Back
Home » ಬಾಲಿವುಡ್
ಭಿನ್ನ ಹಾದಿಯಲ್ಲಿ ಸಾಗುತ್ತಾ ಹೊಸ ಬಗೆಯ ಬಾಲಿವುಡ್ ಕಟ್ಟುತ್ತಿದ್ದಾರೆ 3 ಯುವರಾಜರು
Oneindia | 26th Sep, 2019 04:25 PM
 • ಆಯುಷ್ಮಾನ್ ಕುರಾನ್ ವಿಭಿನ್ನ ಪಾತ್ರಗಳು

  ಆಯುಷ್ಮಾನ್ ಕುರಾನ್ ಹಿಂದಿ ಚಿತ್ರರಂಗದಲ್ಲಿ ಸದ್ಯ ಸಂಚಲನ ಉಂಟು ಮಾಡಿರುವ ನಟ. ಇತ್ತೀಚಿಗೆ ಬರುತ್ತಿರುವ ಸಿನಿಮಾಗಳು, ಅವರನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. 'ಅಂಧಾದುನ್', 'ಆರ್ಟಿಕಲ್ 15' ಚಿತ್ರಗಳ ಪಾತ್ರ ನಿರ್ವಹಣೆ ದೊಡ್ಡ ಹೆಸರು ತಂದು ಕೊಟ್ಟಿದೆ. 'ದಮ್ ಲಗಾ ಕೆ ಹೈಶಾ', 'ಬದೈ ಹೋ' ರೀತಿಯ ಸಿನಿಮಾಗಳ ಆಯ್ಕೆ ನಿಜಕ್ಕೂ ಮೆಚ್ಚುವಂತದ್ದು. ತಮ್ಮ ನಟನ ಶಕ್ತಿಯಿಂದ ಈ ಬಾರಿ ಆಯುಷ್ಮಾನ್ ಕುರಾನ್ ರಾಷ್ಟ್ರ ಪ್ರಶಸ್ತಿವನ್ನು ಕೂಡ ಪಡೆದಿದ್ದಾರೆ.


 • 'ಉರಿ' ನಟ ವಿಕ್ಕಿ ಕೌಶಲ್

  ಒಬ್ಬ ಸಾಹಸ ನಿರ್ದೇಶಕನ ಮಗನಾಗಿ ಚಿತ್ರರಂಗಕ್ಕೆ ಬಂದ ವಿಕ್ಕಿ ಕೌಶಲ್, ಸಾಹಸ ಮಾಡಿಯೇ ಒಳ್ಳೆ ಒಳ್ಳೆಯ ಪಾತ್ರಗಳನ್ನು ಮಾಡಿದರು. 'ಉರಿ' ವಿಕ್ಕಿ ಕೌಶಲ್ ನಟನ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತುಕೊಂಡ ಸಿನಿಮಾ. ಈ ಸಿನಿಮಾ ವಿಕ್ಕಿಗೆ ನ್ಯಾಷನಲ್ ಅವಾರ್ಡ್ ನೀಡಿತು. 'ಮಸಾನ್', 'ರಾಝಿ' ಸಿನಿಮಾಗಳ ನಟನೆಯಿಂದ ಒಳ್ಳೆಯ ಹೆಸರು ಬಂತು. ಸದ್ಯ, ವಿಕ್ಕಿ ಕೌಶಲ್ ಬಾಲಿವುಡ್ ಭರವಸೆಯ ನಟನಾಗಿ ಬೆಳೆದು ನಿಂತಿದ್ದಾರೆ.

  ರಾಷ್ಟ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ನಟ ವಿಕ್ಕಿ ಕೌಶಲ್, ಆಯುಷ್ಮಾನ್, ನಟಿ ಕೀರ್ತಿ ಸುರೇಶ್


 • ರಾಜ್ ಕುಮಾರ್ ರಾವ್ ಚಿತ್ರಗಳ ಆಯ್ಕೆ

  ರಾಜ್ ಕುಮಾರ್ ರಾವ್ ಸದ್ಯ ಹಿಂದಿ ಚಿತ್ರರಂಗದ ಮತ್ತೊಬ್ಬ ಪ್ರತಿಭಾವಂತ ನಟ. 'ಶಾಹಿದ್' ಹಾಗೂ 'ನ್ಯೂಟನ್' ಸಿನಿಮಾದ ಅವರ ನಟನೆ ಮರೆಯಲು ಸಾಧ್ಯವಿಲ್ಲ. ರಾಜ್ ಕುಮಾರ್ ರಾವ್ ಇತ್ತೀಚಿಗಿನ ಸಿನಿಮಾಗಳನ್ನು ನೋಡಿದರೆ, ತುಂಬ ಖುಷಿ ಆಗುತ್ತದೆ. ಬೇರೆ ಬೇರೆ ರೀತಿಯ ಸಿನಿಮಾಗಳನ್ನು ನೀಡಬೇಕು ಎನ್ನುವ ತುಡಿತ ಅಲ್ಲಿ ಕಾಣುತ್ತದೆ. ಕಳೆದ ವರ್ಷ ಅವರ 'ನ್ಯೂಟನ್' ಚಿತ್ರದ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿತ್ತು.


 • ಪ್ರಯೋಗದಲ್ಲಿ ದೊಡ್ಡ ಸ್ಟಾರ್ ಗಳನ್ನು ಮೀರಿಸುತ್ತಿದ್ದಾರೆ

  ಅಯುಷ್ಮಾನ್ ಕುರಾನ್, ವಿಕ್ಕಿ ಕೌಶಲ್ ಮತ್ತು ರಾಜ್ ಕುಮಾರ್ ರಾವ್ ಈ ಮೂರು ನಟರು ಇನ್ನು ದೊಡ್ಡ ಸ್ಟಾರ್ ಗಳಾಗಿಲ್ಲ. ಆದರೆ, ಆ ಸ್ಟಾರ್ ಗಳನ್ನು ಮೀರಿ ಇವರು ಮಾಡುತ್ತಿರುವ ಪ್ರಯೋಗ ಅಧ್ಬುತ. ಇಂಡಸ್ಟ್ರಿ ಬಗ್ಗೆ ತಲೆಕಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಒಳ್ಳೆಯ ಒಳ್ಳೆಯ ಸಿನಮಾಗಳ ಬಗ್ಗೆ ಗಮನ ನೀಡುತ್ತಿದ್ದಾರೆ. ಖಾನ್, ಕಪೂರ್ ಗಳ ಪ್ರಭಾವದಿಂದ ಹೊರಬಂತು ಹೊಸ ಬಾಲಿವುಡ್ ಕಟ್ಟುತ್ತಿದ್ದಾರೆ.
ಸಿನಿಮಾ ಎಂದರೆ, ಬಾಕ್ಸ್ ಆಫೀಸ್ ಕಲೆಕ್ಷನ್ ಮಾತ್ರವಲ್ಲ. ಒಬ್ಬ ಸ್ಟಾರ್ ಕಮರ್ಷಿಯಲ್ ಸಿನಿಮಾಗಳಿಗೆ ಮಾತ್ರ ಅಂಟಿಕೊಳ್ಳಬೇಕಿಲ್ಲ. ಹಾಗೆಂದ ಮಾತ್ರಕ್ಕೆ ಕಲಾತ್ಮಕ ಸಿನಿಮಾಗಳನ್ನು ಮಾಡಲೇ ಬೇಕು ಎನ್ನುವ ನಿಬಂಧನೆ ಇಲ್ಲ. ಆದರೆ, ಇವನೆಲ್ಲ ಮೀರಿ ಒಬ್ಬ ನಿಜವಾದ ಕಲಾವಿದ ಪ್ರತಿಬಾರಿ ಹೊಸತನದ ತುಡಿತ ಹೊಂದಿರುತ್ತಾನೆ.

ಬಾಲಿವುಡ್ ನಲ್ಲಿ ಸದ್ಯ ಮೂರು ನಟರು ತಮ್ಮ ಹೊಸ ರೀತಿಯ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಆಯುಷ್ಮಾನ್ ಕುರಾನ್, ವಿಕ್ಕಿ ಕೌಶಲ್ ಮತ್ತು ರಾಜ್ ಕುಮಾರ್ ರಾವ್ ಈ ಯಂಗ್ ಸ್ಟಾರ್ ಗಳು ಪ್ರಯೋಗಾತ್ಮಕ ಚಿತ್ರಗಳ, ಸವಾಲಿನ ಪಾತ್ರಗಳ ಮೂಲಕ ಪದೇ ಪದೇ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ.

ರಾಜ್ ಕುಮಾರ್ ರಾವ್ ಅಭಿನಯದ ಚಿತ್ರ ಆಸ್ಕರ್ ಸ್ಪರ್ಧೆಗೆ ಎಂಟ್ರಿ

ಖಾನ್, ಕಪೂರ್ ಗಳ ಸಿನಿಮಾಗಳ ಪ್ರಭಾವದಿಂದ ದೂರ ಬಂದು, ಬೇರೆ ರೀತಿಯ ಬಾಲಿವುಡ್ ಕಟ್ಟುತ್ತಿದ್ದಾರೆ. ಅಮೀರ್ ಖಾನ್, ಅಕ್ಷಯ್ ಕುಮಾರ್ ಹಾಗೂ ರಣ್ವೀರ್ ಸಿಂಗ್ ನಂತರ ಹೆಚ್ಚು ಪ್ರಯೋಗಕ್ಕೆ ತಮ್ಮನ್ನು ತಾವು ದೂಡಿಕೊಳ್ಳುತ್ತಿದ್ದಾರೆ ಈ ತ್ರಿಮೂರ್ತಿಗಳು.

   
 
ಹೆಲ್ತ್