ಯೂಟರ್ ಮುಂದೆ ಕುಳಿತುಕೊಂಡು ದಿನದ ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆಯುವಂತವರು ತಮ್ಮ ಆರೋಗ್ಯವನ್ನು ಕೂಡ ಕೆಡಿಸಿಕೊಳ್ಳುವರು ಎಂದು ಹೇಳಲಾಗುತ್ತದೆ. ಯಾಕೆಂದರೆ ಯಾವುದೇ ದೈಹಿಕ ಶ್ರಮವಿಲ್ಲದೆ ಮಾಡುವಂತಹ ಕೆಲಸವು ಇದಾಗಿದ್ದು, ಇದರೊಂದಿಗೆ ಹಸಿವಾದ ವೇಳೆ ಫಾಸ್ಟ್ ಫುಡ್ ಸೇವನೆ ಮಾಡುವುದು ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ಈ ರೀತಿಯ ಜೀವನ ಶೈಲಿಯಿಂದಾಗಿ ದೇಹದಲ್ಲಿ ಬೊಜ್ಜು ಆವರಿಸಿಕೊಂಡು ಅನಾರೋಗ್ಯಕಾರಿ ಆಗಿ ತೂಕ ಹೆಚ್ಚಾಗುವುದು. ಇದನ್ನು ಕರಗಿಸಲು ವಿವಿಧ ರೀತಿಯ ವ್ಯಾಯಾಮ ಮತ್ತು ಆರೋಗ್ಯಕಾರಿ ಆಹಾರ ಕ್ರಮವನ್ನು ಅಳವಡಿಸಿಕೊಂಡು ಹೋಗಬೇಕು. ಆದರೆ ಇಲ್ಲಿ ಎರಡನೇಯದ್ದನ್ನು ಮಾಡಬಹುದಾದರೂ ಮೊದಲನೇಯದ್ದು ತುಂಬಾ ಕಷ್ಟವಾಗಿರುವುದು. ದಿನದ ಸುಮಾರು ಹತ್ತು ಗಂಟೆಗೂ ಹೆಚ್ಚು ಕಾಲ ಕಚೇರಿಯಲ್ಲಿ ಕಳೆಯುವಾಗ ವ್ಯಾಯಾಮಕ್ಕೆ ಸಮಯ ಸಿಗುವುದು ತುಂಬಾ ಕಡಿಮೆ. ಈ ವಿಚಾರವನ್ನು ಹಿಡಿದುಕೊಂಡು ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿನ ಉದ್ಯೋಗಿಗಳು ಅಧಿಕ ತೂಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನಾವು ಕೂಡ ಸ್ವಲ್ಪ ತಿಳಿಯುವ ಬನ್ನಿ...

 
ಹೆಲ್ತ್