Back
Home » ಬಾಲಿವುಡ್
'ಡಾಟರ್ ಆಫ್ ನೇಷನ್' ಲತಾ ಮಂಗೇಶ್ಕರ್ ರಿಗೆ ಶಂಕರ್ ಮಹದೇವನ್ ಶುಭಾಶಯ
Oneindia | 28th Sep, 2019 06:07 PM

ಗಾನ ಕೋಗಿಲೆ ಲತಾ ಮಂಗೇಶ್ಕರ್ ಇಂದು (ಸಪ್ಟೆಂಬರ್ 29) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. 90ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಲತಾ ಮಂಗೇಶ್ಕರ್ ರಿಗೆ ಖ್ಯಾತ ಗಾಯಕ ಶಂಕರ್ ಮಹದೇವನ್ ಶುಭಾಶಯ ತಿಳಿಸಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಶ್ ಮಾಡಿರುವ ಶಂಕರ್ ಮಹದೇವನ್ ಹ್ಯಾಪಿ ಬರ್ತ್ ಡೇ ಪ್ರೀತಿಯ ಲತಾ ಮಂಗೇಶ್ಕರ್ ದೀದಿ. 'ಡಾಟರ್ ಆಫ್ ನೇಷನ್' ಎಂದು ಬಿರುದು ಪಡೆದಿರುವುದಕ್ಕೆ ಅಭಿನಂದನೆ. ನಿಮ್ಮ ಆರೋಗ್ಯಕ್ಕೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಲವ್ ಯೂ ದೀದಿ'' ಎಂದು ಬರೆದುಕೊಂಡಿದ್ದಾರೆ.

ಕೋಗಿಲೆ ಲತಾ ಬರ್ಥ್ ಡೇ ದಿನ ಅಭಿಮಾನಿಗೆ ಜೈ ಎನ್ನಿ

ಭಾರತದ ಶ್ರೇಷ್ಟ ಗಾಯಕಿ 90 ವರ್ಷವನ್ನು ಪೂರೈಸಿದ್ದು, 'ಡಾಟರ್ ಆಫ್ ನೇಷನ್' ಎಂಬ ಬಿರುದನ್ನು ನೀಡಲಾಗಿದೆ. ಸಾವಿರಾರೂ ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ 'ಮಾಧುರ್ಯದ ರಾಣಿ' ಎಂದು ಹೆಸರಾಗಿದ್ದಾರೆ.

ಭಾರತ ರತ್ನ, ದಾದಾ ಸಾಹೇಬ್ ಫಾಲ್ಕೆ, ಮೂರು ರಾಷ್ಟ್ರ ಪ್ರಶಸ್ತಿ ಸೇರಿದಂತೆ ನೂರಾರೂ ಪ್ರತಿಷ್ಟಿತ ಪ್ರಶಸ್ತಿಗಳು ಲತಾ ಮಂಗೇಶ್ಕರ್ ರಿಗೆ ಸಿಕ್ಕಿವೆ. ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದರಿಂದ 1974 ರಲ್ಲಿ ಗಿನ್ನಿಸ್ ದಾಖಲೆಗೆ ಇವರ ಹೆಸರು ಸೇರಿಕೊಂಡಿತು.

'ಹುತಾತ್ಮ ಉರಿ ಯೋಧ'ರಿಗಾಗಿ ಜನ್ಮಾಚರಣೆ ತ್ಯಜಿಸಿದ ಲತಾಜೀ

ಸಾವಿರಾರೂ ಸಿನಿಮಾಗಳಗೆ 36 ಬೇರೆ ಭಾಷೆಯ ಹಾಡುಗಳನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ.

   
 
ಹೆಲ್ತ್