Back
Home » ಬಾಲಿವುಡ್
ಕೃಷ್ಣಮೃಗ ಬೇಟೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಸಲ್ಮಾನ್ ಖಾನ್
Oneindia | 27th Sep, 2019 05:22 PM

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇಂದು ಜೋಧ್ ಪುರ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಿತ್ತು. ಆದರೆ, ಕೋರ್ಟ್ ನಿರ್ದೇಶನವನ್ನ ಪರಿಗಣಿಸದ ಸಲ್ಮಾನ್ ಖಾನ್ ವಿಚಾರಣೆಗೆ ಗೈರಾಗಿದ್ದಾರೆ.

ಕೆಲವು ದಿನದ ಹಿಂದೆ ಸಲ್ಮಾನ್ ಖಾನ್ ಅವರಿಗೆ ದರೋಡೆಕಾರರು ಫೇಸ್ ಬುಕ್ ನಲ್ಲಿ ಜೀವಬೆದರಿಕೆ ಹಾಕಿದ್ದರು. ಈ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಲ್ಲು ಪರ ವಕೀಲರು ಕೋರ್ಟ್ ಗೆ ತಿಳಿಸಿದ್ದು, ಮುಂದಿನ ವಿಚಾರಣೆಯನ್ನ ಡಿಸೆಂಬರ್ 19ಕ್ಕೆ ಮುಂದೂಡಲಾಗಿದೆ.

ಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೋಧ್ ಪುರ್ ಕಳೆ ನ್ಯಾಯಾಲಯ ಸಲ್ಮಾನ್ ಖಾನ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಸಲ್ಮಾನ್, ಈ ಕೇಸ್ ನಲ್ಲಿ ಶಾಶ್ವತವಾಗಿ ವಿನಾಯ್ತಿ ಕೊಡಿ ಎಂದು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ದೋಷಿ

ಸಲ್ಮಾನ್ ಖಾನ್ ಅವರು ಮೇಲ್ಮನವಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್, ಸೆಪ್ಟೆಂಬರ್ 27 ರಂದು ಖುದ್ದು ಸಲ್ಮಾನ್ ಖಾನ್ ಹಾಜರಾಗಬೇಕು ಎಂದು ಸೂಚಿಸಿತ್ತು. ಇಲ್ಲವಾದಲ್ಲಿ ಕೊಟ್ಟಿರುವ ಜಾಮೀನು ಹಿಂಪಡೆಯಲಾಗುವುದು ಎಂದು ನಿರ್ದೇಶಿಸಿತ್ತು. ಆದರೆ, ಬ್ಯಾಡ್ ಬಾಯ್ ಇಂದು ಕೋರ್ಟ್ ಗೆ ಹಾಜರಾಗದೆ, ಇನ್ನೊಂದು ದಿನಾಂಕವನ್ನ ವಿನಾಯ್ತಿಯಾಗಿ ಪಡೆದುಕೊಂಡಿದ್ದಾರೆ.

1998ರಲ್ಲಿ 'ಹಮ್ ಸಾತ್ ಸಾತ್ ಹೈ' ಚಿತ್ರದ ಚಿತ್ರೀಕರಣ ವೇಳೆ ಜೋಧ್ ಪುರ್ ಅರಣ್ಯದಲ್ಲಿ ಕೃಷ್ಣಮೃಗವನ್ನ ಬೇಟೆಯಾಡಿರುವ ಆರೋಪದಲ್ಲಿ ಸಲ್ಮಾನ್ ಆರೋಪ ಸಾಬೀತಾಗಿತ್ತು. ಈ ಕೇಸ್ ನಲ್ಲಿ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ಕೂಡ ಆರೋಪಿಯಾಗಿದ್ದರು. ಜೋಧ್ ಪುರ್ ಕೋರ್ಟ್ ಈ ಮೂವರನ್ನ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಖುಲಾಸೆ ಮಾಡಿದೆ.

   
 
ಹೆಲ್ತ್