Back
Home » ಬಾಲಿವುಡ್
'ಹೌಸ್ ಫುಲ್ 4' ಟ್ರೇಲರ್ : ಮಸ್ತ್ ಮಜಾ ಮಾಡಿ
Oneindia | 27th Sep, 2019 05:31 PM

ಸಾಲು ಸಾಲು ಸೀರಿಯಸ್ ಸಿನಿಮಾಗಳ ನಂತರ ನಟ ಅಕ್ಷಯ್ ಕುಮಾರ್ ಮತ್ತೆ ಕಾಮಿಡಿ ಸಿನಿಮಾಗೆ ಮರಳಿದ್ದಾರೆ. ಅವರ 'ಹೌಸ್ ಫುಲ್ 4' ಸಿನಿಮಾ ಟ್ರೇಲರ್ ಇಂದು (ಸಪ್ಟೆಂಬರ್ 27) ಬಿಡುಗಡೆಯಾಗಿದೆ.

ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ, 'ಹೌಸ್ ಫುಲ್ 4' ಪೋಸ್ಟರ್ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದ್ದವು. ಇದೀಗ ಟ್ರೇಲರ್ ಪ್ರೇಕ್ಷಕರಿಗೆ ಇಷ್ಟ ಆಗುವ ರೀತಿ ಕಾಣುತ್ತಿದೆ. 600 ವರ್ಷಗಳ ಹಿಂದೆ ಹಾಗೂ ಇಂದಿನ ಕಾಲ ಎರಡರ ಮಿಶ್ರಣ ಸಿನಿಮಾದಲ್ಲಿ ಕಥೆ ಆಗಿದೆ. ಭೂತಕಾಲ ಮತ್ತು ವರ್ತಮಾನದೊಂದಿಗೆ ಸಿನಿಮಾದ ತುಂಬ ಹಾಸ್ಯ ತುಂಬಿಕೊಂಡಿದೆ.

ಭಿನ್ನ ಹಾದಿಯಲ್ಲಿ ಸಾಗುತ್ತಾ ಹೊಸ ಬಗೆಯ ಬಾಲಿವುಡ್ ಕಟ್ಟುತ್ತಿದ್ದಾರೆ 3 ಯುವರಾಜರು

ಕಾಮಿಡಿ ಸಿನಿಮಾ ಆಗಿದ್ದರೂ, ಒಂದು ದೊಡ್ಡ ಐತಿಹಾಸಿಕ ಸಿನಿಮಾಗೆ ಕಡಿಮೆ ಇಲ್ಲದ ಹಾಗೆ ಮೇಕಿಂಗ್ ಮಾಡಲಾಗಿದೆ. ಅಕ್ಷಯ್ ಕುಮಾರ್ ಚಿತ್ರದಲ್ಲಿ ಬಾಲ ಸೈತಾನ್ ಕ ಸಾಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಮ್ಯಾನರಿಸಂ, ಕಾಮಿಡಿ ಟೈಮಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ನರ್ತಕಿ ಬ್ಯಾಂಗ್ದು ಮಹಾರಾಜ್ ಪಾತ್ರದಲ್ಲಿ ರಿತೇಶ್ ದೇಶ್ ಮುಖ್, ಅಂಗರಕ್ಷಕ್ ಧರ್ಮಪುತ್ರನಾಗಿ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ರಾಜಕುಮಾರಿ ಮಾಲ ಆಗಿ ಕೃತಿ ಸನೋನ್ ರಾಜಕುಮಾರಿ ಮಧು ಆಗಿ ಕಾಣಿಸಿಕೊಂಡಿದ್ದಾರೆ. ಎಲ್ಲ ಕಲಾವಿದರಿಗೂ ಎರಡು ಶೇಡ್ ಇದೆ.

3 ನಿಮಿಷ 36 ಸೆಕೆಂಡ್ ಟ್ರೇಲರ್ ಮಜವಾಗಿದೆ. ಯೂಟ್ಯೂಬ್ ನಲ್ಲಿ ಬಿಡುಗಡೆಯಾದ 3 ಗಂಟೆಗೆ 1 ಲಕ್ಷದ 30 ಸಾವಿರಕ್ಕೂ ಅಧಿಕ ಹಿಟ್ಸ್ ಟ್ರೇಲರ್ ಗೆ ಸಿಕ್ಕಿದೆ.

ವಿಭಿನ್ನತೆಯಿಂದ ಗಮನ ಸೆಳೆದ 'ಹೌಸ್ ಫುಲ್ 4' ಪೋಸ್ಟರ್ ಗಳು

ಪ್ರೆಸೆಂಟ್ ಹಾಗೂ ಫಾಸ್ಟ್ ಎರಡನ್ನು ಸೇರಿಸಿ ಒಂದು ಹಾಸ್ಯಮಯ ಸಿನಿಮಾವನ್ನು ನಿರ್ದೇಶಕ ಸಾಜಿದ್ ಫರ್ಹಾದ್ ಮಾಡಿದ್ದಾರೆ. ಅಕ್ಟೋಬರ್ 25ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ.

   
 
ಹೆಲ್ತ್